ಹೊಡಿತಾಳೆ, ಬಡಿತಾಳೆ ನನ್ ಹೆಂಡ್ತಿ, ಪೊಲೀಸ್ ರಕ್ಷಣೆ ಕೋರಿದ ಪತಿ!

Published : May 25, 2022, 12:40 PM IST
ಹೊಡಿತಾಳೆ, ಬಡಿತಾಳೆ ನನ್ ಹೆಂಡ್ತಿ, ಪೊಲೀಸ್ ರಕ್ಷಣೆ ಕೋರಿದ ಪತಿ!

ಸಾರಾಂಶ

ಸರ್ಕಾರಿ ಕಾಲೇಜ್ ನಲ್ಲಿ ಪ್ರಿನ್ಸಿಪಾಲ್ ಆಗಿರುವ ಅಜಿತ್ ಯಾದವ್ ಪ್ರತಿ ದಿನವೂ ಪತ್ನಿ ಸುಮನ್ ರಿಂದ ಹಲ್ಲೆಗೆ ಒಳಗಾಗುತ್ತಿದ್ದರು. ವರದಿಗಳ ಪ್ರಕಾರ, ಪ್ರತಿದಿನವೂ ಹೆಂಡತಿ ಕ್ರಿಕೆಟ್ ಬ್ಯಾಟ್, ನೀರಿನ ಬಾಟಲ್, ಫ್ರೈ ಪಾನ್ ನಿಂದ ಗಂಡನ ಮೇಲೆ ಹಲ್ಲೆ ಮಾಡುತ್ತಿದ್ದಳು. ಗಂಡ ಈಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮನೆಯ ಎಲ್ಲಾ ಕಡೆ ಓಡಿ ಹೋಗುತ್ತಿರುವ ದೃಶ್ಯಾವಳಿಗಳು ಮನೆಯ ಒಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

ಅಲ್ವಾರ್ (ಮೇ. 25): ಈವರೆಗೂ ಕೌಟುಂಬಿಕ ದೌರ್ಜನ್ಯ ಪ್ರಕರಣ ಎಂದಾಗ, ಮಹಿಳೆಯ ಮೇಲೆ ಹಲ್ಲೆ ಎನ್ನುವ ವಿಚಾರಗಳನ್ನೇ ಬಹುತೇಕವಾಗಿ ಕೇಳಿದ್ದೇವೆ. ಆದರೆ, ರಾಜಸ್ಥಾನದ (RAJASTHAN) ಅಲ್ವಾರ್ ನಲ್ಲಿ  (Alwar) ನಡೆದಿರುವ ಕೌಟುಂಬಿಕ ದೌರ್ಜನ್ಯ (domestic violence case) ಪ್ರಕರಣದಲ್ಲಿ ಪತ್ನಿಯಿಂದಲೇ ಪ್ರತಿದಿನ ಪತಿಯ ಮೇಲೆ ಹಲ್ಲೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಇದರಿಂದ ರೋಸಿ ಹೋಗಿರುವ ಪತಿ ತನಗೆ ರಕ್ಷಣೆ ನೀಡುವಂತೆ ಪೊಲೀಸರ ಬಳಿ ಹೋಗಿದ್ದಾರೆ.

ಯಾವುದೇ ರೀತಿಯ ಕೌಟುಂಬಿಕ ದೌರ್ಜನ್ಯವಾದರೂ ಅದರು ಅಪರಾಧವೇ. ಆದರೆ, ಅಲ್ವಾರ್ ನಲ್ಲಿ ವರದಿಯಾಗಿರುವ ಪ್ರಕರಣ ಸ್ವಲ್ಪ ಭಿನ್ನವಾಗಿರುವ ಕಾರಣ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ಹೆಂಡತಿ ಪ್ರತಿ ದಿನ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳು ಎಲ್ಲೆಡೆ ವೈರಲ್ ಆಗಿವೆ.

ಸರ್ಕಾರಿ ಕಾಲೇಜ್ ನಲ್ಲಿ ಪ್ರಿನ್ಸಿಪಾಲ್ ಆಗಿರುವ ಅಜಿತ್ ಯಾದವ್ (Ajit Yadav Singh) ಪ್ರತಿ ದಿನವೂ ಪತ್ನಿ ಸುಮನ್ ರಿಂದ (Suman) ಹಲ್ಲೆಗೆ ಒಳಗಾಗುತ್ತಿದ್ದರು. ವರದಿಗಳ ಪ್ರಕಾರ, ಪ್ರತಿದಿನವೂ ಹೆಂಡತಿ ಕ್ರಿಕೆಟ್ ಬ್ಯಾಟ್, ನೀರಿನ ಬಾಟಲ್, ಫ್ರೈ ಪಾನ್ ನಿಂದ ಗಂಡನ ಮೇಲೆ ಹಲ್ಲೆ ಮಾಡುತ್ತಿದ್ದಳು. ಗಂಡ ಈಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮನೆಯ ಎಲ್ಲಾ ಕಡೆ ಓಡಿ ಹೋಗುತ್ತಿರುವ ದೃಶ್ಯಾವಳಿಗಳು ಮನೆಯ ಒಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊದಮೊದಲು ತನ್ನ ಮೇಲೆ ಹಲ್ಲೆಯಾಗುತ್ತಿರುವ ಬಗ್ಗೆ ಹೇಳಿಕೊಂಡಾಗ ಸ್ನೇಹಿತರು, ಆಪ್ತರು ಯಾರೂ ನಂಬುತ್ತಿರಲಿಲ್ಲವಂತೆ. ಸಾಕ್ಷಿ ಸಮೇತ ತೋರಿಸುವ ಸಲುವಾಗಿ ಹೆಂಡತಿಗೆ ಗೊತ್ತಿಲ್ಲದಂತೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಮೂಲಕ ಪತ್ನಿಯ ಸತ್ಯ ಬಯಲಾಗಿದೆ. ಈಗ ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪತಿ, ಪೊಲೀಸ್ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟು ತನ್ನ ಕಷ್ಟಗಳನ್ನು ವಿವರಿಸಿದ್ದಲ್ಲದೆ, ಆಕೆಗೆ ಇರುವ ಅತಿಯಾಸೆಗಳ ಬಗ್ಗೆಯೂ ತಿಳಿಸಿದ್ದಾರೆ. ಪತ್ನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ, ಸ್ಥಳೀಯ ಕೋರ್ಟ್ ಕೂಡ ಪತಿಗೆ ಭದ್ರತೆ ನೀಡುವಂತೆ ಸೂಚನೆ ನೀಡಿದೆ. 

ಇಡೀ ವಿಷಯವನ್ನು ಭಿವಾಡಿಯಿಂದ ವರದಿ ಮಾಡಲಾಗುತ್ತಿದೆ. ಇಲ್ಲಿ ಸಂತ್ರಸ್ತೆಯ ಪತಿ ಅಜಿತ್ ಶಾಲೆಯ ಪ್ರಾಂಶುಪಾಲರಾಗಿದ್ದು, ಆತನಿಗೆ ಥಳಿಸಿದ ವಿಡಿಯೋ ಕೂಡ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ಆತನ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲವು ವೈರಲ್ ಫೋಟೋಗಳಲ್ಲಿ, ಪತ್ನಿ ಸುಮನ್ ತನ್ನ ಪ್ರಿನ್ಸಿಪಾಲ್ ಪತಿಯನ್ನು ತೀವ್ರವಾಗಿ ಥಳಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ನೀರಿನ ಬಿಲ್ ಜಾಸ್ತಿ ಕೇಳಿದ ಮಾಲೀಕ: ನೇಣಿಗೆ ಶರಣಾದ ದಂಪತಿ

    ಅತ್ಯಂತ ಮುಖ್ಯವಾದ ವಿಷಯವೆಂದರೆ ಹೆಂಡತಿ ತನ್ನ ಮಗನ ಮುಂದೆ ಹಲವು ಬಾರಿ ಪತಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಇದಲ್ಲದೇ ಹಲವು ಬಾರಿ ಗಂಡ-ಹೆಂಡತಿಯನ್ನು ಹೊರತುಪಡಿಸಿ ಅವರ ಮಗನೂ ಅಲ್ಲಿ ಹಾಜರಿದ್ದು ಎಲ್ಲವನ್ನೂ ವೀಕ್ಷಿಸುತ್ತಿದ್ದ. ತಂದೆಯ ಹೊಡೆತದ ಸಮಯದಲ್ಲಿ, ಮಗು ಭಯಗೊಂಡಂತೆ ಕಾಣುತ್ತದೆ. ಈ ವೇಳೆ ಪತಿ ಭಿವಾಡಿ ಪೊಲೀಸರಿಗೆ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದಾರೆ.

    ಬೇಕಾಗಿದ್ದಾರೆ: 5 ದಿನ ನಾಯಿ ಆಹಾರ ತಿನ್ನುವ ಕೆಲಸ, 5 ಲಕ್ಷ ರೂ. ಸಂಬಳ !

    9 ವರ್ಷದ ಹಿಂದೆ ಮದುವೆ: ಅಜಿತ್ ಯಾದವ್ 9 ವರ್ಷಗಳ ಹಿಂದೆ ಸುಮನ್ ರನ್ನು ಮದುವೆಯಾಗಿದ್ದರು. ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೆವು ಎಂದು ಅಜಿತ್ ಪೊಲೀಸರಿಗೆ ತಿಳಿಸಿದ್ದಾರೆ. ಆರಂಭದಲ್ಲಿ, ಸಾರ್ವಜನಿಕ ಅವಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಲ್ಲೆಯ ಕುರಿತು ಯಾರಿಗೂ ಹೇಳಿರಲಿಲ್ಲ. ಆದರೆ, ದಿನ ಕಳೆದಂತೆ ಹಲ್ಲೆಯ ಪ್ರಮಾಣ ಹೆಚ್ಚಾಗಿದ್ದರಿಂದ ಸಿಸಿಟಿವಿ ಅಳವಡಿಸಿದ್ದೆ ಎಂದು ಹೇಳಿದ್ದಾರೆ.

    PREV

    ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

    Read more Articles on
    click me!

    Recommended Stories

    ಗಂಡ ಹೆಂಡತಿಗೆ ಮುಳ್ಳಾದ ಈರುಳ್ಳಿ ಬೆಳ್ಳುಳ್ಳಿ, 11 ವರ್ಷದ ದಾಂಪತ್ಯ ಜೀವನ ಡಿವೋರ್ಸ್‌ನಲ್ಲಿ ಅಂತ್ಯ
    ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!