Parenting Tips : ಮಕ್ಕಳಿಂದ ಮುಜುಗರ ತಪ್ಪಿಸಲು ಇಲ್ಲಿವೆ ಪರಿಹಾರ

By Suvarna News  |  First Published May 24, 2022, 1:02 PM IST

ಮನೆಯಲ್ಲಿ ಹೇಗೆ ಇರಲಿ, ಮನೆಯಿಂದ ಹೊರಗೆ ಹೋದ್ಮೇಲೆ ಮಕ್ಕಳು, ಪಾಲಕರ ಮಾತು ಕೇಳೋದಿಲ್ಲ. ಮನೆಯಲ್ಲಿ ಹಾಲು ಕುಡಿಯದ ಮಕ್ಕಳು ಸಂಬಂಧಿಕರ ಮನೆಯಲ್ಲಿ ಕೇಳಿ ಕುಡಿತಾರೆ. ಚಾಕ್ಲೇಟ್ ಬೇಕೆಂದು ರಸ್ತೆಯಲ್ಲಿ ಬಿದ್ದು ಉರುಳ್ತಾರೆ. ಈ ಮಕ್ಕಳಿಂದ ಶಾಪಿಂಗ್‌ಗೆ ತೊಂದರೆಯಾಗ್ಬಾರದೆಂದ್ರೆ ಪಾಲಕರು ಏನು ಮಾಡ್ಬೇಕು ಗೊತ್ತಾ?
 


ಮಕ್ಕಳ (Children) ನ್ನು ಹೊರಗೆ ಕರೆದುಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಒಂದೊಂದು ಕ್ಷಣ ಒಂದೊಂದು ರೀತಿ ಇರುವ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಸರಳವಲ್ಲ. ಮನೆ (Home) ಯಿಂದ ಹೊರಗೆ ಬೀಳ್ತಿದ್ದಂತೆ ಮಕ್ಕಳ ವರ್ತನೆ (Behaviour) ಬದಲಾಗುತ್ತದೆ. ಅನೇಕ ಬಾರಿ ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳು, ಪಾಲಕರನ್ನು (Parents) ಮುಜುಗರಕ್ಕೀಡು ಮಾಡ್ತಾರೆ. ಸಾಮಾನ್ಯವಾಗಿ ಮಕ್ಕಳ ನಡವಳಿಕೆಯು ಅವರ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಮಕ್ಕಳ ಮೂಡ್ (Mood) ಚೆನ್ನಾಗಿದ್ದರೆ ತಂದೆ ತಾಯಿಯ (Mother) ಎಲ್ಲ ವಿಷಯಗಳನ್ನು ಮಕ್ಕಳು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಅಪ್ಪಿತಪ್ಪಿ ಮೂಡ್ ಕೆಟ್ಟರೆ ಪಾಲಕರ ಕಥೆ ಮುಗೀತು. ಅನಗತ್ಯ ಕಾರಣಕ್ಕೆ ಮಕ್ಕಳು ಅಳಲು ಪ್ರಾರಂಭಿಸುತ್ತಾರೆ. ಹಾಗಾಗಿ ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡ ಹೋಗುವಾಗ ಪಾಲಕರು ಕೆಲ ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಹಾಗೆಯೇ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕು ಎಂಬುದನ್ನು ಕಲಿಸಬೇಕಾಗುತ್ತದೆ. ಇದ್ರಿಂದ ಮುಜುಗರಕ್ಕೀಡಾಗುವ ಪ್ರಸಂಗ ಬರುವುದಿಲ್ಲ. 

ಆಯಾಸವಾದಾಗ ಸುತ್ತಾಟ ಬೇಡ್ವೇ ಬೇಡ : ಬಹುತೇಕ ಬಾರಿ ಮಕ್ಕಳು ಆಯಾಸಗೊಂಡಾಗ ಅವರು ಕಿರಿಕಿರಿ ಮಾಡಲು ಶುರು ಮಾಡ್ತಾರೆ. ಮಕ್ಕಳಿಗೆ ಸುಸ್ತಾಗಿದೆ ಅನ್ನಿಸಿದ್ರೆ ನೀವು ಮಕ್ಕಳನ್ನು ಸುತ್ತಾಡಲು ಹೊರಗೆ ಕರೆದುಕೊಂಡು ಹೋಗ್ಬೇಡಿ. ಮಕ್ಕಳಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಿ. ಸುಸ್ತು ಕಡಿಮೆಯಾಗಿ ಫ್ರೆಶ್ ಆದ್ಮೇಲೆ ನಿಮ್ಮ ಸುತ್ತಾಟ ಶುರು ಮಾಡಿ. ಮಕ್ಕಳು ಫ್ರೆಶ್ ಆಗ್ತಿದ್ದಂತೆ ಖುಷಿಯಾಗ್ತಾರೆ. ಪಾಲಕರು ಹೇಳಿದ ಮಾತನ್ನು ಕೇಳ್ತಾರೆ. ಚಿಕ್ಕಪುಟ್ಟ ವಿಷ್ಯಕ್ಕೆ ಗಲಾಟೆ ಮಾಡೋದಿಲ್ಲ. 

Tap to resize

Latest Videos

ಈ ನಾಲ್ಕು ರಾಶಿಯವರು ಅತ್ಯುತ್ತಮ ಪ್ರೇಮಿಯಾಗಬಲ್ಲರು!

ಹೊಟ್ಟೆ ತುಂಬ ಆಹಾರ (Food) ನೀಡಿ : ಹೊರಗೆ ಹೋಗುವ ಮೊದಲು ಮಕ್ಕಳ ಹೊಟ್ಟೆ ಬಗ್ಗೆ ಗಮನ ನೀಡಿ. ಸರಿಯಾದ ಆಹಾರ ನೀಡಿದ ನಂತ್ರವೇ ಅವರನ್ನು ಹೊರಗೆ ಕರೆದುಕೊಂಡು ಹೋಗಿ. ಅರ್ಧಮರ್ಧ ಹೊಟ್ಟೆ ತುಂಬಿದ್ದರೆ ಮಕ್ಕಳು ಶಾಪಿಂಗ್ ಮಾಲ್ ಗೆ ಹೋಗ್ತಿದ್ದಂತೆ ಹಸಿವಿನ ಕಾರಣ ಹೇಳಿ ಗಲಾಟೆ ಮಾಡ್ತಾರೆ. ಸಂಬಂಧಿಕರ ಮನೆ ಅಥವಾ ಸಮಾರಂಭಗಳಿಗೆ ಹೋಗ್ತಿದ್ದಂತೆ ತಂದಿಟ್ಟ ಎಲ್ಲ ಆಹಾರವನ್ನು ತಿಂದು ಮುಗಿಸ್ತಾರೆ. ಇದು ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಹೊಟ್ಟೆ ತುಂಬಿದ್ದರೆ ಮಕ್ಕಳ ವರ್ತನೆ ಭಿನ್ನವಾಗಿರುತ್ತದೆ.

ಮಕ್ಕಳ ಜೊತೆಯೂ ಮಾತನಾಡಿ (Speak with Kids) : ಅನೇಕ ಪಾಲಕರು ಪ್ರಯಾಣದ ವೇಳೆ ಅಥವಾ ಸಂಬಂಧಿಕರ ಮನೆಗೆ ಹೋದಾಗ ಮಾತಿನಲ್ಲಿ ಬ್ಯುಸಿಯಾಗ್ತಾರೆ. ಮಕ್ಕಳ ಮಾತನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸುತ್ತಾರೆ. ಇದು ಮಕ್ಕಳ ಕೋಪಕ್ಕೆ ಕಾರಣವಾಗುತ್ತದೆ. ಅನೇಕ ಬಾರಿ ಇದೇ ಕಾರಣಕ್ಕೆ ಮಕ್ಕಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ. ಮಕ್ಕಳು ಶಾಂತವಾಗಿರಬೇಕೆಂದ್ರೆ ಆಗಾಗ ಅವರ ಮಾತನ್ನು ಕೂಡ ನೀವು ಕೇಳ್ಬೇಕು.

ನೀವು ಹೋಗುವ ಜಾಗದ ಬಗ್ಗೆ ಮಕ್ಕಳಿಗಿರಲಿ ಮಾಹಿತಿ: ಎಲ್ಲಿಗೆ ಹೋಗ್ತಿದ್ದೇವೆ ಎಂದು ಮಕ್ಕಳು ಕೇಳಿದ್ರೆ, ನಿನಗ್ಯಾಕೆ ಎಂದು ಪಾಲಕರು ಉತ್ತರ ನೀಡ್ತಾರೆ. ಇದು ತಪ್ಪು. ನಾವು ಎಲ್ಲಿಗೆ ಹೋಗ್ತಿದ್ದೇವೆ ಎನ್ನುವುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡ್ಬೇಕು. ಮಗುವಿಗೆ ನೀವು ಹೋಗುವ ಸ್ಥಳ, ಪರಿಸರ,  ಜನರ ಬಗ್ಗೆ ಮುಂಚಿತವಾಗಿ ತಿಳಿಸಬೇಕು. ಹಾಗೆ ಅಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಹೇಳಬೇಕು. 

Relationship Tips : ಮಹಿಳೆಯರ ಈ ಗುಟ್ಟು ಹುಡುಗ್ರಿಗೆ ತಿಳಿದಿರಲಿ

ಮಕ್ಕಳ ಪರಿಚಯ: ಮಕ್ಕಳನ್ನು ನೀವು ಭೇಟಿಯಾಗುವ ಜನರಿಗೆ ಪರಿಚಯಿಸಿ. ಹಾಗೆ ಮಕ್ಕಳಿಗೆ ಅಲ್ಲಿನ ಜನರ ಜೊತೆ ಮಾತನಾಡಲು ಪ್ರೋತ್ಸಾಹಿಸಿ. ಅಲ್ಲಿರುವ ಮಕ್ಕಳ ಜೊತೆ ಆಟವಾಡಲು ಸಲಹೆ ನೀಡಿ. ಆಗ ಮಕ್ಕಳ ಬೇಸರ ಕಡಿಮೆಯಾಗುತ್ತದೆ. ಅಲ್ಲಿರುವವರ ಜೊತೆ ಬೆರೆತು ಅವರು ಆ ಕ್ಷಣವನ್ನು ಎಂಜಾಯ್ ಮಾಡ್ತಾರೆ.   

ಶಾಂತವಾಗಿರಿ (Keep Calm) : ಮಕ್ಕಳು ಕೋಪಗೊಂಡಾಗ ಅಥವಾ ಕಿರಿಕಿರಿ ಮಾಡಿದಾಗ ಪಾಲಕರ ಪ್ರತಿಕ್ರಿಯೆ ಕೂಡ ಹಾಗೆಯೇ ಇರುತ್ತದೆ. ಸಾರ್ವಜನಿಕ ಸ್ಥಳದಲ್ಲಿಯೇ ಮಕ್ಕಳನ್ನು ಬೈಯಲು ಶುರು ಮಾಡ್ತಾರೆ. ಅನೇಕ ಪಾಲಕರು ಎಲ್ಲರ ಮುಂದೆ ಮಕ್ಕಳ ಮೇಲೆ ಕೈ ಎತ್ತುತ್ತಾರೆ. ಆದ್ರೆ ಇದು ತಪ್ಪು. ಪಾಲಕರ ಈ ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಮಕ್ಕಳು ತಪ್ಪು ಮಾಡಿದ್ದರೆ ಅವರನ್ನು ಪ್ರತ್ಯೇಕವಾಗಿ ಕರೆದು ಅವರಿಗೆ ಪ್ರೀತಿಯಿಂದ, ಶಾಂತಿಯಿಂದ ಸಲಹೆ ನೀಡಿ. ಏನು ಮಾಡ್ಬಾರದು? ಏನು ಮಾಡ್ಬೇಕು ಎಂಬುದನ್ನು ತಿಳಿಸಿ. 

click me!