ಸೆಕ್ಸ್ ಅಂದ್ರೆ ಪತ್ನಿ ದೂರ ಓಡ್ತಾಳೆ ಅಂದ್ರೆ ಕಾರಣವೇನಿರಬಹುದು?

By Suvarna NewsFirst Published Jun 24, 2022, 3:41 PM IST
Highlights

ದಾಂಪತ್ಯವೆಂದ್ಮೇಲೆ ಸರಸವಿರ್ಲೇಬೇಕು. ಆದ್ರೆ ಅನೇಕರ ಬಾಳಲ್ಲಿ ಇದು ಕಮರಲು ಶುರುವಾಗಿರುತ್ತೆ. ಇದಕ್ಕೆ ಕಾರಣ ಪತ್ನಿ ಅಂತಾ ಆಕೆ ಮೇಲೆ ದೂರು ಹೇಳ್ತಾರೆ ಪುರುಷರು. ಮೊದಲು ಅವರ ಆಸಕ್ತಿ ಕಡಿಮೆ ಆಗೋಕೆ ಏನು ಕಾರಣ ಅನ್ನೋದನ್ನು ತಿಳಿದುಕೊಳ್ಳಬೇಕಾಗುತ್ತೆ.
 

ಮದುವೆ (Wedding) ಜೀವಂತವಾಗಿರಬೇಕೆಂದ್ರೆ ಸೆಕ್ಸ್ (Sex) ಅಗತ್ಯವಾಗುತ್ತದೆ. ದಿನ ಕಳೆದಂತೆ ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ ನೀರಸ ಭಾವವನ್ನು ಸೆಕ್ಸ್ ಹೊಡೆದೋಡಿಸುತ್ತದೆ. ದಂಪತಿಗೆ ಸಿಗುವ ಲೈಂಗಿಕ ಸಂತೋಷ (Happiness) ಮತ್ತು ತೃಪ್ತಿ ದಾಂಪತ್ಯದಲ್ಲಿ ಮುಂದುವರೆಯಲು ನೆರವಾಗುತ್ತದೆ. ಮಹಿಳೆಯರಿಗೆ ಆರಂಭದಲ್ಲಿ ಸಂಭೋಗದ (Intercourse) ಬಗ್ಗೆ ಇದ್ದ ಆಸಕ್ತಿ ದಿನ ಕಳೆದಂತೆ ಕಡಿಮೆಯಾಗುತ್ತದೆ. ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳಲು ಅನೇಕ ಕಾರಣಗಳಿರುತ್ತವೆ. ಆದ್ರೆ ಇದು ಪುರುಷರಿಗೆ ನಿರಾಶಾದಾಯಕ ವಿಷ್ಯ. ಬರೀ ನಿರಾಶೆ ಮೂಡಿಸುವುದು ಮಾತ್ರವಲ್ಲ ಇದು ಆತಂಕಕಾರಿಯೂ ಹೌದು. ಪತ್ನಿ (Wife) ಯಾದವಳು ಏಕೆ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ತಿದ್ದಾಳೆ ಎಂಬುದನ್ನು ಪತಿಯಾದವನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಂದು ನಾವು ಪತ್ನಿಯ ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣವೇನು ಎಂಬುದನ್ನು ಹೇಳ್ತೇವೆ.

ಪತಿಯ ಅಭ್ಯಾಸ (Practice) : ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಲು ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ನಿಮ್ಮ ಅಭ್ಯಾಸವೂ ಒಂದಾಗಿರಬಹುದು. ಪತಿಯ ಕೆಲ ಅಭ್ಯಾಸಗಳಿಗೆ ಪತ್ನಿ ಬೇಸತ್ತಿರುತ್ತಾಳೆ. ಇದು ಸೆಕ್ಸ್ ವಿಷ್ಯದಲ್ಲಿ ಹಿಂದೇಟು ಹಾಕಲು ಕಾರಣವಾಗುತ್ತದೆ. ಇದಲ್ಲದೆ ಬೇರೆ ಯಾವುದಾದರೂ ದೊಡ್ಡ ಸಮಸ್ಯೆ ಪತ್ನಿಗೆ ಇರಬಹುದು. ಪತ್ನಿಗೆ ಲೈಂಗಿಕ ಆಸಕ್ತಿಯಿಲ್ಲ ಎಂದಾಗ ಸುಮ್ಮನಾಗುವ ಬದಲು ಆಕೆ ಜೊತೆ ಮಾತನಾಡಬೇಕು. ಆಗ ಅವಳು ತನ್ನ ಸಮಸ್ಯೆಯನ್ನು ನಿಮ್ಮ ಮುಂದೆ ಹೇಳಬಹುದು. ಸೆಕ್ಸ್ ಕೇವಲ ದೈಹಿಕ ಸುಖವಲ್ಲ. ಅದ್ರಲ್ಲಿ ಭಾವನೆಗಳು ಅಡಗಿರುತ್ತವೆ. ಪತಿ ಜೊತೆ   ಭಾವನಾತ್ಮಕ ಸಂಪರ್ಕ ಸಾಧ್ಯವಾಗ್ತಿಲ್ಲ ಎಂದಾಗ ಪತ್ನಿ ನಿಮ್ಮಿಂದ ದೂರ ಸರಿಯಲು ಶುರು ಮಾಡ್ತಾಳೆ ಎಂಬುದು ನೆನಪಿರಲಿ. 

Parent Love : 17ನೇ ವರ್ಷಕ್ಕೇ ಲವ್ವಲ್ಲಿ ಬಿದ್ದ ಬಾಲೆ, ಏನ್ಮಾಡ್ಲಿ ಅಂತ ತಲೆ ಬಿಸಿಯಂತೆ!

ಫೋರ್‌ಪ್ಲೇ (Foreplay) ಕಾಣೆಯಾದಾಗ : ಮಹಿಳೆಯರು ಫೋರ್‌ಪ್ಲೇಯನ್ನು ಇಷ್ಟಪಡುತ್ತಾರೆ. ಫೋರ್ ಪ್ಲೇಯಿಂದಲೇ ಮಹಿಳೆಗೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ. ಆದ್ರೆ ಅನೇಕ ಪುರುಷರು ಫೋರ್‌ಪ್ಲೇ ಮಹತ್ವ ಅರಿತಿಲ್ಲ. ಅವರು ನೇರವಾಗಿ ಸಂಭೋಗಕ್ಕೆ ಮುಂದಾಗ್ತಾರೆ. ಇದೇ ಪುರುಷರು ಮಾಡುವ ದೊಡ್ಡ ತಪ್ಪು. ಏಕಾಏಕಿ ಸೆಕ್ಸ್ ಪತ್ನಿಗೆ ಇಷ್ಟವಾಗದೆ ಇರಬಹುದು. ಹಾಗಂತ ಆಕೆ ಲೈಂಗಿಕ ಸುಖ ಬಯಸ್ತಿಲ್ಲ ಎಂದಲ್ಲ. ನೀವು ಅವಳನ್ನು ಹೆಚ್ಚು ಸ್ಪರ್ಶಿಸಬೇಕೆಂದು ಅವಳು ಬಯಸುತ್ತಾಳೆ. ಈ ಸತ್ಯವನ್ನು ಪತಿ ತಿಳಿದಿರಬೇಕು. ಸೆಕ್ಸ್ ಗಿಂತ ಮೊದಲು ಫೋರ್‌ಪ್ಲೇ  ಇದ್ದರೆ ಸಂಭೋಗ ಸುಖ ದುಪ್ಪಟ್ಟಾಗುತ್ತೆ ಎನ್ನುತ್ತಾರೆ ತಜ್ಞರು.

ಒತ್ತಡ (Stress) ಮತ್ತು ಬಳಲಿಕೆ :  ಮಹಿಳೆಯರೆಲ್ಲ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಂಡಿರುವುದಿಲ್ಲ. ಆದ್ರೆ ಮನೆ, ಕಚೇರಿ ಕೆಲಸದಿಂದ ಸುಸ್ತಾಗಿರ್ತಾರೆ. ಒತ್ತಡ ಅವರನ್ನು ಕಾಡ್ತಿರುತ್ತದೆ. ಹಾಗಾಗಿ ರಾತ್ರಿ ಇಂಟರ್ಕೋರ್ಸ್ ಗಿಂತ ವಿಶ್ರಾಂತಿಗೆ ಹೆಚ್ಚು ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಅವರು ಪತಿಯಿಂದ ದೂರ ಸರಿಯಲು ಶುರು ಮಾಡ್ತಾರೆ. 

ಕೊರೋನಾ ಕಾಟ ಒಂದಾ ಎರಡಾ?: ದಂಪತಿ ಮಧ್ಯೆ ಕಲಹಕ್ಕೂ ಕಾರಣವಾಯ್ತು ಡೆಡ್ಲಿ ವೈರಸ್‌..!

ನೋವಿನ ಲೈಂಗಿಕತೆ :  ಕೆಲ ಮಹಿಳೆಯರು ಲೈಂಗಿಕತೆ ಸಮಯದಲ್ಲಿ ನೋವನ್ನು ಅನುಭವಿಸ್ತಾರೆ. ಕೆಲ ಭಂಗಿಗಳು ಅವರಿಗೆ ವಿಪರೀತ ನೋವುಂಟು ಮಾಡುತ್ತವೆ. ಆದ್ರೆ ಅದನ್ನು ಪತಿ ಮುಂದೆ ಹೇಳೋದಿಲ್ಲ. ನೋವಿನಿಂದ ತಪ್ಪಿಸಿಕೊಳ್ಳಲು ಸೆಕ್ಸ್ ನಿಂದ ದೂರವಿರ್ತಾರೆ. ಮಾತನಾಡಿದಾಗ ಈ ಸಂಗತಿ ನಿಮಗೆ ತಿಳಿಯುತ್ತದೆ. ಆ ನಂತ್ರ ನೀವು ಭಂಗಿ ಬದಲಿಸಬಹುದು. ಇಲ್ಲವೆ ಲೂಬ್ರಿಕಂಟ್ ಬಳಸಬಹುದು. ಸ್ತ್ರೀರೋಗತಜ್ಞರ ಬಳಿ ಕರೆದುಕೊಂಡು ಹೋಗಬಹುದು.  

ನೀರಸ ಲೈಂಗಿಕ ಕ್ರಿಯೆ :  ಹೆಂಡತಿ ಲೈಂಗಿಕತೆಯಲ್ಲಿ ಆಸಕ್ತಿ ತೋರದಿರಲು ಮತ್ತೊಂದು ಸಂಭವನೀಯ ಕಾರಣವೆಂದರೆ ಬಹುಶಃ ಅವಳು ಲೈಂಗಿಕತೆಯಿಂದ ಬೇಸರಗೊಂಡಿರಬಹುದು. ಹಳೆಯ ಭಂಗಿಗಳು ಆಕೆಗೆ ಬೇಸರ ತಂದಿರಬಹುದು. ಸೆಕ್ಸ್ ನಲ್ಲಿ ಹೊಸ ಭಂಗಿ ಹಾಗೂ ಪ್ರಯೋಗವನ್ನು ಆಕೆ ಬಯಸುತ್ತಿರಬಹುದು. ಹಾಗಾಗಿ ಸೆಕ್ಸ್ ಸಮಯದಲ್ಲಿ ಹೊಸ ಭಂಗಿ ಟ್ರೈ ಆಡ್ಬೇಕು. 
 

click me!