ಆಂಟಿಯರಿಗೇ ಯಾಕೆ ಬೀಳ್ತಾರೆ ಹದಿಹರೆಯದ ಹುಡುಗರು? ಈ ಮ್ಯಾಟರ್ ಹಿಂದಿದೆ ದೊಡ್ಡ ಸೀಕ್ರೆಟ್..!

Published : Oct 26, 2025, 04:51 PM IST
aunties and teenage boys

ಸಾರಾಂಶ

ಈ ಟೀನೇಜ್ ಹುಡುಗರು ಯಾಕ್ ಹೀಗೆ? 'ಆಂಟಿ ನಿನ್ನೊಲುಮೆಯಿಂದಲೇ..' ಅಂತ ಗಂಟು ಬೀಳೋದೇಕೆ ಹದಿಹರೆಯದ ಹುಡುಗರು..? ಇಲ್ಲಿದೆ ಇದಕ್ಕೆ ಸಾಕಷ್ಟು ಕಾರಣಗಳು ಹಾಗೂ ಪುರಾವೆಗಳು. ಇತ್ತೀಚೆಗೆ ಈ ಟ್ರೆಂಡ್ ಹೆಚ್ಚಾಗುತ್ತಿದೆಯಾ? ಅಥವಾ, ಇದು ಹೊರಜಗತ್ತಿಗೆ ಈಗ ಹೆಚ್ಚು ಸುದ್ದಿಯಾಗುತ್ತಿದೆಯಾ? ಈ ಸ್ಟೋರಿ ನೋಡಿ

ಆಂಟಿ ನಿನ್ನೊಲುಮೆಯಿಂದಲೇ..!

ಈ ಟೀನೇಜ್ ಹುಡುಗರು ಯಾಕ್ ಹಿಂಗ್ ಆಡ್ತಾರೋ? 'ಆಂಟಿ ನಿನ್ನೊಲುಮೆಯಿಂದಲೇ..' ಅಂತ ಗಂಟು ಬೀಳೋದೇಕೆ ಹದಿಹರೆಯದ ಹುಡುಗರು..? ಇಲ್ಲಿದೆ ಈ ಸಂಗತಿಯ ಹಿಂದಿನ ಸಾಕಷ್ಟು ಕಾರಣಗಳು! ಇತ್ತೀಚೆಗೆ ಈ ಟ್ರೆಂಡ್ ಹೆಚ್ಚಾಗಿತ್ತಿದೆಯಾ? ಅಥವಾ, ಇದು ಹೊರಜಗತ್ತಿಗೆ ಈಗ ಹೆಚ್ಚು ಸುದ್ದಿಯಾಗುತ್ತಿದೆಯಾ? ಈ ಬಗ್ಗೆ ವೈಜ್ಞಾನಿಕ ಸರ್ವೇಗಳು ಏನು ಹೇಳುತ್ತವೆ? ಸೋಷಿಯಲ್ ಮೀಡಿಯಾ ವರದಿಗಳು ಈ ಟ್ರೆಂಡ್‌ಗೆ ಅದೇನು ಕಾರಣ ಕೊಡುತ್ತಿವೆ? ಈ ಸಂಗತಿಯ ಸುತ್ತಲೂ ಒಂದ್ ರೌಂಡ್ ಹೋಗಿ ಬರೋಣ ಬನ್ನಿ..

ಹೌದು, ಆಂಟಿಯರಿಗೇ ಟೀನೇಜ್ ಹುಡುಗರು ಯಾಕೆ ಬೀಳ್ತಾರೆ? ಫ್ಯೂಚರ್ ಲೈಫ್ ಬರ್ಬಾದ್ ಆಗಲ್ವಾ? ಸೀಕ್ರೆಟ್ ಇಲ್ಲಿದೆ.. ಇತ್ತೀಚೆಗೆ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಹದಿಹರೆಯದ ಹುಡುಗರು ಮಧ್ಯವಯಸ್ಕ ಆಂಟಿಯರ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಈ ಮೊದಲು ಇಂಥವರ ಸಂಖ್ಯೆ ತುಂಬಾ ಕಡಿಮೆ ಇರುತ್ತಿತ್ತು. ಆದರೆ, ಈಗ ಇಂತಹ ಹುಡುಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರುತ್ತಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ಇಂಥ ಟ್ರೆಂಡ್‌ಗೆ, ಅದರಲ್ಲೂ ಮುಖ್ಯವಾಗಿ ಭಾರತೀಯ ಹಳ್ಳಿಹಳ್ಳಿಗಳಲ್ಲಿ ಯಾಕೆ ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ? ಇದರಿಂದ, ಇಂಥ ಹುಡುಗರ ಭವಿಷ್ಯ ಮುಂದೆ ಅಯೋಮಯ ಆಗುವುದಿಲ್ಲವೇ? ಆ ಆಂಟಿಯರ ಸಂಸಾರಗಳಲ್ಲಿ ಅಲ್ಲೋಲಕಲ್ಲೋಲ ನಿರ್ಮಾಣ ಆಗೋದಿಲ್ಲವೇ? ಇಂತಹ ಹತ್ತುಹಲವು ಪ್ರಶ್ನೆಗಳು ಸಹಜವಲ್ಲವೇ?

ಟೀನೇಜ್ ಹುಡುಗರಲ್ಲಿ ಒಂದು ವಿಚಿತ್ರ ಕ್ರೇಜ್ ಇರುತ್ತದೆ

ಮೊಟ್ಟಮೊದಲನೆಯದಾಗಿ, ಈ ಟೀನೇಜ್ ಹುಡುಗರಲ್ಲಿ ಒಂದು ವಿಚಿತ್ರ ಕ್ರೇಜ್ ಇರುತ್ತದೆ, 'ಅದು ತಮ್ಮ ಪುರುಷತ್ವ ಪರೀಕ್ಷೆ ಮಾಡಿಕೊಳ್ಳುವುದು' ಎಂಬ ಯೋಚನೆ. ಅದನ್ನು ಯೋಚನೆ, ಕ್ರೇಜ್ ಅನ್ನೋದಕ್ಕಿಂತ 'ಗೀಳು' ಎನ್ನಬಹುದು. ಅದಕ್ಕೆ ಕಾರಣ ಸರಿಯಾದ ತಿಳಿವಳಿಕೆ ಕೊರತೆ ಹಾಗೂ ಲೈಂಗಿಕ ಅಜ್ಞಾನ. ಅಂಥ ಹುಡುಗರು ಹುಡುಗಿಯರಿಗಿಂತ ಹೆಚ್ಚಾಗಿ ಆಂಟಿಯರ ಸಂಪರ್ಕ ಮಾಡಲು ಬಯಸುತ್ತಾರೆ. ಅವರ ಪ್ರಕಾರ, ಈಗಾಗಲೇ ಅನುಭವವಿರುವ ಆಂಟಿಯರು ಈ ವಿಷಯದಲ್ಲಿ ಹದಿಹರೆಯದ ಹುಡುಗರಿಗೆ, ಫ್ರೆಶರ್‌ಗಳಿಗೆ 'ಪುರುಷತ್ವದ ಸರ್ಟಿಫಿಕೇಟ್' ಕೊಡಲು ಯೋಗ್ಯ ಹಾಗೂ ಅರ್ಹತೆಯುಳ್ಳ ವ್ಯಕ್ತಿಗಳು ಎಂದು ಟೀನೇಜ್ ಬಾಯ್ಸ್‌ ಭಾವಿಸುತ್ತಾರೆ ಎನ್ನುತ್ತದೆ ವರದಿ. ಆದರೆ, ಇದು ಸೂಕ್ತವಲ್ಲ ಎನ್ನುತ್ತವೇ ಅವೇ ವರದಿಗಳು.

ಇನ್ನೊಂದು ವಿಷಯ ಎಂದರೆ, ಆಂಟಿಯರಿಗೆ ಈಗಾಗಲೇ ಮದುವೆ ಅಗಿರುತ್ತದೆ. ಅವರು ತಮ್ಮನ್ನು ಮದುವೆಯಾಗಲು ಒತ್ತಾಯಿಸಿ ಗಂಟುಬೀಳೋದಿಲ್ಲ ಎನ್ನುವುದು ಟೀನೇಜ್ ಹುಡುಗರ ಭಾವನೆ. ಹೇಗೂ ಅಂಡರ್‌ಸ್ಟ್ಯಾಂಡಿಂಗ್ ಮೇಲೆ ಆ ಅನುಭವಕ್ಕೆ ಹೋಗೋದು, ಏನೂ ಸಮಸ್ಯೆ ಆಗಲ್ಲ' ಎಂದುಕೊಳ್ಳುತ್ತಾರೆ ಅಂತಹ ಹುಡುಗರು. ಆದರೆ, ಅವರಿಗೆ ಆ ಕ್ಷಣದಲ್ಲಿ ಮುಂದೆ ಇಬ್ಬರ ಭವಿಷ್ಯಕ್ಕೂ ಇದು ಮಾರಕ ಆಗಬಲ್ಲದು ಎಂಬ ಅರಿವು ಇರೋದಿಲ್ಲ. ಬಟ್, ಅಂದುಕೊಂಡಂತೆ ಆಗದೇ ಬಹಳಷ್ಟು ಹುಡುಗರು ಒದ್ದಾಡಿದ್ದೂ ಇದೆ, ಪ್ರಾಣ ಕಳೆದುಕೊಂಡಿದ್ದು ಇದೆ. ಆದರೆ, ಅಂತಹ ಸತ್ಯ ಸಂಗತಿಗಳು ಹಾಗೆಯೇ ಹೊರಜಗತ್ತಿಗೆ ಅನಾವರಣ ಆಗೋದಿಲ್ಲ, ಬೇರೆ ಕಾರಣಗಳ ಮೂಲಕ ಮುಚ್ಚಿಹೋಗುತ್ತವೆ. ಆದರೆ, ಅನುಭವಿಸಿದ ಹುಡುಗರು ಮತ್ತೆಂದೂ ಅಂತಹ ಸಾಹಸಕ್ಕೆ ಕೈಹಾಕುವುದು ಕಡಿಮೆ.

ಆಂಟಿಯರೂ ಕಾರಣ!

ಆಂಟಿಿಯರ ಹಿಂದೆ ಟೀನೇಜ್ ಹುಡುಗರು ಬೀಳೋಕೆ ಕಾರಣ, ಕೆಲವು ಆಂಟಿಯರೇ ಆಗಿರುತ್ತಾರೆ. ಅದನ್ನು ಮನಶಾಸ್ತ್ರಜ್ಞರು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಆದರೆ, ಟೀನೇಜ್ ಹುಡುಗರನ್ನು ಸಂಪರ್ಕಿಸಿ ಅವರಾಡಿದ ಮಾತುಗಳನ್ನು ಅರ್ಥೈಸಿಕೊಂಡು ಹೇಳಿರುವ ವರದಿ ಹೀಗೆ ಹೇಳುತ್ತದೆ- ಸಂಸಾರದಲ್ಲಿ ಸರಿಗಮ ಇಲ್ಲದ ಕೆಲವು ಆಂಟಿಯರು ಅನುಭವಕ್ಕಾಗಿ ಕಾದು ಕುಳಿತ ಟೀನೇಜ್ ಹುಡುಗರ ಸಂಪರ್ಕಕ್ಕೆ ಯಾವುದೋ ರೀತಿಯಲ್ಲಿ ಬರುತ್ತಾರೆ.

ಆ ಬಳಿಕ, ಅವರು ಅದನ್ನೇ ಅಭ್ಯಾಸ ಮಾಡಿಕೊಂಡು ಹುಡುಗರ ಜೀವನದ ಜೊತೆ ಆಟವಾಡುತ್ತಿರುತ್ತಾರೆ. ಆದರೆ, ಯಾವಾಗ ಆ ಟೀನೇಜ್ ಹುಡುಗರು ವಯಸ್ಕರಾಗಿ ಮದುವೆಯ ಹಂತಕ್ಕೆ ಬರುತ್ತಾರೋ ಆಗ ಕೆಲವು ಆಂಟಿಯರು ಅಂಥವರಿಂದ ದೂರವಾಗಿ ಬೇರೆಯವರಿಗೆ ಗಂಟುಬೀಳುತ್ತಾರೆ. ಆದರೆ, ಕೆಲವರು ಅದನ್ನೊಂದು ಸಮಸ್ಯೆ ಮಾಡಿಕೊಂಡಿ ದುರಂತ ಜೀವನ ಅನುಭವಿಸುತ್ತಾರೆ. ಹುಡಗರೂ ಕೂಡ ಲೈಫ್ ಬರ್ಬಾದ್ ಮಾಡಿಕೊಳ್ಳುತ್ತಾರೆ.

ಇಂತಹ ಟ್ರೆಂಡ್ ಭಾರತಕ್ಕೆ ಬಂದಿದ್ದು ಹೇಗೆ?

ಆದರೆ, ಇಂತಹ ಟ್ರೆಂಡ್ ಭಾರತಕ್ಕೆ ಬಂದಿದ್ದು ಹೇಗೆ? ಇದಕ್ಕೆ ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ, ವಿದಶಿ ಸಂಸ್ಕೃತಿ ವ್ಯಾಮೋಹ. ನಮ್ಮ ಸನಾತನ ಧರ್ಮದಲ್ಲಿ ಮದುವೆ, ಸಂಸಾರ, ಮಕ್ಕಳು ಇಂಥವುಗಳಿಗೆ ಅದರದೇ ಆದ ಶುದ್ಧತೆ, ನಂಬಿಕೆ, ಪ್ರಾಮಾಣಿಕತೆ, ಪ್ರಾಮುಖ್ಯತೆ, ಸಾಮಾಜಿಕ ಮನ್ನಣೆ ಎಲ್ಲವೂ ಇದೆ. ಆದರೆ, ವಿದೇಶಿ ಜೀವನಶೈಲಿಯಲ್ಲಿ ಮದುವೆ, ಸಂಸಾರ, ಸಂಬಂಧ ಇವೆಲ್ಲಾ ಜಸ್ಟ್ ಅವರಿಷ್ಟ ಅನ್ನೋ ಕಾನ್ಸೆಪ್ಟ್. ಆದರೆ, ನಮ್ಮ ಭಾರತೀಯ ಸಮಾಜದಲ್ಲಿ ಅಂತಹ ಸಂಬಂಧಗಳಿಗೆ ಮನ್ನಣೆ ತೀರಾ ಕಡಿಮೆ.

ಭಾರತೀಯ ಸಮಾಜದ ತಿಳುವಳಿಕೆ ಇಲ್ಲಿನ ಟೀನ್ ಏಜ್ ಹುಡುಗರಿಗೆ ಇರಲೇಬೇಕು. ಆದರೆ, ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ ಎನ್ನುತ್ತವೆ ಸಾಕಷ್ಟು ಸಮೀಕ್ಷೆಗಳು. ಈ ಕಾರಣಕ್ಕೇ ಟೀನೇಜ್ ಹುಡುಗರು-ಆಂಟಿಯರ ಅನೈತಿಕ ಸಂಬಂಧಗಳು ಕಾನೂನು ಹಾಗೂ ಸಮಾಜದಲ್ಲಿ ಅಪರಾಧ ಎನ್ನಿಸಿಕೊಂಡು ದುರಂತಮಯವಾಗುತ್ತದೆ. ಎಲ್ಲೆಲ್ಲಿ ಹೇಗಿರಬೇಕೋ ಹಾಗೆ ಇರದಿದ್ದರೆ ಅದು ಅಪರಾಧವಷ್ಟೇ ಅಲ್ಲ, ಬದುಕು ವಿನಾಶಕ್ಕೆ ಗುರಿಯಾಗುತ್ತದೆ.

ದುರಂತ ಆಗುವರೆಗೂ ಎಚ್ಚೆತ್ತುಕೊಳ್ಳದ ಹದಿಹರೆಯದ ಹುಡುಗರು!

ಆದರೆ, ದುರಂತ ಆಗುವರೆಗೂ ಎಚ್ಚೆತ್ತುಕೊಳ್ಳದ ಹದಿಹರೆಯದ ಹುಡುಗರು ತಮ್ಮದಷ್ಟೇ ಅಲ್ಲ, ಆಂಟಿಯರ, ಆ ಸಂಸಾರದ, ತಮ್ಮದೇ ಕುಟುಂಬದ ಹಳಿತಪ್ಪಿದ ಬದುಕಿಗೆ, ಸಮಾಜದ ಅವಹೇಳನಕ್ಕೆ ಗುರಿಯಾಗಿ ನರಕಯಾತನೆ ಅನುಭವಿಸುತ್ತಾರೆ. ಸಮಾಜದಲ್ಲಿ ದಿನನಿತ್ಯ ಸುದ್ದಿಯಾಗುವ, ಸುದ್ದಿಯಾಗದ ಇಂತಹ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವೇ ನಮ್ಮಲ್ಲಿ ಕಡಿಮೆ.

ಕಾರಣ, ನಮ್ಮಲ್ಲಿ ಅಂತಹದು ನಡೆಯುತ್ತಿದೆ ಎನ್ನುವ ಜ್ಞಾನವೇ ಹಲವರಲ್ಲಿ ಇಲ್ಲದಿರುವುದು. ಜೊತೆಗೆ, ಆ ಬಗ್ಗೆ ಮಾತುಕತೆ, ಅರಿವು ಹೊಂದುವ ಅಭ್ಯಾಸ ಕೂಡ ಕಡಿಮೆ ಇರೋದು. ಒಟ್ಟಿನಲ್ಲಿ, ಆಂಟಿಯರ ಹಿಂದೆ ಬೀಳುವ ಹುಡುಗರ ಸಂಖ್ಯೆ ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ಮದುವೆ ಎಂಬ ಪದ್ಧತಿ, ಸಂಸಾರವೆಂಬ ಪದ ಅರ್ಥ ಕಳೆದುಕೊಳ್ಳಬಹುದು, ಈಗಲೇ ಎಚ್ಚರಗೊಂಡರೆ ಒಳ್ಳೆಯದು ಎನ್ನುತ್ತವೆ ಈ ಬಗೆಗಿನ ವರದಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!