ಆಫೀಸ್‌ಗಳಲ್ಲಿ 'ಅನೈತಿಕ ಸಂಬಂಧಗಳು' ಯಾಕೆ ಹೆಚ್ಚುತ್ತಿವೆ? ಮುಖ್ಯವಾದ 5 ಕಾರಣಗಳು ಇವು..!

Published : Oct 23, 2025, 12:04 PM IST
illicit relationship, relationships

ಸಾರಾಂಶ

ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳು ಭಾರಿ ಹೆಚ್ಚಾಗುತ್ತಿವೆ ಎಂದರೆ ಏನರ್ಥ? ಆಫೀಸ್‌ಗಳು ಇರೋದು ಕೂಡ ನಮ್ಮ ಸಮಾಜದಲ್ಲಿಯೇ ಆಗಿದೆ. ಹೀಗಾಗಿ, ಆಫೀಸ್‌ಗಳಲ್ಲಿನ ಅನೈತಿಕ ಸಂಬಂಧಗಳು ಮನೆಮನೆಗಳ ಒಡೆದ ಸಂಬಂಧಗಳೂ ಹೌದು, ಸಮಾಜದ ಚೂರುಚೂರಾದ ಸಂಬಂಧಗಳು ಹೌದು. ಹಾಗಿದ್ದರೆ ಇದಕ್ಕೇನು ಮಾಡುವುದು?

 ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳ ಹೆಚ್ಚಳ!

ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳ (Illicit Relationship) ಹಾವಳಿ ಮಿತಿಮೀರಿದೆ. ಚಿಕ್ಕಪುಟ್ಟ ಹಳ್ಳಿಗಳಲ್ಲಿಯೂ ಅನೈತಿಕ ಸಂಬಂಧಗಳು ಇವೆಯಾದರೂ ಸಿಟಿಗಳಲ್ಲಿ ಇದು ಅತೀ ಹೆಚ್ಚು. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ, ಕೆಲಸಗಳ ಸ್ಥಳಗಳಲ್ಲಿ ಇತ್ತೀಚೆಗೆ ಇದು ತೀರಾ ಜಾಸ್ತಿಯಾಗಿದೆ ಎಂಬ ಸುದ್ದಿ ಹರಡುತ್ತಿದೆ. ಇದು ಕೇವಲ ವದಂತಿಯಲ್ಲ, ಸರ್ವೇ ಮಾಡಿ ಅಂಕಿಅಂಶಗಳ ಸಮೇತ, ಸಾಕ್ಷಿ ಸಮೇತ ಹಬ್ಬಿರುವ ನ್ಯೂಸ್ ಇದು. 'ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳು' ಹೆಚ್ಚುತ್ತಿವೆ ಎಂಬ ಸುದ್ದಿಯೇ ಹಲವರನ್ನು ಬೆಚ್ಚಿಬೀಳಿಸುತ್ತಿವೆ. ಇದು ನಿಜವೇ? ಹಾಗಿದ್ದರೆ ಕಾರಣವೇನು?

ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳು (Immoral Relationship) ಹೆಚ್ಚುತ್ತಿವೆ ಎನ್ನುವ ಸಂಗತಿ ಹೊಸದೇನೂ ಅಲ್ಲ. ಅದು ಮೊದಲಿಗಿಂತ ಇತ್ತೀಚೆಗೆ ಹೆಚ್ಚಾಗಿದ್ದು ಕೂಡ ಸುಳ್ಳಲ್ಲ. ಆದರೆ, ಅದೇ ಈಗ ಫ್ಯಾಷನ್‌ ಆಗಿ, ಟ್ರೆಂಡ್ ಆಗಿ ಬೆಳೆಯುತ್ತಿದೆ ಅನ್ನೋದು ಮಾತ್ರ ನಿಜವಾಗಿಯೂ ಕಳವಳಕಾರಿ ಸಂಗತಿಯೇ ಸರಿ. ಕಾರಣ, ಸಿಟಿಗಳಲ್ಲಿ, ಮಹಾನಗರಗಳಲ್ಲಿ ಅನಿವಾರ್ಯವಾಗಿ ಪ್ರತಿಯೊಬ್ಬರೂ ಕೆಲಸಕ್ಕೆ ಆಫೀಸ್‌ಗಳಿಗೆ ಹೋಗುವುದು ಅನಿವಾರ್ಯ. ಆದರೆ, ಕಚೇರಿಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚುತ್ತಿವೆ ಎಂಬ ಸುದ್ದಿಯೇ ಹಲವರ ಪಾಲಿಗೆ ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಕೆಲಸ ಮುಗಿಸಿ ಮನೆಗೆ ಬಂದವರು ಮನೆಯ ಇತರ ಸದಸ್ಯರಿಗೆ ಮುಖ ತೋರಿಸಲು, ಮುಖ ನೋಡಲು ಮುಜುಗರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸ್ಥಿತಿ ಹೀಗೇ ಮುಂದುವರಿದರೆ ನಮ್ಮ ಭಾರತದ, ಸನಾತನ ಧರ್ಮದ ಕುಟುಂಬ ಪದ್ಧತಿಯ ಗತಿ ಏನು ಎಂದು ಹಲವರು ಚಿಂತೆಗೆ ಬಿದ್ದಿದ್ದಾರೆ.

ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚುತ್ತಿವೆ ಎಂಬುದು ಶಾಕಿಂಗ್ ನ್ಯೂಸ್ ಹೌದು! ಜೊತೆಗೆ, ಅದು ಟ್ರೆಂಡ್ ಆಗುತ್ತಿರುವುದು, ಫ್ಯಾಮಿಲಿಗಳಿಗೆ ತಲೆನೋವು ಆಗುತ್ತಿರುವುದು ಎಲ್ಲವೂ ನಿಜ. ಆದರೆ ಅದಕ್ಕೆ ಕಾರಣವೇನು? ಹಲವು ಸರ್ವೇಗಳ ಮೂಲಕ, ಆಫೀಸುಗಳಲ್ಲಿ ಹೆಚ್ಚುತ್ತಿರುವ ಅನೈತಿಕ ಸಂಬಂಧಗಳ ಮೂಲಮಂತ್ರ ಗೊತ್ತಾಗಿದೆ. ಅದರಲ್ಲೂ ಕೆಲವು ಕಾರಣಗಳು ಮಹಾಮಂತ್ರಗಳು ಎನ್ನಬಹುದು. ಅವುಗಳಲ್ಲಿ ಮುಖ್ಯವಾಗಿ 5 ಕಾರಣಗಳನ್ನು ಹೆಸರಿಸಬಹುದು...

ಕಚೇರಿಗಳಲ್ಲಿ ಅನೈತಿಕ ಸಂಬಂಧದ ಹೆಚ್ಚಳಕ್ಕೆ ಕಾರಣಗಳು:-

1. ಗಂಡ-ಹೆಂಡತಿ ಇಬ್ಬರೂ ಬೇರೆಬೇರೆ ಕಡೆಗಳಲ್ಲಿ ಕೆಲಸಕ್ಕೆ ಹೋಗುವುದು. ಅದರಲ್ಲೂ ಪುರುಷ ಉದ್ಯೋಗಿ ಹೆಚ್ಚಾಗಿ ನೈಟ್‌ ಶಿಫ್ಟ್‌ಗಳಲ್ಲಿ ಕೆಲಸ ಮಾಡುವುದು. ಇದರಿಂದ ಪತಿ-ಪತ್ನಿ ಇಬ್ಬರೂ ಪರಸ್ಪರ ಮುಖ ನೋಡಿಕೊಳ್ಳಲೂ ಆಗದ ಪರಿಸ್ಥಿತಿ. ಇದರಿಂದ ಒಟ್ಟಿಗೆ ಊಟ-ತಿಂಡಿ ಮಾಡಲ್ಲ, ಒಟ್ಟಿಗೇ ಮಲಗುವುದಿಲ್ಲ, ಒಟ್ಟೊಟ್ಟಿಗೇ ಮಕ್ಕಳ ಮುಖವನ್ನೂ ನೋಡಲು ಆಗದ, ಮುದ್ದಾಡಲೂ ಸಮಯವಿಲ್ಲದ ಜೀವನ. ಇದರಿಂದ ಗಂಡ-ಹೆಂಡತಿ ನಡುವಿನ ಅನ್ಯೋನ್ಯತೆ ಕಡಿಮೆಯಾಗುತ್ತಿದೆ. ಇದೇ ವೇಳೆ ಕೆಲಸದ ಜಾಗದಲ್ಲಿ ಪರ್ಯಾಯ ಎನ್ನುವಂತೆ ಹೊಸ ಸಂಬಂಧಗಳು ಬೆಳೆಯತೊಡಗುತ್ತಿವೆ.

2. ಕೆಲಸದ ಒತ್ತಡದಲ್ಲಿ ದಿನದ ಬಹುತೇಕ ಸಮಯ ಕಳೆದುಹೋಗುತ್ತಿದೆ. ಲೈಫ್‌ನಲ್ಲಿ ಇನ್ನೇನೂ ಇಲ್ಲ, ಕೇವಲ ಕೆಲಸ, ಕೆಲಸ ಎನ್ನುವಂತಾಗಿದೆ. ಕೆಲಸಕ್ಕಾಗಿಯೇ ಜೀವನ ಇರೋದು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಜಾಬ್ ಸಿಗೋದು, ಅದನ್ನು ಕಾಪಾಡಿಕೊಳ್ಳೋದು ಎಲ್ಲದರಲ್ಲೂ ತೀವ್ರ ಸ್ಪರ್ಧೆ ಇರುವ ಕಾರಣಕ್ಕೆ ಬೇರೆ ಆಯ್ಕೆಯೇ ಇಲ್ಲ, ಅನಿವಾರ್ಯವಾಗಿ ಈ ಸ್ಪರ್ಧೆಯ ಆಟದಲ್ಲಿ ಭಾಗಿಯಾಗಲೇಬೇಕು ಎನ್ನುವಂತಾಗಿದೆ. ಲೈಫ್ ಲೀಡ್ ಮಾಡೋದಕ್ಕಿಂತ ಕೆಲಸವಿದ್ದರಷ್ಟೇ, ಅದರಲ್ಲೂ ಹೈ ಸ್ಯಾಲರಿ ಇದ್ದರಷ್ಟೇ ಲೈಫ್ ಎನ್ನುವಂತಾಗಿದೆ.. ಹೀಗಾಗಿ ಪ್ರತಿಯಬ್ಬರೂ ಹಣದ ಹಿಂದೆ ಬಿದ್ದು ಜೀವನವನ್ನು ಒತ್ತಡದಿಂದಲೇ ನಡೆಸಬೇಕಾಗಿದೆ. ಈ ಕಾರಣಕ್ಕೆ ಹೆಚ್ಚಾಗಿ ಮನೆಯಲ್ಲಿ ಇರೋದಕ್ಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.

3. ಕೆಲಸದ ಕಾರಣಕ್ಕೆ ಮನೆಯಿಂದ ಹೆಚ್ಚು ಹೊತ್ತು ಹೊರಗಡೆ ಇರಬೇಕಾದ ಅನಿವಾರ್ಯತೆ ಅನೈತಿಕ ಸಂಬಂಧಗಳಿಗೆ ಹೆಚ್ಚುಹೆಚ್ಚಾಗಿ ದಾರಿ ಮಾಡಿಕೊಡತ್ತಿದೆ. ಕಾರಣ, ಜನಸಾಮಾನ್ಯರಲ್ಲಿ ಹೆಚ್ಚಾಗಿ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡಲಾಗುತ್ತಿದೆ. ಆದರೆ, ಆ ಭಾವನಾತ್ಮಕ ಸಂಬಂಧಗಳು ಮನೆಯಲ್ಲಿ ಬೆಳೆಯಲು, ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅದನ್ನು ಸಹಜ ಎನ್ನುವಂತೆ ಕೆಲಸ ಮಾಡುವ ಸ್ಥಳಗಳಲ್ಲಿ ಹುಡುಕುವ ಅಭ್ಯಾಸ ಬೆಳೆಯುತ್ತಿದೆ.

4. ಭಾವನಾತ್ಮಕ ಸಂಬಂಧಗಳ ಜೊತೆಗಜೊತೆಗೆ ಅದು ದೈಹಿಕ ಸಂಬಂಧಕ್ಕೂ ದಾರಿ ಮಾಡಿಕೊಡುತ್ತಿರುವುದು ಕೂಡ ಸಹಜ ಎನ್ನುವಂತಾಗಿದೆ. 'ಯದ್ಭಾವಂ ತದ್ಭವತಿ' ಎಂಬಂತೆ, ಎಲ್ಲಿ ಭಾವನೆಗಳು ಬೆಸೆಯತೊಡಗಿವೆಯೋ ಅಲ್ಲಿ ದೇಹವೂ ಬೆಸದುಕೊಳ್ಳುತ್ತವೆ ಎಂಬಂತೆ ಫ್ಯಾಮಿಲಿಗಳಲ್ಲಿಯೇ ಇರಬೇಕಾದ ದೈಹಿಕ ಸಂಬಂಧಗಳು ಮನೆಯ ಚೌಕಟ್ಟು ಮೀರಿ ಆಫೀಸಿಗೂ ಕಾಲಿಟ್ಟಿದೆ ಎನ್ನಬಹುದು. ಕುಟುಂಬದ ಮುಖ್ಯ ಪಿಲ್ಲರ್ ಆಗಿರುವ ದೈಹಿಕ ಸಂಬಂಧ ಆ ಬಾಗಿಲು ದಾಟಿ ಬಂದರೆ ಮುಂದೆ ಅದು ಕೌಟುಂಬಿಕ ಮಸನ್ತಾಪಕ್ಕೆ ಹಾಗೂ ಶಾಶ್ವತವಾಗಿ ಫ್ಯಾಮಿಲಿ ಸಂಬಂಧಗಳು ದೂರವಾಗುವುದಕ್ಕೆ ಕಾರಣಗಳು ಆಗುತ್ತಿವೆ.

5. ಆಧುನಿಕ ಜೀವನಶೈಲಿ ಹಾಗೂ ವಿದೇಶಿ ಸಂಸ್ಕೃತಿಯ ವ್ಯಾಮೋಹ ಕೂಡ ಇಂದು ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚಲು ಕಾರಣಗಳಾಗಿವೆ. ಕೂಡ ಕುಟುಂಬ, ಅವಿಭಕ್ತ ಕುಟುಂಬ ಹಾಗೂ ಕೆಲವು ಕೌಟುಂಬಿಕ ಮೌಲ್ಯಗಳಿಗೆ ಭಾರತದಲ್ಲಿ ಮೊದಲು ತುಂಬಾ ಬೆಲೆ ಇತ್ತು. ಆದರೆ ಇತ್ತೀಚೆಗೆ ಅದು ಕಡಿಮೆಯಾಗುತ್ತಿವೆ. ಅದಕ್ಕೆ ಕಾರಣ, ಇಂದಿನ ಜನರೇಶ್‌ಗಳಲ್ಲಿ ಹಾಸುಹೊಕ್ಕಾಗಿರುವ ವಿದೇಶಿ ಸಂಸ್ಕೃತಿಯ ವ್ಯಾಮೋಹ. ವಿದೇಶಿಯರು ಇಂದು ಹೆಚ್ಚಾಗಿ ಭಾರತದ ಜೀವನಪದ್ಧತಿ ಕಡೆ ನೋಡುತ್ತಿದ್ದರೆ ನಮ್ಮವರು ಹೆಚ್ಚಾಗಿ ಫಾರಿನ್ ಲೈಫ್‌ಸ್ಟೈಲ್‌ ಅಳವಿಡಿಸಿಕೊಂಡು ಕುಟುಂಬದಲ್ಲಿ ಇರಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಇದ ಹೀಗೆ ಮುಂದುವರಿದರೆ ಮುಂದೊಂದು ದಿನ ಆಫೀಸ್‌ಗಳಲ್ಲಿ ಮಾತ್ರವಲ್ಲ, ಮನೆಮನೆಗಳಲ್ಲೂ ಅನೈತಿಕ ಸಂಬಂಧಗಳು ಮನೆಮಾಡುವ ಕಾಲ ಬರಲಿದೆ.

ಪ್ರತಿ ಸಮಸ್ಯೆಗೆ ಪರಿಹಾರವೂ ಇದೆ, ಇದಕ್ಕೇನು?

ಆಫೀಸ್‌ಗಳಲ್ಲಿ ಅನೈತಿಕ ಸಂಬಂಧಗಳು ಭಾರಿ ಹೆಚ್ಚಾಗುತ್ತಿವೆ ಎಂಬುದು ಸುದ್ದಿ. ಇದಕ್ಕೆ ಪುರಾವೆಗಳು ಇಂದು ಹೆಚ್ಚುತ್ತಿರುವ ಡಿವೋರ್ಸ್‌ ಕೇಸ್‌ಗಳು. ಕಚೇರಿಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಿವೆ ಎಂದರೆ ಏನರ್ಥ? ಆಫೀಸ್‌ಗಳು ಇರೋದು ಕೂಡ ನಮ್ಮ ಸಮಾಜದಲ್ಲಿಯೇ ಆಗಿದೆ. ಹೀಗಾಗಿ, ಆಫೀಸ್‌ಗಳಲ್ಲಿನ ಅನೈತಿಕ ಸಂಬಂಧಗಳು ಮನೆಮನೆಗಳ ಒಡೆದ ಸಂಬಂಧಗಳೂ ಹೌದು, ಸಮಾಜದ ಚೂರುಚೂರಾದ ಸಂಬಂಧಗಳು ಹೌದು. ಹಾಗಿದ್ದರೆ ಇದಕ್ಕೇನು ಮಾಡುವುದು? ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ. ಹೆಚ್ಚಾಗುತ್ತಿರುವ 'ಆಫೀಸುಗಳಲ್ಲಿನ ಅನೈತಿಕ ಸಂಬಂಧ'ಗಳಿಗೆ ಪರಿಹಾರವನ್ನೂ ತಿಳಿಸಬೇಕಿದೆ. ಅದಕ್ಕೆ ಸಾಕಷ್ಟು ಸ್ಟಡಿ ಮಾಡಬೇಕಿದೆ, ಅಂಕಿ-ಅಂಶಗಳನ್ನು ಕಲೆಹಾಕಬೇಕಿದೆ. ಅದೆಲ್ಲಾ ಮಾಹಿತಿ ಪಡೆದ ಬಳಿಕ, ಆದಷ್ಟೂ ಶೀಘ್ರದಲ್ಲಿ ಅದನ್ನು ತಿಳಿಸಲಾಗುವುದು, ಕಾಯುತ್ತಿರಿ..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!