#Feelfree: ಸೆಕ್ಸ್ ವೇಳೆ ತುಂಬಾ ಚೀರಾಡ್ತಾಳೆ!

Suvarna News   | Asianet News
Published : Jul 18, 2020, 04:37 PM IST
#Feelfree: ಸೆಕ್ಸ್ ವೇಳೆ ತುಂಬಾ ಚೀರಾಡ್ತಾಳೆ!

ಸಾರಾಂಶ

ಮಿಲನ ಮಹೋತ್ಸವದ ಸಂದರ್ಭದಲ್ಲಿ ಒಬ್ಬೊಬ್ಬರ ವರ್ತನೆ ಒಂದೊಂದು ತೆರನಾಗಿ ಇರುತ್ತದೆ. ಕೆಲವರಿಗೆ ಅದು‌ ವಿಚಿತ್ರ ಅನಿಸಬಹುದು.  

ಪ್ರಶ್ನೆ: ನಾನು ವಿವಾಹಿತ, ಇಪ್ಪತ್ತೇಳು ವರ್ಷ. ಪತ್ನಿಗೆ ಇಪ್ಪತ್ತೈದು ವರ್ಷ. ನನ್ನ ಹೆಂಡತಿಗೊಂದು ವಿಚಿತ್ರ ಅಭ್ಯಾಸವಿದೆ. ಅದೇನೆಂದರೆ ಮುನ್ನಲಿವಿನ ನಂತರ ಸಂಭೋಗ ಆರಂಭಿಸಿದ ಮೇಲೆ ಮುಗಿಯುವ ವರೆಗೂ ಜೋರಾಗಿ ಸದ್ದು ಮಾಡುತ್ತಾಳೆ. ಆದರೆ ನಂತರ ಅವಳಿಗೆ ಅದು ನೆನಪಿನಲ್ಲಿ ಇರುವುದೇ ಇಲ್ಲ. ಕೆಲವೊಮ್ಮೆ ಆಕೆ ಮಾಡುವ ಸದ್ದು ಪಕ್ಕದ ಕೋಣೆಗೂ ಕೇಳಿಸಬಹುದಾ ಅಂತ ನನಗೆ ಆತಂಕವಾಗುತ್ತೆ.  ಇದರಿಂದ ಮಿಲನ ಕ್ರಿಯೆಯ ನಡುವೆಯೇ ನಂಗೆ ಉದ್ರೇಕ ಇಳಿದುಬಿಡುತ್ತದೆ. ಏನು ಮಾಡಲಿ?

ಉತ್ತರ: ಏನೂ ಮಾಡಬೇಡಿ! ನಿಮ್ಮದು ಸಮಸ್ಯೆಯೇ ಅಲ್ಲ. ಇದಕ್ಕೆ ನೀವು ಸಂತೋಷ ಪಡಬೇಕು. ಸಂಭೋಗದ ಸಮಯದಲ್ಲಿ ನಿಮ್ಮ ಪತ್ನಿ ಅಷ್ಟೊಂದು ಸೀತ್ಕಾರ ಮಾಡುತ್ತಾಳೆ ಅಂದರೆ ಆಕೆ ಆ ಕ್ರಿಯೆಯನ್ನು ತುಂಬ ಎಂಜಾಯ್ ಮಾಡುತ್ತಿದ್ದಾಳೆ, ಸುಖಿಸುತ್ತಿದ್ದಾಳೆ ಎಂದರ್ಥ. ನೀವು ಕೂಡ ನಿಮ್ಮ ಪತ್ನಿಗೆ ಸಂತೋಷ ಕೊಡುತ್ತಿದ್ದೀರಿ ಎಂದು ಹೆಮ್ಮೆ ಪಟ್ಟುಕೊಳ್ಳಿ. ನೀವೂ ಅದನ್ನು ಎಂಜಾಯ್ ಮಾಡಿ. ನಿಮ್ಮಿಬ್ಬರ ಸುಖ ಹೆಚ್ಚಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡಬಹುದು. ಕೆಲವು ಗಂಡಸರೂ ಈ ಬಗೆಯ ಸೀತ್ಕಾರದ ಸ್ವಭಾವ ಹೊಂದಿರುತ್ತಾರೆ. ಇದು ಅವರ ಸುಖದ ಪ್ರಮಾಣವನ್ನು ಹೆಚ್ಚಿಸುವುದರಲ್ಲಿ ನೆರವಾಗುತ್ತದೆ. ಹಾಗಂತ ಅಧ್ಯಯನಗಳು ಹೇಳುತ್ತವೆ.

ಪ್ರಶ್ನೆ: ನಾನು ವಿವಾಹಿತೆ. ಮೂವತ್ತು ವರ್ಷ. ಪತಿಗೆ ಮೂವತ್ತಾರು ವರ್ಷ. ಇತ್ತೀಚೆಗೆ ಪತಿ ಸೆಕ್ಸ್ ವೇಳೆ ನನ್ನ ಕೈಗಳನ್ನು ಕಟ್ಟಿ ಹಾಕುವ ಪ್ರಯೋಗ ಮಾಡಿದರು. ಅದು ಅವರಿಗೆ ಹೆಚ್ಚು ಉದ್ರೇಕ ಹಾಗೂ ಸುಖ ಕೊಡುತ್ತದಂತೆ. ಅಂದಿನಿಂದ ಆಗಾಗ ಹಾಗೆ ಮಾಡುತ್ತಾರೆ. ಸಂಭೋಗದ ವೇಳೆ ಮೈಗೆಲ್ಲ ಕಚ್ಚುತ್ತಾರೆ. ಆದರೆ ನನಗೆ ಇದರಿಂದ ಮುಕ್ತವಾಗಿ ಭಾಗವಹಿಸಲು ಸಾಧ್ಯವಾಗದೆ  ಕಿರಿಕಿರಿಯಾಗುತ್ತದೆ. ಇದು ನಾರ್ಮಲ್ ವರ್ತನೆಯೇ? ಪತಿಗೆ ಕೌನ್ಸೆಲಿಂಗ್ ಬೇಕೆ?

ಉತ್ತರ: ನಿಮ್ಮ ಪತಿಯಲ್ಲಿ ಸ್ವಲ್ಪ ಮ್ಯಾಸೋಚಿಸಂ ವರ್ತನೆ ಇರುವಂತೆ ಕಾಣುತ್ತದೆ. ಇಂಥವರು‌ ಸೆಕ್ಸ್ ವೇಳೆ ಸಂಗಾತಿಗೆ ತಮಗರಿವಿಲ್ಲದೇ ನೋವು ಮಾಡುತ್ತಾರೆ. ಕೆಲವರಲ್ಲಿ ಇದು ಅತಿಗೆ ಹೋಗಬಹುದು. ಗಂಡಸರು ಮಾತ್ರವಲ್ಲ, ಸ್ತ್ರೀಯರೂ ಹೀಗೆ ಮಾಡುತ್ತಾರೆ.  ಸಂಗಾತಿಯ ಕೈಕಾಲು ಕಟ್ಟಿ ಭೋಗಿಸುವುದರ ಜೊತೆಗೆ, ಹೊಡೆಯುವುದು, ಚೂಪಾದ ಆಯುಧಗಳಿಂದ ಗೀರುವುದು, ಸಿಗರೇಟ್‌ನಿಂದ ಚುಚ್ಚುವುದು- ಮುಂತಾದ ವರ್ತನೆ ಕೂಡ ತೋರುತ್ತಾರೆ. ಇದಂತೂ ನಾರ್ಮಲ್ ವರ್ತನೆ ಅಲ್ಲ. ಅಂಥವರಿಗೆ ಚಿಕಿತ್ಸೆ, ಔಷಧ, ಕೌನ್ಸೆಲಿಂಗ್ ಅಗತ್ಯ. ಆದರೆ ನಿಮ್ಮ ಪತಿಯ ವರ್ತನೆಯಲ್ಲಿ ಅಂಥ ಗಂಭೀರತೆಯೇನೂ ಇದ್ದ ಹಾಗಿಲ್ಲ. ಇದು ನಿಮಗೆ ಕಿರಿಕಿರಿ ಎನಿಸಿದರೆ ಪತಿಗೆ ಮೃದುವಾಗಿ ತಿಳಿಸಿ ಮನದಟ್ಟು ಮಾಡಿಸಿ. ಕೇಳಲಿಲ್ಲವಾದರೆ ಕೌನ್ಸೆಲಿಂಗ್ ಅಗತ್ಯ. 

#Feelfree: ಪೃಷ್ಠ ನೋಡಿದರೆ ಮಾತ್ರವೇ ಆಸಕ್ತಿ ಕೆರಳುತ್ತದೆ! 

ಪ್ರಶ್ನೆ: ನನ್ನ ಪತಿಗೊಂದು ಅಭ್ಯಾಸವಿದೆ. ಅದೇನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ತಬ್ಬಿ ಮುದ್ದಾಡುವುದು. ಯಾರಾದರೂ ನಮ್ಮನ್ನು ನೋಡುತ್ತಾ ಇದ್ದರೆ ಇವರಿಗೆ ಉದ್ರೇಕ ಹೆಚ್ಚಾಗುತ್ತದೆ. ಕೆಲವೊಮ್ಮೆ ಬೆಡ್‌ರೂಂ ಕಿಟಕಿ ತೆರೆದಿಟ್ಟೇ ಮುದ್ದಾಡಲು ಶುರು ಮಾಡುತ್ತಾರೆ. ಎದುರಿನ ಮನೆಯವರು ನೋಡುತ್ತಿದ್ದಾರೆ ಎಂದರೆ, ನೋಡಲಿ ಅಂತ್ಲೇ ಹೀಗೆ ಮಾಡ್ತಿದೀನಿ ಅನ್ನುತ್ತಾರೆ. ಕೆಲವೊಮ್ಮೆ ಕಾರಿನಲ್ಲಿ ಸೆಕ್ಸ್‌ ಮಾಡುವಂತೆ ಒತ್ತಾಯಿಸುತ್ತಾರೆ. ಆದರೆ ನನಗೆ ಮುಜುಗರವಾಗುತ್ತದೆ. ಇವರು ಯಾಕೆ ಹೀಗೆ? ಇದಕ್ಕೆ ಮದ್ದೇನು? 

ಪೋರ್ನ್ ನಟಿಯರ ಕೆಲಸ ಬಹಿರಂಗವಾದಾಗ... 

ಉತ್ತರ: ಕೆಲವರಲ್ಲಿ ಇಂಥದೊಂದು ಪ್ರದರ್ಶನ ಪ್ರಿಯತೆ ಇರುತ್ತದೆ. ಇವರು ತಮಗೆ ಸಿಕ್ಕಿದ ಸೌಭಾಗ್ಯವನ್ನು ಇತರರೂ ನೋಡಲಿ, ಹೊಟ್ಟೆಯುರಿ ಪಟ್ಟುಕೊಳ್ಳಲಿ ಎಂದು ಬಯಸುವವರಾಗಿರುತ್ತಾರೆ. ಇದರಿಂದ ನಿಮಗೆ ಆಗುತ್ತಿರುವ ಮುಜುಗರವನ್ನು ಅವರಿಗೆ ತಿಳಿಸಿ ಹೇಳಿ. ಬೇಕಿದ್ದರೆ ಬೆಡ್‌ರೂಮಿನಲ್ಲಿ ಕೆಲವು ಗೊಂಬೆಗಳನ್ನು ಇಟ್ಟುಕೊಳ್ಳಿ. ಇದರಿಂದ ಸೆಕ್ಸ್‌ ವೇಳೆ ತಮ್ಮನ್ನು ಯಾರೋ ನೋಡುತ್ತಿದ್ದಾರೆ ಎಂಬ ಸುಳ್ಳೇ ಫೀಲಿಂಗ್‌ ಅವರಿಗೆ ತೃಪ್ತಿ ಕೊಡಬಹುದು.

#Feelfree: ಲಾಕ್‌ಡೌನ್ ಟೈಮಲ್ಲೇಕೆ ಇಷ್ಟೊಂದು ಸಂಶಯ? 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?