ನೀವು ಮೃಗಾಲಯಕ್ಕೆ ಹೋದರೆ ಅಲ್ಲಿರುವ ಚಿಂಪಾಂಜಿ ಅಥವಾ ಗೊರಿಲ್ಲಾಗಳ ಶಿಶ್ನಗಳನ್ನು ಗಮನಿಸಿ. ಗೊರಿಲ್ಲಾ ಗಾತ್ರದಲ್ಲಿ ಮನುಷ್ಯನಿಗಿಂತ ದೊಡ್ಡದಾದರೂ, ಗಂಡು ಗೊರಿಲ್ಲಾದ ಶಿಶ್ನ (penis size) ಮನುಷ್ಯನದಕ್ಕಿಂತ ಸಣ್ಣದು. ಹೀಗೇಕೆ? ಮನುಷ್ಯನ ವಿಕಾಸ ನಡೆಯುವಾಗ ಏನು ವಿಚಿತ್ರ ಸಂಭವಿಸಿತು?
ನೀವು ಬೇಕಿದ್ದರೆ ಗಮನಿಸಿ ನೋಡಿ, ಮನುಷ್ಯನ ಶಿಶ್ನ (penis size) ಇತರ ಎಲ್ಲ ವಾನರರ ಜಾತಿಗಳ ಶಿಶ್ನಕ್ಕಿಂತ ದೊಡ್ಡದು. ಮನುಷ್ಯನೂ ವಾನರರ ಜಾತಿಯೇ. ವಿಕಾಸ ಸಿದ್ಧಾಂತದ ಪ್ರಕಾರ, ಮನುಷ್ಯರು ಸುಧಾರಿತ ಚಿಂಪಾಂಜಿಗಳು. ನೀವು ಮೃಗಾಲಯಕ್ಕೆ ಹೋದರೆ ಅಲ್ಲಿರುವ ಚಿಂಪಾಂಜಿ ಅಥವಾ ಗೊರಿಲ್ಲಾಗಳ ಶಿಶ್ನಗಳನ್ನು ಗಮನಿಸಿ. ಗೊರಿಲ್ಲಾ ಗಾತ್ರದಲ್ಲಿ ಮನುಷ್ಯನಿಗಿಂತ ದೊಡ್ಡದಾದರೂ, ಗಂಡು ಗೊರಿಲ್ಲಾದ ಶಿಶ್ನ ಮನುಷ್ಯನದಕ್ಕಿಂತ ಸಣ್ಣದು. ಮನುಷ್ಯನ ಶಿಶ್ನ ಮುದುಡಿದ್ದಾಗ ಸಣ್ಣದೇ. ಆದರೆ ನಿಮಿರಿದಾಗ ಅದರ ಗಾತ್ರ ಆರು ಇಂಚು, ಏಳು ಇಂಚು ಕೂಡ ಆಗುವುದುಂಟು. ಅಪರೂಪಕ್ಕೆ ಎಂಟು ಇಂಚು ಆಗುವುದೂ ಉಂಟು. ಹೀಗೇಕೆ? ಮನುಷ್ಯನಿಗೆ ಮಾತ್ರ ಇಷ್ಟೊಂದು ದೊಡ್ಡ ಗಾತ್ರವೇಕೆ? ಮನುಷ್ಯನ ವಿಕಾಸ ನಡೆಯುವಾಗ ಏನು ವಿಚಿತ್ರ ಸಂಭವಿಸಿತು?
ವಿಕಾಸ ಸಿದ್ಧಾಂತವನ್ನು ಪ್ರತಿಪಾದಿಸಿ ಚಾರ್ಲ್ಸ್ ಡಾರ್ವಿನ್‌ನ ಕೆಲವು ವಾದಗಳಾದರೂ ನಿಮಗೆ ಗೊತ್ತಿರುತ್ತದೆ. ಉದಾಹರಣೆಗೆ, ಬಳಸಿದ ಅಂಗ ಬೆಳೆಯುತ್ತದೆ, ಬಳಸದೇ ಇದ್ದದ್ದು ಸಣ್ಣದಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಬಳಸುತ್ತಾ ದೊಡ್ಡದಾದುದಕ್ಕೆ ಜಿರಾಫೆಯ ಕತ್ತನ್ನು ಉದಾಹರಣೆಯಾಗಿ ಕೊಡಲಾಗುತ್ತದೆ. ಉಪಯೋಗವಿಲ್ಲದೇ ವ್ಯರ್ಥವಾದ ಅಂಗವೆಂದರೆ ಮನುಷ್ಯನ ಅಪೆಂಡಿಕ್ಸ್. ಶಿಶ್ನಕ್ಕೂ ಈ ಸೂತ್ರವನ್ನು ಅನ್ವಯಿಸಬಹುದು. ಅದು ಹೇಗೆ?
undefined
ವಾನರ ಜಾತಿಯ (ಪ್ರೈಮೇಟ್‌ಗಳ) ಲೈಂಗಿಕ ಪ್ರವೃತ್ತಿಯ ಮೂಲ 60 ದಶಲಕ್ಷ ವರ್ಷಗಳಷ್ಟು ಹಿಂದಿನ ಮೆಸೊಜೊಯಿಕ್ ಯುಗಕ್ಕೆ ಹೋಗುತ್ತದೆ. ಅಲ್ಲಿಂದೀಚೆಗೆ ಬಹಳಷ್ಟು ಲೈಂಗಿಕ ಬದಲಾವಣೆಗಳು ನಡೆದಿವೆ. ಆಗ ಮನುಷ್ಯನಾಗಿ ಸುಧಾರಿತಗೊಳ್ಳುತ್ತಿದ್ದ ಹೋಮೋ ಸೇಪಿಯನ್ಸ್ (ಮನುಷ್ಯ) ವಾನರಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿತ್ತು. ಸಂತಾನೋತ್ಪತ್ತಿಯೇ ವಾನರ ಜಾತಿಯ ಪ್ರಧಾನ ಉದ್ದೇಶವಾಗಿತ್ತು. ಹೀಗಾಗಿ ಹೋಮೋ ಸೇಪಿಯನ್ಸ್ ಹೆಣ್ಣುಗಳು ಸಹಜವಾಗಿಯೇ ತಮ್ಮಲ್ಲಿ ಸಂತತಿ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿರುವ ಗಂಡುಗಳನ್ನು ಹೆಚ್ಚು ಹೆಚ್ಚಾಗಿ ಹುಡುಕಿಕೊಳ್ಳತೊಡಗಿದವು. ಸ್ತ್ರೀ ಸಸ್ತನಿಗಳು ಗಂಡಿಗಿಂತ ಹೆಚ್ಚಿನ ಲೈಂಗಿಕ ಪರಾಕಾಷ್ಠೆ ಅನುಭವಿಸಬಹುದು. ಈ ಪೂರ್ವಜ ಹೆಣ್ಣುಗಳು ತಮ್ಮನ್ನು ಹೆಚ್ಚು ಬಾರಿ ಲೈಂಗಿಕವಾಗಿ ತೃಪ್ತಿಪಡಿಸುವ, ಹೆಚ್ಚು ಸಾಮರ್ಥ್ಯ ಹೊಂದಿರುವ, ಅದಕ್ಕಾಗಿಯೇ ಹೆಚ್ಚಿನ ಶಿಶ್ನದ ಗಾತ್ರ ಹೊಂದಿರುವ ಪುರುಷರನ್ನು ಹುಡುಕಿದವು. ಲಕ್ಷಗಟ್ಟಲೆ ವರ್ಷ ಹೀಗೆ ನಡೆದೂ ನಡೆದೂ, ಸಣ್ಣ ಶಿಶ್ನದ ಹೋಮಿನಿಡ್‌ಗಳ ಸಂಖ್ಯೆಯೇ ಅಳಿಯಿತು. ದೊಡ್ಡ ಶಿಶ್ನದ ಹೋಮಿನಿಡ್‌ಗಳ ಸಂಖ್ಯೆ ಹೆಚ್ಚಿತು ಎಂದು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ.
ನಿಮಗೂ ಹೀಗೆಲ್ಲಾ ಆಗ್ತಿದ್ರೆ ಫ್ರೆಂಡ್ ಮೇಲೆ ನಿಮಗೂ ಲವ್ ಆಗಿದೆ ಅಂತಾಯ್ತು!
ಇಂದು, ಒಂದು ಗೊರಿಲ್ಲಾದ ನಿಮಿರಿದ ಶಿಶ್ನದ ಸರಾಸರಿ ಉದ್ದ ಕೇವಲ 3 ಸೆಂಮೀ ಮಾತ್ರ. ಚಿಂಪಾಂಜಿಯ ಶಿಶ್ನದ ಸರಾಸರಿ ಗಾತ್ರ ಸುಮಾರು 8 ಸೆಂಮೀ. ಆದರೆ ಸರಾಸರಿ ಮಾನವ ಶಿಶ್ನದ ನಿಮಿರಿದ ಗಾತ್ರ ಸುಮಾರು 13 ಸೆಂಮೀ. ಚಿಂಪಾಂಜಿಗಳು ಸೇರಿದಂತೆ ಹೆಚ್ಚಿನ ಪ್ರೈಮೇಟ್‌ಗಳ ಶಿಶ್ನ ಮೂಳೆಯನ್ನು ಹೊಂದಿರುತ್ತವೆ. ಸ್ನಾಯುವಿನ ಸಂಕೋಚನದ ಮೂಲಕ ನಿಮಿರುವಿಕೆಯನ್ನು ಸಾಧಿಸುತ್ತವೆ. ಆದರೆ ಮಾನವನ ಶಿಶ್ನದಲ್ಲಿ ಮೂಳೆ ಇಲ್ಲ. ನಿಮಿರುವಿಕೆಯನ್ನು ಸಾಧಿಸಲು ರಕ್ತನಾಳದ ಸಂಕೋಚನ ಉಂಟಾಗುತ್ತದೆ. ಇದೊಂದು ಅಸಾಮಾನ್ಯ ವಿಕಾಸ ವ್ಯವಸ್ಥೆ. ಇದು ನಿಮಿರಿದರೂ ಶಿಶ್ನ ಫ್ಲೆಕ್ಸಿಬಲ್ ಆಗಿರುವಂತೆ, ಹೆಣ್ಣಿನ ಯೋನಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ವಾನರಗಳಿಗಿಂತ ಹೆಚ್ಚು ಬಾರಿ, ವರ್ಷವಿಡೀ ಲೈಂಗಿಕ ಕ್ರಿಯೆ ನಡೆಸಲು ಮಾನವರಿಗೆ ಸಾಧ್ಯವಾಗಿದೆ.
ಮಹಿಳೆಯರು ಎಲ್ಲರೂ ಪುರುಷನ ಲೈಂಗಿಕ ಆಯುಧಧ ಗಾತ್ರದ ಬಗ್ಗೆ ಗೀಳನ್ನು ಹೊಂದಿರುವುದಿಲ್ಲ. ಸ್ಥಿರವಾದ ಸಂಬಂಧಕ್ಕಾಗಿ ನಂಬಿಕೆ, ಆಸಕ್ತಿಗಳು ಮತ್ತು ಪರಸ್ಪರ ರಂಜಿಸುವ ಸಾಮರ್ಥ್ಯದ ಅಗತ್ಯವಿದೆ ಎಂದು ಮಹಿಳೆಯರು ತಿಳಿದಿದ್ದಾರೆ. ಆದರೆ ಮಹಿಳೆ ಪುರುಷನ ಶಿಶ್ನದ ಗಾತ್ರವನ್ನು ತನ್ನ ಮನಸ್ಸಿನಿಂದ ಪೂರ್ತಿ ತೆಗೆದು ಹಾಕಲಾರಳು. ಏಕೆಂದರೆ ಅದು ಸಾಧ್ಯವಿಲ್ಲ. ಹೆಣ್ಣುಗಳಿಗೂ ಪುರುಷನ ಶಿಶ್ನದ ಗಾತ್ರದಲ್ಲಿ ಸಾಕಷ್ಟು ಆಸಕ್ತಿಯಿರುತ್ತದೆ. ಅದರ ಗಾತ್ರ ಮತ್ತು ಆಕಾರವು ಲೈಂಗಿಕತೆಗಾಗಿಯೇ ವಿನ್ಯಾಸಗೊಂಡಿದೆ. ಆದರೆ ಮನುಷ್ಯರು ಸೃಜನಶೀಲರೂ ಅಲ್ಲವೇ? ಹೀಗಾಗಿ ಹೆಚ್ಚು ಕಾಲ್ಪನಿಕತೆ, ಸರಸದಾಟ, ಇತ್ಯಾದಿಗಳಲ್ಲಿ ತೃಪ್ತಿಪಡುತ್ತೇವೆ. ಹೀಗಾಗಿ ಮಹಿಳೆಯರ ಮನಸ್ಸನ್ನು ಸೃಜನಶೀಲತೆಯಿಂದಲೂ, ಕಾಲ್ಪನಿಕತೆಯಿಂದಲೂ ಪ್ರಚೋದಿಸಬಹುದು. ಪ್ರೀತಿಯು ಲೈಂಗಿಕ ಜೀವನಕ್ಕೆ ತೃಪ್ತಿಯನ್ನು ಸೇರಿಸುತ್ತದೆ.
ಒಂದಲ್ಲ ಎರಡಲ್ಲ ಹತ್ತಾರು ರಾಣಿಯರನ್ನು ತೃಪ್ತಿಪಡಿಸ್ತಿದ್ದ ರಾಜರ ಗುಟ್ಟೇನು?