#Feelfree: ನಂಗೆ ಹೆಂಡತಿ ಸಂಗವೂ ಬೇಕು, ಅವನ ಜೊತೆಗೂ ಸೆಕ್ಸ್ ಬೇಕು!

By Suvarna News  |  First Published May 17, 2020, 3:06 PM IST

ನನ್ನ ಹೆಂಡತಿಯ ಜೊತೆ ಪಡೆಯುವಷ್ಟೇ ಸುಖವನ್ನು ನಾನು ಅವನಿಂದಲೂ ಪಡೆಯುತ್ತೇನೆ. ಆದರೆ ಇತ್ತೀಚೆಗೆ ನನ್ನ ಹೆಂಡತಿಗೆ ಈ ಬಗ್ಗೆ ಸ್ವಲ್ಪ ಅನುಮಾನ ಬಂದಂತೆ ಇದೆ. ಆದರೆ ಅವನನ್ನು ಬಿಡಲು ಮನಸ್ಸಿಲ್ಲ. ಪ್ರೀತಿಯಿಂದ ನೋಡಿಕೊಳ್ಳುವ ಹೆಂಡತಿಯನ್ನು ಬಿಡಲೂ ಮನಸ್ಸಿಲ್ಲ. ಏನು ಮಾಡಲಿ?


ಪ್ರಶ್ನೆ: ನಾನು ಮೂವತ್ತ ಐದು ವರ್ಷದ ವಿವಾಹಿತ. ನನ್ನ ಹೆಂಡತಿಗೆ ಮೂವತ್ತು ವರ್ಷ. ನಮ್ಮಿಬ್ಬರ ಸೆಕ್ಸ್ ಲೈಫ್‌ ಚೆನ್ನಾಗಿದೆ. ದಿನ ಬಿಟ್ಟು ದಿನ ಸೇರುತ್ತೇವೆ. ನನಗೆ ತಾರುಣ್ಯದ ದಿನಗಳಿಂದಲೂ ಚಂದದ ಹುಡುಗರ ಮೈಕಟ್ಟು ಕಂಡರೆ ತುಂಬಾ ಇಷ್ಟ. ಆಗೆಲ್ಲ ನನ್ನಲ್ಲಿ ಉದ್ರೇಕವಾಗುತ್ತಿತ್ತು. ಆದರೆ ನಿಯಂತ್ರಿಸಿಕೊಳ್ಳುತ್ತಿದ್ದೆ. ಇತ್ತೀಚೆಗೆ ನಮ್ಮ ಆಫೀಸ್‌ನಲ್ಲಿ ಒಬ್ಬಾಥ ಹೊಸದಾಗಿ ಕೆಲಸಕ್ಕೆ ಸೇರಿದ. ಆಕರ್ಷಕ ತರುಣ. ಒಂದು ಸಲ ಆತ ನನ್ನನ್ನು ಮನೆಗೆ ಕರೆದ. ಒಬ್ಬನೇ ಇರುತ್ತಾನೆ. ಆ ರಾತ್ರಿ ಆತ ಸಲಿಂಗಕಾಮಿ ಎಂಬುದು ಗೊತ್ತಾಯಿತು. ನನ್ನನ್ನು ಮಿಲನಕ್ಕೆ ಆಹ್ವಾನಿಸಿದ. ನಾನೂ ಅವನೊಂದಿಗೆ ಸೇರು ತುಂಬಾ ಸಂತೋಷಪಟ್ಟೆ. ಅಂದಿನಿಂದ ಪ್ರತಿ ವಾರಕ್ಕೆ ಒಮ್ಮೆಯಾದರೂ ಒಟ್ಟು ಸೇರುತ್ತೇವೆ. ನನ್ನ ಹೆಂಡತಿಯ ಜೊತೆ ಪಡೆಯುವಷ್ಟೇ ಸುಖವನ್ನು ನಾನು ಅವನಿಂದಲೂ ಪಡೆಯುತ್ತೇನೆ. ಆದರೆ ಇತ್ತೀಚೆಗೆ ನನ್ನ ಹೆಂಡತಿಗೆ ಈ ಬಗ್ಗೆ ಸ್ವಲ್ಪ ಅನುಮಾನ ಬಂದಂತೆ ಇದೆ. ಆದರೆ ಅವನನ್ನು ಬಿಡಲು ಮನಸ್ಸಿಲ್ಲ. ಪ್ರೀತಿಯಿಂದ ನೋಡಿಕೊಳ್ಳುವ ಹೆಂಡತಿಯನ್ನು ಬಿಡಲೂ ಮನಸ್ಸಿಲ್ಲ. ಏನು ಮಾಡಲಿ?

ಸುಖದಾಂಪತ್ಯಕ್ಕೆ ಲಾಕ್‌ಡೌನ್ ಕಲಿಸಿದ ಪಾಠಗಳು 

Tap to resize

Latest Videos

ಉತ್ತರ: ಈ ಬಗ್ಗೆ ನಿಮ್ಮಲ್ಲಿ ದ್ವಂದ್ವ ಇದೆ. ಆದರೆ ನಿಮ್ಮ ಪರಿಸ್ಥಿತಿ, ಈಗಲೇ ಏನಾದರೂ ಒಂದು ಪರಿಹಾರ ಪಡೆಯುವಂತೆ ನಿಮ್ಮನ್ನು ಒತ್ತಾಯಿಸುತ್ತಾ ಇದೆ ಅಲ್ಲವೇ. ಸುಮ್ಮನೇ ಊಹಿಸಿಕೊಳ್ಳಿ. ಆ ಹುಡುಗನ ಜಾಗದಲ್ಲಿ ಇನ್ನೊಬ್ಬ ಹುಡುಗಿಯೇ ಇದ್ದಿದ್ದರೆ ಏನಾಗುತ್ತಿತ್ತು? ಆಗ ನಿಮ್ಮ ಹೊರಗಿನ ಸಂಬಂಧ ನಿಮ್ಮ ಹೆಂಡತಿಗೆ ಗೊತ್ತಾಗಿದ್ದರೆ, ನಿಮ್ಮ ಸಂಸಾರ ಒಡೆಯುತ್ತಿತ್ತು. ನಿಮ್ಮ ಹೆಂಡತಿ ತೀರಾ ಸ್ವಾಭಿಮಾನಿಯಾಗಿದ್ದರೆ ನಿಮ್ಮಿಂದ ಡೈವೋರ್ಸನ್ನೂ ಪಡೆಯಬಹುದು. ಹಾಗೆಂದು ಹೊಸ ಹುಡುಗಿ ನಿಮ್ಮ ಹೆಂಡತಿಯ ಜಾಗವನ್ನು ತುಂಬುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಸುಖದ ಬೆನ್ನು ಬಿದ್ದು ಅದನ್ನು ಹುಡುಕುತ್ತ ಹೋಗುವ ನಿಮ್ಮ ಪ್ರವೃತ್ತಿ ನಿಮ್ಮ ಎರಡು ಸುಖಗಳನ್ನೂ ಕಸಿದುಕೊಳ್ಳುತ್ತಿತ್ತು. ಅಂಥ ಸಂದರ್ಭದಲ್ಲಿ ನೀವು ಜಾಣರಾಗಿದ್ದರೆ, ಆ ಹುಡುಗಿಯಿಂದ ದೂರ ನಿಂತು, ನಿಮ್ಮ ಸಂಬಂಧ ಹೆಂಡತಿಗೆ ಗೊತ್ತಾಗದಂತೆ ಮುಗಿಸಿಬಿಡುತ್ತಿದ್ದಿರಿ ಅಲ್ಲವೇ? ಅಥವಾ ಹೆಂಡತಿಗೆ ಗೊತ್ತಾದರೆ ಆಕೆಯ ಕೈಕಾಲು ಹಿಡಿದಾದರೂ ಕ್ಷಮಿಸುವಂತೆ ಗೋಗರೆದು ಸಮಾಜದ ಮುಂದೆ ಮರ್ಯಾದೆ ಉಳಿಸಿಕೊಳ್ಳಲು ಸಂಸಾರ ಉಳಿಸಿಕೊಳ್ಳುತ್ತಿದ್ದಿರಿ ಅಲ್ಲವೇ?

#Feelfree: ಅವಳು ಸೆಕ್ಸ್ ವೇಳೆ ಹಿಂಸೆ ಕೊಡೋಕೆ ಹೇಳ್ತಾಳೆ, ಏನ್‌ ಮಾಡಲಿ?

undefined

ಇದೂ ಕೂಡಾ ಹಾಗೇ. ಇಲ್ಲಿ ಮಾತ್ರ ಹುಡುಗಿಯ ಬದಲು ಹುಡುಗ ಇದ್ದಾನೆ ಅಷ್ಟೇ. ಈಗ ನೀವು ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು. ಸಲಿಂಗಕಾಮಿ ಆಗಿರುವುದು ತಪ್ಪೇನಲ್ಲ. ಆದರೆ ನೀವು ತೀರಾ ಗೇ ಆಗಿದ್ದರೆ ಮಾತ್ರ, ಈ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿತವಾಗುವಂತೆ ನಡೆದುಕೊಳ್ಳಬಹುದಾಗಿದೆ. ಆದರೆ ನೀವು ಸ್ಟ್ರೇಟ್‌ ಕೂಡ ಹೌದು. ಜತೆಗೆ ಸಮಾಜ ಒಪ್ಪುವಂಥ ಒಂದು ಸಂಸಾರವನ್ನೂ ಹೊಂದಿದ್ದೀರಿ. ನಿಮ್ಮ ಮತ್ತು ನಿಮ್ಮ ಹೆಂಡತಿಯ ಕುಟುಂಬಗಳು ಕೂಡ ನಿಮ್ಮ ಹಿಂದುಗಡೆಯಲ್ಲಿರುತ್ತವೆ. ಮುಂದುವರಿದು, ಮಕ್ಕಳನ್ನೂ ಮಾಡಿಕೊಂಡು ಹಾಯಾಗಿ ಬದುಕುವ ಸಾಧ್ಯತೆಯೂ ಇದೆ. ಅದನ್ನೆಲ್ಲ ಈ ಸಂಬಂಧದಿಂದಾಗಿ ಹಾಳು ಮಾಡಿಕೊಳ್ಳಲು ಬಯಸುತ್ತೀರಾ? ಆ ಹುಡುಗನ ಜೊತೆಗಿನ ಸಂಬಂಧದಿಂದ ನಿಮಗೆ ತಾತ್ಕಾಲಿಕ ಸುಖವೇನೋ ಸಿಗಬಹುದು. ಆದರೆ ಇದು ನೆಮ್ಮದಿ ನೀಡುವ, ಸಮಾಜ ಒಪ್ಪುವ ಸುಖವಲ್ಲ. ಮೊದಲು ಹೆಂಡತಿಯ ಜೊತೆಗಿನ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವತ್ತ ಯೋಚಿಸಿ. ಆಕೆಯ ಜೊತೆಗಿನ ಸೆಕ್ಸ್ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಿ. ನಿಮ್ಮ ಸಹೋದ್ಯೋಗಿಗೆ ಪರಿಸ್ಥಿತಿಯನ್ನು ವಿವರಿಸಿ, ನಿಮ್ಮಿಂದ ದೂರವಿರುವಂತೆ ಹೇಳಿ. ನೀವೂ ದೂರವಿರಿ. ಹೆಂಡತಿಗೆ ಯಾವುದೇ ಅನುಮಾನ ಮೂಡಿದ್ದರೆ ಅದನ್ನು ಪರಿಹರಿಸಿಕೊಳ್ಳಿ.

ಮುದ್ದು ಮಗುವಿಗಾಗಿ ಹಂಬಲಿಸುತ್ತಿರುವ ಆಕೆಗೆ ಬಂದ ಕಾಮೆಂಟ್‌ಗಳು ಹೇಗಿದ್ದವು ಗೊತ್ತಾ? ...

ಇನ್ನು ಸೆಕ್ಸ್ ಸುಖಕ್ಕೆ ಸಂಬಂಧಿಸಿದಂತೆ, ನೀವು ನಿಮ್ಮ ಹೆಂಡತಿಯ ಜೊತೆಗೂ ನಿಮ್ಮ ಸಹೋದ್ಯೋಗಿಯ ಬಳಿ ಪಡೆದ ಸುಖವನ್ನೇ ಪಡೆಯಬಹದು. ನಿಮ್ಮ ಹೆಂಡತಿಗೆ ನಿಮ್ಮ ಉಭಯಕಾಮಿ ಸ್ವಭಾವವನ್ನು ವಿವರಿಸಿ ಮನದಟ್ಟ ಮಾಡಿಸಿ, ಆಕೆ ನಿಮ್ಮ ಫ್ಯಾಂಟಸಿಗೆ ಸಹಕರಿಸಲು ತಿಳಿಸಿ. ಆಕೆ ಪ್ಯಾಂಟ್‌ ಶರ್ಟ್ ಧರಿಸಿ, ಗಂಡಸಿನ ರೋಲ್‌ ಪ್ಲೇ ಮಾಡಬಹುದು, ಇದರಿಂದ ನಿಮ್ಮ ಉದ್ರೇಕ, ರೋಮಾಂಚನ ಹೆಚ್ಚಿಸಿಕೊಂಡು ಆಕೆಯನ್ನು ಕೂಡಬಹುದು. ಇದು ನಿಮ್ಮ ಭಾಗಶಃ ಗೇ ಪ್ರವೃತ್ತಿಗೆ ಬೇಕಾದ ಸುಖ ಕೊಡಬಹುದು. ಇದು ತಪ್ಪಲ್ಲ. 

click me!