ಫರಾದುಕೈ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ನಾನಾ ಬಗೆಯ ಬ್ಯೂಟಿ ಟಿಪ್ಸ್ ಗಳನ್ನು ನೀಡೋದ್ರಲ್ಲಿ ನಿಸ್ಸೀಮರು. ಈಕೆಯ ಯೂಟ್ಯೂಬ್ ಚಾನೆಲ್ ಗೆ ೨.೩ ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಸದಾ ಬ್ಯೂಟಿ ಬಗ್ಗೆ ಮಾತಾಡ್ತಾ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಈಕೆ ಸಡನ್ನಾಗಿ ಮಕ್ಕಳಿಲ್ಲದ ತನ್ನ ನೋವಿನ ಕತೆ ಹೇಳಿಕೊಂಡಿದ್ದಾರೆ. ವೀಡಿಯೋದುದ್ದಕ್ಕೂ ಅಳುತ್ತಾ, ಮಗುವಿಗಾಗಿ ಹಂಬಲಿಸುತ್ತಿದ್ದ ತನಗೆ ಮಕ್ಕಳೇ ಆಗದಿರುವ ಬಗ್ಗೆ ನೋವು ತೋಡಿಕೊಂಡಿದ್ದಾರೆ.
ಫರಾದುಕೈ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ನಾನಾ ಬಗೆಯ ಬ್ಯೂಟಿ ಟಿಪ್ಸ್ ಗಳನ್ನು ನೀಡೋದ್ರಲ್ಲಿ ನಿಸ್ಸೀಮರು. ಈಕೆಯ ಯೂಟ್ಯೂಬ್ ಚಾನೆಲ್ ಗೆ ೨.೩ ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಸದಾ ಬ್ಯೂಟಿ ಬಗ್ಗೆ ಮಾತಾಡ್ತಾ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಈಕೆ ಸಡನ್ನಾಗಿ ಮಕ್ಕಳಿಲ್ಲದ ತನ್ನ ನೋವಿನ ಕತೆ ಹೇಳಿಕೊಂಡಿದ್ದಾರೆ. ವೀಡಿಯೋದುದ್ದಕ್ಕೂ ಅಳುತ್ತಾ, ಮಗುವಿಗಾಗಿ ಹಂಬಲಿಸುತ್ತಿದ್ದ ತನಗೆ ಮಕ್ಕಳೇ ಆಗದಿರುವ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ಈ ವೀಡಿಯೋ ಮಾಡಿ ಈಕೆಯ ನೋವಿಗೆ ಸ್ಪಂದಿಸಿದ್ದಾರೆ. ತಮ್ಮ ಕಷ್ಟಗಳನ್ನೂ ಹಂಚಿಕೊಂಡಿದ್ದಾರೆ. ಬೆರಳೆಣಿಕೆಯ ಮಂದಿ ಮಾತ್ರ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಂತ ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಈಕೆ ಈ ವೀಡಿಯೋದಲ್ಲಿ ಹೇಳಿರುವುದೇನು ಗೊತ್ತಾ..
ಹರೆಯದಲ್ಲಿ ನನಗೊಂದು ವಿಚಿತ್ರ ಅಭ್ಯಾಸ ಇತ್ತು. ಮಕ್ಕಳ ಹೆಸರನ್ನು ಸಂಗ್ರಹಿಸೋದು ಮತ್ತು ನನ್ನ ಮಗುವಿಗೆ ಅದರಲ್ಲಿ ಯಾವ ಹೆಸರು ಚೆನ್ನಾಗಿರುತ್ತೆ ಅಂತ ಕಲ್ಪಿಸಿಕೊಳ್ಳುವುದು. ನಿಜಕ್ಕೂ ಹೇಳ್ತೀನಿ, ನನ್ನ ಆ ಕನಸುಗಳಲ್ಲಿ ಎಲ್ಲೂ ಗಂಡ ಅನ್ನುವ ಜೀವ ಇರಲೇ ಇಲ್ಲ. ನಾನು ಬರೆಯುವ ಚಿತ್ರಗಳಲ್ಲೂ ಇದ್ದದ್ದು ಮುದ್ದು ಮಕ್ಕಳು. ಮಗು ಬೇಕು, ನಾನು ಅಮ್ಮನಾಗಬೇಕು ಅನ್ನೋದು ಬಾಲ್ಯದಿಂದ ನನ್ನ ದೊಡ್ಡ ಕನಸು. ಆದರೆ ಆ ಕನಸು ಈವರೆಗೆ ಕನಸಾಗಿಯೇ ಉಳಿದಿದೆ. ಜೊತೆಗೆ ಈ ಅವಧಿಯಲ್ಲಿ ನಾನು ಅನುಭವಿಸಿದ ನೋವನ್ನು ಹೀಗೇ ಅಂತ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಈಗಲೂ ಹೇಳುವ ಇರಾದೆ ಇರಲಿಲ್ಲ. ಆದರೆ ನನ್ನ ಗಂಡ, ನೀನಿದನ್ನು ಎಲ್ಲರೆದುರು ಬಿಚ್ಚಿಡು, ಆಗ ನಿನ್ನ ಒಂಟಿತನ, ವೇದನೆ, ಮಾನಸಿಕ ಅಸ್ವಸ್ಥತೆ ಒಂಚೂರಾದರೂ ಹತೋಟಿಗೆ ಬರಬಹುದು ಅಂದರು. ಹಾಗಾಗಿ ಬೇರೆ ವಿಧಿಯಿಲ್ಲದೇ ನಿಮ್ಮೆದುರು ನನ್ನ ನೋವನ್ನು ತೋಡಿಕೊಳ್ಳುತ್ತಿದ್ದೇನೆ.
ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!
ನಾನು ಸಾಲಿ ಮದುವೆಯಾಗಿ ಹತ್ತು ವರ್ಷ ಕಳೆದವು. ನನಗೆ ಮೊದಲಿನಿಂದಲೂ ಮಕ್ಕಳ ತಾಯಿಯಾಗಬೇಕೆಂಬ ಕನಸು. ಅದರಲ್ಲಿ ಗಂಡನಿಗೆ ಜಾಗ ಇರಲಿಲ್ಲ. ಆದರೆ ಸಾಲಿಯನ್ನು ಕಂಡ ಮೇಲೆ ಅವನ ಮೇಲೆ ಅನುರಾಗ ಮೂಡಿತು. ಆತ ನನ್ನ ಕನಸುಗಳಲ್ಲಿ ಸಹಭಾಗಿಯಾಗಿದ್ದ. ಹಾಗೆ ಮದುವೆಯಾದೆವು. ಮದುವೆಯಾದ ಎರಡನೇ ವರ್ಷದಿಂದ ಮಕ್ಕಳಿಗಾಗಿ ನಮ್ಮ ಪ್ರಯತ್ನ ಶುರುವಾಗಿತ್ತು. ಕಳೆದ ಮೂರು ವರ್ಷದಿಂದ ಇಬ್ಬರೂ ಮಗುವಿಗಾಗಿ ತೀವ್ರ ಹಂಬಲದಲ್ಲಿದ್ದೆವು. ಈ ತಿಂಗಳು ಪಾಸಿಟಿವ್ ಬರುತ್ತೆ ಅಂತ ತಿಂಗಳಿಡೀ ಒದ್ದಾಡೋದು, ಕೊನೆಯ ವಾರದಲ್ಲಿ ಅತಿಯಾದ ಉದ್ವೇಗದಲ್ಲಿರೋದು, ಮತ್ತೆ ಪಿರಿಯೆಡ್ಸ್ ಆದಾಗ ತೀವ್ರ ನಿರಾಸೆ. ಪರ್ವಾಗಿಲ್ಲ, ಮುಂದಿನ ತಿಂಗಳು ಹೀಗಾಗಲಿಕ್ಕಿಲ್ಲ ಅಂದುಕೊಳ್ಳೋದು, ಆಗಲೂ ನಮಗೆ ನಿರಾಸೆಯೇ. ಈವರೆಗೆ ಒಂದೇ ಒಂದು ತಿಂಗಳೂ ಈ ನಿರಾಸೆಯ ಕಾರ್ಮೋಡ ಕರಗಿ ಬೆಳಕು ಮೂಡಲೇ ಇಲ್ಲ. ಈಗೀಗಂತೂ ಭರವಸೆಯೇ ಕಳೆದುಹೋಗುತ್ತಿದೆ. ಕೂತಲ್ಲಿ ನಿಂತಲ್ಲಿ ಅದದೇ ಯೋಚನೆಗಳು ಹಿಂಡಿ ಹಿಪ್ಪೆ ಮಾಡುತ್ತಿದೆ.
ಸುಖದಾಂಪತ್ಯಕ್ಕೆ ಲಾಕ್‌ಡೌನ್ ಕಲಿಸಿದ ಪಾಠಗಳು
undefined
ನಾನೊಂಥರ ಒಳಗೊಳಗೇ ಸಾಯುತ್ತಿದ್ದರೂ ಹೊರಗೆ ಮಾತ್ರ ನಗುತ್ತೇನೆ. ಆದರೂ ತಡೆಯಲಾಗದೇ ಸೋಷಲ್ ಮೀಡಿಯಾದಲ್ಲಿ ನನ್ನ ಸಂಕಟ ಹೇಳಿಕೊಂಡರೆ ಕೆಲವರ ಕಮೆಂಟ್‌ಗಳು ನನ್ನನ್ನು ಇರಿಯುವಷ್ಟು ಕಟುವಾಗಿದ್ದವು. ‘ನೀನು ದಪ್ಪ ಇದ್ದೀಯಾ, ಅದಕ್ಕೆ ನಿನ್ನ ಗಂಡ ಬೇರೆ ಹುಡುಗಿ ಜೊತೆಗೆ ಸಂಬಂಧ ಇಟ್ಟುಕೊಂಡಿರುತ್ತಾನೆ. ಅದಕ್ಕೆ ನಿಂಗಿನ್ನೂ ಮಕ್ಕಳಾಗಿಲ್ಲ..’ ಅನ್ನುವ ಥರದ ಕಮೆಂಟ್‌ಗಳು ನನ್ನನ್ನು ಇನ್ನಷ್ಟು ದುಃಖಕ್ಕೀಡು ಮಾಡುತ್ತದೆ. ಜೊತೆಗೆ ನಮ್ಮಿಬ್ಬರ ಸಂಬಂಧವನ್ನೇ ಸಂಶಯದ ದೃಷ್ಟಿಯಿಂದ ನೋಡುವವರ ಮಾತುಗಳು ನನ್ನ ಹಾಗೂ ಪತಿಯ ಸಂಬಂಧದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ನನ್ನ ಪತಿ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರಿಗೆ ಒಂದು ಗುರಿ ಇಟ್ಟು ಆ ಗುರಿಯನ್ನು ತಲುಪುವ ಛಲ, ಹಠ ಎಲ್ಲಾ ಇದೆ. ಹಾಗೆ ಬದುಕಲ್ಲಿ ಏನಾದರೂ ಸಾಧಿಸುವ ಇಲ್ಲಿಂದ ಮತ್ತೆಲ್ಲೋ ಹೋಗಿ ತಲುಪುವ ಸಾಹಸ ಮನಸ್ಥಿತಿ ಇದೆ. ಆದರೆ ನಾನು ಹಾಗಲ್ಲ, ನನಗೆ ನಾನೊಬ್ಬ ಯಶಸ್ವಿ ಬ್ಯುಸಿನೆಸ್ ವುಮೆನ್ ಆಗಬೇಕು ಅಂತಾಗಲೀ, ಸಿಇಓ ಆಗಬೇಕು ಅಂತಾಗಲೀ ಖಂಡಿತಾ ಕನಸುಗಳಿಲ್ಲ. ನನ್ನ ಕನಸು ಒಂದೇ. ಅದು ಅಮ್ಮನಾಗೋದು, ಮುದ್ದು ಕಂದನ ಅಳು, ನಗುವನ್ನು ಕಾಣೋದು.
ಹಾಗಂತ ಸದ್ಯಕ್ಕೆ ಸ್ಯಾಲಿಯ ಕನಸುಗಳನ್ನೇ ನನ್ನ ಕನಸು ಅಂದುಕೊಂಡು ಆತನಿಗೆ ಸಾಧ್ಯವಾದಷ್ಟು ಸಹಕಾರ ನೀಡುತ್ತಿದ್ದೇನೆ. ಆದರೂ ಆಗಾಗ ನಿರಾಸೆಯಾಗುತ್ತದೆ, ಇಷ್ಟನ್ನೆಲ್ಲ ಯಾರಿಗಾಗಿ ಮಾಡುತ್ತಿದ್ದೇವೆ, ನಮ್ಮ ನಂತರ ಇದನ್ನೆಲ್ಲ ಮುಂದುವರಿಸಲು ಒಂದು ಮಗುವೂ ಇಲ್ಲವಲ್ಲ ಅಂತ.
ನನ್ನೊಳಗಿನ ಈ ಎಲ್ಲ ತುಮುಲಗಳನ್ನು ಹೆತ್ತವರ ಬಳಿ ಹೇಳಿದರೆ ಅವರಿಗದು ಅರ್ಥ ಆಗಲ್ಲ. ಅವರ ಪ್ರಕಾರ ಮನೆಯಲ್ಲಿರೋ ಗೃಹಿಣಿಯ ದುಃಖ ಎಲ್ಲ ದುಃಖವೇ ಅಲ್ಲ. ನಮ್ಮ ಕಷ್ಟ ಕಷ್ಟವೆ ಅಲ್ಲ. ಏನೂ ಮಾಡಲಾಗುವುದಿಲ್ಲ. ನಮ್ಮ ನಡುವೆ ಜನರೇಶನ್ ಗ್ಯಾಪ್ ಇದೆ. ಆದರೂ ನಿಮ್ಮ ಬಳಿ ಇದನ್ನೆಲ್ಲ ಹೇಳಿ ತುಸು ಹಗುರಾಗುತ್ತಿದ್ದೇನೆ. ಈವರೆಗೆ ಹೀಗೆಲ್ಲ ಮಾಡಿದವಳಲ್ಲ. ಹಾಗಾಗಿ ಹೇಗೆ ನನ್ನ ನೋವು ಹಂಚಿಕೊಳ್ಳೋದು ಅಂತಲೂ ಗೊತ್ತಿಲ್ಲ. ಹೃದಯಕ್ಕೆ ಘಾಸಿ ಮಾಡುವ ಕಮೆಂಟ್ ಮಾಡಿ ನನ್ನ ನೋವು ಹೆಚ್ಚಿಸಬೇಡಿ. ನಿಮ್ಮ ಸಾಂತ್ವನ ಭರಿತ ಹಾರೈಕೆ ಇರಲಿ.