
ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಎರಡು ವರ್ಷದಿಂದ ಲಿವ್ ಇನ್ ರಿಲೇಶನ್‌ನಲ್ಲಿದ್ದೇವೆ. ಆರಂಭದಿಂದಲೇ ನಮ್ಮ ಸೆಕ್ಸ್ ಲೈಫ್ ಚೆನ್ನಾಗಿದೆ. ಆಲ್‌ಮೋಸ್ಟ್ ಪ್ರತಿದಿನ ಎಂಬಂತೆ ಸೇರುತ್ತೇವೆ. ಇತ್ತೀಚಿಗೆ ಗೆಳತಿ ಸೆಕ್ಸ್ ಸಂದರ್ಭದಲ್ಲಿ ಅವಳನ್ನು ಹಿಂಸಿಸಲು ಹೇಳುತ್ತಾಳೆ, ನನ್ನ ಉಗುರಿನಿಂದ ಆಕೆಯನ್ನು ರಕ್ತ ಬರುವಂತೆ ಪರಚಿದರೆ, ಅವಳ ಸೆನ್ಸಿಟಿವ್ ಜಾಗಗಳನ್ನು ಹಲ್ಲಿನಿಂದ ನೋವಾಗುವಂತೆ ಕಚ್ಚಿದರೆ ಅವಳಿಗೆ ತುಂಬಾ ಸುಖ ಸಿಗುತ್ತದಂತೆ. ಕೆಲವೊಮ್ಮೆ ಹಗ್ಗ ತೆಗೆದುಕೊಂಡು ಅವಳ ಕೈಗಳನ್ನು ಕಟ್ಟಿ ಹಾಕಿ ನಂತರ ಸಂಭೋಗಿಸಲು ಹೇಳುತ್ತಾಳೆ. ಮಿಲನದ ವೇಳೆ ಕೆಲವೊಮ್ಮೆ ಜೋರಾಗಿ ಹೊಡೆಯಲೂ ಹೇಳುತ್ತಾಳೆ. ನನಗೆ ಹಾಗೆ ಮಾಡಲು ಭಯವಾಗುತ್ತದೆ. ಆದರೆ ಆಕೆಗೆ ಅದರಿಂದ ತುಂಬಾ ಅನಂದವಾಗುತ್ತದಂತೆ. ಇದು ಮಾನಸಿಕ ಸಮಸ್ಯೆಯೇ? ಇದರಿಂದ ಏನಾದರೂ ಹಾನಿಯಿದೆಯೇ?
ಉತ್ತರ: ನಿಮ್ಮ ಸಂಗಾತಿ ನಿಮ್ಮ ಮೂಲಕ ತಮ್ಮ ಲೈಂಗಿಕ ಕಲ್ಪನೆಗಳನ್ನು ಈಡೇರಿಸಿಕೊಂಡು ಸುಖಿಸುತ್ತಿದ್ದಾರೆ. ಸಾವಿರದಲ್ಲಿ ಒಬ್ಬರು ಅಥವಾ ಇಬ್ಬರಿಗೆ ಈ ತರದ ಪ್ರವೃತ್ತಿ ಇರುತ್ತದೆ. ಇದೇನೂ ಅತಿ ಅಪರೂಪ ಅಲ್ಲ. ಹೆಚ್ಚಾಗಿ ಗಂಡಸರು, ಹೆಂಗಸರನ್ನು ಸೆಕ್ಸ್‌ನ ಸಮಯದಲ್ಲಿ ಪೀಡಿಸಿ ಆನಂದ ಪಡೆಯುತ್ತಾರೆ. ಹೆಂಗಸರು ತಮ್ಮನ್ನು ತಾವೇ ಪೀಡಿಸಿಕೊಂಡು ಅಥವಾ ಸಂಗಾತಿಯಿಂದ ತಮ್ಮ ದೇಹದ ಮೇಲೆ ಹಲ್ಲೆ ಮಾಡಿಸಿಕೊಂಡು ಆನಂದ ಅನುಭವಿಸುತ್ತಾರೆ. ಇದರಲ್ಲಿ ಹೊಡೆಸಿಕೊಳ್ಳುವುದು, ಚಿವುಟಿಸಿಕೊಳ್ಳುವುದು, ಕಚ್ಚಿಸಿಕೊಳ್ಳುವುದು, ಪರಚಿಸಿಕೊಳ್ಳುವುದು ಮುಂತಾದವು ಸೇರಿರುತ್ತದೆ. ಕೆಲವರು ತಮ್ಮ ಕೈಕಾಲು ಕಟ್ಟಿ ಹಾಕಿ ಸಂಭೋಗಿಸಲು, ಚಾಟಿಯಿಂದ ಬಾರಿಸಲು ಹೇಳಬಹುದು. ಹೀಗೆ ಮಾಡುವಾಗ ಅವರು, ತಮ್ಮನ್ನು ಯಾರೋ ರೇಪ್ ಮಾಡುತ್ತಿದ್ದಾರೆ ಎಂದು ಕಲ್ಪಿಸಿಕೊಂಡು ಆನಂದ ಪಡೆಯುತ್ತಿರಬಹುದು. ಗಂಡಸರು ತಾವು ಯಾರನ್ನೋ ರೇಪ್ ಮಾಡುತ್ತಿದ್ದೇವೆ ಎಂದು ಭಾವಿಸಿಕೊಂಡು ಸುಖದ ಉತ್ಕರ್ಷ ಅನುಭವಿಸುತ್ತಿರಬಹುದು.
#Feelfree: ಮೊದಲಿನಂತೆ ಸುಖಿಸುವುದು ಸಾಧ್ಯವಾಗುತ್ತಿಲ್ಲ, ಏನು ಮಾಡಲಿ?
ಹಾಗೆಂದ ಮಾತ್ರಕ್ಕೆ ಇವರು ಸಮಾಜ ವಿರೋಧಿ ವ್ಯಕ್ತಿಗಳು, ಯಾರನ್ನೋ ರೇಪ್ ಮಾಡುವ ಮೂಲಕ ಆನಂದ ಪಡುವವರು, ಸಮಯ ಸಿಕ್ಕಿದರೆ ಇನ್ನೊಬ್ಬರನ್ನು ರೇಪ್ ಮಾಡಲು ಅಥವಾ ರೇಪ್ ಮಾಡಿಸಿಕೊಳ್ಳಲು ಹೊಂಚು ಹಾಕುವವರು ಎಂದು ಭಾವಿಸಬೇಕಿಲ್ಲ. ಇದು ಪರಸ್ಪರ ಒಪ್ಪಿಗೆಯಿಂದ ಒಂದು ಮಟ್ಟದ ಹಿಂಸೆಯನ್ನು ಸೃಷ್ಟಿಸಿಕೊಂಡು ಅದರ ಮೂಲಕ ಆನಂದವನ್ನು ಪಡೆಯುವ ಒಂದು ಕ್ರಿಯೆ. ಇದು ಅಸಹಜ ಕ್ರಿಯೆಯೇ ಆದರೂ, ಅದರಿಂದ ಸಂಬಂಧ ಉತ್ತಮಗೊಳ್ಳುತ್ತಿದ್ದರೆ ಹಾನಿಯೇನಿಲ್ಲ. ಆದರೆ ಈ ಕ್ರಿಯೆಗಳಿಗೆ ಸಂಗಾತಿಯ ಒಪ್ಪಿಗೆ ಇರಬೇಕು; ಒಪ್ಪಿಗೆ ಇಲ್ಲದೆ ಹಿಂಸೆ ಮಾಡುವುದಾಗಲೀ, ಮಾಡಿಸಿಕೊಳ್ಳುವುದಾಗಲೀ ಕಾನೂನು ಪ್ರಕಾರ ತಪ್ಪು.
ಬರ್ತ್‌ಡೇ ಬೇಬಿ ಸನ್ನಿ ಲಿಯೋನ್ ಬಾಳಿನಿಂದ ನಾವು ಪಾಠ ಕಲೀಬಹುದಾ?
ಇದೊಂದು ಬಗೆಯ ಲೈಂಗಿಕ ಸ್ವಭಾವ. ಇದನ್ನು ಸೆಕ್ಷುಯಲ್ ಮ್ಯಾಸೋಚಿಸಂ ಅಥವಾ ಸ್ಯಾಡಿಸಂ ಎನ್ನುತ್ತಾರೆ. ತನ್ನ ಮೇಲೆ ಹಿಂಸೆ ಮಾಡಿಸಿಕೊಳ್ಳುವುದು ಮ್ಯಾಸೋಚಿಸಂ, ಇನ್ನೊಬ್ಬರಿಗೆ ಹಿಂಸೆ ಮಾಡುವುದು ಸ್ಯಾಡಿಸಂ. ಸಣ್ಣಪುಟ್ಟ ಹಿಂಸೆಗಳನ್ನು ಸಹಿಸಿಕೊಳ್ಳಬಹುದು ಅನಿಸಿದರೆ, ಅದನ್ನು ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ನಿಮಗೆ ಕಿರಿಕಿರಿ ಅನಿಸುವಷ್ಟು ಹಿಂಸೆಯನ್ನು ಮಾಡಲು ಸಂಗಾತಿ ಹೇಳುತ್ತಿದ್ದರೆ, ಆ ಕ್ರಿಯೆಗಳಿಂದ ಸಂಗಾತಿಯ ಮೈಮೇಲೆ ಹೆಚ್ಚಿನ ಗಾಯ ಅಥವಾ ಕಲೆಗಳು ಆಗುತ್ತಿದ್ದರೆ ಅದು ಅಪಾಯಕಾರಿ ಮಟ್ಟವನ್ನು ಮುಟ್ಟಿದೆ ಎಂದು ಅರ್ಥ. ಇಂಥ ಸಂದರ್ಭದಲ್ಲಿ ಇದರ ಅಪಾಯವನ್ನು ಸಂಗಾತಿಗೆ ಮನದಟ್ಟು ಮಾಡಿಸಿ, ಅದರಿಂದ ಹೊರಬರಲು ಆಕೆಗೆ ತಿಳಿಸಿ. ಸೆನ್ಸುಯಲ್ ಆದ, ಭಿನ್ನಭಿನ್ನವಾದ ಲೈಂಗಿಕ ಕ್ರಿಯೆಗಳ ಮೂಲಕ ಆನಂದ ಕಂಡುಕೊಳ್ಳುವ ಕಲೆಯನ್ನು ಆಕೆಗೆ ಕಲಿಸಿ, ನೀವೂ ಕಲಿಯಿರಿ. ಬೇರೆ ಬೇರೆ ಊರು, ಸ್ಥಳಗಳಲ್ಲಿ ಆನಂದ ಕಂಡುಕೊಳ್ಳಿ. ಹಿಂಸೆಗೆ ಪರ್ಯಾಯವಾದ ವಿಧಾನಗಳನ್ನು ಸೆಕ್ಸ್ ಸಂದರ್ಭದಲ್ಲಿ ಕಂಡುಕೊಳ್ಳಿ. ಉದಾಹರಣೆಗೆ, ರೋಲ್ ಪ್ಲೇ, ಅಂದರೆ, ನೀವಿಬ್ಬರೂ ಬೇರೆ ಪಾತ್ರಗಳಂತೆ ನಟಿಸುತ್ತ ಆನಂದಿಸುವುದು. ಸಂಯಮಕ್ಕೆ ಮಹತ್ವ ಕೊಡುವ ಲೈಂಗಿಕ ಆಟಗಳನ್ನು ಆಡಿ.
ಕೊರೋನಾದಿಂದ ಚೇತರಿಸಿಕೊಂಡವ 'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?
ಇಷ್ಟೆಲ್ಲಾ ಮಾಡಿದರೂ ನಿಮ್ಮ ಸಂಗಾತಿಯ ಲೈಂಗಿಕ ಹಿಂಸಾಪ್ರವೃತ್ತಿ ಕಡಿಮೆಯಾಗಿಲ್ಲ ಎಂದಾದರೆ ನೀವು ಲೈಂಗಿಕ ತಜ್ಞರನ್ನು ಕಾಣುವುದು ಅನಿವಾರ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.