ವರ್ಷದ ಮೊದಲ ತಿಂಗಳು ಜನವರಿ. ಫಸ್ಟ್ ಮಂತ್ ಖುಷಿಯಾಗಿರಬೇಕು ಅಂದ್ಕೊಳ್ಳೋದು ಕೆಲವು ಮಂದಿಯಾದ್ರೆ ಜನವರಿಯನ್ನು ಸಂಬಂಧ ಮುರಿದುಕೊಳ್ಳಲು ಮತ್ತೆ ಕೆಲವರು ಬಳಸಿಕೊಳ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ?
ಹೊಸ ವರ್ಷ (New Year)ದ ಎರಡನೇ ದಿನವೇ ಕ್ರಿಕೆಟರ್ ಯಜುವೇಂದ್ರ ಚಹಲ್ ವಿಚ್ಛೇದನ ಸುದ್ದಿ ಸದ್ದು ಮಾಡ್ತಿದೆ. ವರ್ಷಾರಂಭದ ಮೊದಲ ತಿಂಗಳು ವಿಚ್ಛೇದನಗಳಾಗೋದು ಇದೇ ಮೊದಲಲ್ಲ. ಸೆಲೆಬ್ರಿಟಿ ಸೇರಿದಂತೆ ಅನೇಕರು ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಸಂಗಾತಿಯಿಂದ ದೂರ ಸರಿಯುವ ನಿರ್ಧಾರಕ್ಕೆ ಬರ್ತಾರೆ. ಫೆಬ್ರವರಿಯನ್ನು ಲವ್ವರ್ಸ್ ಮಂತ್ (Lovers Month) ಎಂದೇ ಕರೆಯಲಾಗುತ್ತದೆ. ಅದಕ್ಕಿಂತ ಮೊದಲು ಬರುವ ಜನವರಿಯನ್ನು ಡಿವೋರ್ಸ್ ತಿಂಗಳು (Divorce Month) ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಬಹುತೇಕ ವಿಚ್ಛೇದನಗಳು ವರ್ಷದ ಮೊದಲು ತಿಂಗಳು ಆಗ್ತವೆ. ಅದಕ್ಕೆ ನಾನಾ ಕಾರಣಗಳನ್ನು ತಜ್ಞರು ಹೇಳ್ತಾರೆ. ಹೊಸ ವರ್ಷಕ್ಕಿಂತ ಮೊದಲು ಬರುವ ದೀರ್ಘ ರಜೆ, ಕುಟುಂಬದ ಒತ್ತಡ ಮತ್ತು ಹೊಸ ವರ್ಷದ ರೆಸಲ್ಯೂಷನ್ ನಲ್ಲಿ ಈ ಡಿವೋರ್ಸ್ ಸೇರಿಕೊಳ್ಳುತ್ತದೆ.
ಜನವರಿಯಲ್ಲೇ ಡಿವೋರ್ಸ್ ಏಕೆ ಹೆಚ್ಚು? : ಜನವರಿ ಅನೇಕ ದಂಪತಿಗೆ ಕಷ್ಟಕರ ಅಂದ್ರೆ ತಪ್ಪಾಗೋದಿಲ್ಲ. ಕ್ರಿಸ್ಮಸ್, ವರ್ಷಾಂತ್ಯದ ರಜೆ ನಂತ್ರ ಜನರು ಒತ್ತಡಕ್ಕೆ ಒಳಗಾಗ್ತಾರೆ. ಸಂಬಂಧದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಆಗ ಹೆಚ್ಚಿರುತ್ತದೆ. ಜನವರಿಯ ಮೊದಲ ವಾರದಲ್ಲಿ ಅತೀ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತವೆ.
ಹೆಣ್ಣುಮಕ್ಕಳಿಗೆ ಅಮ್ಮನಿಗಿಂತ, ಅಪ್ಪ ತುಂಬಾನೆ ಹತ್ತಿರವಾಗೋದು ಯಾಕೆ?
ಡಿವೋರ್ಸ್ ಸಂಖ್ಯೆಯಲ್ಲಿ ಹೆಚ್ಚಳ : ಅಧ್ಯಯನ ಒಂದರ ಪ್ರಕಾರ, 2001 ಮತ್ತು 2015 ರ ನಡುವೆ, ಡಿಸೆಂಬರ್‌ಗೆ ಹೋಲಿಸಿದರೆ ಜನವರಿ ತಿಂಗಳಲ್ಲಿ ವಾಷಿಂಗ್ಟನ್‌ನಲ್ಲಿ ವಿಚ್ಛೇದನ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಜನವರಿಯಲ್ಲಿ ಡಿಐವೈ ವಿಚ್ಛೇದನ ಮತ್ತು ತ್ವರಿತ ವಿಚ್ಛೇದನ ಹೆಚ್ಚು. ಗೂಗಲ್ ನಲ್ಲಿ ಜನರು ಡಿವೋರ್ಸ್ ಬಗ್ಗೆ ಹುಡುಕಾಟ ನಡೆಸೋದು ಕೂಡ ಶೇಕಡಾ 100 ರಷ್ಟು ಹೆಚ್ಚಾಗುತ್ತದೆ. ವಿಚ್ಛೇದನಕ್ಕಾಗಿ ವಕೀಲರನ್ನು ಸಂಪರ್ಕಿಸುವವರ ಸಂಖ್ಯೆಯು ಈ ಸಮಯದಲ್ಲಿ ಶೇಕಡಾ 30ರಷ್ಟು ಹೆಚ್ಚಾಗುತ್ತದೆ ಎಂದು ರಿಚರ್ಡ್ ನೆಲ್ಸನ್ ಎಲ್ ಎಲ್ ಪಿ ವರದಿ ಹೇಳಿದೆ.
ಕ್ರಿಸ್ಮಸ್ ನಂತ್ರ ಹೆಚ್ಚಾಗುತ್ತೆ ಭಿನ್ನಾಭಿಪ್ರಾಯ : ಕ್ರಿಸ್ಮಸ್ ನಲ್ಲಿ ಜನರು ದೀರ್ಘ ರಜೆಯಲ್ಲಿರ್ತಾರೆ. ಈ ಸಮಯದಲ್ಲಿ ಮನೆಗೆ ಬರುವ ಗೆಸ್ಟ್ ಸಂಖ್ಯೆ ಕೂಡ ಹೆಚ್ಚು. ಅಡುಗೆ ಮಾಡುವ ಹೊಣೆ ದಂಪತಿ ಮೇಲೆ ಬಿದ್ದಿರುತ್ತದೆ. ಮನೆಯಲ್ಲಿ ಇಬ್ಬರೂ ದೀರ್ಘಕಾಲ ಒಟ್ಟಿಗೆ ಇರುವ ಸಮಯದಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ. ಈಗಾಗಲೇ ದುರ್ಬಲವಾಗಿರುವ ಸಂಬಂಧ ಮತ್ತಷ್ಟು ಬ್ರೇಕ್ ಆಗುತ್ತೆ. ರಜಾ ದಿನಗಳನ್ನು ಒಟ್ಟಿಗೆ ಕಳೆಯುವ ಕೆಲ ದಂಪತಿ, ರಜಾ ಮುಗಿಯುತ್ತಿದ್ದಂತೆ ವಿಚ್ಛೇದನದ ನಿರ್ಧಾರಕ್ಕೆ ಮುಂದಾಗ್ತಾರೆ.
ಮ್ಯಾಕ್ಸ್ ಗೆಲುವಿನ ಖುಷಿಯಲ್ಲಿರೋ ಕಿಚ್ಚನಿಗೆ ಸಾನ್ವಿ ಗಿಫ್ಟ್!
ತಜ್ಞರು ಹೇಳೋದೇನು? : ಹೊಸ ವರ್ಷ ಪ್ರಾರಂಭವಾದ ತಕ್ಷಣ ಜನರು ತಮ್ಮ ಜೀವನ ಸುಧಾರಿಸುವ ಬಗ್ಗೆ ಆಲೋಚನೆ ಮಾಡ್ತಾರೆ. ಹಿಂದಿನ ವರ್ಷದ ಸಮಸ್ಯೆಗಳನ್ನೆಲ್ಲ ಬಿಟ್ಟು ಹೊಸ ವರ್ಷದಲ್ಲಿ ಹೊಸ ಜೀವನ ನಡೆಸಲು ಬಯಸ್ತಾರೆ. ಹೊಸ ವರ್ಷದಲ್ಲಿ ಒಂದಿಷ್ಟು ಗುರಿಗಳಿರುತ್ತವೆ. ಅದಕ್ಕೆ ಸಂಬಂಧ ಅಡ್ಡಿಯಾಗ್ತಿದೆ ಎಂಬ ಭಾವನೆ ಅವರಲ್ಲಿ ಮೂಡಿದ್ರೆ ಅವರು ಸಂಬಂಧ ಕಡಿದುಕೊಳ್ಳುವ ನಿರ್ಧಾರಕ್ಕೆ ಬರ್ತಾರೆ. ವರ್ಷದ ಮೊದಲ ತಿಂಗಳು ಜನವರಿ. ಜನರ ರೆಸಲ್ಯೂಷನ್ ಶುರುವಾಗೋದು ಕೂಡ ಜನವರಿಯಲ್ಲಿಯೇ. ವರ್ಷದ ಆರಂಭದಲ್ಲಿಯೇ ಸಂಗಾತಿಯಿಂದ ದೂರ ಸರಿದ್ರೆ ಒಳ್ಳೆಯದು, ಮುಂದಿನ ದಿನಗಳನ್ನು ಸಂಬಂಧದ ಒತ್ತಡ, ಭಿನ್ನಾಭಿಪ್ರಾಯ, ಗಲಾಟೆ ಇಲ್ಲದೆ ಕಳೆಯಬಹುದು ಎಂದು ಭಾವಿಸುವ ಜನರು ವಿಚ್ಛೇದನಕ್ಕೆ ಚಿಂತಿಸುತ್ತಾರೆ.