ಹೆಣ್ಣುಮಕ್ಕಳಿಗೆ ಅಮ್ಮನಿಗಿಂತ, ಅಪ್ಪ ತುಂಬಾನೆ ಹತ್ತಿರವಾಗೋದು ಯಾಕೆ?
ಹೆಣ್ಣುಮಕ್ಕಳಿಗೆ ಅಮ್ಮನಿಗೆ ಹೆಚ್ಚಾಗಿ ಅಪ್ಪ ಇಷ್ಟ ಆಗೋದು ಯಾಕೆ? ಅಪ್ಪ ಮತ್ತು ಮಗಳ ನಡುವಿನ ಸುಂದರವಾದ ಬಾಂಧವ್ಯದ ಕುರಿತು ಒಂದಿಷ್ಟು ಮಾಹಿತಿ ತಿಳ್ಕೊಳೋಣ.
ಪೋಷಕರ ಪ್ರೀತಿ ತಮ್ಮ ಮಕ್ಕಳಿಗೆ ಯಾವಾಗಲೂ ಒಂದೇ ಆಗಿರುತ್ತದೆ. ಆದರೆ ಮಗಳು ತನ್ನ ತಂದೆಯೊಂದಿಗೆ ಹೆಚ್ಚು ಕನೆಕ್ಟ್ ಆಗುತ್ತಾಳೆ, ಗಂಡು ಮಗು ಅಮ್ಮನೊಂದಿಗೆ ಕನೆಕ್ಟ್ ಆಗ್ತಾರೆ. ಹೆಣ್ಣುಮಕ್ಕಳಿಗೆ, ಅವರ ತಂದೆ ಫಿಲಂ ಸೂಪರ್ ಹೀರೋಗಿಂತ (super hero) ಕಡಿಮೆಯಿಲ್ಲ. ಹೆಣ್ಣುಮಕ್ಕಳು ಅಪ್ಪನಿಗೆ ಹೇಗೆ ಕನೆಕ್ಟ್ ಆಗ್ತಾರೆ ನೋಡೋಣ.
ತಂದೆ ಮತ್ತು ಮಗಳ ಬಂಧ
ಸಾಮಾನ್ಯವಾಗಿ, ಗಂಡುಮಕ್ಕಳು ತಾಯಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ, ಆದರೆ ಹೆಣ್ಣುಮಕ್ಕಳು ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ (bonding), ಮತ್ತು ಇದರ ಹಿಂದೆ ಕೆಲವು ವಿಶೇಷ ಕಾರಣಗಳಿವೆ. ಆ ಕಾರಣಗಳ ಬಗ್ಗೆ ತಿಳಿದುಕೊಳ್ಳೋಣ.
ಸುರಕ್ಷತೆಯ ಭಾವನೆ
ಅಪ್ಪ ಯಾವಾಗಲೂ ತನ್ನ ಹೆಣ್ಣುಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆಯ ಪ್ರಜ್ಞೆಯನ್ನು (safe feel) ನೀಡುತ್ತಾರೆ, ಆದ್ದರಿಂದ ಹೆಣ್ಣುಮಕ್ಕಳು ತಂದೆಗೆ ಹತ್ತಿರವಾಗುತ್ತಾರೆ. ಅಪ್ಪ ಎಂದರೆ ಸೇಫ್ ಪ್ಲೇಸ್ ಅನ್ನೋ ಭಾವನೆ ಹೆಣ್ಣುಮಕ್ಕಳಲ್ಲಿ ಮೂಡುತ್ತೆ.
ಸಹಾನುಭೂತಿಯಿಂದ ತುಂಬಿದ ಹೃದಯ
ತಂದೆಯ ಹೃದಯವು ಸಹಾನುಭೂತಿಯಿಂದ ತುಂಬಿರುತ್ತದೆ, ಇದು ತನ್ನ ಹೆಣ್ಣುಮಕ್ಕಳನ್ನು ಯಾವಾಗಲೂ ತಮ್ಮ ಜೊತೆಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತೆ. ಹಾಗಾಗಿಯೇ ಹೆಣ್ಣುಮಕ್ಕಳಿಗೆ ಅಪ್ಪ ಅಂದ್ರೆ ಬಲು ಪ್ರೀತಿ.
ಪ್ರತಿ ಕ್ಷಣದಲ್ಲೂ ಒಟ್ಟಿಗೆ ವಾಸಿಸುವುದು
ಯಾವುದೇ ಪರಿಸ್ಥಿತಿಯಲ್ಲಿ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ, ಎಲ್ಲಾ ಸಮಯದಲ್ಲೂ ಲಭ್ಯವಿರುವ (always there for you)ಏಕೈಕ ವ್ಯಕ್ತಿ ಅಂದ್ರೆ ಅದು ತಂದೆ, ಹೆಣ್ಣುಮಕ್ಕಳು ತಮ್ಮ ತಂದೆಯ ಈ ಗುಣವನ್ನು ಹೆಚ್ಚು ಇಷ್ಟಪಡುತ್ತಾರೆ.
ಪ್ರತಿಯೊಂದು ಸಣ್ಣ ವಿಷಯವನ್ನು ಅರ್ಥಮಾಡಿಕೊಳ್ಳುವುದು
ಅಪ್ಪ ತನ್ನ ಹೆಣ್ಣುಮಕ್ಕಳ ಸಣ್ಣ ಅಗತ್ಯಗಳು ಮತ್ತು ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ, ಇದರಿಂದಾಗಿ ಹೆಣ್ಣುಮಕ್ಕಳು ತಮ್ಮ ಎಲ್ಲಾ ವಿಷ್ಯಗಳನ್ನು, ಬೇಕು, ಬೇಡಗಳನ್ನು ಮಕ್ಕಳ ಬಳಿ ಆರಾಮವಾಗಿ ಮಾತನಾಡುತ್ತಾರೆ.
ಸ್ವಾವಲಂಬಿಗಳಾಗುವ ಬಯಕೆ
ಅಪ್ಪ ಹೆಚ್ಚಾಗಿ ತನ್ನ ಹೆಣ್ಣುಮಕ್ಕಳನ್ನು ಜೀವನದಲ್ಲಿ ಸ್ವಾವಲಂಬಿಗಳಾಗಲು (self reliant) ಪ್ರೇರೇಪಿಸುತ್ತಾರೆ, ಆದ್ದರಿಂದ ಹೆಣ್ಣುಮಕ್ಕಳು ಯಾವಾಗಲೂ ತಂದೆಯ ಆಲೋಚನೆಗಳು ಮತ್ತು ಸಲಹೆಗಳನ್ನು ಮುಖ್ಯವೆಂದು ಪರಿಗಣಿಸುತ್ತಾರೆ.
ಅಪ್ಪನೊಂದಿಗೆ ಹೆಚ್ಚಿನ ಸಮಯ
ಅಪ್ಪ ತನ್ನ ಹೆಣ್ಣುಮಕ್ಕಳೊಂದಿಗೆ ಮೋಜು ಮತ್ತು ಮಸ್ತಿ ಮಾಡುತ್ತಾ, ಹೆಚ್ಚಿನ ಸಮಯ ಕಳೆಯಲು ಇಷ್ಟಪಡ್ತಾನೆ, ಈ ಕಾರಣದಿಂದಾಗಿ ಮಗಳು ತನ್ನ ತಂದೆಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾಳೆ.
ಆತ್ಮವಿಶ್ವಾಸ ಹೆಚ್ಚಿಸುವವರು
ತಂದೆ ಮಕ್ಕಳ ಮೊದಲ ಗೈಡ್ ಆಗಿರುತ್ತಾರೆ, ಹೆಣ್ಣು ಎಂದಿಗೂ ದುರ್ಬಲರಲ್ಲ ಮತ್ತು ತಮ್ಮನ್ನು ತಾವು ಸಾಬೀತುಪಡಿಸಲು ಎಲ್ಲಾ ಹಕ್ಕಿದೆ ಎಂದು ತಮ್ಮ ಮಗಳಿಗೆ ಕಲಿಸುತ್ತಾನೆ. ಅದಕ್ಕಾಗಿಯೇ ಹೆಣ್ಣುಮಕ್ಕಳು ಅಪ್ಪನೊಂದಿಗೆ ಹೆಚ್ಚು ಕನೆಕ್ಟ್ ಆಗಿರುತ್ತಾರೆ.
ಕನಸುಗಳನ್ನು ಈಡೇರಿಸುವುದು
ಒಬ್ಬ ತಂದೆಯು ತನ್ನ ಮಗಳ ಪ್ರತಿಯೊಂದು ಕನಸನ್ನು ತನ್ನದೆಂದು ಪರಿಗಣಿಸುತ್ತಾನೆ ಮತ್ತು ಏನನ್ನೂ ಹೇಳದೆ, ಅವನು ತನ್ನ ರಕ್ತ ಮತ್ತು ಬೆವರನ್ನು ಹರಿಸಿ, ಮಗಳ ಕನಸುಗಳನ್ನು ಪೂರೈಸುವಲ್ಲಿ ಸಫಲನಾಗುತ್ತಾನೆ, ಹಾಗಾಗಿಯೇ ಹೆಣ್ಣುಮಕ್ಕಳು ಅಪ್ಪನನ್ನು ಸೂಪರ್ ಹೀರೋ ಅನ್ನೋದು.