ಆಗರ್ಭ ಶ್ರೀಮಂತರು ಕ್ಯೂನಲ್ಲಿದ್ದಾಗ ಶಿಕ್ಷಕಿಯನ್ನು ಮದ್ವೆಯಾಗಿದ್ದೇಕೆ ಮುಖೇಶ್​ ಅಂಬಾನಿ- ರೋಚಕ ಡೇಟಿಂಗ್​ ಸ್ಟೋರಿ

Published : Nov 26, 2026, 10:14 PM IST
Mukesh Ambani and Nita Ambani

ಸಾರಾಂಶ

ಧೀರೂಭಾಯಿ ಅಂಬಾನಿ ಅವರು ತಿಂಗಳಿಗೆ ಕೇವಲ 800 ರೂ. ಗಳಿಸುತ್ತಿದ್ದ ಮಧ್ಯಮ ವರ್ಗದ ಶಿಕ್ಷಕಿ ನೀತಾ ಅವರನ್ನು ತಮ್ಮ ಮಗ ಮುಖೇಶ್ ಅಂಬಾನಿಗೆ ವಧುವಾಗಿ ಆಯ್ಕೆ ಮಾಡಿದ್ದರು. ಇವರಿಬ್ಬರ ಅಪೂರ್ವ ಭೇಟಿ, ಬಸ್ಸಿನ ಡೇಟಿಂಗ್ ಮತ್ತು ಟ್ರಾಫಿಕ್ ಮಧ್ಯದ ಪ್ರೇಮ ನಿವೇದನೆಯ ಸ್ವಾರಸ್ಯಕರ ಕಥೆ ಇಲ್ಲಿದೆ.

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕರಾಗಿ ದೊಡ್ಡ ಬಿಜಿನೆಸ್​ಮನ್​ ಆಗಿರುವ ಧೀರೂಬಾಯಿ ಅಂಬಾನಿ ಮಗ ಎಂದರೆ, ಆಗರ್ಭ ಶ್ರೀಮಂತರು ಹೆಣ್ಣು ಕೊಡಲು ಕ್ಯೂ ನಿಲ್ಲುವುದು ಹೊಸ ವಿಷಯವೇನಲ್ಲ. ಅಷ್ಟಕ್ಕೂ ದೊಡ್ಡ ದೊಡ್ಡ ಬಿಜಿನೆಸ್​ಮನ್​ಗಳು, ಮಿಲೇನಿಯರ್​ಗಳು, ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಲು ಮಕ್ಕಳ ಮದುವೆಯನ್ನೂ ತಮ್ಮಂಥ ಉದ್ಯಮಿಗಳ ಮನೆಗೇ ಕೊಡಲು ಬಯಸುತ್ತಾರೆ. ಆದರೆ ಇಂಥ ಶ್ರೀಮಂ ಧೀರೂಬಾಯಿ ಅವರು ಮಾತ್ರ ಇದಕ್ಕೆ ಉಲ್ಟಾ ಆಗಿದ್ದರು. ಅವರು ತಮ್ಮ ಪುತ್ರ ಮುಖೇಶ್​ ಅಂಬಾನಿಗೆ ಸೆಲೆಕ್ಟ್​ ಮಾಡಿದ್ದು ಆಗ ತಿಂಗಳಿಗೆ ಕೇವಲ 800 ರೂಪಾಯಿ ಪಡೆಯುತ್ತಿದ್ದ ಮಧ್ಯಮ ವರ್ಗದ ನೀತಾ ಅಂಬಾನಿಯನ್ನು! ಇದು ಏಕೆ ಎನ್ನುವ ವಿಷಯವೂ ಅಷ್ಟೇ ಇಂಟರೆಸ್ಟಿಂಗ್​ ಆಗಿದೆ.

ಅಷ್ಟಕ್ಕೂ, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪ್ರೇಮಕಥೆಯು ಅಂಬಾನಿ ಕುಟುಂಬವು ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದಾಗುವ ಮೊದಲೇ ಪ್ರಾರಂಭವಾಯಿತು. 1985 ರಲ್ಲಿ, ನೀತಾ ದಲಾಲ್ ಮಧ್ಯಮ ವರ್ಗದ ಹುಡುಗಿಯಾಗಿದ್ದು, ನರ್ಸರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ₹800 ಸಂಪಾದಿಸುತ್ತಿದ್ದರು. ಭರತನಾಟ್ಯ ಪ್ರದರ್ಶನದ ಸಮಯದಲ್ಲಿ, ಆಗಲೇ ಸಾಕಷ್ಟು ಶ್ರೀಮಂತಿಕೆಯಲ್ಲಿ ಗುರುತಿಸಿಕೊಂಡಿದ್ದ ಧೀರೂಭಾಯಿ ಅಂಬಾನಿ ಅವರು ಮೊದಲು ಗಮನಿಸಿದರು ಮತ್ತು ಅವರು ತಮ್ಮ ಮಗನಿಗೆ ಅದ್ಭುತ ಸಂಗಾತಿಯಾಗುತ್ತಾರೆ ಎಂದು ನಂಬಿದ್ದರು. ಮುಂದೆ ಆಗಿದ್ದು ಅಷ್ಟೇ ರೋಚಕ.

ನೀವು ಧೀರೂಭಾಯಿ ಆದ್ರೆ ನಾನು ಎಲಿಜಬೆಟ್​ ಟೇಲರ್​ ಎಂದಿದ್ದ ನೀತಾ!

ನೀತಾ ಅವರೇ ತಮ್ಮ ಮನೆಯ ಸೊಸೆಯಾಗಲು ಯೋಗ್ಯ ವಧು ಎಂದುಕೊಂಡಿದ್ದ ಧೀರೂಭಾಯಿ ಅಂಬಾನಿ ನೀತಾ ಅವರಿಗೆ ಕರೆ ಮಾಡಿದಾಗ, ಯಾರೋ ತಮಾಷೆ ಮಾಡುತ್ತಿದ್ದಾರೆಂದು ನೀತಾ ಫೋನ್ ಕಟ್ ಮಾಡಿದರು. ಮತ್ತೆ ಕರೆ ಮಾಡಿದಾಗ, "ನೀವು ಧೀರೂಭಾಯಿ ಅಂಬಾನಿ ಆದರೆ ನಾನು ಎಲಿಜಬೆತ್ ಟೇಲರ್" ಎಂದು ಹೇಳಿದ್ದರು. ಕೊನೆಗೆ ನೀತಾ ಅವರ ತಂದೆ ಫೋನ್ ತೆಗೆದುಕೊಂಡು, ನಿಜವಾಗಿಯೂ ಧೀರೂಭಾಯಿ ಅವರೇ ಕರೆ ಮಾಡಿದ್ದಾರೆಂದು ಖಚಿತಪಡಿಸಿದರು.

ಮುಖೇಶ್​ ಅವರನ್ನು ಭೇಟಿಗಾಗಿ ಅವರ ಮನೆಗೆ ಹೋದಾಗ ನೀತಾ ಬೆರಗಾಗಿ ಹೋಗಿದ್ದರಂತೆ. ಮನೆಯ ಬಾಗಿಲನ್ನು ಮುಖೇಶ್ ಅವರೇ ತೆರೆದಿದ್ದರು. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ ಧರಿಸಿ ತುಂಬಾ ಸರಳವಾಗಿದ್ದ ಮುಕೇಶ್‌ ಅವರನ್ನು ನೋಡಿದಾಗ ಶ್ರೀಮಂತನ ಮಗ ಇಷ್ಡು ಸರಳವಾಗಿರಲು ಸಾಧ್ಯವಾ ಎಂದು ನೀತಾರಿಗೆ ನಂಬಲು ಸಾಧ್ಯವೇ ಆಗಿರಲಿಲ್ಲವಂತೆ.

ಡೇಟಿಂಗ್​ ಹೇಗಿತ್ತು?

ನೀತಾ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದರಿಂದ, ತಮ್ಮ ಸರಳ ಜೀವನವನ್ನು ತೋರಿಸಲು ಮರ್ಸಿಡಿಸ್ ಕಾರಿನ ಬದಲು ಡಬಲ್-ಡೆಕ್ಕರ್ ಬಸ್ಸಿನಲ್ಲಿ ಪ್ರಯಾಣಿಸಲು ಇಷ್ಟಪಟ್ಟರು. ಮುಕೇಶ್ ಕೂಡ ಮುಂಬೈನ ತಮ್ಮ ನೆಚ್ಚಿನ ಸ್ಟ್ರೀಟ್ ಫುಡ್ ತಾಣಗಳಿಗೆ ನೀತಾ ಅವರನ್ನು ಕರೆದೊಯ್ದರು. ಮುಂಬೈನ ಪೆಡ್ಡರ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ, ಟ್ರಾಫಿಕ್ ಮಧ್ಯೆಯೇ ಮುಕೇಶ್ ಕಾರು ನಿಲ್ಲಿಸಿ, "ನೀನು ನನ್ನನ್ನು ಮದುವೆಯಾಗುತ್ತೀಯಾ?" ಎಂದು ಕೇಳಿದರು. ಉತ್ತರ ಸಿಗುವವರೆಗೂ ಕಾರು ಮುಂದಕ್ಕೆ ಚಲಿಸುವುದಿಲ್ಲ ಎಂದು ಹಠ ಹಿಡಿದರು; ನೀತಾ 'ಹೌದು' ಎಂದರು. ಮುಖೇಶ್ ಅವರು ನೀತಾರನ್ನು ಭೇಟಿಯಾಗಿ ಮದುವೆಗೆ ಪ್ರಪೋಸ್​ ಮಾಡಿದಾಗ, ನೀತಾ ಅವರನ್ನು ಒಂದು ಷರತ್ತಿನ ಮೇಲೆ ಮದುವೆಯಾಗಲು ಒಪ್ಪಿಕೊಂಡರು: ಅಂಬಾನಿ ಕುಟುಂಬಕ್ಕೆ ಸೇರಿದ ನಂತರವೂ ಅವರು ಬೋಧನೆಯನ್ನು ಮುಂದುವರಿಸಲು ಬಯಸಿದ್ದರು. ಮುಖೇಶ್ ಅವರ ನಿರ್ಧಾರವನ್ನು ಬೆಂಬಲಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಾಳಿ ಕಟ್ಟಲು ಕಣ್ಣು ಮಿಟುಕಿಸಿ ಪರ್ಮಿಷನ್​: ಮದ್ವೆ ಆಗುತ್ತಲೇ ಪ್ರೆಸ್​ಮೀಟ್​; ಮಾಧ್ಯಮಕ್ಕೆ ರಾಣವ್-ರಾಧಾ ಜೋಡಿ ಹೇಳಿದ್ದೇನು
ಬದುಕಿರುವಾಗ್ಲೇ ಅಂತ್ಯಕ್ರಿಯೆಗೆ ಕಾಯ್ದಿರಿಸಿ, ನೆಮ್ಮದಿಯಿಂದ ಜೀವ ಬಿಡಿ: ಶುರುವಾಗಿದೆ ಸ್ಟಾರ್ಟ್‌ಅಪ್‌