ಈ ಕುಟುಂಬದಲ್ಲಿ ಹುಟ್ಟಿದವರ ಮೈಬಣ್ಣವೇ ನೀಲಿ! ತಲೆಮಾರುಗಳಿಂದ ಕಾಡಿದ ವಿಚಿತ್ರ ಕಾಯಿಲೆಯ ಹಿಂದಿದೆ ಆಘಾತಕಾರಿ ಕಾರಣ

Published : Nov 25, 2026, 09:10 PM IST
Blue People Of Kentucky

ಸಾರಾಂಶ

ಕೆಂಟುಕಿಯ ಫುಗೇಟ್ ಕುಟುಂಬದಲ್ಲಿ ರಕ್ತ ಸಂಬಂಧಿಗಳ ನಡುವೆ ಮದುವೆಯಾದ ಕಾರಣ ಸದಸ್ಯರ ಚರ್ಮ ನೀಲಿ ಬಣ್ಣಕ್ಕೆ ತಿರುಗಿತ್ತು. ಮೆಥೆಮೋಗ್ಲೋಬಿನೆಮಿಯಾ ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಈ ವಿಚಿತ್ರ ವಿದ್ಯಮಾನ ನಡೆದಿದೆ ಎಂದು ಅಧ್ಯಯನಗಳು ತಿಳಿಸಿವೆ.

ಬೆಂಗಳೂರು: ರಕ್ತ ಸಂಬಂಧಿಗಳು ಮದುವೆ ಆಗಬಾರದು ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಆದರೆ ಭಾರತದ ಅನೇಕ ಕುಟುಂಬಗಳಲ್ಲಿ ಮತ್ತು ಸಮುದಾಯಗಳಲ್ಲಿ ಸಂಬಂಧಿಕರನ್ನೇ ಮದುವೆ ಆಗುವ ಸಂಪ್ರದಾಯ ಇದೆ. ಇತ್ತೀಚೆಗೆ ದೇಶದಲ್ಲಿ ರಕ್ತ ಸಂಬಂಧಿಗಳ ನಡುವಿನ ಮದುವೆಗಳ ಬಗ್ಗೆ ಕಾನೂನು ರೂಪಿಸುವ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆ ಆಗಿದೆ.

ಅಧ್ಯಯನ ಏನು ಹೇಳುತ್ತೆ?

ಇಂಥ ಸಂದರ್ಭದಲ್ಲಿ ಅಮೆರಿಕದ ಒಂದು ಕುಟುಂಬದ ವಿಚಿತ್ರ ಕಥೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುಟುಂಬದ ಸದಸ್ಯರ ಚರ್ಮ ನೀಲಿ ಬಣ್ಣಕ್ಕೆ ತಿರುಗಿತ್ತು. ಹೀಗಾಗಿ 'ಕೆಂಟುಕಿಯ ನೀಲಿ ಜನರು' (Blue People of Kentucky) ಎಂದೇ ಪ್ರಸಿದ್ಧವಾಗಿತ್ತು. ಇದಕ್ಕೆ Methemoglobinemia ಎಂದು ಕರೆಯುತ್ತಾರೆ. ಈ ಕಾಯಿಲೆಯು ರಕ್ತದಲ್ಲಿ ಆಮ್ಲಜನಕದ ಮೇಲೆ ಏರುಪೇರು ಉಂಟುಮಾಡುತ್ತದೆ. ಇದರಿಂದ ಚರ್ಮ ನೀಲಿ ಬಣ್ಣದಂತೆ ಕಾಣಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಅಂದ್ಹಾಗೆ ಈ ಕುಟುಂಬದ ಕಥೆ 1820ರಲ್ಲಿ ಆರಂಭವಾಗುತ್ತದೆ. ಮಾರ್ಟಿನ್ ಫುಗೇಟ್ ಎಂಬ ಫ್ರೆಂಚ್ ವಲಸಿಗ ಅಮೆರಿಕಕ್ಕೆ ಬಂದು ನೆಲೆಸಿದ್ದ. ಬಳಿಕ ಎಲಿಜಬೆತ್ ಸ್ಮಿತ್ ಎಂಬ ಮಹಿಳೆಯ ಮದುವೆಯಾಗಿ 7 ಮಕ್ಕಳನ್ನು ಪಡೆದ. ಇವರ 7 ಮಕ್ಕಳಲ್ಲಿ ನಾಲ್ವರು ನೀಲಿ ಬಣ್ಣದ ಚರ್ಮ ಹೊಂದಿದ್ದರು. ಮಕ್ಕಳ ಚರ್ಮದ ಬಣ್ಣ ನೋಡಿ ಪೋಷಕರು ಆಶ್ಚರ್ಯಚಕಿತರಾಗಿದ್ದರು.

ಫುಗೇಟ್ ಕುಟುಂಬವು ಕೆಂಟುಕಿಯ ಟ್ರಬಲ್ಸಮ್ ಕ್ರೀಕ್ ಎಂಬ ಅತ್ಯಂತ ದೂರದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿತ್ತು. ಹೊರಗಿನ ಜನರೊಂದಿಗೆ ಸಂಪರ್ಕ ಕಡಿಮೆಯಿದ್ದ ಕಾರಣ, ಅಲ್ಲಿನ ಕೆಲವೇ ಕುಟುಂಬಗಳ ನಡುವೆ ಮದುವೆಗಳು ನಡೆಯುತ್ತಿದ್ದವು. ಇದರಿಂದ ಸಂಬಂಧಿಕರ ನಡುವಿನ ಮದುವೆಗಳು ಹೆಚ್ಚಾಗಿ ಈ ಅನುವಂಶಿಕ ಕಾಯಿಲೆ ಮುಂದಿನ ತಲೆಮಾರುಗಳಿಗೂ ಹರಡಿತು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಈ ಕಾಯಿಲೆ ಹೊಂದಿದ್ದ ಕುಟುಂಬದ ಸದಸ್ಯರು ಸಾಮಾನ್ಯ ಜೀವನ ನಡೆಸುತ್ತಿದ್ದರು. ಅವರಲ್ಲಿ ಹೆಚ್ಚಿನವರಿಗೆ ದೊಡ್ಡ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳದಿದ್ದರೂ, ಚರ್ಮದ ನೀಲಿ ಬಣ್ಣ ಮಾತ್ರ ಹಾಗೆಯೇ ಉಳಿದಿತ್ತು. 1960ರಲ್ಲಿ ಜಗತ್ತಿಗೆ ಗೊತ್ತಾದ ನೀಲಿ ಕುಟುಂಬ

1960ರಲ್ಲಿ ರಕ್ತ ತಜ್ಞ ಡಾ. ಮ್ಯಾಡಿಸನ್ ಕೇನ್ ಮತ್ತು ನರ್ಸ್ ರುತ್ ಪೆಂಡರ್‌ಗ್ರಾಸ್ ನೀಲಿ ಚರ್ಮ ಹೊಂದಿದ್ದ ರೇಚಲ್ ಮತ್ತು ಪ್ಯಾಟ್ರಿಕ್ ರಿಚಿ ಎಂಬ ಸಹೋದರ-ಸಹೋದರಿಯನ್ನು ಪರೀಕ್ಷಿಸಿದರು. ಆಗ ಆಘಾತಕಾರಿ ಮಾಹಿತಿ ಹೊರಗೆ ಬಂದಿದೆ.

ಸಾಮಾನ್ಯ ವ್ಯಕ್ತಿಗಳ ರಕ್ತದಲ್ಲಿ ಮೆಥೆಮೋಗ್ಲೋಬಿನ್ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಿಮೆ ಇರುತ್ತದೆ. ಈ ಕುಟುಂಬದ ಸದಸ್ಯರಲ್ಲಿ ಅದು ಶೇಕಡಾ 10ರಿಂದ 20ರಷ್ಟು ಕಂಡುಬಂದಿದೆ. ಹೆಚ್ಚಿನ ಸಂಶೋಧನೆಯ ಬಳಿಕ ಈ ಕಾಯಿಲೆಗೆ ಚಿಕಿತ್ಸೆ ನೀಡಬಹುದು ತಿಳಿದಿದೆ. ಔಷಧಿಗಳ ಮೂಲಕ ಕಾಯಿಲೆಯನ್ನು ನಿಯಂತ್ರಿಸುವ ಸಾಧ್ಯತೆಯೂ ಇತ್ತು. ಕಾಲಕ್ರಮೇಣ ಈ ಕುಟುಂಬದಲ್ಲಿ ನೀಲಿ ಚರ್ಮ ಹೊಂದಿರುವವರ ಸಂಖ್ಯೆ ಕಡಿಮೆಯಾಯಿತು. 1975ರಲ್ಲಿ ಕೊನೆಯ ಬಾರಿ ನೀಲಿ ಚರ್ಮದ ಸದಸ್ಯ ಕಾಣಿಸಿಕೊಂಡಿದ್ದಾಗಿ ವರದಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಯ್‌ಫ್ರೆಂಡ್ ಕೈಕೊಟ್ಟಿದ್ದಕ್ಕೆ ರ‍್ಯಾಪಿಡೋ ರೈಡರ್‌ಗೆ ₹1,000 ಆಫರ್ ಕೊಟ್ಟು ಸಿನಿಮಾಗೆ ಕರೆದ ಯುವತಿ!
ಪುತ್ರಿ ಮದುವೆ ವೇಳೆ ನರ್ತಿಸುತ್ತಲೇ ಕೊನೆಯುಸಿರೆಳೆದ ಅಪ್ಪ! ಸಾವಿನ ಸುದ್ದಿ ಮುಚ್ಚಿಟ್ಟು ವಿವಾಹ- ವಿಡಿಯೋ ವೈರಲ್​