
ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಹೇಮಾಮಾಲಿನಿ ಅಭಿನಯದ “ಬಾಗ್ ಬನ್’ ಸಿನಿಮಾ ಸಾಕಷ್ಟು ಸುದ್ದಿ ಮಾಡಿತ್ತು. ವಯಸ್ಸಾದ ತಂದೆ-ತಾಯಿ ಹಾಗೂ ಮಕ್ಕಳ ನಡುವೆ ಉಂಟಾಗುವ ಭಿನ್ನಾಭಿಪ್ರಾಯ, ವಯಸ್ಸಾದ ಪಾಲಕರನ್ನು ಮಕ್ಕಳು ಕೆಟ್ಟದಾಗಿ ಟ್ರೀಟ್ ಮಾಡುವುದು, ಆದರೆ, ಹಿಂದೊಮ್ಮೆ ಸಾಕಿ ಬೆಳೆಸಿದ್ದ ಅನಾಥನೊಬ್ಬ ಈ ಹಿರಿಯರನ್ನು ಪಾಲಕರಂತೆ ಚೆನ್ನಾಗಿ ನೋಡಿಕೊಳ್ಳುವುದು ಈ ಸಿನಿಮಾದ ತಿರುಳು. ಬಿಡುಗಡೆಯಾದಾಗ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಈ ಸಿನಿಮಾ ಈಗಲೂ ಬೇರೆ ಬೇರೆ ಚಾನೆಲ್ ಗಳಲ್ಲಿ ಆಗಾಗ ಪ್ರಸಾರವಾಗುತ್ತಿರುತ್ತದೆ. ಹಲವು ಹಿರಿಯರು ಈ ಸಿನಿಮಾದೊಂದಿಗೆ ತಮ್ಮ ಪರಿಸ್ಥಿತಿಯನ್ನು ತಳುಕು ಹಾಕಿಕೊಳ್ಳುವುದು ಸಹಜ. ಅಂಥದ್ದೇ ಒಂದು ಘಟನೆ ನಡೆದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿರುವುದು ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ.
ಯಾವುದೇ ವಿಶೇಷ ಸಂದರ್ಭ ಎದುರಾದರೂ ಅದನ್ನು ಸ್ಟೇಟಸ್ (Status) ಮೂಲಕ ಎಲ್ಲರಿಗೂ ತಿಳಿಯಪಡಿಸುವುದು ಇಂದಿನ ಫ್ಯಾಷನ್. ಅವರವರ ಸ್ಟೇಟಸ್ ಮೂಲಕವೇ ಜನರ ಮೂಡನ್ನೂ (Mood) ಅರಿತುಕೊಳ್ಳಲು ಸಾಧ್ಯ. ಅಷ್ಟರಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾವನೆಗಳನ್ನು (Feelings) ವ್ಯಕ್ತಪಡಿಸುವುದು ಇಂದು ಸಾಮಾನ್ಯ. 'ಬಾಗ್ ಬನ್’ (Baghban) ಸಿನಿಮಾದಂತೆ ಕೆಲವೊಮ್ಮೆ ಮನೆಯಲ್ಲಿ ಅಪ್ಪ-ಮಕ್ಕಳ ನಡುವೆ ವಾದ-ವಾಗ್ವಾದಗಳು (Fight) ಉಂಟಾಗುತ್ತವೆ. ಅಂತಹುದೇ ಘಟನೆಯನ್ನು ಹಿರಿಯರೊಬ್ಬರು (Senior Citizen) ಸಾಮಾಜಿಕ ಜಾಲತಾಣದಲ್ಲಿ ಪ್ರಕಟ ಮಾಡುವ ಮೂಲಕ ಭಾರೀ ಸುದ್ದಿಗೆ ಕಾರಣರಾಗಿದ್ದಾರೆ. ಈ ಘಟನೆಯೂ ಭಾರೀ ಕುತೂಹಲಕರವಾಗಿದೆ.
ಮಗನೊಂದಿಗೆ ಚಿಕ್ಕ ವಾದವಾದ ಬಳಿಕ...
ಒಂದು ದಿನ ರಾತ್ರಿ ಉಜ್ವಲ್ ಅಥರ್ವ್ ಎನ್ನುವವರು ತಮ್ಮ ತಂದೆಯೊಂದಿಗೆ (Father) ಏನೋ ಮನಸ್ತಾಪ ಮಾಡಿಕೊಂಡಿದ್ದರು. ಇದಾದ ಮಾರನೆಯ ದಿನ ಇವರ ತಂದೆ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ “ಬಾಗ್ ಬನ್’ ಸಿನಿಮಾ ನೆನಪಿಸಿಕೊಂಡು ಸಾಲನ್ನು ಬರೆದುಕೊಂಡಿದ್ದರು. “ನಿಧಾನವಾಗಿ ಅರಿವಿಗೆ ಬರುತ್ತಿದೆ. “ಬಾಗ್ ಬನ್’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರು 4 ಮಕ್ಕಳಿದ್ದರೂ ಮತ್ತೊಂದು ಮಗುವನ್ನು (Child) ಸಾಕಿದ್ದೇಕೆ ಎನ್ನುವುದು ಈಗ ತಿಳಿಯುತ್ತಿದೆ’ ಎಂದು ಬರೆದುಕೊಂಡಿದ್ದರು. ಇದನ್ನು ಸ್ವತಃ ಉಜ್ವಲ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ (Share) ಮಾಡಿಕೊಂಡಿದ್ದಾರೆ. ಇದಕ್ಕೆ ಸಖತ್ ಎನಿಸುವಂಥ ಕಾಮೆಂಟ್ ಗಳು (Comments) ಬಂದಿವೆ.
“ನಿನ್ನೆ ರಾತ್ರಿ ಅಪ್ಪನೊಂದಿಗೆ ಸಣ್ಣದೊಂದು ವಾದ ನಡೆಯಿತು. ಮಾರನೆಯ ದಿನ ಬೆಳಗ್ಗೆ ಅಪ್ಪನ ವಾಟ್ಸಾಪ್ ಸ್ಟೇಟಸ್ ಹೀಗಿತ್ತು’ ಎಂದವರು ಮೇಲಿನ ವಾಕ್ಯವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ವಿಧ ವಿಧ ಕಾಮೆಂಟ್ ಗಳು
ಇದು ಭಾರೀ ವೈರಲ್ (Viral) ಆಗಿದ್ದು, ಉಜ್ವಲ್ ಅವರ ತಂದೆಯ ಬಗ್ಗೆ ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬಾತ, “ಸ್ವಂತ ಮಗ (Son) ಹೀಗಿದ್ದರೆ ಮತ್ತೊಂದು ಮಗುವನ್ನು ದತ್ತು ಪಡೆಯಲು ಏಕೆ ನಾಚಿಕೆ?’ ಎಂದು ಹೇಳಿದ್ದರೆ, ಮತ್ತೊಬ್ಬರು, “ಅರೆ, ಅಪ್ಪನ ವಾಟ್ಸಾಪ್ ಸ್ಟೇಟಸ್ (Whatsapp Status) ಅನ್ನು ಹೀಗ್ಯಾಕೆ ಟ್ರೋಲ್ ಮಾಡ್ತಾ ಇದ್ದೀರಿ?’ ಎಂದು ಕೇಳಿದ್ದಾರೆ. ಯಾರೋ ಒಬ್ಬರು, “ನಿಮ್ಮ ತಂದೆ ಭಾರೀ ವಿನೋದದ (Fun) ಬುದ್ಧಿಯುಳ್ಳವರು’ ಎಂದು ಹೇಳಿದ್ದಾರೆ. ಒಬ್ಬಾತ “ತಂದೆಗೆ 10 ಅಂಕ, ಉಜ್ವಲ್ ಗೆ 0’ ಎಂದು ಹಾಕಿದ್ದಾರೆ. ಒಟ್ಟಿನಲ್ಲಿ ಇದು ಕೆಲವೇ ಸಮಯದಲ್ಲಿ ಸಾವಿರಾರು ಜನರ ಗಮನ ಸೆಳೆದು ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.