
ಮಹಾಕುಂಭಮೇಳದ ಸಮಯದ್ಲಲ್ಲಿ ವೈರಲ್ ಆಗಿ ಕುಂಭ ಮೇಳದ ಹುಡುಗಿ ಎಂದೇ ಫೇಮಸ್ ಆಗಿದ್ದ ಮೊನಾಲಿಸಾ ಪೋಷಕರ ವಿರೋಧಧ ನಡುವೆಯೂ ಮುಸ್ಲಿಂ ಯುವಕನನ್ನು ಮದುವೆಯಾಗಿ ಇಂಟರ್‌ನೆಟ್‌ನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಟ್ರೆಂಡಿಂಗ್‌ನಲ್ಲಿ ಇರೋದು ಗೊತ್ತೇ ಇದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಮೊನಾಲೀಸಾ ಮುಸ್ಲಿಂ ಯುವಕನನ್ನೂ ಮದುವೆಯಾಗದ ವಿಚಾರವೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮೊನಾಲೀಸಾ ಕೇರಳದ ಅರುಮನೂರ್‌ನ ನಯನಾರ್ ದೇವಾಲಯದಲ್ಲಿ ನಿನ್ನೆಯಷ್ಟೇ(ಮಾರ್ಚ್ 11 2025) ಫರ್ಮಾನ್ ಖಾನ್ ಅವರನ್ನು ತಮ್ಮ ಕುಟುಂಬದ ತೀವ್ರ ವಿರೋಧದ ನಡುವೆಯೇ ಮದುವೆಯಾದರು. ಹಾಗಿದ್ದರೆ ಮೊನಲಿಸಾ ಮದುವೆಯಾದ ಫರ್ಮಾನ್ ಖಾನ್ ಯಾರು ಆತ ಮಾಡ್ತಿರೋದೇನು ಆತನ ಊರು ಯಾವುದು ಇಲ್ಲಿದೆ ಡಿಟೇಲ್ ಸ್ಟೋರಿ...
ಮೊನಾಲಿಸಾಳನ್ನು ಮದುವೆಯಾದ ಫರ್ಮಾನ್ ಖಾನ್ ಮೂಲತಃ ಉತ್ತರ ಪ್ರದೇಶದ ಭಾಘ್ಪತ್ ನಿವಾಸಿಯಾಗಿದ್ದು, ಆತನೋರ್ವ ನಟ ಹಾಗೂ ಮಾಡೆಲ್ ಆಗಿದ್ದು, ಮಲೆಯಾಳಂ ಹಾಗೂ ಹಿಂದಿ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾನೆ. ಮದುವೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮೊನಾಲಿಸಾ ತಾವಿಬ್ಬರು ಕಳೆದ ಆರು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದು, ಆರಂಭದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದಿದ್ದು, ನಂತರ ಸಿನಿಮಾ ಸೆಟ್‌ಗಳಲ್ಲಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಮಲೆಯಾಳಂ ಸಿನಿಮಾ ನಾಗಮ್ಮದ ಮೂಹೂರ್ತ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾಗಿದ್ದಾಗಿ ಅವರು ಹೇಳಿಕೊಂಡಿದ್ದು, ಈ ಸಿನಿಮಾವನ್ನು ಪಿ ಬಿನು ವರ್ಗೀಸ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಫರ್ಮಾನ್ ಖಾನ್ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದರೆ ಮೊನಾಲಿಸಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ಇದನ್ನೂ ಓದಿ: ಪರೀಕ್ಷೆ ಮುಗ್ದು ರಜೆ ಸಿಕ್ತು ಅಂತ ಮೊಮ್ಮಗಳ ಮನೆಗೆ ಕರೆ ತರುತ್ತಿದ್ದಾಗ ಅಪಘಾತ: ಅಜ್ಜ ಮೊಮ್ಮಗಳು ಸಾವು
ಪೊಲೀಸ್ ಅಧಿಕಾರಿಗಳ ಪ್ರಕಾರ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ತಾವು ತಾವು ನಟಿಸುತ್ತಿರುವ ಸಿನಿಮಾ ತಂಡದ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತನ್ನ ಕುಟುಂಬದವರ ವಿರೋಧದ ನಡುವೆಯೂ ತಾನು ಫರ್ಮಾನ್ ಖಾನ್‌ನನ್ನು ಮದುವೆಯಾಗುತ್ತಿರುವುದಾಗಿ ಹಾಗೂ ಆತನ ಜತೆಯೇ ವಾಸ ಮಾಡಲು ಬಯಸಿರುವುದಾಗಿ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ತಾನು ಈಗ ಮೇಜರ್(ಪ್ರಬುದ್ಧ ವಯಸ್ಕಳು) ಆಗಿದ್ದು, ನನ್ನಿಷ್ಟದ ಅಯ್ಕೆಯಂತೆ ಬದುಕುತ್ತೇನೆ. ತಾನು ಯಾವುದೇ ಕಾರಣಕ್ಕೂ ತನ್ನ ತಂದೆಯ ಜೊತೆ ಹೋಗುವುದಿಲ್ಲ, ತಾನು ತನ್ನ ಗೆಳೆಯನನ್ನೇ ಮದುವೆಯಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಕೌಟುಂಬಿಕ ಕಲಹ, ಇಬ್ಬರು ಮಕ್ಕಳ ಸಮೇತ ಕೆರೆಗೆ ಹಾರಿದ ಅಮ್ಮ
ಇವರ ಈ ಮದುವೆಗೆ ವಿ ಸಿವನ್‌ಕುಟ್ಟಿ, ಎಂವಿ ಗೋವಿಂದನ್ ಹಾಗೂ ಎಎ ರಹೀಮ್ ಸೇರಿದಂತೆ ಕೇರಳದ ಹಲವು ರಾಜಕಾರಣಿಗಳು ಭಾಗವಹಿಸಿದ್ದರು. ಸ್ಥಳದಲ್ಲಿ ಮಾತನಾಡಿದ ರಹೀಮ್, ಈ ವಿವಾಹವು ಕೇರಳದ ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ವಿಭಿನ್ನ ಧರ್ಮಗಳ ವ್ಯಕ್ತಿಗಳು ಮದುವೆಯಾಗಲು ಅವಕಾಶ ನೀಡುವ ಸಾಂವಿಧಾನಿಕ ಹಕ್ಕುಗಳನ್ನು ಸೂಚಿಸುತ್ತದೆ ಎಂದು ಹೇಳಿದರು. ಸಂವಿಧಾನವು ವಿವಿಧ ಧರ್ಮಗಳ ಜನರು ಪರಸ್ಪರ ಮದುವೆಯಾಗಲು ಅವಕಾಶ ನೀಡುತ್ತದೆ. ನಾವು ದಂಪತಿಗಳ ಈ ಸಂಭ್ರಮದಲ್ಲಿ ಸೇರಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.
2025 ರ ಉತ್ತರ ಪ್ರದೇಶದಲ್ಲಿ ನಡೆದ ಮಹಾಕುಂಭಮೇಳದಲ್ಲಿ ಮೊನಾಲಿಸಾ ಮೊದಲು ಗಮನ ಸೆಳೆದಿದ್ದರು. ಅಲ್ಲಿ ಅವರು ರುದ್ರಾಕ್ಷ ಮಾಲೆಗಳನ್ನು ಮಾರಾಟ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮಾಡಿದ ಈಕೆಯ ವೀಡಿಯೋದಿಂದ ಈಕೆ ದೇಶಾದ್ಯಂತ ಭಾರಿ ಫೇಮಸ್ ಆಗಿದ್ದು, ಆಕೆಗೆ ಸಿನಿಮಾಗಳಲ್ಲೂ ನಟನೆಗೆ ಅವಕಾಸ ಸಿಕ್ಕಿತ್ತು. ಜನ ನೀಡಿದ ಪ್ರಚಾರವೇ ಈಕೆಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.