ಉದ್ಯೋಗಸ್ಥ ಸುಶಿಕ್ಷಿತ ಮಹಿಳೆಯರೇ ತಮ್ಮ ಪತ್ನಿಯಾಗಲಿ ಎಂದು ಅನೇಕರು ಬಯಸುತ್ತಾರೆ. ಆದರೆ ಈ ಮಧ್ಯೆ ಆರ್ಥಿಕ ತಜ್ಞರೊಬ್ಬರ ಕಾಮೆಂಟ್ ಇದಕ್ಕೆ ತದ್ವಿರುದ್ಧವಾಗಿದ್ದು, ಅವರ ನಿಲುವಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಮದುವೆ ಚಿಂತನೆ ಬದಲಾಗಿದೆ, ಮದುವೆಯಾಗುವ ಯುವಕ ಯುವತಿಯರ ನಿರೀಕ್ಷೆಗಳೂ ಬದಲಾಗಿವೆ. ಸಾಮಾನ್ಯವಾಗಿ ಮದುವೆಗೆ ಹುಡುಗಿ ಹುಡುಕುವ ಹುಡುಗರು ಮೊದಲೆಲ್ಲಾ ಮನೆಯಲ್ಲಿರುವ ಅಷ್ಟೇನೂ ಓದದ ಹೆಣ್ಣನ್ನು ಮದುವೆಯಾಗಲು ಬಯಸುತ್ತಿದ್ದರು. ಮತ್ತೆ ಕೆಲವು ಯುವಕರು ತುಂಬಾ ಓದಿದ್ದ ಹುಡುಗಿಯರನ್ನು ಮದುವೆಯಾಗಲು ಬಯಸಿದ್ದರೂ, ಮದುವೆ ನಂತರ ಕೆಲಸ ಮಾಡುವ ಹಾಗಿಲ್ಲ, ಮಕ್ಕಳ ಪಾಲನೆ ಲಾಲನೆ ಮಾಡುತ್ತಾ ಮನೆಯಲ್ಲೇ ಇರಬೇಕು ಎಂದು ನಿರ್ಬಂಧಿಸುತ್ತಿದ್ದರು. ಹೀಗಾಗಿ ಹುಡುಗಿಯರು ಬಹಳ ಸುಶಿಕ್ಷಿತರಾಗಿ ಒಳ್ಳೆ ಉದ್ಯೋಗದಲ್ಲಿದ್ದರೂ, ಮದುವೆಯ ನಂತರ ಕೆಲಸ ತೊರೆಯುತ್ತಿದ್ದರು. ಆದರೆ ಈಗ ಹೆಣ್ಣು ಮಕ್ಕಳ ಯೋಚನೆ ಲಹರಿ ಬದಲಾಗಿದೆ. ಮದುವೆಗಿಂತ ಹೆಣ್ಣು ಮಕ್ಕಳು ವೃತ್ತಿ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಮದುವೆಯಾಗಿ ತಮ್ಮೆಲ್ಲಾ ಆಸೆ ಅಶೋತ್ತರಗಳನ್ನು ತೊರೆದು ಮನೆಯಲ್ಲಿರುವುದಕ್ಕೆ ಬಹುತೇಕ ಹೆಣ್ಣು ಮಕ್ಕಳು ಒಪ್ಪುತ್ತಿಲ್ಲ, ಇದಕ್ಕೆ ತಕ್ಕಂತೆ ಈಗ ಯುವಕರ ಚಿಂತನೆಯೂ ಬದಲಾಗಿದೆ. ಉದ್ಯೋಗಸ್ಥ ಸುಶಿಕ್ಷಿತ ಮಹಿಳೆಯರೇ ತಮ್ಮ ಪತ್ನಿಯಾಗಲಿ ಎಂದು ಬಯಸುತ್ತಾರೆ. ಆದರೆ ಈ ಮಧ್ಯೆ ಆರ್ಥಿಕ ತಜ್ಞರೊಬ್ಬರ ಕಾಮೆಂಟ್ ಇದಕ್ಕೆ ತದ್ವಿರುದ್ಧವಾಗಿದ್ದು, ಅವರ ನಿಲುವಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.
ಹಾಗಿದ್ದರೆ ಮದುವೆ ಬಗ್ಗೆ ಆರ್ಥಿಕ ತಜ್ಞ ಹೇಳಿದ್ದೇನು?
ಆರ್ಥಿಕ ತಜ್ಞ ಹಾಗೂ ಷೇರು ಮಾರುಕಟ್ಟೆ ವಿಶ್ಲೇಷಕ (Share Market Analyser) ವಿಜಯ್ ಮರಾಠೆ ಎಂಬುವವರು, ಅತ್ಯುನ್ನತ ಶಿಕ್ಷಣ (Highly Qualified) ಪಡೆದ ಹಾಗೂ ಉದ್ಯೋಗಸ್ಥ ಮಹಿಳೆ ಮದುವೆಯಾಗುವುದು ನೀವು ನಿಮ್ಮ ಜೀವನದಲ್ಲಿ ತೆಗೆದುಕೊಳ್ಳುವ ಅತ್ಯಂತ ಕೆಟ್ಟ ನಿರ್ಧಾರ, ಇದೊಂದು ಸಂಬಂಧದ ವಿಚಾರದಲ್ಲಿ ದೊಡ್ಡ ರೆಡ್ ಫ್ಲ್ಯಾಗ್ (ಅಪಾಯಕಾರಿ) ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ (Social Media Post) ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಪರ ವಿರೋಧಕ್ಕೆ ಕಾರಣವಾಗಿದ್ದು, ಈ ವಿಚಾರವಾಗಿ ನೆಟ್ಟಿಗರು ದೊಡ್ಡಮಟ್ಟದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಸೂರತ್ ಮೂಲದ ಆರ್ಥಿಕ ತಜ್ಞ ವಿಜಯ್ ಮರಾಠೆ ಹೀಗೆ ಪೋಸ್ಟ್ ಮಾಡುವ ಮೂಲಕ ಸಖತ್ ಟ್ರೋಲ್‌ಗೆ ಒಳಗಾಗಿದ್ದಾರೆ. ಇವರ ಟ್ವಿಟ್ ಕೆಲವೇ ಕ್ಷಣಗಳಲ್ಲಿ 4 ಲಕ್ಷ ಜನರನ್ನು ತಲುಪಿದ್ದು, ಅನೇಕರು ಸುಶಿಕ್ಷಿತರೋರ್ವರ ಈ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಲಿಂಗಬೇಧದಿಂದ (Sexually Biased) ಕೂಡಿದ ಕಾಮೆಂಟ್ (Comment) ಎಂದು ಮರಾಠೆ ಟ್ವಿಟ್ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲಿಂಗ ಸಮಾನತೆ ಎಷ್ಟು ಅಗತ್ಯ ಹಾಗೂ ಯಾವುದೇ ತಾರತಮ್ಯಕ್ಕೆ ಒಳಗಾಗದೇ ತಮ್ಮ ವೃತ್ತಿ (Career) ಹಾಗೂ ಶಿಕ್ಷಣವನ್ನು (Education) ಮುಂದುವರಿಸುವ ಹಕ್ಕನ್ನು ಮಹಿಳೆಯರು ಹೊಂದಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಸುಖ ದಾಂಪತ್ಯ ಜೀವನಕ್ಕೆ ಮೂಲ ನಿಯಮಗಳಿವು, ತಪ್ಪಿದ್ರೆ ಜಗಳ ಗ್ಯಾರಂಟಿ!
ನೀವು ಈ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ, ಏಕೆಂದರೆ ಯಾವೋಬ್ಬ ಹೈಲೀ ಎಜುಕೇಟೆಡ್ ಮಹಿಳೆ ನಿಮ್ಮನ್ನು 2ನೇ ಮದುವೆಯಾಗುವುದಕ್ಕೂ ಬಯಸುವುದಿಲ್ಲ ಎಂದು ವಿಜಯ್ ಮರಾಠೆಗೆ ತಿರುಗೇಟು ನೀಡಿದ್ದಾರೆ.
ಮತ್ತೆ ಕೆಲವರು ಇದು ನಿಜವಾದ ಅಭಿಪ್ರಾಯವಲ್ಲ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನನ್ನ ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಆರ್ಥಿಕ ಸ್ವಾತಂತ್ರ (Economic Independence) ಹೊಂದಿದ್ದಾಳೆ. ನಾವು ಪರಸ್ಪರ ಸಮಾನ ಗೌರವವನ್ನು ಹೊಂದಿದ್ದೇವೆ. ನೀವು ಮದುವೆಯಾಗುವ ಮೊದಲು ಮುಖ್ಯವಾಗಿ ವ್ಯಕ್ತಿಯ ಗುಣ ಹಾಗೂ ಮಾನಸಿಕ ಆರೋಗ್ಯವನ್ನು ಗಮನಿಸಬೇಕು ಎಂದು ಮಿಚೆಲ್ ರೂಪಂ ಎಂಬುವವರು ಕಾಮೆಂಟ್ ಮಾಡಿದ್ದಾರೆ.
ನೀವೊಬ್ಬ ಅಭದ್ರತೆ ಕಾಡುವ ದುರ್ಬಲ ವ್ಯಕ್ತಿ ಎಂಬ ವಿಚಾರ ನೀವು ಹೇಳಿಕೊಳ್ಳದೆಯೇ ಈ ನಿಮ್ಮ ಟ್ವಿಟ್‌ನಿಂದ ಗೊತ್ತಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಆರ್ಥಿಕ ತಜ್ಞನ ಈ ನಿಲುವನ್ನು ಅನೇಕ ಪುರುಷರು ಒಪ್ಪಿಕೊಂಡಿದ್ದಾರೆ. ಶಿಕ್ಷಣವೂ ವ್ಯಕ್ತಿಯನ್ನು ಸ್ವಾರ್ಥಿ, ದುರಾಸೆಯುಳ್ಳವ ಹಾಗೂ ತ್ಯಾಗ ಮಾಡಲು ಸಿದ್ಧವಿಲ್ಲದ ವ್ಯಕ್ತಿಯನ್ನಾಗಿ ಮಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಪತಿಯಿಂದ ದುಬಾರಿ ಗಿಫ್ಟ್, ದುಡ್ಡು ಬಂದಿದ್ದೆಲ್ಲಿಂದವೆಂದು ಗೊತ್ತಾದ ಕೂಡ್ಲೇ ರಣಾಂಗಣವಾಯ್ತು ಮನೆ!
ಒಟ್ಟಿನಲ್ಲಿ ಇಂದು ಮಹಿಳೆಯರು ಕೇವಲ ಸುಶಿಕ್ಷಿತರಲ್ಲದೇ ಆರ್ಥಿಕವಾಗಿ ಸ್ವಾತಂತ್ರರಾಗಿದ್ದು ಇಡೀ ಕುಟುಂಬವನ್ನು ತಮ್ಮ ದುಡಿಮೆಯಿಂದಲೇ ಮುನ್ನಡೆಸುತ್ತಿದ್ದಾರೆ. ಗಂಡ ಮಕ್ಕಳ ಸೇವೆ ಮಾಡುತ್ತಾ ಅವರ ಕೊಂಕು ಮಾತುಗಳನ್ನೆಲ್ಲಾ ಸಹಿಸಿಕೊಂಡು ಮನೆಯಲ್ಲಿ ಕೂರುವುದಕ್ಕೆ ಇಷ್ಟಪಡುವುದಿಲ್ಲ. ಈ ಬದಲಾವಣೆ, ಇದು ತಾನು ಪುರುಷ ತನ್ನ ದುಡಿಮೆಯಿಂದ ಮಾತ್ರ ತನ್ನ ಕುಟುಂಬದ ಜೀವನ ಸಾಗುತ್ತಿದೆ. ಆಕೆ ನನ್ನ ಹೆಂಡತಿ ಆಕೆ ನಾ ಹೇಳಿದಂತೆ ಕೇಳುತ್ತಾ ಮನೆಯಲ್ಲಿ ಬಿದ್ದಿರಬೇಕು ಎಂಬ ಅಹಂನಿಂದ ಮೆರೆಯುವ ಕೆಲ (ಎಲ್ಲರಲ್ಲ) ಗಂಡಸರ ಅಹಂಗೆ ಪೆಟ್ಟು ನೀಡುತ್ತಿದೆ ಅಂದರೆ ತಪ್ಪಾಗಲಾರದು ಏನಂತೀರಾ?
Marrying highly educated working women will be one of the worst decision u will ever make in your life.
Big red flag