ಪ್ರೀತಿ ಮಾಡೊಲ್ಲ ಎಂದ ಭಾವಿ ಶಿಕ್ಷಕಿಯನ್ನೇ ಕಿಡ್ನಾಪ್ ಮಾಡಿದ ರೋಡ್ ರೋಮಿಯೋ!

By Sathish Kumar KH  |  First Published Mar 10, 2024, 4:36 PM IST

ನಾನು ನಿನ್ನ ಪ್ರೀತಿ ಮಾಡೊಲ್ಲ, ನನ್ನ ಹಿಂದೆ ಬರಬೇಡವೆಂದು ಹೇಳಿದ ಭಾವಿ ಶಿಕ್ಷಕಿಯನ್ನೇ ರೋಡ್ ರೋಮಿಯೋ ಕಿಡ್ನಾಪ್ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.


ಹಾವೇರಿ (ಮಾ.10): ಪ್ರತಿನಿತ್ಯ ಕಾಲೇಜಿಗೆ ಹೋಗುವಾಗ ರಸ್ತೆ ಹಾಗೂ ಇತರೆಡೆ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಿದ್ದ ಯುವಕನಿಗೆ ನಾನು ಓದಬೇಕು, ನಿನ್ನನ್ನು ಪ್ರೀತಿ ಮಾಡುವುದಿಲ್ಲ ಎಂದು ಹೇಳಿದ ಬಿ.ಇಡಿ ಓದುತ್ತಿರುವ ಯುವತಿಯನ್ನು ಕಿಡ್ನಾಪ್ ಮಾಡಿದ ಘಟನೆ ಹಾವೇರಿ ನಗರದ ಹಳೆಯ ಪೋಸ್ಟ್ ಆಫೀಸ್ ಬಳಿ ನಡೆದಿದೆ.

ಕಾಲೇಜಿಗೆ ಹೋಗುವ ಹುಡುಗಿಯರ ಹಿಂದೆ ಪ್ರೀತಿ- ಪ್ರೇಮ ಎಂದು ಸುತ್ತಾಡುವ ಹುಡುಗರಿಗಂತೂ ಕಡಿಮೆಯಿಲ್ಲ. ಈಗಿನ ಸಿನಿಮಾ, ಧಾರಾವಾಹಿ ಹಾಗೂ ಸಾಮಾಜಿಕ ಜಾಲತಾಣದಲ್ಲಿನ ಕೆಲವು ವಿಡಿಯೋಗಳನ್ನು ನೋಡಿ ಪ್ರೇರಿತವಾಗಿ ತಾವೂ ಕೂಡ ಅದೇ ರೀತಿ ಪ್ರೀತಿ ಮಾಡಬೇಕು ಎಂದು ಹುಚ್ಚು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಹಾವೇರಿಯ ವಿಷ್ಣು ತಗಡಿನಮನಿ ಎಂಬ ಯುವಕ ಕೂಡ ಬಿ.ಇಡಿ ಓದುತ್ತಿರುವ ಯುವತಿಗೆ ದಿನಂಪ್ರತಿ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸಿದ್ದಾನೆ.

Tap to resize

Latest Videos

undefined

ರಾಜ್ಯದ ಮಸೀದಿಗಳು, ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗ್ತಾನೆ: ಶರಣ್ ಪಂಪ್‌ವೆಲ್

ರೋಡ್ ರೋಮಿಯೋನಂತೆ ಕಾಲೇಜಿಗೆ ಹೋಗುವಾಗ ಹಿಂದಿಂದೆ ಅಲೆಯುತ್ತಿದ್ದ ವಿಷ್ಣುವಿನ ಪ್ರೀತಿಯನ್ನು ನಿರಾಕರಿಸಿದ ಯುವತಿ, ನಾನು ಓದಬೇಕು ನನ್ನ ಪಾಡಿಗೆ ನಾನಿರಲು ಬಿಟ್ಟುಬಿಡು ಎಂದು ಹೇಳಿದ್ದಾಳೆ. ಆದರೂ, ಈತ ತನ್ನ ಹಳೆಯ ಚಾಳಿಯನ್ನು ಬಿಡದೇ ಯುವತಿಯ ಹಿಂದೆ ಬಿದ್ದಿದ್ದಾನೆ. ಮತ್ತೊಮ್ಮೆ ಯುವತಿ ತನ್ನ ಹಿಂದೆ ಬರಬೇಡ ಎಂದು ಯುವಕನಿಗೆ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಇದರಿಂದ ತನ್ನ ಪ್ರೀತಿ ಫಲಿಸಲಿಲ್ಲವೆಂದು ಕುಪಿತಗೊಂಡ ಯುವಕ ವಿಷ್ಣು, ತಾನು ಬಲವಂತವಾಗಿಯಾದರೂ ಪ್ರೀತಿ ಪಡೆಯಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ.

ನಂತರ, ಸ್ನೇಹಿತರ ಕಾರನ್ನು ಪಡೆದು ಅದರಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿ ಒಪ್ಪಿಸಿ ಮದುವೆಯಾಗೋಣ ಎಂದು ಯೋಜನೆ ರೂಪಿಸಿದ್ದಾನೆ. ತನ್ನ ಯೋಜನೆಯಂತೆ ಯುವತಿ ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ನಡೆದುಕೊಂಡು ಹೋಗುವ ಸಮಯದಲ್ಲಿ ರಸ್ತೆಯ ಬದಿ ಕಾರನ್ನು ನಿಲ್ಲಿಸಿದ್ದು, ಯುವತಿ ಕಾರಿನ ಪಕ್ಕದಲ್ಲಿ ಹಾದು ಹೋಗುವಾಗ ಬಲವಂತವಾಗಿ ಬಾಯಿ ಮುಚ್ಚಿ ಕಾರಿನೊಳಗೆ ಎಳೆದುಕೊಂಡು ಅಲ್ಲಿಂದ ಕಾರನ್ನು ತೆಗೆದುಕೊಂಡು ವೇಗವಾಗಿ ಹೋಗಿದ್ದಾರೆ. ಆಗ ಯುವತಿ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ಆಗ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನ್ನ ಬೆನ್ನುಬಿದ್ದಿದ್ದಾರೆ ಎಂಬ ವಿಷಯ ತಿಳಿದ ಆರೋಪಿ ವಿಷ್ಣು ಯುವತಿಯನ್ನು ಮೋಟೇಬೆನ್ನೂರು ಬಳಿ ಬಿಟ್ಟು ಪರಾರಿ ಆಗಿದ್ದಾನೆ.

ಮಂಡ್ಯದ ಗಂಡು ಅಂಬರೀಶ್ ಕಾಂಗ್ರೆಸ್ಸಿಗರಾಗಿಯೇ ಪ್ರಾಣ ಬಿಟ್ಟಿದ್ದಾರೆ; ಡಿಸಿಎಂ ಡಿ.ಕೆ. ಶಿವಕುಮಾರ್!

ಹಾವೇರಿ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಹಾಗೂ ಸಿಬ್ಬಂದಿ ಯುವತಿಯ ಫೋನ್ ನಂಬರ್ ಟ್ರ್ಯಾಕ್ ಮಾಡಿ ಪತ್ತೆ ಹಚ್ಚಿ ವಾಪಸ್ ಹಾವೇರಿಗೆ ಕರೆತಂದಿದ್ದಾರೆ. ಬಳಿಕ ಯುವತಿ ತಾಯಿಯನ್ನು ಅಪ್ಪಿ ಗೋಳಾಡಿದ್ದಾಳೆ. ಮಗಳ ಜೊತೆ ಪಾಲಕರು ಕೂಡ ನಮಗೆ ರಕ್ಷಣೆ ಇಲ್ಲವೇ ಎಂದು ಕಣ್ಣೀರು ಹಾಕಿದ್ದಾರೆ. ನಂತರ ಯುವತಿಯ ಪಾಲಕರು ಮಗಳನ್ನು ಕಿಡ್ನಾಪ್ ಮಾಡಿದ ಯುವಕನ ಮೇಲೆ ಕೇಸ್ ದಾಖಲು ಮಾಡಿದ್ದಾರೆ. 

click me!