ಸೆಕ್ಸ್ ಡ್ರೀಮ್‌ಗಳು ಬಹುತೇಕ ಎಲ್ಲರಿಗೂ ಒಂದಿಲ್ಲೊಂದು ಬಾರಿ ಅನುಭವಕ್ಕೆ ಬರುತ್ತವೆ. ಆದರೆ, ಸಲಿಂಗಿಯೊಡನೆ ಸೆಕ್ಸ್ ಮಾಡುವಂತೆ, ಪಬ್ಲಿಕ್‌ನಲ್ಲಿ ಲೈಂಗಿಕ ಚಟುವಟಿಕೆ ನಡೆಸಿದಂತೆ ಮುಂತಾದ ಕನಸುಗಳು ಮನಸ್ಸನ್ನು ಕೊರೆಯಲಾರಂಭಿಸುತ್ತವೆ. ನಮ್ಮದೇ ಸೆಕ್ಷುಯಾಲಿಟಿ, ನೈತಿಕತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಇಂಥ ಕನಸುಗಳ ಅರ್ಥವೇನು?
ಸೆಕ್ಸ್ ಡ್ರೀಮ್‌ಗಳು ಅಸಾಮಾನ್ಯ ವಿಷಯವೇನಲ್ಲ. ಎಲ್ಲ ವಯಸ್ಸಿನ, ಎಲ್ಲ ಸಂಸ್ಕೃತಿಯ ಜನರು ತಮ್ಮ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ಸೆಕ್ಸ್ ಡ್ರೀಮ್ಸ್ ಅನುಭವ ಹೊಂದುತ್ತಾರೆ. ಆದರೂ ಸಮಾಜವು ಇಂಥ ಅನುಭವಗಳನ್ನು ಅದೇನೋ ಅಪರಾಧ ಎಂಬಂತೆ ನೋಡುತ್ತದೆ. ಆದರೆ, ಸೈಕಾಲಜಿಸ್ಟ್‌ಗಳು ಮಾತ್ರ ಎಂಥದೇ ಸೆಕ್ಸ್ ಡ್ರೀಮ್ಸ್ ಬಿದ್ದರೂ ಅವು ನೈಸರ್ಗಿಕ ಹಾಗೂ ಸಾಮಾನ್ಯ ವಿಷಯ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ.
ನಮ್ಮ ದೈಹಿಕ ಕಾಮನೆಗಳ ಬಿಡುಗಡೆಗೆ ದೇಹ ಬಳಸುವ ಸುರಕ್ಷಿತ ತಂತ್ರವಿದು. ಅಧ್ಯಯನಗಳ ಪ್ರಕಾರ, ಹೆಚ್ಚು ಶಿಕ್ಷಿತರಿಗೆ ಹೆಚ್ಚು ಲೈಂಗಿಕ ಕನಸುಗಳು ಬೀಳುತ್ತವೆ. ಅಂದರೆ, ವ್ಯಕ್ತಿಯ ಮೆದುಳು ಬೆಳೆದಂತೆಲ್ಲ ಲೈಂಗಿಕ ಕನಸುಗಳು ಕೂಡಾ ಹೆಚ್ಚು ಸೃಜನಾತ್ಮಕವಾಗಿಯೂ, ವಿವರವಾಗಿಯೂ ಬೀಳುತ್ತವೆ.
undefined
ಅಚ್ಚರಿಯ ವಿಷಯವೆಂದರೆ ಈ ಸೆಕ್ಸ್ ಡ್ರೀಮ್ಸ್‌ಗಳು ಕೇವಲ ಮಾನವ ಜಾತಿಯ ಸ್ವತ್ತಲ್ಲ. ಪ್ರಾಣಿಗಳಿಗೆ ಕೂಡಾ ಉದ್ರೇಕಕಾರಿ ಕನಸುಗಳು ಬೀಳುತ್ತವೆ. ಕೆಲವೊಮ್ಮೆ ನಾಯಿ ಹಾಗೂ ಬೆಕ್ಕುಗಳಿಗೆ ಇಂಥ ಕನಸು ಬಿದ್ದು ನಿದ್ದೆಯಲ್ಲಿರುವಾಗಲೇ ಅವು ಉದ್ರೇಕ ತಲುಪಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.
ಸೆಕ್ಸ್ ಡ್ರೀಮ್‌ಗಳು ಸಂಪೂರ್ಣ ನಾರ್ಮಲ್ ಆದರೂ, ಕೆಲವೊಮ್ಮೆ ನಿದ್ದೆಯಿಂದ ಎಚ್ಚೆತ್ತ ಬಳಿಕ ಅವು ನಮ್ಮ ನೈತಿಕತೆಯನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡಬಲ್ಲವು. ಆದರೆ, ಕನಸುಗಳ ತಜ್ಞರ ಪ್ರಕಾರ, ಸೆಕ್ಸ್ ಡ್ರೀಮ್ಸ್‌ಗೂ ನಮ್ಮ ನೈತಿಕ ಪ್ರಜ್ಞೆಗೂ ಸಂಬಂಧವಿಲ್ಲ. ಹೀಗಾಗಿ, ಇವಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೆಲವೊಂದು ಸಾಮಾನ್ಯ ಸೆಕ್ಸ್ ಡ್ರೀಮ್‌ಗಳ ಅರ್ಥಗಳಿವು.
1. ಸಲಿಂಗಿಯೊಡನೆ ಲೈಂಗಿಕ ಕ್ರಿಯೆ ನಡೆಸಿದಂತೆ
ಮತ್ತೊಬ್ಬ ಯುವಕನೊಂದಿಗೆ ಅಥವಾ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕನಸು ಬಿದ್ದಿತೆಂಬ ಕಾರಣಕ್ಕೆ ಯಾರೂ ಸಲಿಂಗಕಾಮಿಗಳಾಗುವುದಿಲ್ಲ. ತಜ್ಞರ ಪ್ರಕಾರ, ಸಂಬಂಧದಲ್ಲಿ ನಮ್ಮ ವಿರುದ್ಧ ಲಿಂಗಿಯೊಡನೆ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಇಂಥ ಕನಸುಗಳು ಬೀಳುತ್ತವೆ. ಇಂಥ ಹೋಮೋಸೆಕ್ಷುಯಲ್ ಕನಸುಗಳ ಮುಖಾಂತರ ನಾವು ಸಂಬಂಧದಲ್ಲಿ ಕಾಣುವ ಸಮಸ್ಯೆಗಳ ಮಧ್ಯೆ ಸ್ವಲ್ಪ ಕಂಫರ್ಟ್ ಪಡೆಯಲು ನೋಡುತ್ತೀವಿ. ಪುರುಷನನ್ನು ಪುರುಷನಷ್ಟು ಸರಿಯಾಗಿ, ಮಹಿಳೆಯನ್ನು ಮತ್ತೊಬ್ಬ ಮಹಿಳೆಯಷ್ಟು ಸರಿಯಾಗಿ ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದೂ ಕೂಡಾ ನಮ್ಮ ಭಾವನೆಗಳನ್ನು ಪಾರ್ಟನರ್ ಅರ್ಥ ಮಾಡಿಕೊಳ್ಳುತ್ತಿಲ್ಲವೆಂದಾಗ ಇಂಥ ಕನಸುಗಳು ಬೀಳಲು ಕಾರಣ.
2. ಅನಾಕರ್ಷಕ ವ್ಯಕ್ತಿಯೊಡನೆ ಸೆಕ್ಸ್
ಇದು ಸಣ್ಣ ವಯಸ್ಸಿನ ಯುವಜನತೆಯಲ್ಲಿ ಸಾಮಾನ್ಯ. ಇಂಥ ಕನಸುಗಳು ನಮ್ಮ ಲೈಫ್ ಪಾರ್ಟ್ನರ್ ಆಗುವವರಲ್ಲಿ ನಾವು ಸೌಂದರ್ಯದ ಹೊರತಾಗಿ ನೋಡಬೇಕಾದ ಇತರೆ ಗುಣಗಳ ಬಗ್ಗೆ ಅರಿಯುವಂತೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಅನಾಕರ್ಷಕ ವ್ಯಕ್ತಿಯೊಡನೆ ಬದುಕಲು ನಮಗೆ ಸಾಧ್ಯವಾಗುವುದೇ ಎಂಬುದನ್ನು ತಿಳಿದುಕೊಳ್ಳಲೂ ಇದು ಸಹಾಯಕ.
3. ನಮ್ಮ ಸಂಗಾತಿಯ ಹೊರತಾಗಿ ಬೇರೊಬ್ಬರೊಂದಿಗೆ ಸೆಕ್ಸ್ ನಡೆಸುವುದು
ಸಂಬಂಧದಲ್ಲಿರುವವರಲ್ಲಿ ಇಂಥ ವಂಚನೆಯ ಕನಸುಗಳು ಸಾಮಾನ್ಯ. ಯಾರಿಗಾದರೂ ಸಂಗಾತಿಯಲ್ಲದೆ ಮತ್ತೊಬ್ಬರೊಂದಿಗೆ ಕನಸಿನಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಕಂಡುಬಂದರೆ ಅದರರ್ಥ ನಿಜ ಜೀವನದಲ್ಲೂ ಹಾಗೆ ಮಾಡುತ್ತಾರೆಂದಲ್ಲ. ತಜ್ಞರ ಪ್ರಕಾರ ಇಂಥ ವಂಚಿಸೋ ಕನಸುಗಳು ಸಂಬಂಧಗಳಿಗೆ ಒಳಿತೇ ಮಾಡುತ್ತವೆ. ತಮ್ಮ ಪ್ರೀತಿಪಾತ್ರರಿಗೆ ವಂಚಿಸಿ ಅವರನ್ನು ಕಳೆದುಕೊಂಡರೆ ಬದುಕು ಅದೆಷ್ಟು ನೋವುಭರಿತವಾಗಿರುತ್ತದೆ ಎಂಬುದನ್ನು ನಿಜವಾಗಿ ತಪ್ಪು ಮಾಡದೆಯೇ ಈ ಕನಸುಗಳು ತಿಳಿಸಿಕೊಡುತ್ತವೆ. ಮೋಸ ಮಾಡುವುದರ ಫಲಿತಾಂಶದ ಅರಿವಿದ್ದರೆ, ನಾವು ಹೆಚ್ಚು ಪ್ರಾಮಾಣಿಕವಾಗಿರಬಲ್ಲೆವು ಎನ್ನುತ್ತವೆ ಅಧ್ಯಯನಗಳು.
4. ಕುಟುಂಬ ಸದಸ್ಯರೊಬ್ಬರೊಡನೆ ಲೈಂಗಿಕ ಕ್ರಿಯೆ
ಕುಟುಂಬ ಸದಸ್ಯರಲ್ಲಿ ಯಾರೊಬ್ಬನೊಡನೆಯಾದರೂ ಲೈಂಗಿಕ ಕ್ರಿಯೆ ನಡೆಸುತ್ತಿರುವಂತೆ ಕನಸು ಬಿದ್ದರೆ ಮನಸ್ಸಿಗೆ ಸಿಕ್ಕಾಪಟ್ಟೆ ಕಸಿವಿಸಿಯಾಗುತ್ತದೆ. ಆದರೆ, ಇದಕ್ಕಾಗಿ ಹೆದರುವ ಅಗತ್ಯವಿಲ್ಲ. ಹೋಮೋಸೆಕ್ಷುಯಲ್ ಕನಸುಗಳಂತೆ ಇವು ಕೂಡಾ ಸಂಬಂಧಗಳಲ್ಲಿ ಸಮಸ್ಯೆಯಿದ್ದಾಗ ಬೀಳುವುದು ಸಾಮಾನ್ಯ. ಕುಟುಂಬದವರೊಡನೆ ಇಂಥ ಚಟುವಟಿಕೆಯ ಕನಸುಗಳು ನಮಗೆ ಕಂಫರ್ಟ್ ಹಾಗೂ ನಮ್ಮನ್ನು ಒಪ್ಪಿಕೊಳ್ಳುವವರ ಅಗತ್ಯವಿದೆ, ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ನಾವು ಹೆಚ್ಚು ಪ್ರಯತ್ನ ಹಾಕಬೇಕು ಎಂಬುದನ್ನು ಸೂಚಿಸುತ್ತವೆ.
5. ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್
ಅದೆಷ್ಟೋ ಬಾರಿ ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡುತ್ತಿರುವಂತೆ, ಎಲ್ಲರೂ ತಮ್ಮತ್ತ ನೋಡುತ್ತಿರುವಂತೆ ಕನಸು ಬೀಳಬಹುದು. ಇದು ಹೆಚ್ಚು ನಾಚಿಕೆ ಸ್ವಭಾವದವರಲ್ಲಿ ಸಾಮಾನ್ಯ. ಹೊರಗೆ ವ್ಯವಹರಿಸಲು ಹೆದರುವವರು, ನಾಚುವವರು, ಮಾತಾಡಲು ಭಯ ಬೀಳುವವರಲ್ಲಿ ಆ ಭಾವನೆಯನ್ನು ಸರಿದೂಗಿಸುವಂತೆ ಇಂಥ ಕನಸುಗಳು ಬೀಳುತ್ತವೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು.