ಆನ್‌ಲೈನ್‌ನಲ್ಲಿ ಭೇಟಿಯಾದ ಹುಡುಗಿ ಜೊತೆ ಯುವಕನ ವಿವಾಹ, 12 ದಿನದ ಮೇಲೆ ಗೊತ್ತಾಯ್ತು ಆಕೆ ಅವಳಲ್ಲ ಅವನು!

By Vinutha Perla  |  First Published May 28, 2024, 10:47 AM IST

ಮದ್ವೆ ಅಂದ್ಮೇಲೆ ಏನೇನೋ ಸುಳ್ಳು ಹೇಳಿ ಮೋಸ ಮಾಡೋ ಘಟನೆಗಳು ಆಗಿಂದಾಗೆ ನಡೀತಾನೆ ಇರುತ್ತೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಹುಡುಗಿ ಹುಡುಕಿ ಮದ್ವೆಯಾಗಿ ಮೋಸ ಹೋಗಿದ್ದಾನೆ.


ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಮದುವೆಯಾಗಿ 12 ದಿನಗಳ ನಂತರ ತಾನು ಮದುವೆಯಾಗಿದ್ದು ಹುಡುಗಿಯನ್ನಲ್ಲ, ಹುಡುಗ ಎಂಬುದನ್ನು ತಿಳಿದುಕೊಂಡಿದ್ದಾನೆ. ವ್ಯಕ್ತಿ ತನ್ನ ಪತ್ನಿ ಮಹಿಳೆಯಲ್ಲ ಬದಲಿಗೆ ಪುರುಷ ಎಂಬುದನ್ನು ತಿಳಿದುಕೊಂಡು ಆಘಾತಕ್ಕೊಳಗಾದನು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, 26 ವರ್ಷದ ಪತಿ ತನ್ನ ಪತ್ನಿ ಅದಿಂಡಾ ಕನ್ಜಾ ಅವರ ಬಗ್ಗೆ ವಿವಾಹದ ಹನ್ನೆರಡು ದಿನಗಳ ನಂತರ ಮಹಿಳೆಯಲ್ಲ ಎಂಬುದನ್ನು ತಿಳಿದುಕೊಂಡನು.

ಎಕೆ, 2023ರಲ್ಲಿ ಅದಿಂಡಾ ಕನ್ಚಾರನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಭೇಟಿಯಾದನು. ಇಬ್ಬರೂ ಇಲ್ಲಿ ಪರಸ್ಪರ ಮಾತನಾಡಲು ಆರಂಭಿಸಿ ಆತ್ಮೀಯರಾದ ನಂತರ ಭೇಟಿಯಾಗಲು ನಿರ್ಧರಿಸಿದರು. ಆದರೆ ಅದಿಂಡಾ ಭೇಟಿಯಾದಾಗಲ್ಲೆಲ್ಲಾ ಸಂಪೂರ್ಣ ಮುಖವನ್ನು ಮುಚ್ಚುವ ಸಾಂಪ್ರದಾಯಿಕ ಮುಸ್ಲಿಂ ಉಡುಗೆಯನ್ನು ಧರಿಸುತ್ತಿದ್ದಳು. ಆದರೆ ಇದರಿಂದ ಎಕೆಗೆ ಯಾವುದೇ ರೀತಿಯ ಅನುಮಾನ ಬರಲ್ಲಿಲ್ಲ. ಬದಲಿಗೆ ಇದು ಇಸ್ಲಾಂ ಧರ್ಮದ ಮೇಲಿನ ಅವಳ ಪ್ರೀತಿಯ ಸಂಕೇತವೆಂದು ಪರಿಗಣಿಸಿದ್ದಾಗೆ ಎಕೆ ಹೇಳಿದ್ದಾನೆ.

Tap to resize

Latest Videos

undefined

ರೀಲ್ಸ್‌ ಮಾಡೋದ ತಡೆದಿದ್ದೇ ತಪ್ಪಾಯ್ತು, ಬೆಂಗಳೂರಲ್ಲಿದ್ದ ಗಂಡನ ಮೇಲೆ ಹೀಗೆ ರಿವೇಂಜ್ ತಗೊಳ್ಳದಾ?

ಕೊನೆಗೆ ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು. ಮದುವೆಗೆ ಹಾಜರಾಗಲು ತನಗೆ ಯಾವುದೇ ಕುಟುಂಬವಿಲ್ಲ ಎಂದು ಅದಿಂಡಾ ಎಕೆಗೆ ತಿಳಿಸಿದಳು. ಆದ್ದರಿಂದ ದಂಪತಿಗಳು ಏಪ್ರಿಲ್ 12ರಂದು ಎಕೆ ಮನೆಯಲ್ಲಿ ಸಾಧಾರಣ ಸಮಾರಂಭದಲ್ಲಿ ಮದುವೆಯಾದರು. ಮದುವೆಯ ನಂತರವೂ, ಅದಿಂಡಾ ತನ್ನ ಹೊಸ ಪತಿಯಿಂದ ತನ್ನ ಮುಖವನ್ನು ನಿರಂತರವಾಗಿ ಮರೆಮಾಚುತ್ತಿದ್ದಳು. ಅವನ ಹಳ್ಳಿಯಲ್ಲಿ ಅವನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯಲು ನಿರಾಕರಿಸಿದಳು. 

ಇದಲ್ಲದೆ, ಅದಿಂಡಾ ಮದುವೆಯನ್ನು ಪೂರ್ಣಗೊಳಿಸಲು ನಿರಾಕರಿಸಿದಳು. ಎಕೆಯೊಂದಿಗೆ ಲೈಂಗಿಕ ಸಂಬಂಧವನ್ನು ತಪ್ಪಿಸಲು ನೆಪವನ್ನು ಹುಡುಕುತ್ತಿದ್ದಳು. ಋತುಚಕ್ರದಿಂದ ಅನಾರೋಗ್ಯದ ಕಾರಣವನ್ನು ಹೇಳುತ್ತಿದ್ದಳು.

ಮಕ್ಕಳ ಬೆಳೆಸುವಾಗ ಗಂಡ-ಹೆಂಡತಿ ನಿಲುವು ಒಂದೇ ಆಗಿರಬೇಕು, ಇಲ್ಲದಿದ್ದರೆ ಮಕ್ಕಳೇನಾಗುತ್ತಾರೆ?

ಹನ್ನೆರಡು ದಿನಗಳ ಅನುಮಾನಾಸ್ಪದ ವರ್ತನೆಯ ನಂತರ, ಎಕೆ ತನ್ನ ಹೆಂಡತಿಯ ಹಿನ್ನೆಲೆ ಪರಿಶೀಲಿಸಲು ನಿರ್ಧರಿಸಿದನು. ಅದಿಂಡಾ ಪೋಷಕರು ಇನ್ನೂ ಜೀವಂತವಾಗಿದ್ದಾರೆ ಎಂದು ಕಂಡುಕೊಂಡನು. ಮಾತ್ರವಲ್ಲ ಅದಿಂಡಾ ವಾಸ್ತವವಾಗಿ 2020ರಿಂದ ಕ್ರಾಸ್ ಡ್ರೆಸ್ಸಿಂಗ್ ಮಾಡುತ್ತಿರುವ ವ್ಯಕ್ತಿ ಎಂದು ಕಂಡುಹಿಡಿದರು.

ಪೊಲೀಸ್ ತನಿಖೆಯ ಸಂದರ್ಭದಲ್ಲಿ, ಅದಿಂಡಾ ಎಕೆಯ ಕುಟುಂಬದ ಆಸ್ತಿಯನ್ನು ಕದಿಯಲು ಎಕೆಯನ್ನು ವಿವಾಹವಾದಳು ಎಂದು ಬಹಿರಂಗಪಡಿಸಿದಳು.. 'ಮದುವೆಯ ಫೋಟೋಗಳನ್ನು ನೋಡಿದರೆ, ಅದಿಂಡ ನಿಜವಾದ ಮಹಿಳೆಯಂತೆ ಕಾಣುತ್ತಾಳೆ. ಸೌಮ್ಯವಾದ ಧ್ವನಿ ಮತ್ತು ಸ್ವರವೂ ಅವನಿಗಿದೆ, ಆದ್ದರಿಂದ ಅವನು ಮಹಿಳೆ ಎಂಬ ಬಗ್ಗೆ ಯಾವುದೇ ಅನುಮಾನವಿರಲಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಕಾನೂನುಗಳ ಅಡಿಯಲ್ಲಿ, ಅದಿಂಡಾ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

click me!