ಸಣ್ಣ ಪ್ರಾಯದ ಮಕ್ಕಳದ್ದೇ ಪ್ರಾಬ್ಲಮ್. ಅವರು ಅಪ್ಪಾ ನೀನ್ಯಾಕೆ ಆಫೀಸ್‌ಗೆ ಹೋಗೋಲ್ಲ ಅಂತ ಶುರು ಮಾಡಿ, ಕೊರೋನಾ ಬಂದ್ರೆ ನಾವೆಲ್ರೂ ಸತ್ತೇ ಹೋಗ್ತೀವಾ ಅನ್ನೋ ಲೆವೆಲ್ಲಿನವರೆಗೂ ಪ್ರಶ್ನೆಗಳನ್ನು ಕೇಳ್ತಾರೆ. ಇಂಥ ಪ್ರಶ್ನೆಗಳನ್ನು ನಿಭಾಯಿಸೋದು ಸ್ವಲ್ಪ ಕಷ್ಟಾನೇ. ಆದರೆ ನೀವಿದನ್ನು ಈಗ ಹ್ಯಾಂಡಲ್ ಮಾಡ್ಲೇಬೇಕು.
ಅಪ್ಪ ಅಮ್ಮ ಮನೇಲೇ ಇದಾರೆ, ಆಫೀಸಿಗೆ ಹೋಗ್ತಿಲ್ಲ. ಅಂದ್ರೆ ಏನೋ ಆಗಿದೆ ಅಂತ ಮಕ್ಕಳು ಅರ್ಥ ಮಾಡ್ಕೊಂಡಿರ್ತಾರೆ ಇಷ್ಟು ಹೊತ್ತಿಗೆ. ಟಿವಿಯಲ್ಲಿ ಕೊರೋನಾ ಬಗ್ಗೆ ಸುದ್ದಿಗಳು, ಸಾಕಷ್ಟು ಮಾಹಿತಿ ಬರ್ತಾ ಇರುತ್ತೆ. ಇಂಟರ್‌ನೆಟ್‌ನಲ್ಲಿ ಸಾಕಷ್ಟು ಮಾಹಿತಿ ಸಿಗೋದರಿಂದ, ಸ್ವಲ್ಪ ದೊಡ್ಡ ಪ್ರಾಯದ ಮಕ್ಕಳು ಅದನ್ನು ಓದಿಕೊಂಡಿರ್ತಾರೆ. ಆದರೆ ಸಣ್ಣ ಪ್ರಾಯದ ಮಕ್ಕಳದ್ದೇ ಪ್ರಾಬ್ಲಮ್. ಅವರು ಅಪ್ಪಾ ನೀನ್ಯಾಕೆ ಆಫೀಸ್‌ಗೆ ಹೋಗೋಲ್ಲ ಅಂತ ಶುರು ಮಾಡಿ, ಕೊರೊನಾ ಬಂದ್ರೆ ನಾವೆಲ್ರೂ ಸತ್ತೇ ಹೋಗ್ತೀವಾ ಅನ್ನೋ ಲೆವೆಲ್ಲಿನವರೆಗೂ ಪ್ರಶ್ನೆಗಳನ್ನು ಕೇಳ್ತಾರೆ. ಇಂಥ ಪ್ರಶ್ನೆಗಳನ್ನು ನಿಭಾಯಿಸೋದು ಸ್ವಲ್ಪ ಕಷ್ಟಾನೇ. ಆದರೆ ನೀವಿದನ್ನು ಈಗ ಹ್ಯಾಂಡಲ್ ಮಾಡ್ಲೇಬೇಕು.
- ಕೊರೋನಾ ಹೇಗೆ ಬರುತ್ತೆ, ಯಾವುದರಿಂದ ಬರುತ್ತೆ, ಯಾವುದರಿಂದ ಬರೊಲ್ಲ ಎಂಬ ನಿಖರವಾದ ಮಾಹಿತಿಯನ್ನು ಮಕ್ಕಳಿಗೆ ಕೊಡಿ. ಅರ್ಧಂಬರ್ಧ ಕೊಟ್ಟು ಸುಮ್ಮನಾಗಬೇಡಿ.
- ಕೊರೋನಾ ಬಂದ್ರೆ ನಾವೆಲ್ಲ ಸಾಯ್ತೀವಾ ಅನ್ನುವ ಪ್ರಶ್ನೆಯನ್ನು ಮಕ್ಕಳು ಕೇಳಬಹುದು. ಯಾರೂ ಸಾಯೊಲ್ಲ ಅಂತ ಹೇಳಿ. ಆದರೆ ಅದರಿಂದ ಏನೇನು ಆರೋಗ್ಯ ಸಮಸ್ಯೆಗಳು ಆಗ್ತವೆ ಅಂತ ಬಿಡಿಸಿ ಹೇಳಿ. ಮಕ್ಕಳಿಗೂ ವೃದ್ಧರಿಗೂ ಅದು ಅಪಾಯಕರ ಎಂಬುದನ್ನು ತಿಳಿಸಿ. ಆರೋಗ್ಯ ಸಮಸ್ಯೆಗಳು ಇದ್ದವರಿಗೆ ಹಾನಿಕರ ಅಂತಲೂ ತಿಳಿಸಿ.
ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು
- ನಾನು ಸತ್ತುಹೋದರೆ ಏನು ಮಾಡ್ತೀಯ, ನಿಮ್ಮಜ್ಜಿ ಸತ್ತುಗಿತ್ತು ಹೋದರೆ ಏನು ಗತಿ, ಮುಂತಾದ ಮಾತುಕತೆಗಳಿಗೆ ಇದು ಕಾಲವಲ್ಲ. ಯಾಕೆಂದರೆ ಸುತ್ತಲೂ ಗಂಭೀರ ವಾತಾವರಣ ಆವರಿಸಿಕೊಂಡಿದೆ.
- ನಿಮ್ಮ ತಂದೆ ತಾಯಿ ಅಥವಾ ನಿಮ್ಮ ಮಕ್ಕಳ ಅಜ್ಜ- ಅಜ್ಜಿ ಮನೆಯಲ್ಲಿದ್ದರೆ ಅವರ ಬಳಿ ಮಕ್ಕಳು ಹೋಗುವಾಗ ಹುಷಾರಾಗಿರಲಿ, ಯಾಕೆಂದರೆ ಮಕ್ಕಳಲ್ಲಿ ಕೊರೊನಾ ಹೆಚ್ಚಿನ ಹಾನಿ ಮಾಡುವುದಿಲ್ಲ. ಆದರೆ ಅವರಿಂದ ವೃದ್ಧರಿಗೆ ಅದು ಬಂದರೆ, ವೃದ್ಧರಿಗೆ ತುಂಬಾ ತೊಂದರೆಯಾದೀತು, ಈ ವಿಚಾರವನ್ನೂ ಅವರಿಗೆ ತಿಳಿಸಿಹೇಳಿ. ಅವರ ಬಳಿ ಹೋಗುವಾಗ ಸ್ವಚ್ಛವಾಗಿರಿ ಎಂದೂ ಹೇಳಿ.
- ದೂರ ಯಾಕಿರಬೇಕು ಅಂತ ಮಕ್ಕಳು ಕೇಳಬಹುದು. ಅವರಿಗೆ ಸೋಶಿಯಲ್ ಡಿಸ್ಟೆನ್ಸಿಂಗ್ ಅಥವಾ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ನೀವು ವಿವರಿಸಬೇಕು. ಅದರಿಂದಲೇ ಸಾಕಷ್ಟು ರೋಗಗಳು ಕಡಿಮೆಯಾಗುತ್ತವೆ ಎಂಬುದನ್ನು ತಿಳಿಸಿಹೇಳಿದರೆ ಅದು ಅವರಿಗೆ ಜೀವನದ ಪಾಠ ಆಗುತ್ತದೆ.
- ಇನ್ನೊಬ್ಬರಿಂದ ನಮಗೆ ಕೊರೊನಾ ಬರಬಹುದು ಅಂತ ಹೇಳಿ ಹೇಳಿ ಭಯ ಮೂಡಿಸಬೇಡಿ, ಬದಲಾಗಿ, ನಾವೆಲ್ಲ ಜೊತೆಯಾಗಿ ಫೈಟ್ ಮಾಡಿ ಕೊರೊನಾವನ್ನು ದೂರ ಓಡಿಸೋಣ ಅನ್ನಿ. ಆಗ ಮಕ್ಕಳಿಗೂ ತಾವು ವಿಕ್ಟಿಮ್ ಅನ್ನುವ ಭಾವನೆಯ ಬದಲಾಗಿ ತಾನೊಬ್ಬ ಯೋಧ ಅನ್ನುವ ಭಾವನೆ ಮೂಡಿ ಖುಷಿಯಾಗುತ್ತದೆ.
ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ
- ಸ್ವಚ್ಛತೆಯ ಪಾಠವನ್ನು ಅವರೂ ಕಲಿಯಲಿ. ಹೊರಗೆ ಓಡಾಡಲು, ಗುಂಪಿನ ಮಧ್ಯೆ ಹೋಗಲು ಮಕ್ಕಳನ್ನು ಬಿಡಬೇಡಿ. ಮನೆಯ ಹೊರಗೆ ಇರುವ ಯಾವುದೇ ವಸ್ತುವನ್ನು ಮುಟ್ಟಿದರೂ, ಮರಳಿದ ಕೂಡಲೇ ಕೈ ತೊಳೆದುಕೊಳ್ಳಲು ಅಥವಾ ಸ್ಯಾನಿಟೈಸರ್ ಬಳಸಲು ಮಕ್ಕಳಿಗೆ ಹೇಳಿಕೊಡಿ. ಸಾಮಾನ್ಯವಾಗಿ ಕೈ ತೊಳೆಯಲು, ಮುಖ ತೊಳೆದುಕೊಳ್ಳಲು ಮಕ್ಕಳು ಹಠ ಮಾಡುವುದೇ ಹೆಚ್ಚು. ಅಂಥ ಮಕ್ಕಳಿಗೆ ಈಗ ಆಗಾಗ ಕೈ ತೊಳೆದುಕೊಳ್ಳುವ ಪಾಠ ಕಲಿಸಲು ಸುಸಮಯ.
- ಈಗ ಎಲ್ಲ ಇಂಡಸ್ಟ್ರಿಗಳೂ ಮುಚ್ಚಿವೆ. ಎಲ್ಲ ಉದ್ಯಮಗಳೂ ಪೆಟ್ಟು ತಿನ್ನುತ್ತಿವೆ, ಇಂಥ ಸಂದರ್ಭದಲ್ಲಿ ನಿಮಗೂ ಕೆಲವು ಒತ್ತಡಗಳಿರಬಹುದು. ನಿಮ್ಮ ಕೆಲಸ ಉಳಿಯುತ್ತೋ ಇಲ್ಲವೋ ಅನ್ನಿಸುತ್ತಾ ಇರಬಹುದು. ಇಂಥ ಆತಂಕಗಳನ್ನು ಮಕ್ಕಳು ನಿಮ್ಮಲ್ಲಿ ಬೇ ಗುರುತಿಸುತ್ತವೆ. ಆ ಬಗ್ಗೆ ಪ್ರಶ್ನೆ ಮಾಡಲೂಬಹುದು. ಆದರೆ ನಿಮ್ಮ ಆತಂಕವನ್ನು ಮಕ್ಕಳಿಗೆ ದಾಟಿಸಬೇಡಿ. ಮಕ್ಕಳು ಹಾಯಾಗಿರಲಿ.
- ದಿನದಲ್ಲಿ ಮೂರು ಹೊತ್ತೂ ಕೊರೊನಾ ಕೊರೊನಾ ಅನ್ನುತ್ತಿರಬೇಡಿ. ಅದು ನಿಮ್ಮಲ್ಲೂ ಮಕ್ಕಳಲ್ಲೂ ಸಮಾನ ಪ್ರಮಾಣದಲ್ಲಿ ಒತ್ತಡ ಸೃಷ್ಟಿ ಮಾಡುತ್ತಾ ಇರುತ್ತೆ. ಅದರ ಬದಲು ಯಾವುದಾದರೂ ಇನ್‌ಡೋರ್ ಆಟ, ಚಿತ್ರಕಲೆ, ಇಂಥದ್ದನ್ನೆಲ್ಲ ಮಾಡಿ.