Arranged Marriage: ನಿಮ್ಮ ಭಾವಿ ಪತ್ನಿಯ ಬಳಿ ಏನು ಕೇಳಬೇಕು? ಏನು ಕೇಳಬಾರದು?

Suvarna News   | Asianet News
Published : Feb 01, 2022, 05:59 PM IST
Arranged Marriage: ನಿಮ್ಮ ಭಾವಿ ಪತ್ನಿಯ ಬಳಿ ಏನು ಕೇಳಬೇಕು? ಏನು ಕೇಳಬಾರದು?

ಸಾರಾಂಶ

ನೀವು ಅರೇಂಜ್ಡ್ ಮ್ಯಾರೇಜ್ ಆಗುತ್ತಿದ್ದರೆ, ಭಾವಿ ಸಂಗಾತಿಯೊಂದಿಗೆ ಮುಂದಿನ ಹಾಗೂ ಹಿಂದಿನ ಬದುಕಿನ ಬಗ್ಗೆ ಮಾತಾಡಬೇಕಾಗಬಹುದು. ಆದರೆ ಏನು ಕೇಳಬಹುದು, ಏನು ಕೇಳಬಾರದು ಎಂಬುದು ನಿಮಗೆ ಗೊತ್ತಿರಲಿ.  

ವಿವಾಹವು (Marriage) ನಿಮ್ಮ ಜೀವನದಲ್ಲಿ ನಡೆಯುವ ಅತ್ಯಂತ ದೊಡ್ಡ ಘಟನೆಗಳಲ್ಲಿ ಒಂದು. ನಿಮ್ಮ ಭಾವಿ ವಧು (Bride) ವನ್ನು ಭೇಟಿಯಾಗುವುದು ಆನಂದ, ಕಾತರದ ಕ್ಷಣವೇ. ನಿಮ್ಮ ಮೊದಲ ಭೇಟಿಯ ಸಮಯದಲ್ಲಿ ಹುಡುಗಿಯೊಂದಿಗೆ ಮುಕ್ತ ಸಂಭಾಷಣೆಯನ್ನು ಹೊಂದಲು ನೀವು ಕೆಲವು ಕ್ಷಣಗಳನ್ನಾದರೂ ಒಟ್ಟಿಗೆ ಕಳೆಯಬೇಕು. ಆರೋಗ್ಯಕರ ದಾಂಪತ್ಯದ ಸಲುವಾಗಿ ನಿಮ್ಮ ಭಾವಿ ಸಂಗಾತಿ (Spouse) ಯೊಂದಿಗೆ ನೀವು ಕೆಲವು ವಿಷಯಗಳನ್ನಾದರೂ ಚರ್ಚಿಸಬೇಕಾದೀತು. ಅವು ಹೀಗಿವೆ:

ಅವಳ ವೃತ್ತಿಜೀವನದ ಆಕಾಂಕ್ಷೆಗಳು (Carrier)

ನಿಮ್ಮ ಭವಿಷ್ಯದ ಹೆಂಡತಿ ತನ್ನ ವೃತ್ತಿಜೀವನದ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾಳೆ ಎಂಬುದನ್ನು ನೀವು ಕೇಳಲೇಬೇಕು. ಅವಳು ಮುಂದೆ ಸ್ಟಡಿ ಮಾಡಲು ಬಯಸಿದ್ದಾಳೋ, ಅಥವಾ ಕೆರಿಯರ್ ಮುಂದುವರಿಸಲು ಇಷ್ಟಪಡುತ್ತಾಳೋ, ವಿದೇಶಕ್ಕೆ ಹೋಗಲು ಬಯಸುತ್ತಾಳೋ, ಅಥವಾ ಬೇರೆ ನಗರದಲ್ಲಿಯೋ? ಅದರಿಂದ ನಿಮ್ಮ ದಾಂಪತ್ಯದ ಮೇಲೆ ಪರಿಣಾಮವೇನು? ಇವೆಲ್ಲವೂ ನಿಮ್ಮಿಬ್ಬರಿಗೂ ಪ್ರಮುಖವಾಗುತ್ತವೆ. ನೀವೂ ಅದೇ ಸಮಯದಲ್ಲಿ ನಿಮ್ಮ ವೃತ್ತಿಜೀವನದ ಯೋಜನೆಗಳನ್ನು ಹಂಚಿಕೊಳ್ಳಬೇಕು.

ಇರಬಹುದಾದ ಕಾಯಿಲೆಗಳು (Ailments)

ವೈವಾಹಿಕ ಜೀವನವೆಂದರೆ ನೀವಿಬ್ಬರೂ ನಿಮ್ಮ ಆರೋಗ್ಯ ಹಾಗೂ ಅನಾರೋಗ್ಯದಲ್ಲಿ ಒಟ್ಟಿಗೆ ಇರುವುದು ಎಂದರ್ಥ. ಆಕೆಯ ವೈದ್ಯಕೀಯ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ತಪ್ಪಲ್ಲ. ಹಾಗೇ ನೀವು ಯಾವುದೇ ಕಾಯಿಲೆ ಹೊಂದಿದ್ದರೆ ಅದನ್ನು ಬಹಿರಂಗಪಡಿಸಲು ಹಿಂಜರಿಯಬಾರದು. ಮಧುಮೇಹ, ಪುರುಷರ ಬೋಳುತಲೆ, ಅಥವಾ ಅಧಿಕ ರಕ್ತದೊತ್ತಡದಂತಹ ಯಾವುದೇ ಪರಿಸ್ಥಿತಿಯಿದ್ದಲ್ಲಿ ನೀವು ಬಹಿರಂಗಪಡಿಸಬೇಕು. ಇವೆಲ್ಲ ಭವಿಷ್ಯದಲ್ಲಿ ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಈ ವಿಚಾರದಲ್ಲಿ ನಿಮ್ಮ ಪ್ರಶ್ನೆಗಳು ಸಭ್ಯವಾಗಿರಬೇಕು.

Kamasutra Tips: ಲಿಂಗದ ಗಾತ್ರಕ್ಕನುಸಾರ ಪುರುಷರಲ್ಲಿ ವೈವಿಧ್ಯ- ವಾತ್ಸಾಯನ ಹೇಳ್ತಾನೆ ಬಗೆಬಗೆ!

ಧರ್ಮದ ಬಗ್ಗೆ ಅವಳ ಅಭಿಪ್ರಾಯ (Religion)

ಕೆಲವೊಮ್ಮೆ, ನೀವು ಬೇರೆ ಮತಧರ್ಮ ಅಥವಾ ಜಾತಿಯ ಯಾರನ್ನಾದರೂ ಮದುವೆಯಾಗುತ್ತಿರಬಹುದು. ಆದ್ದರಿಂದ ಅವರ ಧರ್ಮ- ಜಾತಿಯ ಆಚರಣೆಗಳ ಬಗ್ಗೆ ಚರ್ಚಿಸುವುದು, ಮಕ್ಕಳನ್ನು ಹೇಗೆ ಬೆಳೆಸಬೇಕು ಮತ್ತು ಯಾವ ಧರ್ಮವನ್ನು ಪರಿಚಯಿಸಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ. ಅಥವಾ ನೀವಿಬ್ಬರೂ ಒಂದೇ ಧರ್ಮ- ಜಾತಿಯವರೇ ಆಗಿದ್ದರೂ ಆಕೆಯ ನಂಬಿಕೆ ಬೇರೆ ಇರಬಹುದು. ಆಚರಣೆಗಳ ಬಗ್ಗೆ ಅವಳ ಅಭಿಪ್ರಾಯ ತಿಳಿಯುವುದು ಒಳ್ಳೆಯದು. ಕೆಲವರು ಆಗಾಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಇತರರು ಮನೆಯಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತಾರೆ.

ಏನು ಕೇಳಬಾರದು?

ಅರೇಂಜ್ಡ್ ಮ್ಯಾರೇಜ್‌ಗಳು ಅಪರಿಚಿತರಿಗೆ ವಿಚಿತ್ರವಾದ ಪ್ರಶ್ನೆಗಳನ್ನು ಕೇಳಬೇಕಾದ ಸಂದರ್ಭಗಳನ್ನು ಉಂಟುಮಾಡಬಹುದು. ಆದರೂ ನಿಮ್ಮ ಭಾವಿ ಸಂಗಾತಿಯ ಮುಂದೆ ಎಂದಿಗೂ ಕೇಳಬಾರದ ಕೆಲವು ಪ್ರಶ್ನೆಗಳೂ ಇರುತ್ತವೆ. ಅಹಿತಕರ ಪ್ರಶ್ನೆಗಳು ನೋವುಂಟುಮಾಡುತ್ತವೆ. ನಿಮ್ಮ ಭಾವಿ ಪತ್ನಿಯಾಗಲು ನೀವು ಆಶಿಸುತ್ತಿರುವ ಮಹಿಳೆಯನ್ನು ನೀವು ಎಂದಿಗೂ ಕೇಳಬಾರದಂತಹ ಕೆಲವು ವಿಷಯಗಳು ಇಲ್ಲಿವೆ.

First Date : ಮೊದಲ ಭೇಟಿಯಲ್ಲಿ ಹುಡುಗ್ರು ಏನೆಲ್ಲ ಸುಳ್ಳು ಹೇಳ್ತಾರೆ ಗೊತ್ತಾ?

ಅವಳು ಎಷ್ಟು ಪುರುಷರನ್ನು ತಿರಸ್ಕರಿಸಿದ್ದಾಳೆ? 

ಆಕೆಯನ್ನು ಆರಿಸುವ ಮುನ್ನ ನೀವು ಹಲವು ಸ್ತ್ರೀಯರ ಪ್ರೊಫೈಲ್‌ಗಳನ್ನು ಪರಿಶೀಲಿಸಿರಬಹುದು. ಹಾಗೇ ನಿಮ್ಮನ್ನು ಆಯ್ಕೆ ಮಾಡುವ ಮೊದಲು, ತನ್ನ ಪರಿಪೂರ್ಣ ವರನನ್ನು ಆಯ್ಕೆ ಮಾಡುವಾಗ ಅವಳು ಇದೇ ರೀತಿಯ ಪ್ರಕ್ರಿಯೆಯನ್ನು ಮಾಡಿರಬಹುದು. ಆದ್ದರಿಂದ, ಅವಳು ಎಷ್ಟು ಹುಡುಗರನ್ನು ತಿರಸ್ಕರಿಸಿದ್ದಾಳೆ ಎಂದು ಕೇಳುವುದನ್ನು ತಪ್ಪಿಸಿ. ಅಂತಹ ಪ್ರಶ್ನೆಯು ಅವಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿಯದು.

ಅವಳು ಕನ್ಯೆಯೇ? (Virgin)

ವಿವಾಹಕ್ಕೂ ಮುನ್ನ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದು ವೈಯಕ್ತಿಕ ಆಯ್ಕೆಯಾಗಿದೆ. ಆದ್ದರಿಂದ, ನೀವು ಅವಳ ನಿರ್ಧಾರವನ್ನು ಗೌರವಿಸಬೇಕು. ಅವಳು ಕನ್ಯೆಯೇ ಅಥವಾ ಬ್ರಹ್ಮಚಾರಿಯೇ ಎಂಬ ಬಗ್ಗೆ ಅವಳನ್ನು ತನಿಖೆ ಮಾಡುವುದು ಸಭ್ಯವಲ್ಲ. ಹಾಗೇ ತಾನು ಇದುವರೆಗೂ ಯಾರೊಂದಿಗೂ ಸೆಕ್ಸ್ ಮಾಡಿಲ್ಲದ ಬ್ರಹ್ಮಚಾರಿ ಎಂದು ಸೂಚಿಸುವುದು ಕೂಡ ಆಕೆಯಿಂದ ಅಂಥ ಉತ್ತರ ಪಡೆಯಲು ನೀವು ಒತ್ತಡ ಹಾಕಿದಂತಾಗುತ್ತದೆ, ಅದೂ ಸಲ್ಲದು. ಲೈಂಗಿಕ ಆದ್ಯತೆಗಳ ಬಗ್ಗೆ ಮಾತನಾಡಲು ಇದು ಸೂಕ್ತವಾದ ಸಮಯವಲ್ಲ.

ಕ್ರಶ್ ಎದುರು ಬಂದಾಗ feelings ಮುಚ್ಚಿಡಲಾಗದವರು ಇವರು!

ಆಕೆಗೆ ಪುರುಷ ಸ್ನೇಹಿತರಿದ್ದಾರಾ? (Boyfriends)

ಆಕೆಯ ಕುಟುಂಬದಲ್ಲಿ ಖಂಡಿತ ಪುರುಷ ಸದಸ್ಯರಿರುತ್ತಾರೆ ಹಾಗೂ ನೀವು ಆಕೆಯ ಜೀವನದಲ್ಲಿ ಏಕೈಕ ಪುರುಷರಾಗಿರುವುದು ಬಹುಶಃ ಅಸಾಧ್ಯ. ಆದ್ದರಿಂದ, ಆಕೆಯ ಜೀವನದಲ್ಲಿ ಪರಿಚಯಸ್ಥರು ಮತ್ತು ಸಹೋದ್ಯೋಗಿಗಳು ಅಥವಾ ಪ್ರೀತಿಪಾತ್ರ ಸ್ನೇಹಿತರಾಗಿರುವ ಪುರುಷರು ಇದ್ದಾರೆ ಎಂಬ ಅಂಶಕ್ಕೆ ನೀವು ಮುಕ್ತವಾಗಿರಬೇಕು. ವಿರುದ್ಧ ಲಿಂಗದೊಂದಿಗೆ ಸ್ನೇಹ ಬೆಳೆಸುವಲ್ಲಿ ಯಾವುದೇ ಹಾನಿ ಇಲ್ಲ. ಹುಡುಗಿಯರು ಮತ್ತು ಹುಡುಗರು ಎಂದಿಗೂ ಕೇವಲ ಸ್ನೇಹಿತರಾಗಲು ಸಾಧ್ಯವಿಲ್ಲ ಎಂಬ ಕ್ಲೀಷೆಯಲ್ಲಿ ಯಾವುದೇ ಸತ್ಯವಿಲ್ಲ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌