Zip Coding ಜೆನ್ ಜೀಗಳ ಹೊಸ ಡೇಟಿಂಗ್ ಟ್ರೆಂಡ್, ಏನಪ್ಪಾ ಇದು?

Published : Nov 17, 2025, 01:38 PM IST
zip coding

ಸಾರಾಂಶ

zip coding : ಡೇಟಿಂಗ್ ನಲ್ಲಿ ಸಾಕಷ್ಟು ವೆರೈಟಿ ಕಾಣ್ಬಹುದು. ಆನ್ಲೈನ್ ಡೇಟಿಂಗ್ ಪ್ರಸಿದ್ಧಿ ಪಡೆಯುತ್ತಿದ್ದರೂ ಈಗ ಜಿಪ್ ಕೋಡಿಂಗ್ ಹೆಸರು ಜೋರಾಗಿ ಕೇಳಿ ಬರ್ತಿದೆ. ಈ ಜಿಪ್ ಕೋಡಿಂಗ್ ಅಂದ್ರೇನು? ಅದ್ರ ಲಾಭ – ನಷ್ಟವೇನು ಎನ್ನುವ ಮಾಹಿತಿ ಇಲ್ಲಿದೆ.

ಡೇಟಿಂಗ್ (Dating) ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲೂ ಈಗ ಹೆಚ್ಚು ಪ್ರಸಿದ್ಧಿಗೆ ಬರ್ತಿದೆ. ಯುವಕರು ಡೇಟಿಂಗ್ ಪ್ರವೃತ್ತಿಗೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ಇದೊಂದು ಉದಯೋನ್ಮುಖ ಮತ್ತು ಬೆಳೆಯುತ್ತಿರುವ ಕ್ಷೇತ್ರ ಅಂದ್ರೆ ತಪ್ಪಾಗೋದಿಲ್ಲ. ಕಾಲ ಕಾಲಕ್ಕೆ ಇದ್ರ ಸ್ಟೈಲ್ ಬದಲಾಗ್ತಿದೆ. ಆನ್ಲೈನ್ ಡೇಟಿಂಗ್ ದಿನ ದಿನಕ್ಕೂ ಜಗತ್ತಿನ ಮೂಲೆ ಮೂಲೆಗೆ ಹರಡ್ತಿದೆ. ಜನರು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ತಮ್ಮ ಸಂಗಾತಿ ಹುಡುಕಿಕೊಳ್ತಿದ್ದಾರೆ. ಜನರ ಅನುಕೂಲಕ್ಕೆ ತಕ್ಕಂತೆ ಅನೇಕ ಅಪ್ಲಿಕೇಷನ್ ಲಭ್ಯವಿದೆ. ಅದ್ರಲ್ಲಿ ಆಸಕ್ತರು ಪ್ರೊಫೈಲ್ ಬ್ರೌಸ್ ಮಾಡ್ತಿದ್ದಾರೆ. ಆದ್ರೆ ಈ ಆನ್ಲೈನ್ ಡೇಟಿಂಗ್ ನಲ್ಲಿ ಸಮಸ್ಯೆ ಸಾಕಷ್ಟಿದೆ. ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಭೇಟಿ ಸುಲಭವಲ್ಲ, ಹೊಂದಾಣಿಕೆ ಸಮಸ್ಯೆ ಕಾಡೋದಿದೆ. ಆನ್ಲೈನ್ ಡೇಟಿಂಗ್ ಸಮಸ್ಯೆ ಹೆಚ್ಚಾಗ್ತಿದ್ದಂತೆ ಡೇಟಿಂಗ್ ನಲ್ಲಿ ಹೊಸ ಹೊಸ ಆವಿಷ್ಕಾ ಆಗ್ತಿದೆ. ಇದ್ರಲ್ಲಿ ಜಿಪ್-ಕೋಡಿಂಗ್ ಕೂಡ ಒಂದು. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ.

ಜಿಪ್-ಕೋಡಿಂಗ್ (zip coding) ಎಂದರೇನು? :

ಜಿಪ್-ಕೋಡಿಂಗ್ ಡೇಟಿಂಗ್ ನಲ್ಲಿ ಹತ್ತಿರದವರಿಗೆ ಆದ್ಯತೆ ನೀಡಲಾಗುತ್ತದೆ. ಮನೆ ಅಥವಾ ಕಚೇರಿ ಹತ್ತಿರವೇ ಇರುವ ವ್ಯಕ್ತಿ ಜೊತೆ ಡೇಟ್ ಮಾಡಲು ಜನರು ಬಯಸ್ತಾರೆ. ಹತ್ತಿರದಲ್ಲಿ ವಾಸಿಸುವುದರಿಂದ ಜನರನ್ನು ಭೇಟಿಯಾಗುವುದು ಸುಲಭವಾಗುತ್ತದೆ. ಕಡಿಮೆ ವೆಚ್ಚ ಹಾಗೇ ಡೇಟ್ ಗೆ ಪ್ಲಾನ್ ಮಾಡೋದು ದೊಡ್ಡ ಸಮಸ್ಯೆ ಆಗೋದಿಲ್ಲ ಎಂಬುದು ಇವರ ಭಾವನೆ. ಇದೊಂದು ಮುಕ್ತ ರಿಲೇಶನ್ಶಿಪ್. ಇಲ್ಲಿ ಜನರು ಪರಸ್ಪರ ಸಮಯ ಕಳೆಯುತ್ತಾರೆ ಆದರೆ ಬದ್ಧರಾಗಿರುವುದಿಲ್ಲ. ದೂರದ ಡೇಟಿಂಗ್ನಿಂದ ಬೇಸತ್ತವರಿಗೆ ಅಥವಾ ಆಗಾಗ್ಗೆ ಮೀಟ್ ಮಾಡಲು ತೊಂದರೆ ಅನುಭವಿಸುವವರಿಗೆ ಈ ಜಿಪ್ ಕೋಡಿಂಗ್ ಹೆಚ್ಚು ಆಕರ್ಷಕವಾಗಿದೆ.

Chanakya Niti: ಒಳಗೊಂದು, ಹೊರಗೊಂದು.. ಈ 4 ಪುರುಷರನ್ನು ನಂಬ್ಲೇಬೇಡಿ ಅಂತಾರೆ ಚಾಣಕ್ಯ

ಜಿಪ್-ಕೋಡಿಂಗ್ನ ಪ್ರಯೋಜನಗಳು

ಹೊಂದಾಣಿಕೆ - ಜಿಪ್-ಕೋಡಿಂಗ್ ಒಂದು ಅನುಕೂಲಕರ ಆಯ್ಕೆಯಾಗಿದೆ ಏಕೆಂದರೆ ಇದು ಜನರು ತಮ್ಮ ಹತ್ತಿರದ ಪ್ರದೇಶದೊಳಗೆ ಡೇಟ್ ಮಾಡಲು ಅನುವು ಮಾಡಿಕೊಡುತ್ತದೆ. ಇದ್ರಿಂದ ಪರಸ್ಪರ ಬೇಗ ಅರಿತುಕೊಳ್ಳಬಹುದು, ಹೊಂದಿಕೊಳ್ಳಬಹುದು.

ಮುಕ್ತತೆ : ಇಲ್ಲಿ ಯಾವುದೇ ಬದ್ಧತೆಗೆ ಅವಕಾಶ ಇಲ್ಲ. ಡೇಟಿಂಗ್ ಪರಸ್ಪರ ಸಮಯ ಕಳೆಯಲು ಮೀಸಲಾಗಿರುತ್ತದೆ. ನಿನ್ನ ಜೊತೆ ಸದಾ ಇರ್ತೇನೆ, ಒಟ್ಟಿಗೆ ಇರೋಣ ಎನ್ನುವ ಬದ್ಧತೆಗೆ ಇಬ್ಬರೂ ಒಳಗಾಗಬೇಕಾಗಿಲ್ಲ.

ಹೊಸ ಅನುಭವ : ತಜ್ಞರ ಪ್ರಕಾರ ಜಿಪ್-ಕೋಡಿಂಗ್ ಜನರಿಗೆ ಹೊಸ ವಿಷಯಗಳನ್ನು ಅನುಭವಿಸಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಅವಕಾಶವನ್ನು ನೀಡುತ್ತದೆ.

ಮ್ಯಾರೇಜ್ ಆದ್ರೆ ಮಂಚ ಹತ್ಬಾರ್ದಾ? ಇತ್ತೀಚೆಗೆ ಯಾಕೆ ಲವ್ ಮ್ಯಾರೇಜ್ ಮುರಿದುಬೀಳ್ತಾ ಇದೆ?

ಆರಾಮದಾಯಕ : ಪ್ರತಿದಿನ ಪರಸ್ಪರ ಭೇಟಿಯಾಗುವುದು ಆರಾಮ ನೀಡುತ್ತದೆ. ಸಣ್ಣ ಕ್ಷಣಗಳು ಸಹ ಸಂಪರ್ಕವನ್ನು ಬೆಳೆಸುತ್ತವೆ. ಇಬ್ಬರೂ ಒಂದೇ ಪ್ರದೇಶದವರಾಗಿದ್ದರಿಂದ ವ್ಯಕ್ತಿ ಬಗ್ಗೆ ಅಲ್ಪಸ್ವಲ್ಪ ತಿಳಿದಿರುತ್ತದೆ. ಸ್ಥಳದ ಭದ್ರತೆ ಇರುತ್ತದೆ. ನೀವು ಪ್ರತಿ ದಿನ ನೋಡಿದ, ಭೇಟಿಯಾದ ವ್ಯಕ್ತಿಯ ಜೊತೆಗೆ ಆರಾಮದಾಯಕ ಮತ್ತು ಉತ್ತಮ ಸಂಪರ್ಕ ಹೊಂದುತ್ತೀರಿ.

ಜಿಪ್-ಕೋಡಿಂಗ್ನ ಅನಾನುಕೂಲಗಳು :

ಜಿಪ್-ಕೋಡಿಂಗ್ ಅನಿಶ್ಚಿತ ಸಂಬಂಧ. ಅಲ್ಲಿ ಜನರು ಪರಸ್ಪರ ಬದ್ಧರಾಗಿರುವುದಿಲ್ಲ. ನೀವು ಬದ್ಧತೆ ಮತ್ತು ಸಮರ್ಪಿತ ಸಂಬಂಧವನ್ನು ಹುಡುಕುತ್ತಿದ್ದರೆ, ಜಿಪ್-ಕೋಡಿಂಗ್ ನಿಮಗೆ ಹೊಂದಿಕೆಯಾಗುವುದಿಲ್ಲ. ಭಾವನಾತ್ಮಕೌಾಗಿ ನೀವು ಹತ್ತಿರವಾಗಲು ಬಯಸಿದರೆ ನಿಮಗೆ ಈ ಜಿಪ್ ಕೋಡಿಂಗ್ ನೋವು ನೀಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ