ಮ್ಯಾರೇಜ್ ಆದ್ರೆ ಮಂಚ ಹತ್ಬಾರ್ದಾ? ಇತ್ತೀಚೆಗೆ ಯಾಕೆ ಲವ್ ಮ್ಯಾರೇಜ್ ಮುರಿದುಬೀಳ್ತಾ ಇದೆ?

Published : Nov 16, 2025, 05:45 PM IST
Illicit Relationship

ಸಾರಾಂಶ

ಕೆಲಸ ಮಾಡುವ ಸ್ಥಳಗಳಲ್ಲಿನ ಅನೈತಿಕ ಸಂಬಂಧಗಳು, ಹೊಂದಾಣಿಕೆಯಾಗದ ಮನಸ್ಸುಗಳ ಮದುವೆಗಳು, ಹೇಳಿಕೊಳ್ಳಲಾಗದ, ಹೇಳಿಕೊಳ್ಳಬಾರದ ಸಂಗತಿಗಳು ಈ ಲಿಸ್ಟ್‌ನಲ್ಲಿವೆ. ಜೊತೆಗೆ, 'ಲಿವ್‌ಇನ್ ರಿಲೇಶನ್‌ಶಿಪ್‌ ಮೂಲಕ ಮದುವೆಯಾಗುವ ಮೊದಲೇ ಸಂಸಾರ ಮಾಡುತ್ತಿದ್ದಾರೆ ಕೆಲವರು. ಇನ್ನೂ ಏನೇನು? ಈ ಸ್ಟೋರಿ ನೋಡಿ..

ಹೆಚ್ಚಾಗಿ ಲವ್ ಮ್ಯಾರೇಜ್ ಮುರಿದುಬೀಳುತ್ತಿವೆ!

ಇತ್ತೀಚೆಗೆ ಸಮಾಜದಲ್ಲಿ ಯಾಕೆ ಮದುವೆಗಳು ಹೆಚ್ಚುಹೆಚ್ಚು ಮುರಿದುಬೀಳ್ತಾ ಇವೆ? ಈಗ ಎರಡು ದಶಕಗಳಿಂದ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ನಗರ-ಪಟ್ಟಣ ಪ್ರದೇಶಗಳಲ್ಲಿ ಬಹಳಷ್ಟು ಮದುವೆಗಳು ಮುರಿದುಬೀಳ್ತಾ ಇವೆ. ಹಳ್ಳಿಗಳಲ್ಲಿ ಕೂಡ ಈ ಮೊದಲಿಗಿಂತ ಈಗ ಮದುವೆ-ಸಂಸಾರಗಳು ಬಾಳಿಕೆ ಬರುತ್ತಿಲ್ಲ. ಈ ಸಂಗತಿ ಬರಿಯ ಅಂಕಿಸಂಖ್ಯೆಗಳು ಎನ್ನುವಂತಿಲ್ಲ, ದಿನನಿತ್ಯ ಇಂತಹ ಸುದ್ದಿಗಳು ಕಿವಿಗೆ ಬೀಳುತ್ತಿವೆ, ಕಣ್ಣಿಗೆ ರಾಚುತ್ತಿವೆ. ಹಾಗಿದ್ದರೆ ಯಾಕೆ ಹೀಗೆ?

ಇತ್ತೀಚೆಗೆ ಮದುವೆಗಳು, ಅದರಲ್ಲೂ ಹೆಚ್ಚಾಗಿ ಲವ್ ಮ್ಯಾರೇಜ್ ಮುರಿದುಬೀಳುತ್ತಿವೆ. ಅರೇಂಜ್ಡ್‌ ಮ್ಯಾರೇಜ್ ಆಗಿರೋ ಸಂಸಾರಗಳೂ ಕೂಡ ಈ ಮೊದಲಿನಂತೆ ಸರಾಗವಾಗಿ ಬಾಳಿಕೆ ಬರುತ್ತಿಲ್ಲ. ಆದರೆ, ಲವ್ವೋ ಅರೇಂಜ್ಡೋ, ಒಟ್ಟಿನಲ್ಲಿ ಇಂದಿನ ದಿನಗಳಲ್ಲಿ ಹೆಚ್ಚಿನ ಸಂಸಾರಗಳು ಬೀದಿಗೆ ಬರುತ್ತಿವೆ, ಮಕ್ಕಳು, ಹೆತ್ತವರು ಸೇರಿ ಹಲವರು ಬೀದಿಪಾಲು ಆಗುತ್ತಿದ್ದಾರೆ. ಗಂಡ-ಹೆಂಡತಿ-ಮಕ್ಕಳು ಎಲ್ಲರೂ ಒಟ್ಟಿಗಿಲ್ಲ, ಅವರಲ್ಲಿ ಒಗ್ಗಟ್ಟಿಲ್ಲ. ಯಾಕೆ ಹೀಗಾಗುತ್ತಿದೆ? ಕಾರಣಗಳು ನೂರಾರು, ಅದರಲ್ಲಿ ಹಲವಾರು ಹೊರಬರುತ್ತಿವೆ ಎನ್ನಬಹುದು. ಹಾಗಿದ್ದರೆ ಏನಿದು ಮ್ಯಾರೇಜ್ ಮ್ಯಾಟರ್? ಮುಂದೆ ನೋಡಿ..

ಹೌದು, ಇತ್ತೀಚೆಗೆ ಸಂಸಾರಗಳು ಮನೆಯ ಒಳಗೆ ಇಲ್ಲ, ಹೊರಗೆ ಬರುತ್ತಿವೆ ಎನ್ನಬಹುದು. ಅಂದರೆ ನಿಮಗೆ ಅರ್ಥ ಆಗಿರಬಹುದು. ಮೊದಲೆಲ್ಲಾ ಮನೆಯ ಗುಟ್ಟು ಮನೆಯೊಳಗೆ, ಹೊರಗಿನವರು ಹೊರಗೆ ಎಂಬಂತಹ ವಾತಾವರಣ ಇತ್ತು. ಆದರೆ ಅದೀಗ ನಿಧಾನವಾಗಿ ಉಲ್ಟಾ ಆಗತೊಡಗಿದೆ. ಅಂದರೆ, ಗಂಡ ಹಾಗೂ ಹೆಂಡತಿ ತಮ್ಮತಮ್ಮ ಮನೆಯವರೊಡನೆ ಸಂಸಾರ ಮಾಡೋದು ಬಿಟ್ಟು ಹೊರಗೆ ಯಾರದೋ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ನಂಬರ್ಸ್ ಗಾಬರಿ ಹುಟ್ಟಿಸುತ್ತಿವೆ. ಅಧೀಕೃತ ಮಾಹಿತಿ ಪ್ರಕಾರ, ಭಾರದತಲ್ಲಿ ಡಿವೋರ್ಸ್ ಪ್ರಮಾಣ ಸದ್ಯ ನೂರರಲ್ಲಿ ಒಂದು (1%) ಜೋಡಿ ಎಂದಾಗಿದೆ. ಆದರೆ ಇದು ನಗರ ಪ್ರದೇಶದಲ್ಲಿ 30% ತಲುಪಿದೆ ಎನ್ನಲಾಗುತ್ತಿದೆ. ಇದು ನಿಜವಾಗಿಯೂ ಗಾಬರಿ ಹುಟ್ಟಿಸುವಂತಿದೆ.

ನಗರ-ಪಟ್ಟಣ ಪ್ರದೇಶಗಳಲ್ಲಿ ಡಿವೋರ್ಸ್‌ಗಳ ಸಂಖ್ಯೆ ಶೇ 30% ಹೆಚ್ಚು ಎಂಬುದು ತೀವ್ರ ಆತಂಕಕ್ಕೆ ದಾರಿಮಾಡುತ್ತಿದೆ. ಆದರೆ, ಕೇವಲ ಡಿವೋರ್ಸ್‌ ಮಾತ್ರ ಅಕ್ಯುರೇಟ್ ಎಂಬ ಅಂಕಿಅಂಶಗಳು ಸಿಗುತ್ತಿವೆ. ಆದರೆ, ಅನೈತಿಕ ಸಂಬಂಧಗಳು ಹಾಗೂ ಒಡೆದ ಸಂಸಾರಗಳು ಲೆಕ್ಕ ಹಾಕುವವರು ಯಾರು? ಇವೆಲ್ಲಾ ಯಾವತ್ತೂ ಯಾವುದೇ ಅಂಕಿಸಂಖ್ಯೆಗಳ ಅಡಿ ಬರುವುದೇ ಇಲ್ಲ. ಆದರೆ, ಸಮಾಜದಲ್ಲಿ ಒಡೆದ ಸಂಸಾರಗಳು ಸುದ್ದಿಗೆ ಸಿಲುಕುತ್ತಿವೆ, ಅನೈತಿಕ ಸಂಬಂಧಗಳು ಕಿವಿಗೆ ಬೀಳುತ್ತಿವೆ. ಅದರಲ್ಲೂ ಇವೆಲ್ಲಾ ಲವ್ ಮ್ಯಾರೇಜ್ ಆಗಿರುವವರೆಲ್ಲಿಯೇ ಹೆಚ್ಚು ಯಾಕೆ? ಸಮೀಕ್ಷೆ ಮೂಲಕ ಬಹಿರಂಗವಾಗಿರುವ ಕೆಲವು ಮುಖ್ಯ ಕಾರಣಗಳು ಇಲ್ಲಿವೆ ನೋಡಿ..

ಮ್ಯಾರೇಜ್ ಆದ್ರೆ ಮಂಚ ಹತ್ಬಾರ್ದಾ?

ಮೊದಲನೆಯದಾಗಿ, ಲವ್ ಮ್ಯಾರೇಜ್ ಆಗಿರೋರ ಸಮಸ್ಯೆ ಮುಖ್ಯವಾಗಿ ಇದು ಎನ್ನಲಾಗುತ್ತಿದೆ. ಲವ್ ಮಾಡುವಾಗಲೇ ಮ್ಯಾರೇಜ್ ಆದಬಳಿಕ ಮಾಡುವ ಎಲ್ಲವನ್ನೂ ಮುಗಿಸಿ, ಆ ಸಂಗಾತಿಯೊಂದಿಗೆ ಸಂಸಾರಮಾಡುವ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ ಹೆಚ್ಚಿನವರು ಎನ್ನಲಾಗ್ತಿದೆ. ಜೊತೆಗೆ, ಸಂಸಾರ ಮಾಡುವಾಗ ಅನ್ಯೋನ್ಯತೆ, ಲೈಂಗಿಕತೆ, ಸಂಸಾರ ಸುಖಕ್ಕಿಂತ ಹೆಚ್ಚಾಗಿ ಹಣ ಮಾಡುವ ವ್ಯಾಮೋಹಕ್ಕೆ ಬಿದ್ದುಬಿಡುತ್ತಾರೆ. ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ, ಮಕ್ಕಳಾದ ಬಳಿಕ ಅದನ್ನು ನೋಡಿಕೊಳ್ಳುವ ಜವಾಬ್ದಾರಿ ಬಗ್ಗೆ ಜಗಳ ಮಾಡಿಕೊಳ್ಳುವ, ಪೋಷಕರನ್ನು ಜೊತೆಗೆ ಇಟ್ಟುಕೊಳ್ಳುವ ಬಗ್ಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ವಿಫಲವಾದ ಜೋಡಿಗಳೇ ಇಂದು ಬಹಳಷ್ಟು ಕಂಡುಬರುತ್ತಿವೆ ಎಂಬುದು ಸಮೀಕ್ಷೆಯ ವರದಿ ಹೇಳಿರುವ ಸೀಕ್ರೆಟ್. ಜೊತೆಗೆ, ಒತ್ತಡದ ಜೀವನದಿಂದ ಮಂಚ ಹತ್ತಲಿಕ್ಕೇ ಜೋಡಿಗಳಿಗೆ ಸಮಯವಿಲ್ಲ ಎನ್ನಲಾಗ್ತಿದೆ. ಮಂಚ ಹತ್ತದಿದ್ದರೆ ಮದುವೆಯಾಗಿ ಏನು ಪ್ರಯೋಜನ?

ಇನ್ನು, ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಈ ಮೊದಲಿನಂತೆ ಅವಿಭಕ್ತ (ಜಾಯಿಂಟ್) ಕುಟುಂಬಗಳು ಕಡಿಮೆ ಆಗುತ್ತಿದ್ದು, ದಂಪತಿಗಳು ಮಾತ್ರ ಒಟ್ಟಿಗಿರುವ ಕಾರಣಕ್ಕೆ ಅವರಲ್ಲೇ ಪರಸ್ಪರ ಜಗಳಗಳು ನಡೆಯುತ್ತಿವೆ. ಯೋಗ್ಯ ಕೆಲಸ, ಯೋಗ್ಯ ಸಂಬಳ ಸಿಗದೇ ನಗರದಲ್ಲಿ ಫ್ಯಾಮಿಲಿಗಳು ಪರದಾಡುತ್ತಿದ್ದರೆ ಅತ್ತ ಹಳ್ಳಿಗಳಲ್ಲಿ ಸಾಕಷ್ಟು ಜಮೀನು, ವರಮಾನ ಇಲ್ಲ. ಇವೆಲ್ಲವೂ ಇಂದು ಸಂಸಾರದ ಒಡಕಿಗೆ ಕಾರಣವಾಗುತ್ತಿರೋದು ಸುಳ್ಲಲ್ಲ. ಜೊತೆಗೆ, ಈ ಮೊದಲಿನಂತೆ ಅವಿದ್ಯಾವಂತರು ಕಡಿಮೆಯಾಗಿ ಎಜ್ಯುಕೇಟೆಡ್ ಜಾಸ್ತಿ ಆಗಿರೋದ್ರಿಂದ 'ಇಂಡಿಪೆಂಡೆಟ್ ಲೈಫ್' ಎಂಬ ಮಂತ್ರ ಜಪಿಸುತ್ತಿರುವ ಟ್ರೆಂಡ್ ಕೂಡ ಹೆಚ್ಚಾಗುತ್ತಿದೆ. ಇವೆಲ್ಲವೂ ಆಫ್ಟರ್ ಮ್ಯಾರೇಜ್‌ ಲೈಫನ್ನು ಕೆಡಿಸುತ್ತಿವೆ ಎನ್ನುತ್ತಿವೆ ಸಮೀಕ್ಷೆಗಳು.

ಬದಲಾವಣೆ ಜಗದ ನಿಯಮ'ವೇ?

ಒಟ್ಟಿನಲ್ಲಿ, ವಿದೇಶಿ ಲೈಫ್ ಸ್ಟೈಲ್ ವ್ಯಾಮೋಹ ಇಂದು ಭಾರತೀಯರಲ್ಲಿ ಹೆಚ್ಚಾಗುತ್ತಿದೆ. 'ಬದಲಾವಣೆ ಜಗದ ನಿಯಮ' ಎಂಬಂತೆ, ಇಂದಿನ ಸಮಾಜದಲ್ಲಿ ಮದುವೆಯಾದ ಬಳಿಕ ಒಟ್ಟಿಗೆ ಮಂಚ ಹತ್ತುವ ಜೋಡಿಗಳು ಸಂಖ್ಯೆಯಲ್ಲೇ ತೀರಾ ಇಳಿಕೆ ಕಂಡುಬರುತ್ತಿವೆ. ಕಾರಣ, ಕೆಲಸ ಮಾಡುವ ಸ್ಥಳಗಳಲ್ಲಿನ ಅನೈತಿಕ ಸಂಬಂಧಗಳು, ಹೊಂದಾಣಿಕೆಯಾಗದ ಮನಸ್ಸುಗಳ ಮದುವೆಗಳು, ಹೇಳಿಕೊಳ್ಳಲಾಗದ, ಹೇಳಿಕೊಳ್ಳಬಾರದ ಸಂಗತಿಗಳು ಎಂದೆಲ್ಲಾ ಹಲವು ಈ ಲಿಸ್ಟ್‌ನಲ್ಲಿವೆ. ಜೊತೆಗೆ, 'ಲಿವ್‌ಇನ್ ರಿಲೇಶನ್‌ಶಿಪ್‌' ಮೂಲಕ ಮದುವೆಯಾಗುವ ಮೊದಲೇ ಸಂಸಾರ ಮಾಡುತ್ತಿರುವ ಕೆಲವರು ಮದುವೆಯ ಹಂತಕ್ಕೆ ಹೋಗುವುದೇ ಇಲ್ಲ. ಒಮ್ಮ ಹೋದರೂ ಕೂಡ ನೆಟ್ಟಿಗೆ ಸಂಸಾರ ಸಾಗುತ್ತಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ. ಮೊದಲೆಲ್ಲಾ, ಮದುವೆಯಾದರೆ ಮಂಚ ಗಟ್ಟಿ ಎನ್ನುತ್ತಿದ್ದ ಕಾಲದಲ್ಲಿ ಇಂದು ಒತ್ತಡದ ಜೀವನದಿಂದ ಮಂಚದ ವಿಷ್ಯವೇ ಮರೆತುಹೋಗುತ್ತಿದೆ ಎನ್ನಲಾಗ್ತಿದೆ. ಜೋಡಿ ಮಂಚ ಏರುತ್ತಿಲ್ಲ ಎಂದರೆ ಮದುವೆ ಮುರಿದುಬಿದ್ದಿದೆ ಎಂದೇ ಲೆಕ್ಕ ಎನ್ನುತ್ತಿವೆ ಸಮೀಕ್ಷೆಗಳು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ