ಲೈಂಗಿಕ ಜೀವನ ದಾಂಪತ್ಯವನ್ನು ಗಟ್ಟಿಗೊಳಿಸುವಂತಹದ್ದು. ಅನೇಕ ಬಾರಿ ಇದೇ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಲೈಂಗಿಕ ಜೀವನ ನಮ್ಮ ಜೀವನದ ಒಂದು ಭಾಗ ಎಂದಾಗ ಅದ್ರ ಬಗ್ಗೆ ತಿಳಿಯಬೇಕು. ದಾಂಪತ್ಯ ಸುಖ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಬೇಕು.
ಲೈಂಗಿಕ ಜೀವನ ಮಸಾಲೆಯುಕ್ತವಾಗಿರಬೇಕಾಗುತ್ತದೆ. ಇದು ಯಾಂತ್ರಿಕವಾದ್ರೆ ಲೈಂಗಿಕ ಜೀವನ ನೀರಸವಾಗುತ್ತದೆ. ಇದ್ರಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಸಂಭೋಗದಲ್ಲಿ ಹೊಸ ಹೊಸ ಪ್ರಯೋಗ ಹಾಗೂ ಹೊಸತವಿದ್ದಲ್ಲಿ ಮಾತ್ರ ದೀರ್ಘಕಾಲ ದಾಂಪತ್ಯ ಗಟ್ಟಿಯಾಗಿರಲು ಸಾಧ್ಯ. ಸಂಭೋಗದ ಬಗ್ಗೆ ಮಾತನಾಡಲು ಜನರು ನಾಚಿಕೊಳ್ತಾರೆ. ಆದ್ರೆ ಅದ್ರ ಬಗ್ಗೆ ಸೂಕ್ತ ಜ್ಞಾನವಿರೋದು ಬಹಳ ಮುಖ್ಯ. ಸಾಮಾನ್ಯವಾಗಿ ಸೆಕ್ಸ್ ಗ್ಯಾಜೆಟ್‌ಗಳು ಮತ್ತು ರೋಲ್ ಪ್ಲೇಯಿಂಗ್ ಲೈಂಗಿಕತೆಯನ್ನು ಆನಂದಿಸಲು ಎರಡು ಪ್ರಮುಖ ಮಾರ್ಗಗಳಾಗಿವೆ. ಇದಲ್ಲದೆ ನೀವು ಕರೇಜಾ ತಂತ್ರವನ್ನು ಬಳಸಬಹುದು. ನಾವಿಂದು ಮೋಜು ಹಾಗೂ ಪರಾಕಾಷ್ಠೆ ಎರಡಕ್ಕೂ ನೆರವಾಗುವ ಕರೇಜಾ ತಂತ್ರದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಕರೇಜಾ (Kareeza) ಎಂದರೇನು?: ಕಾಳಜಿಯುಳ್ಳ ಲೈಂಗಿಕ ಚಟುವಟಿಕೆಯನ್ನು ಕರೇಜಾ ಎಂದು ಕರೆಯಲಾಗುತ್ತದೆ. ಕರೇಜಾ ಎಂಬ ಹೆಸರು ಇಟಾಲಿಯನ್ (Italian) ಪದ ಕ್ಯಾರೆಝಾದಿಂದ ಬಂದಿದೆ. ಕರೇಜಾವನ್ನು ಮುದ್ದು ಅಥವಾ ಪ್ರೀತಿ (Love) ಎಂದು ಅರ್ಥೈಸಬಹುದು. ಇತರ ಲೈಂಗಿಕ ಚಟುವಟಿಕೆಗಳಿಗಿಂತ ಇದು ಭಿನ್ನವಾಗಿದೆ. ಸಂತೋಷಕ್ಕಿಂತ ಸಂಗಾತಿ ಜೊತೆ ಆರಾಮವಾಗಿರುವುದು ಇದ್ರ ಉದ್ದೇಶವಾಗಿದೆ. ಕರೇಜಾದಲ್ಲಿ ದೈಹಿಕ (Physical) ಬಯಕೆಗಿಂತ ಸಂಗಾತಿಯ ಆಧ್ಯಾತ್ಮಿಕ ಪ್ರೀತಿಗೆ ಒತ್ತು ನೀಡುತ್ತದೆ. ಸಾಮಾನ್ಯ ಲೈಂಗಿಕ ಕ್ರಿಯೆಗಿಂತ ಕರೇಜಾದಲ್ಲಿ ಸೆಕ್ಸ್ ಸ್ವಲ್ಪ ನಿಧಾನವಾಗುತ್ತದೆ. ಆದ್ರೆ ಇದ್ರಲ್ಲಿ ಯಾವುದೇ ಒತ್ತಡವಿರುವುದಿಲ್ಲ. ಸಂಭೋಗದ ವೇಳೆ ಪರಸ್ಪರರ ಬಗ್ಗೆ ಕಾಳಜಿವಹಿಸುವುದು ಹಾಗೂ ಪ್ರೀತಿ ಹಂಚುವುದು ಇದ್ರ ಮುಖ್ಯ ಉದ್ದೇಶ. ಕರೇಜಾ ತಂತ್ರದ ಹೆಚ್ಚಿನ ಲಾಭ ಪಡೆಯಬೇಕೆಂದ್ರೆ ಕೆಲ ಟ್ರಿಕ್ಸ್ ಪಾಲಿಸಬೇಕಾಗುತ್ತದೆ.
Relationship Tips: ಅತಿಯಾಗಿ ಹೊಂದಾಣಿಕೆ ಮಾಡ್ಕೊಳ್ತಾ ಇದೀರಾ? ಎಚ್ಚರಿಕೆ ಹಂತ ಯಾವ್ದು?
ಸರಿಯಾದ ಸಂಗಾತಿ ಆಯ್ಕೆ : ಒನ್ ನೈಟ್ ಸ್ಟೇನಂತೆ ಕರೇಜಾ ಇರೋದಿಲ್ಲ. ತುಂಬಾ ಸಮಯದಿಂದ ಸಂಬಂಧದಲ್ಲಿರುವ ಹಾಗೂ ನೀವು ನಂಬಿರುವ ವ್ಯಕ್ತಿ ಜೊತೆ ನಡೆಸುವ ಕ್ರಿಯೆ ಇದು. ವಿಶ್ವಾಸಾರ್ಹವುಳ್ಳ ಸಂಗಾತಿ ನಿಮ್ಮ ಜೊತೆಗಿದ್ದರೆ ಮಾತ್ರ ಕರೇಜಾ ವರ್ಕ್ ಆಗಲು ಸಾಧ್ಯ.
ಇಬ್ಬರ ಆದ್ಯತೆ ಅರ್ಥ ಮಾಡಿಕೊಳ್ಳಿ : ಕರೇಜಾ ಆಯ್ಕೆ ಮಾಡಿಕೊಳ್ಳಲು ಸಂಗಾತಿಗಳ ಉದ್ದೇಶ ಬೇರೆ ಇರಬಹುದು. ಹಾಗಾಗಿ ಪರಸ್ಪರ, ಯಾವ ಉದ್ದೇಶಕ್ಕೆ ಅವರು ಕರೇಜಾ ಆಯ್ದುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಿಮಗೆ ಇದು ತಿಳಿದ್ರೆ, ಸಂಗಾತಿ ಏನು ಬಯಸ್ತಿದ್ದಾರೆ ಅದನ್ನು ನೀವು ಪ್ರೀತಿಯಿಂದ ನೀಡಬಹುದು.
ಲೈಂಗಿಕ ಜೀವನ ಚೆನ್ನಾಗಿರಲು ಮಹಿಳೆಯರು ಮಾಡಬೇಕಾದ್ದಿಷ್ಟು
ಮಾತು ಮುಖ್ಯ : ಇಬ್ಬರ ಗುರಿ ಒಂದೇ ಆಗಿದ್ದರೆ ಕರೇಜಾ ತಂತ್ರ ಬಳಸಿದ ಸಾರ್ಥಕತೆ ಸಿಗುತ್ತದೆ. ಗುರಿ ತಿಳಿಯಲು ಮಾತು ಮುಖ್ಯ. ಇಬ್ಬರು ಆರಂಭದಲ್ಲಿ ಮಾತನಾಡಿ, ನಿಮಗಿರುವ ಗೊಂದಲವನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಇಡೋದು ಉತ್ತಮ.
ಸಮಯದ ಚೌಕಟ್ಟು : ಕರೇಜಾ ಆಧ್ಯಾತ್ಮಿಕ ಲೈಂಗಿಕತೆಯ ಒಂದು ರೂಪವಾಗಿದೆ. ಇದು ಗಂಟೆಗಳವರೆಗೆ ಮುಂದುವರಿಯಬಹುದು. ಬಹುತೇಕರು ಲೈಂಗಿಕತೆಗೆ ಬೇಗನೆ ಒಗ್ಗಿಕೊಳ್ಳುತ್ತಾರೆ. ಐದರಿಂದ ಹತ್ತು ನಿಮಿಷಗಳಲ್ಲಿ ಎಲ್ಲವೂ ಮುಗಿದುಹೋಗುತ್ತದೆ. ಆದ್ರೆ ಕರೇಜಾದಲ್ಲಿ ಹಾಗಲ್ಲ. ಇಲ್ಲಿ ಸ್ಪರ್ಶ ಹಾಗೂ ಪ್ರೀತಿಗೆ ಆದ್ಯತೆ ನೀಡ್ಬೇಕು. ಆಗ ಪರಾಕಾಷ್ಠೆ ತಲುಪುವುದು ಸುಲಭವಾಗುತ್ತದೆ. ಸಂಗಾತಿಯ ದೇಹದ ಅರಿವು ನಿಮಗಾಗುತ್ತದೆ. ಇದು ನಿಮ್ಮಿಬ್ಬರನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಮತ್ತಷ್ಟು ಹತ್ತಿರಕ್ಕೆ ತರಲು ನೆರವಾಗುತ್ತದೆ.
ಪರಾಕಾಷ್ಠೆ ಬಗ್ಗೆ ಹೆಚ್ಚಿನ ಚಿಂತೆ ಬೇಡ : ಸಂಭೋಗದ ವೇಳೆ ಜನರು ಪರಾಕಾಷ್ಠೆ ಬಗ್ಗೆಯೇ ಹೆಚ್ಚು ಆಲೋಚನೆ ಮಾಡುವುದ್ರಿಂದ ಒತ್ತಡಕ್ಕೆ ಒಳಗಾಗ್ತಾರೆ. ಕರೇಜಾದಲ್ಲಿ ಪರಾಕಾಷ್ಠೆ ಮುಖ್ಯವಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಮೊದಲು ಅಥವಾ ಎರಡನೇ ಬಾರಿ ಕರೇಜಾ ಮಾರ್ಗ ಅನುಸರಿಸುತ್ತಿದ್ದವರು ಹೆಚ್ಚಾಗಿ ಪರಾಕಾಷ್ಠೆಯ ಬಗ್ಗೆ ಚಿಂತಿಸುತ್ತಾರೆ. ಇದ್ರಿಂದ ಒತ್ತಡ ಹೆಚ್ಚಾಗುತ್ತದೆ.