
ಶಾರೀರಿಕ ಸಂಬಂಧದ ಬಗ್ಗೆ ಮಾತನಾಡಲು ಜನರು ಈಗ್ಲೂ ಹಿಂಜರಿಯುತ್ತಾರೆ. ಇದನ್ನು ಗುಪ್ತವಿಷ್ಯದಂತೆ ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ಸೆಕ್ಸ್ ಗೆ ಸಂಬಂಧಿಸಿದ ಅನೇಕ ಸಮಸ್ಯೆ, ರೋಗದ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಇರೋದಿಲ್ಲ. ಕೆಲವರಿಗೆ ಲೈಂಗಿಕತೆಯಲ್ಲಿ ಸ್ವಲ್ಪವೂ ಆಸಕ್ತಿ ಇರೋದಿಲ್ಲ. ಅವರು ಅದ್ರಿಂದ ದೂರವಿರಲು ಬಯಸ್ತಾರೆ. ಇದನ್ನು ಅಲೈಂಗಿಕತೆ ಎಂದು ಕರೆಯಲಾಗುತ್ತದೆ. ನಾವಿಂದು ಇದ್ರ ಬಗ್ಗೆ ಕೆಲ ಮಾಹಿತಿಯನ್ನು ನಿಮಗೆ ನೀಡ್ತೇವೆ.
ಅಲೈಂಗಿಕತೆ (Asexual) ಎಂದರೇನು? : ಅಲೈಂಗಿಕತೆ ಒಂದು ರೀತಿಯ ಲೈಂಗಿಕ (Sexual) ದೃಷ್ಟಿಕೋನವಾಗಿದೆ. ಇದ್ರಲ್ಲಿ ವ್ಯಕ್ತಿ, ಯಾವುದೇ ರೀತಿಯಲ್ಲೂ ಲೈಂಗಿಕ ಆಕರ್ಷಣೆಗೆ ಒಳಗಾಗೋದಿಲ್ಲ. ಯಾವುದೇ ಲಿಂಗಕ್ಕೆ ಆಕರ್ಷಿತರಾಗುವುದಿಲ್ಲ. ಲೈಂಗಿಕ ಚಟುವಟಿಕೆಯಲ್ಲಿ ಅತ್ಯಲ್ಪ ಆಸಕ್ತಿ ಅಥವಾ ಆಸಕ್ತಿ ಇಲ್ಲದ ಸ್ಥಿತಿಯಲ್ಲಿ ಇರುತ್ತಾನೆ. ಇದನ್ನು ಅನೇಕರು ಖಾಯಿಲೆ (Disease) ಎಂದು ಭಾವಿಸುತ್ತಾರೆ. ಔಷಧಿ ಮೂಲಕ ಇದನ್ನು ಗುಣಪಡಿಸುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಅಲೈಂಗಿಕತೆ ಖಾಯಿಲೆಯಲ್ಲ. ಅದನ್ನು ಗುಣಪಡಿಸಲು ಯಾವುದೇ ಔಷಧಿ (Medicine), ಮಾತ್ರೆಗಳು ಲಭ್ಯವಿಲ್ಲ.
The Karezza Method: ಸುಖಕರ ಲೈಂಗಿಕ ಜೀವನಕ್ಕೆ ಈ ತಂತ್ರ ಬಳಸಿ
ಅಲೈಂಗಿಕತೆಯಲ್ಲೂ ಇದೆ ಪ್ರೀತಿ : ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿರದ ವ್ಯಕ್ತಿಗಳು ಬೇರೆ ವ್ಯಕ್ತಿಗಳಿಗಿಂತ ಭಿನ್ನವಾಗಿ ಇರೋದಿಲ್ಲ. ಅವರಿಗೂ ಭಾವನೆಗಳಿರುತ್ತವೆ. ಅವರೂ ಇತರರಂತೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಭಾವನಾತ್ಮಕ ಬಾಂಧವ್ಯಕ್ಕೆ ಹಾತೊರೆಯುತ್ತಾರೆ. ನಿಕಟ ಸಂಪರ್ಕ ಬೆಳೆಸ್ತಾರೆ. ಕೆಲವರು ಪ್ರೇಮ ಸಂಬಂಧದಲ್ಲಿದ್ರೆ ಮತ್ತೆ ಕೆಲವರು ಒಳ್ಳೆಯ ಸ್ನೇಹಿತರ ಮೂಲಕ ತಮ್ಮ ಭಾವನಾತ್ಮಕ ಅಗತ್ಯವನ್ನು ಪೂರೈಸಿಕೊಳ್ಳುತ್ತಾರೆ. ಆದ್ರೆ ಅವರು ಯಾವುದೇ ರೀತಿಯ ಲೈಂಗಿಕ ಆಕರ್ಷಣೆ ಅಥವಾ ಅಗತ್ಯತೆ ಅನುಭವಿಸುವುದಿಲ್ಲ.
ಅಲೈಂಗಿಕತೆ ಬಗ್ಗೆ ವೈದ್ಯರು ಹೇಳೋದೇನು? : ಅಲೈಂಗಿಕತೆಯನ್ನು ಅಸ್ವಸ್ಥತೆ ಅಥವಾ ಚಿಕಿತ್ಸೆ ಅಗತ್ಯವಿರುವ ಖಾಯಿಲೆ ಎಂದು ವೈದ್ಯಲೋಕ ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಸಮಾನ ಗೌರವ ಹಾಗೂ ಬೆಂಬಲ ನೀಡುವ ಅಗತ್ಯವಿರುತ್ತದೆ. ಅಲೈಂಗಿಕತೆ ಲಕ್ಷಣ ಒಂದೇ ರೀತಿ ಇರೋದಿಲ್ಲ. ಲೈಂಗಿಕ ಆಸಕ್ತಿ ಹಾಗೂ ಆಕರ್ಷಣೆ ಮಟ್ಟ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ.
ಲೈಂಗಿಕ ಜೀವನ ಚೆನ್ನಾಗಿರಲು ಮಹಿಳೆಯರು ಮಾಡಬೇಕಾದ್ದಿಷ್ಟು
ಇವೆಲ್ಲ ಅಲೈಂಗಿಕತೆಯಲ್ಲ : ಅಲೈಂಗಿಕತೆಯು ಬ್ರಹ್ಮಚರ್ಯವಲ್ಲ. ಬ್ರಹ್ಮಚರ್ಯವು ಒಬ್ಬ ವ್ಯಕ್ತಿಯು ತನ್ನ ಸ್ವಂತ ಇಚ್ಛೆ ಮತ್ತು ಆಯ್ಕೆಯಿಂದ ತೆಗೆದುಕೊಳ್ಳುವ ನಿರ್ಧಾರವಾಗಿದೆ. ಅಲೈಂಗಿಕತೆಯು ವ್ಯಕ್ತಿ ಆರಿಸಿಕೊಂಡ ವಿಷಯವಲ್ಲ. ಅದು ಅವನಿಗೆ ಸ್ವಾಭಾವಿಕವಾಗಿ ಬಂದಿರುವಂತಹದ್ದು. ಲೈಂಗಿಕತೆ ಭಯ ಅಥವಾ ಕಾಮಾಸಕ್ತಿಯ ಕೊರತೆ ನಿಮ್ಮನ್ನು ಕಾಡುತ್ತಿದ್ದರೆ ಅದನ್ನು ನೀವು ಅಲೈಂಗಿಕತೆ ಎನ್ನಲು ಸಾಧ್ಯವಿಲ್ಲ. ಅಲೈಂಗಿಕತೆ ಇದಕ್ಕಿಂತ ಭಿನ್ನವಾಗಿರುತ್ತದೆ.
ಅಲೈಂಗಿಕತೆ ಪತ್ತೆ ಹಚ್ಚೋದು ಹೇಗೆ? : ಅಲೈಂಗಿಕತೆ ಪತ್ತೆ ಹಚ್ಚಲು ಯಾವುದೇ ಮಾನದಂಡವಿಲ್ಲ. ಯಾವುದೇ ಚಿಹ್ನೆ ಅಥವಾ ಲಕ್ಷಣ ಇಲ್ಲಿ ಕಂಡು ಬರುವುದಿಲ್ಲ. ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಂಡು ಪ್ರಾಮಾಣಿಕ ಉತ್ತರ ನೀಡಬೇಕಾಗುತ್ತದೆ. ನಿಮ್ಮ ಮನಸ್ಸು ಏನನ್ನು ಬಯಸುತ್ತಿದೆ ಎಂಬುದನ್ನು ನೀವು ತಿಳಿಯಬೇಕು. ನಿಮಗೆ ಯಾವುದೇ ವ್ಯಕ್ತಿಯ ಮೇಲೆ ಲೈಂಗಿಕ ಭಾವನೆ ಬರ್ತಿಲ್ಲ ಎಂದಾದ್ರೆ ನೀವು ಅಲೈಂಗಿಕತೆ ಅನುಭವಿಸುತ್ತಿರಬಹುದು.
ತಜ್ಞರ ಸಲಹೆ ಪಡೆಯಬಹುದು : ಅಲೈಂಗಿಕತೆ ಎನ್ನುವುದು ಒಂದು ಸಾಮಾನ್ಯ ಸಂಗತಿ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ನೀವು ಅಲೈಂಗಿಕತೆ ಅನುಭವಿಸುತ್ತಿದ್ದೀರಿ ಎಂದಾದ್ರೆ ಮುಜುಗರಪಟ್ಟುಕೊಳ್ಳುವ ಅಗತ್ಯವೇ ಇಲ್ಲ. ಜನರಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಜನರು ಹೆದರುತ್ತಾರೆ, ನಾಚಿಕೆಪಟ್ಟುಕೊಳ್ತಾರೆ. ಆದ್ರೆ ನೀವು ಹಿಂದೇಟು ಹಾಕದೆ ಮಾನಸಿಕ ತಜ್ಞರ ಜೊತೆ ಸಮಾಲೋಚನೆ ನಡೆಸಿ, ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮಾನಸಿಕ ತಜ್ಞರು, ಅಲೈಂಗಿಕತೆ ಬಗ್ಗೆ ತಿಳಿದಿದ್ದಾರೆಯೇ ಎಂಬುದನ್ನು ನೀವು ತಿಳಿದು ನಂತ್ರ ಸಮಾಲೋಚನೆ ನಡೆಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.