ಭಾರತದಲ್ಲೇಕೆ ಡಿವೋರ್ಸ್ ಹೆಚ್ಚುತ್ತಿವೆ, ಒತ್ತಡವಲ್ಲದೇ ಏನೇನು ಕಾರಣಗಳಿರಬಹುದು?

By Suvarna News  |  First Published Mar 27, 2024, 3:13 PM IST

ಜೀವನದಲ್ಲಿ ಒಮ್ಮೆ ನಡೆಯುವ  ಅತಿ ದೊಡ್ಡ ಘಟ್ಟ ಮದುವೆ ಎಂಬ ಅಭಿಪ್ರಾಯ ಈಗಿಲ್ಲ. ನಾಲ್ಕೈದು ಬಾರಿ ಮದುವೆಯಾಗುವ ಜನರಿದ್ದಾರೆ. ಭಾರತೀಯರಿಗೂ ವಿಚ್ಛೇದನ ಸಾಮಾನ್ಯ ಎನ್ನುವಂತಾಗಿದೆ. ಅದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ. 
 


ಭಾರತೀಯ ಸಮಾಜದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಇದನ್ನು ಪವಿತ್ರ ಬಂಧನವೆಂದು ಜನರು ಭಾವಿಸ್ತಾರೆ. ಮದುವೆ ಅನ್ನೋದು ಬರೀ ಇಬ್ಬರ ನಡುವೆ ಬೆಸೆಯುವ ಬಂಧವಲ್ಲ. ಎರಡು ಕುಟುಂಬವನ್ನು ಒಂದು ಮಾಡುವ ಕಾರ್ಯ ಎಂದು ಜನರು ನಂಬಿದ್ದಾರೆ. ಮದುವೆಗೆ ಭಾರತದಲ್ಲಿ ಸಾಂಸ್ಕೃತಿಕ ಮಹತ್ವ ಕೂಡ ಇದೆ. ಹಿಂದಿನ ವರ್ಷ ಬಂದ ವರದಿ ಒಂದರ ಪ್ರಕಾರ, ಬೇರೆ ದೇಶಕ್ಕೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ವಿಚ್ಛೇದನ ಪ್ರಮಾಣ ಬಹಳ ಕಡಿಮೆ ಇದೆ. ಶೇಕಡ ಒಂದು ಪರ್ಸೆಂಟ್ ದಂಪತಿ ಮಾತ್ರ ವಿಚ್ಛೇದನ ಪಡೆಯುತ್ತಿದ್ದಾರೆಯಾದ್ರೂ ಭಾರತದಲ್ಲಿ ಇದು ಹೆಚ್ಚು. ಯಾಕೆಂದ್ರೆ ಭಾರತದಲ್ಲಿ ಹಿಂದೆ ವಿಚ್ಛೇದನ ಅತಿ ವಿರಳವಾಗಿತ್ತು. ಅಲ್ಲೋ ಇಲ್ಲೋ ಒಂದು ವಿಚ್ಛೇದನವಾದ್ರೆ ಅದು ದೊಡ್ಡ ಸುದ್ದಿಯಾಗ್ತಿತ್ತು. ಆದ್ರೀಗ ಭಾರತದಲ್ಲೂ ವಿಚ್ಛೇದನ ಹೆಚ್ಚಾಗಿದೆ. 

ವಿಚ್ಛೇದನ (Divorce) ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತದೆ. ವಿಚ್ಛೇದನಕ್ಕೆ ಕಾರಣವೇನು ಎಂಬ ಬಗ್ಗೆ ಜನರು ಬಹಿರಂಗವಾಗಿ ಮಾತನಾಡ್ತಾರೆ. ಮದುವೆ (Marriage) ನಂತ್ರ ಸಿಗದ ಖುಷಿ, ನೆಮ್ಮದಿಯೇ ವಿಚ್ಛೇದನಕ್ಕೆ ಕಾರಣ ಎನ್ನುವ ಜನರು ಬಹಳಷ್ಟು ಮಂದಿ. ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಭಾರತದಲ್ಲಿ ಮದುವೆ ಮುರಿದುಬೀಳಲು ಮುಖ್ಯ ಕಾರಣ ಏನು ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಬಳಕೆದಾರರು ತಮ್ಮದೇ ಕಾರಣಗಳನ್ನು ಹೇಳಿದ್ದಾರೆ. ಜನರು ಏನೆಲ್ಲ ಕಾರಣ ನೀಡಿದ್ದಾರೆ ಎಂಬ ವಿವರ ಇಲ್ಲಿದೆ.

Tap to resize

Latest Videos

ನಿಮ್ಮನ್ನು ಕಟ್ಟಿಕೊಂಡವರಿಗೆ ಈ ಗುಣಗಳಿದ್ದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ!

ಸಾಮಾಜಿಕ ಕಾರ್ಯಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್, ಎಕ್ಸ್ ಖಾತೆಯಲ್ಲಿ ಈ ಪ್ರಶ್ನೆ ಎತ್ತಿದ್ದಾರೆ. ಭಾರತದಲ್ಲಿ ಮದುವೆ ಮುರಿದುಬೀಳಲು ಮುಖ್ಯ ಕಾರಣ ಏನು ಎಂಬ ಪ್ರಶ್ನೆ ಕೇಳಿದ್ದಲ್ಲದೆ ದೀಪಿಕಾ ತಮ್ಮ ಅಭಿಪ್ರಾಯವನ್ನೂ ಹೇಳಿದ್ದಾರೆ. ದೀಪಿಕಾ ಪ್ರಕಾರ, ಮದುವೆ ಸಮಯದಲ್ಲಿ ಕೊಟ್ಟ ಭರವಸೆಯನ್ನು ಜನರು ಮರೆಯುವುದೇ ಇದಕ್ಕೆ ಕಾರಣವಂತೆ.

ಜವಾಬ್ದಾರಿಯನ್ನು ಸಂಭಾಳಿಸಲು ಸಾಧ್ಯವಾಗದ ಸಮಯದಲ್ಲಿ ದಂಪತಿ ಬೇರೆ ಆಗ್ತಾರೆ ಎಂದು ಕೆಲ ಬಳಕೆದಾರರು ಹೇಳಿದ್ದಾರೆ. ಪರಸ್ಪರ ನಂಬಿಕೆ ಕೊರತೆ, ನಿರೀಕ್ಷೆಯಲ್ಲಿ ಹೆಚ್ಚಳ, ಭರವಸೆಗಳು ಈಡೇರದಿರುವುದು ಇದಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಎಕ್ಸ್ ಬಳಕೆದಾರರು. ಮದುವೆ ಸಮಯದಲ್ಲಿ ಇರುವ ನಿರೀಕ್ಷೆ ನಿಜ ಜೀವನದಲ್ಲಿ ನಡೆಯಲು ಸಾಧ್ಯವಿಲ್ಲ. ದಂಪತಿ ಮಧ್ಯೆ ಸಂವಹನದ ಕೊರತೆ ಇರುತ್ತದೆ. ಇಬ್ಬರು ತಮ್ಮ ಭಾವನೆಗಳನ್ನು, ಆಲೋಚನೆಯನ್ನು, ಯೋಜನೆಗಳನ್ನು ಹಂಚಿಕೊಳ್ಳುವುದಿಲ್ಲ. ಸುತ್ತಮುತ್ತ ಆಗುವ ಬದಲಾವಣೆಗೆ ಒಗ್ಗಿಕೊಳ್ಳುವುದಿಲ್ಲ ಅಲ್ಲದೆ ಇಬ್ಬರ ಮಧ್ಯೆ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಮೂರನೇ ವ್ಯಕ್ತಿಯಾಗಿ ಬಂದು ಸಂಬಂಧ ಹಾಳು ಮಾಡ್ತಾರೆ ಎಂದು ಕೆಲವರು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ, ಡಿಜಿಟಲ್ ದುನಿಯಾ ಕೂಡ ಇದಕ್ಕೆ ಕಾರಣ ಎಂದು ಬಳಕೆದಾರರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆಯ್ಕೆ ಸಿಗ್ತಿದೆ. ಸಂಗಾತಿಯಿಂದ ಸಿಗದ ಸಂತೋಷವನ್ನು ಅವರು ಸಾಮಾಜಿಕ ಜಾಲತಾಣದಿಂದ ಪಡೆಯುತ್ತಿದ್ದಾರೆ. ಕೆಲ ವರ್ಷಗಳಿಂದ ಜನರ ಆದ್ಯತೆ ಬದಲಾಗಿದೆ. ಅವರು ಮದುವೆಗಿಂತ ಹೆಚ್ಚು ತಮ್ಮ ಸಂತೋಷದ ಬಗ್ಗೆ  ಗಮನ ನೀಡ್ತಿದ್ದಾರೆ. ಇದೂ ಒಂದು ಕಾರಣ ಎಂದು ಬಳಕೆದಾರರು ಹೇಳಿದ್ದಾರೆ.

ಇಪ್ಪತ್ತು ವರ್ಷ ಮಗನ ಮುಂದೆ ಬಡವನಂತೆ ನಾಟಕವಾಡಿದ ತಂದೆ ಸಾಧಿಸಿದ್ದೇನು?

ಮದುವೆಯಾಗಿ ಒತ್ತಡದ ಜೀವನ (Stressed Life) ನಡೆಸುವ ಬದಲು ವಿಚ್ಛೇದನ ಪಡೆದು ಆರಾಮವಾಗಿರುವುದು ಬೆಸ್ಟ್ ಎಂದು ಅನೇಕರು ಭಾವಿಸುತ್ತಿದ್ದಾರೆ. ವಿಚ್ಛೇದನ ಪಡೆದು ಖುಷಿಯಾಗಿರುವ ಕೆಲವರು ಅವರಿಗೆ ಪರೋಕ್ಷವಾಗಿ ಪ್ರೇರಣೆಯಾಗ್ತಿದ್ದಾರೆ. 

ಸಿನಿಮಾ, ಧಾರಾವಾಹಿಗಳಲ್ಲಿ ವಿಚ್ಛೇದನ (Divorce), ಅಕ್ರಮ ಸಂಬಂಧಗಳನ್ನು (Illicit Relationship) ಸಾಮಾನ್ಯ ಎನ್ನುವಂತೆ ಬಿಂಬಿಸಲಾಗ್ತಿದೆ. ಇದು ಕೂಡ ಜನರ ಮೇಲೆ ಪ್ರಭಾವ ಬೀರುತ್ತಿದೆ. ರಿಯಲ್ ಲೈಫ್ ನಲ್ಲೂ ಇದನ್ನು ಸಾಮಾನ್ಯ ಎನ್ನುವಂತೆ ಅವರು ಸ್ವೀಕರಿಸುತ್ತಿದ್ದಾರೆ. ಬೇರೆ ಆಯ್ಕೆಗೆ ಗಮನ ಹರಿಸುತ್ತಿದ್ದಾರೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

click me!