ಇಪ್ಪತ್ತು ವರ್ಷ ಮಗನ ಮುಂದೆ ಬಡವನಂತೆ ನಾಟಕವಾಡಿದ ತಂದೆ ಸಾಧಿಸಿದ್ದೇನು?

By Suvarna NewsFirst Published Mar 26, 2024, 4:49 PM IST
Highlights

ದೊಡ್ಡ ಕಂಪನಿ ಸಂಸ್ಥಾಪಕ, ಕೋಟ್ಯಾಂತರ ರೂಪಾಯಿ ಸಂಪಾದನೆಯಾದ್ರೂ ಮಗನ ಮುಂದೆ ಸರಳ ಜೀವನ. ಬಡತನ, ಸಾಲದಂತ ಕಥೆ ಹೇಳಿದ್ದ ತಂದೆ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾನೆ. ಇಷ್ಟೆಲ್ಲ ನಾಟಕಕ್ಕೆ ಕಾರಣವೇನು ಎಂಬುದನ್ನೂ ಹೇಳಿದ್ದಾನೆ,.
 

ಶ್ರೀಮಂತರ ಮಕ್ಕಳು ಶ್ರೀಮಂತಿಕೆಯಲ್ಲಿ ಬೆಳೆಯಬೇಕೆಂಬ ನಿಯಮವಿಲ್ಲ. ಮಕ್ಕಳಿಗೆ ಕಷ್ಟಗಳು ತಿಳಿಯಬೇಕು, ಹಣದ ಮಹತ್ವ ಗೊತ್ತಿರಬೇಕು. ಆಗ್ಲೇ ಅವರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದೇ ಐಷಾರಾಮಿ ಜೀವನದಲ್ಲಿ ಬೆಳೆದ ಮಕ್ಕಳಿಗೆ ಮುಂದೆ ಕಷ್ಟ ಬಂದ್ರೆ ಅದನ್ನು ಎದುರಿಸೋದು ಕಷ್ಟ. ಮನೆಯಲ್ಲಿ ಹಣವಿದೆ, ಎಲ್ಲ ಸೌಲಭ್ಯವಿದೆ ಎಂದಾಗ ಅವರು ವಿದ್ಯಾಭ್ಯಾಸಕ್ಕೆ, ಒಳ್ಳೆ ಉದ್ಯೋಗ ಪಡೆಯಲು ಹೆಚ್ಚು ಆಸಕ್ತಿ ತೋರುವುದಿಲ್ಲ. ಕುಟುಂಬದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆಯೇ ವಿನಃ ಸ್ವಂತ ದುಡಿಮೆಗೆ ಆಸಕ್ತಿ ತೋರುವುದಿಲ್ಲ ಎನ್ನುವ ನಂಬಿಕೆ ಇದೆ. ಇದು ಎಲ್ಲರಿಗೂ ಅನ್ವಯಿಸೋದಿಲ್ಲವಾದ್ರೂ ಕೆಲವರು ದಾರಿತಪ್ಪಿದ ಉದಾಹರಣೆ ಇದೆ. ಹಾಗಾಗಿಯೇ ಕೆಲ ಪಾಲಕರು ತಮ್ಮ ಮಕ್ಕಳಿಗೆ ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡೋದಿಲ್ಲ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ತನ್ನ ಶ್ರೀಮಂತಿಕೆ ಮುಚ್ಚಿಟ್ಟು ಮಕ್ಕಳನ್ನು ಬೆಳೆಸುತ್ತಿರುವುದಾಗಿ ಹೇಳಿದ್ದ. ಮಧ್ಯಮ ವರ್ಗದ ಜೀವನ ನಡೆಸುತ್ತಿರುವ ನಾವು ಅಮ್ಮನ ಸಹೋದರನ ಹಣದಿಂದ ಮನೆ ಖರೀದಿ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದರು. ಲಾಟರಿಯಲ್ಲಿ ಕೋಟ್ಯಾಂತರ ರೂಪಾಯಿ ಸಿಕ್ಕಿದ್ರೂ ಅದನ್ನು ಅವರು ಮಕ್ಕಳಿಗೆ ಹೇಳಿರಲಿಲ್ಲ. ಈಗ ಮತ್ತೊಬ್ಬ ವ್ಯಕ್ತಿ ಇದೇ ದಾರಿಯಲ್ಲಿ ಸಾಗಿದ್ದಾನೆ. ಆತ ತನ್ನ ಮಗನಿಗೆ ಇಪ್ಪತ್ತೊಂದು ವರ್ಷವಾಗುವವರೆಗೂ ಆರ್ಥಿಕ ಸ್ಥಿತಿಯ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. 

24 ವರ್ಷದ ಜಾಂಗ್ ಜಿಲಾಂಗ್ ತನ್ನ ಮಿಲಿಯನೇರ್ (Millionaire) ತಂದೆ ಜಾಂಗ್ ಯೋದುಂಗ್ 20 ವರ್ಷಗಳಿಂದ ಸಂಪತ್ತನ್ನು ಬಚ್ಚಿಟ್ಟಿದ್ದರು ಎಂದು ಸ್ಥಳೀಯ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಮಗ ಕಷ್ಟಪಟ್ಟು ಓದಿ ಹಣ (Money) ಸಂಪಾದನೆ ಮಾಡುವ ಹಂತಕ್ಕೆ ಹೋಗ್ಲಿ ಎನ್ನುವ ಉದ್ದೇಶದಿಂದ ಪಾಲಕರು ಹೀಗೆ ಮಾಡಿದ್ದರು. ಜಾಂಗ್ ಸೀನಿಯರ್ ಗೆ 51 ವರ್ಷ ವಯಸ್ಸು. ಆತ  ಹುನಾನ್ ಸ್ಪೈಸಿ ಗ್ಲುಟನ್ ಲಾಟಿಯಾವೊ ಬ್ರ್ಯಾಂಡ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ. ಇದು ವರ್ಷಕ್ಕೆ 600 ಮಿಲಿಯನ್ ಯುವಾನ್ (Yuan) ಅಂದ್ರೆ 83 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕನ್ನು ತಯಾರಿಸುತ್ತದೆ. ಜಾಂಗ್ ಜಿಲಾಂಗ್ ಹುಟ್ಟಿದ ವರ್ಷವೇ ಈ ಕಂಪನಿಯನ್ನು ಸ್ಥಾಪಿಸಲಾಗಿತ್ತು.

ದಶಕದಿಂದಲೂ ಒಬ್ಬನೊಟ್ಟಿಗೇ ಸಂಬಂಧದಲ್ಲಿದ್ದ ತಾಪ್ಸಿ ಪನ್ನು ಸೀಕ್ರೆಟ್ ಏನು?

ಜಾಂಗ್ ಜಿಲಾಂಗ್ ಗೆ ತನ್ನ ತಂದೆಯ ಕಂಪನಿ ಬಗ್ಗೆ ಮಾಹಿತಿ ಇತ್ತು. ಆದ್ರೆ ಕಂಪನಿ ಶುರು ಮಾಡಲು ಸಾಲ ಮಾಡಿದ್ದಾಗಿ ತಂದೆ ಹೇಳಿದ್ದ. ಇದ್ರಿಂದಾಗಿ ಹಣದ ಕೊರತೆ ಇದೆ ಎಂದು ಮಗನನ್ನು ನಂಬಿಸಿದ್ದ. ತಂದೆ ಎಂದಿಗೂ ಐಷಾರಾಮಿ ಜೀವನ ನಡೆಸಲಿಲ್ಲ. ಮಗನಿಗೂ ಹೆಚ್ಚಿನ ಸೌಲಭ್ಯ ನೀಡಲಿಲ್ಲ. ಹುನಾನ್‌ನ ರಾಜಧಾನಿ ಚಾಂಗ್‌ಶಾದಲ್ಲಿ ಅತ್ಯುತ್ತಮ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಕೊಡಿಸಲಾಯ್ತು. 

'ನಾನವಳಿಗೆ ಮೋಸ ಮಾಡ್ಬಿಟ್ಟೆ' ಭಾರತ ಪಾಕಿಸ್ತಾನದ ಖ್ಯಾತ ಸಲಿಂಗ ಜೋಡಿ ಅಂಜಲಿ ಚಕ್ರ- ಸೂಫಿ ಮಲಿಕ್ ಬ್ರೇಕಪ್

ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತ್ರ ಜಾಂಗ್ ಜಿಲಾಂಗ್ ಉದ್ಯೋಗ ಪಡೆಯುವ ಗುರಿ ಹೊಂದಿದ್ದ. 6,000 ಯುವಾನ್ ಸಂಬಳ ಸಿಗುವ ಕೆಲಸ ಹುಡುಕುತ್ತಿದ್ದ. ಕೆಲಸ ಸಿಕ್ಕಿದ ಮೇಲೆ ತಂದೆ ಸಾಲ ತೀರಿಸೋದು ಆತನ ಉದ್ದೇಶವಾಗಿತ್ತು. ಈ ಮಧ್ಯೆ ಜಾಂಗ್ ಜಿಲಾಂಗ್ ತಂದೆ, ಮಗನಿಗೆ ಸತ್ಯ ಹೇಳಿದ್ದಾರೆ. ವಾಸ್ತವವಾಗಿ ಕುಟುಂಬ ಶ್ರೀಮಂತವಾಗಿದೆ. ಜಾಂಗ್ ಯಾವುದೇ ಕೆಲಸ ಹುಡುಕುವ ಅಗತ್ಯವಿಲ್ಲ.ತಮ್ಮ ಕಂಪನಿಯನ್ನೇ ಮುನ್ನಡೆಸುವಂತೆ ತಂದೆ ಜಾಂಗ್ ಗೆ ಸಲಹೆ ನೀಡಿದ್ದಾರೆ. ಅಲ್ಲದೆ ಹೊಸ ಮನೆಯಲ್ಲಿ ವಾಸ ಶುರು ಮಾಡೋದಾಗಿ ತಂದೆ ಹೇಳಿದ್ರು. ಜಾಂಗ್ ತಂದೆ 1.4 ಮಿಲಿಯನ್ ಡಾಲರ್ ಮೌಲ್ಯದ ಮನೆ ಖರೀದಿ ಮಾಡಿದ್ದಾಗಿ ಮಗ ಹೇಳಿದ್ದಾನೆ. ತಂದೆ ಕಂಪನಿ ಮುನ್ನಡೆಸುವ ಹೊಣೆ ಈಗ ಮಗನ ಮೇಲಿದೆ. 

click me!