Relationship Tips: ಹುಡುಗಿ ಹುಡುಗನಿಂದ ನಿಜಕ್ಕೂ ಬಯಸೋದೇನು?

Suvarna News   | Asianet News
Published : Jan 08, 2022, 03:02 PM ISTUpdated : Jan 08, 2022, 03:11 PM IST
Relationship Tips: ಹುಡುಗಿ ಹುಡುಗನಿಂದ ನಿಜಕ್ಕೂ ಬಯಸೋದೇನು?

ಸಾರಾಂಶ

ಪ್ರೀತಿ, ಪ್ರೇಮ, ಗೆಳೆತನ- ಹುಡುಗ ಹುಡುಗಿ ನಡುವೆ ಎಲ್ಲವೂ ಸಾಧ್ಯ. ಆದರೆ ನಿಜಕ್ಕೂ ಒಬ್ಬ ಒಳ್ಳೆಯ ಸಂಗಾತಿಯಿಂದ ಹುಡುಗಿ ನಿರೀಕ್ಷಿಸೋದು ಏನು? ಇಲ್ಲಿವೆ ಹುಡುಗರಿಗೆ ಉಪಯೋಗ ಆಗಬಹುದಾದ ಟಿಪ್ಸ್.  

1. ಒಬ್ಬ ಗೆಳೆಯ ತನ್ನ ಗೆಳತಿಗಾಗಿ ನೀಡುವ ಸಮಯ (time) ಇದೆಯಲ್ಲಾ ಅದು ಅತ್ಯಂತ ಅಮೂಲ್ಯ. ಅದಕ್ಕೆ ಬೆಲೆ ಕಟ್ಟಲಾಗದು. ಹುಡುಗ ತನಗಾಗಿ ಅಷ್ಟೊಂದು ಸಮಯ ಕೊಡ್ತಿದಾನೆ ಅನ್ನುವುದೇ ಹುಡುಗಿಗೆ ತುಂಬಾ ಇಂಪಾರ್ಟೆಂಟು ಅನ್ನಿಸಿಬಿಡುತ್ತದೆ.

2. ತನ್ನ ಹುಡುಗ ತನ್ನ ಮನದೊಳಗಿನ ನಿಜವಾದ ಭಾವನೆಗಳನ್ನೂ (emotions), ಆತಂಕಗಳನ್ನೂ, ಖುಷಿಗಳನ್ನೂ ತನ್ನ ಜೊತೆ ಪ್ರಾಮಾಣಿಕವಾಗಿ ಹಂಚಿಕೊಳ್ಳಲಿ, ಏನನ್ನೂ ಮುಚ್ಚಿಡದಿರಲಿ ಅಂತ ಅವಳು ತುಂಬಾ ಬಯಸುತ್ತಾಳೆ. ಕಚೇರಿ ಕಿರಿಕಿರಿ ಸೇರಿದಂತೆ ಅವನು ಏನನ್ನಾದರೂ ಮುಚ್ಚಿಟ್ಟರೆ, ಅದು ತನಗೇ ಮಾಡಿದ ಮೋಸ ಎಂದು ಭಾವಿಸುತ್ತಾಳೆ. 

3. ತನ್ನ ಒಂದು ಹೊಸ ಮೂಗುತಿ, ಕಿವಿಯ ಹೊಸ ರಿಂಗ್, ಹುಬ್ಬಿನ ತೀಡುವಿಕೆ- ಇದನ್ನು ತನ್ನ ಹುಡುಗ ಗುರುತಿಸಲಿ ಎಂದು ಬಯಸುತ್ತಾಳೆ. ಆತ ಗುರುತಿಸದಿದ್ದರೆ ಇದು ನೋಡು ಹೇಗಿದೆ ಎಂದು ತಾನಾಗಿಯೇ ಕೇಳುತ್ತಾಳೆ. ತಾನಾಗಿ ಕೇಳದೇ ಒಂದು ಮೆಚ್ಚುಗೆ, ಒಂದು ಹೊಗಳಿಕೆ (compliment) ಆತನಿಂದ ಬರಲಿ ಎಂದು ಹಂಬಲಿಸುತ್ತಾ ಇರುತ್ತಾಳೆ. ಆದರೆ ಗಂಡಸು ಪರಮ ದಡ್ಡ. ಅವನಿಗೆ ಅಂಥ ಸೂಕ್ಷ್ಮಗಳೆಲ್ಲ ಪಕ್ಕನೆ ಗೊತ್ತಾಗೋದೇ ಇಲ್ಲ!

4. ನಾನಿಲ್ಲದಿರುವಾಗ, ನನ್ನ ಅನುಪಸ್ಥಿತಿಯನ್ನು ಆತ ಮಿಸ್ (Miss you) ಮಾಡಿಕೊಳ್ಳಲಿ ಎಂದು ಬಯಸುತ್ತಾಳೆ. ಅದನ್ನು ಆತನ ಗೆಳೆಯರ ಮುಂದೆ ಹೇಳಿಕೊಳ್ಳಲಿ ಅಂತಲೂ ಹಂಬಲಿಸುತ್ತಾಳೆ. ಹುಡುಗ ಇಲ್ಲದಿರುವ ಹೊತ್ತನ್ನು ಆಕೆಯೂ ಮಿಸ್ ಮಾಡಿಕೊಳ್ತಾಳೆ ಅಂತ ಬೇರೆ ಹೇಳಬೇಕಿಲ್ಲ ಅಲ್ಲವೇ?

Kisses in Kamasutra: ಆಹಾ, ಎಂಥೆಂಥಾ ಚುಂಬನ! ಕಾಮಸೂತ್ರ ವರ್ಣಿಸುವ ಬಗೆ ಬಗೆ ಕಿಸ್!

5. ತಾನು ಪಕ್ಕದಲ್ಲಿರುವಾಗ ಮೊಬೈಲ್ (Mobile) ನೋಡುವುದು ಅಥವಾ ವಿಡಿಯೋ ಗೇಮ್‌ನಲ್ಲಿ (Vedio game) ಇರುವುದು ಆಕೆಗೆ ಇಷ್ಟವಾಗಲ್ಲ. ತಾನಿರುವಾಗ ತನ್ನನ್ನು ಗುರುತಿಸದೇ ಮೊಬೈಲ್ ಜೊತೆಗೇ ಅದೇನು ಮಾತು? ತನಗಿಂತ ಮೊಬೈಲ್ ಹೆಚ್ಚಾ? ಅಂದುಕೊಳ್ತಾಳೆ. ಅಂದರೆ ದಿನದಲ್ಲಿ ಒಂದು ಗಂಟೆಯಾದರೂ ಸಂಗಾತಿಗೆ ಸಮಯ ಕೊಡದ ಗಂಡಸು ಸಂಬಂಧಕ್ಕೆ ಹಾತೊರೆಯುವುದೇ ವ್ಯರ್ಥ.

6. ಹುಡುಗಿಗೆ ಗೆಳೆಯ- ಸಹಭಾಗಿ ಬೇಕು. ಅಂದರೆ ಆಕೆಗೆ ಸದಾ ಗೋಳುಗರೆಯುತ್ತಾ ಇರುವ ಮಗುವಿನಂಥ ಗಂಡಸು, ಅಥವಾ ಸದಾ ಅಧಿಕಾರ ಚಲಾಯಿಸುತ್ತಾ ಇರುವ ಬಾಸಿಸಂ (Bossism) ಮಾಡುವ ಗೆಳೆಯ ಇಷ್ಟವಾಗೋಲ್ಲ. ತನ್ನ ಜೊತೆಜೊತೆಗೇ ಹೆಜ್ಜೆ ಹಾಕುವ, ತನ್ನ ಎಲ್ಲ ಸುಖಸಂಕಷ್ಟಗಳಲ್ಲಿ ಭಾಗಿಯಾಗುವ ಗೆಳೆಯ ಆಕೆಗೆ ಬೇಕು.

Feel free: ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

7. ತನ್ನ ಗೆಳೆಯನೇ ಆಗಲೀ ಗಂಡನೇ ಆಗಲೀ, ತನ್ನ ಹೆತ್ತವರ ಬಗೆಗೆ ಅಥವಾ ತನ್ನ ಇತರ ಗೆಳತಿಯರ ಬಗೆಗೆ ಲೇವಡಿ ಮಾಡುವುದನ್ನು, ಕೀಳಾಗಿ ಮಾತನಾಡುವುದನ್ನು ಎಂದೂ ಸಹಿಸೋಲ್ಲ. ಗೆಳತಿಯರು ಹಾಗೂ ಹೆತ್ತವರ ಸ್ಥಾನ ಅವರಿಗೆ ಇದ್ದೇ ಇರುತ್ತದೆ. ಗೆಳಯನಿಗಾಗಿ ಅವರ ಸ್ಥಾನಗಳನ್ನು ಆಕೆ ಕೆಳಗೆ ಇಳಿಸೋಲ್ಲ. ಹುಡುಗರು ತಮ್ಮ ಹುಡುಗಿಯ ಬಂಧು- ಗೆಳತಿಯರನ್ನು ಗೌರವಿಸೋದು (Give Respect) ಕಲಿಯೋದು ಕ್ಷೇಮ.

8. ನಿಮ್ಮ ಗೆಳತಿಗೆ ನೀವು ನಿಜವಾದ ಅರ್ಥದಲ್ಲಿ ಗೆಳೆಯನಾಗಿದ್ದರೆ, ಆಕೆಯ ಕನಸುಗಳನ್ನು ಪೋಷಿಸುತ್ತೀರಿ (Dreams) ವಿನಹ ಬಾಡಿಸುವುದಿಲ್ಲ. ಆಕೆಯ ಹಂಬಲಗಳಿಗೆ ನೀರೆರೆದು ಪೋಷಿಸುತ್ತೀರಿ, ಆಕೆಯ ಕನಸುಗಳು ನನಸಾಗುವ ಹಾದಿಯಲ್ಲಿ ನೆರವು ನೀಡುತ್ತೀರಿ. ಮಗ್ಗುಲ ಮುಳ್ಳಾಗುವುದಿಲ್ಲ. 

9. ಪ್ರತಿ ಹುಡುಗಿಗೂ ಒಬ್ಬ ಒಳ್ಳೆಯ ಕೇಳುಗ (Listener) ಬೇಕು. ತಾನು ಅಳುವಾಗ ಆಕೆಯ ಮುಖಕ್ಕೆ ಒರಗುಕೊಡಲು ಒಂದು ಹೆಗಲು ಬೇಕು. ನೀವು ಆಕೆಯ ಸಂಕಷ್ಟಕ್ಕೆಲ್ಲ ಪರಿಹಾರ ಹೇಳಬೇಕಾಗಿಯೂ ಇಲ್ಲ. ಆದರೆ ಆಕೆಯ ದುಃಖಗಳನ್ನಂತೂ ಕೇಳಿಸಿಕೊಳ್ಳುವುದು ತುಂಬಾನೇ ಅಗತ್ಯ.

No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?

10. ತನಗೆ ರೆಕ್ಕೆಗಳನ್ನು (Wings) ಕೊಡುವ ಮತ್ತು ತನ್ನ ಮೇಲೆ ನಂಬಿಕೆಯಿಡುವ ಗೆಳೆಯ ಸಿಗಲಿ ಅಂತ ಎಲ್ಲ ಹುಡುಗೀರೂ ಹಾರೈಸುತ್ತಿರುತ್ತಾರೆ. ನಾನು ಹಾರಬಲ್ಲೆ ಎಂಬ ಅವರ ನಂಬಿಕೆಯನ್ನು ನೀವು ಹುಸಿಗೊಳಿಸಬಾರದು. ರೆಕ್ಕೆ ಕಟ್ಟಿಕೊಳ್ಳಲು ನೆರವಾಗಬೇಕು. ನೀನು ಹಾರಬಲ್ಲೆ ಎಂಬ ಆತ್ಮವಿಶ್ವಾಸವನ್ನು ವೃದ್ಧಿಸಬೇಕು. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌