ಹಲವು ಕನಸು ಕಟ್ಟಿಕೊಂಡ ನವ ಜೋಡಿಗಳ ಮೊದಲ ರಾತ್ರಿಗೆ ಅಡ್ಡಿಯಾದ ಪಾಯಸ

Published : Feb 05, 2025, 07:45 PM IST
ಹಲವು ಕನಸು ಕಟ್ಟಿಕೊಂಡ ನವ ಜೋಡಿಗಳ ಮೊದಲ ರಾತ್ರಿಗೆ ಅಡ್ಡಿಯಾದ ಪಾಯಸ

ಸಾರಾಂಶ

ಹಲವು ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗಿದ್ದಾರೆ. ಬೆಳಕು ಹರಿದು ಕತ್ತಲಾಗುತ್ತಾ ಬಂದಿದೆ. ಮೊದಲ ರಾತ್ರಿ ತಯಾರಿಗಳು ಆರಂಭಗೊಂಡಿದೆ. ಆದರೆ ಪಾಯಸ ಹಾಗೂ ಸ್ವೀಟ್ ಈ ನವ ಜೋಡಿಗಳ ಮೊದಲ ರಾತ್ರಿಗೆ ಅಡ್ಡಿಯಾಗಿದೆ.

ಉದಯಪುರ(ಫೆ.05) ಮದುವೆ ಜೀವನದ ವಿಶೇಷ ಘಳಿಗೆ. ಮದುವೆ ಬಳಿಕ ಮೊದಲ ರಾತ್ರಿ, ಪಾರ್ಟಿ, ಸಮಾರಂಭ ಹೀಗೆ ಪಟ್ಟಿ ಬೆಳೆಯುತ್ತದೆ. ಇದೀಗ ಹಲವು ಜೋಡಿಗಳು ಸಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ. ಎಲ್ಲಾ ನವ ಜೋಡಿಗಳ ಕುಟುಂಬಸ್ಥರು, ಆಪ್ತರು ಈ ಸಮೂಹಿಕ ವಿವಾದಲ್ಲಿ ಪಾಲ್ಗೊಂಡಿದ್ದಾರೆ. ಮದುವೆ ಸರಳವಾಗಿ ಮುಗಿದಿದೆ. ಊಟ ಮುಗಿಸಿ ಎಲ್ಲರೂ ತಮ್ಮ ತಮ್ಮ ಮನೆಗೆ ತೆರಲಿದ್ದಾರೆ. ಕತ್ತಲಾಗುತ್ತಿದ್ದಂತೆ ನವ ಜೋಡಿಗಳ ಮನೆಯಲ್ಲಿ ಮೊದಲ ರಾತ್ರಿಯ ಸಂಭ್ರಮ. ಆದರೆ ಪಾಯಸ ಹಾಗೂ ಸ್ವೀಟ್ಸ್ ನವ ಜೋಡಿಗಳ ಮೊದಲ ರಾತ್ರಿಗೆ ಅಡ್ಡಿಯಾಗ ಘಟನೆ ರಾಜಸ್ಥಾದ ಉದಯಪುರದಲ್ಲಿ ನಡೆದಿದೆ. 

ಮೊದಲ ರಾತ್ರಿಗೆ ಪಾಯಸ ಅಡ್ಡಿಯಾಗಿದ್ದು ಹೇಗೆ?
ತೆಲಿಕ್ ಸಾಹು ಸಮಾಜ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಿದೆ. ಪ್ರತಿ ವರ್ಷ ಈ ಸಮಾಜ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಸುತ್ತದೆ. ಈ ಬಾರಿ ಹಲವು ಜೋಡಿಗಳು ಮೊದಲೇ ನೋಂದಣಿ ಮಾಡಿಕೊಂಡಿತ್ತು. ಧನ ಮಂಡಿಯ ಒಸ್ವಾಲ್ ಭವನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕೆ ಎಲ್ಲಾ ಜೋಡಿಗಳು ಆಗಮಿಸಿದೆ. ಇವರ ಜೊತೆ ಕುಟುಂಬಸ್ಥರು, ಆಪ್ತರು ಮದುವೆ ಆಗಮಿಸಿದ್ದಾರೆ.

ಚೌಲ್ಟ್ರಿ ಮದುವೆ ದಿಢೀರ್ ಪೊಲೀಸ್ ಠಾಣೆಗೆ ಶಿಫ್ಟ್, ಮಂಟಪದ ಮುಂದೆ ಕುಳಿತ ಮಂದಿ ಶಾಕ್

ನವ ಜೋಡಿಗಳಿಗೆ ಉಡುಗೆ, ಮಾಂಗಲ್ಯ ಸೇರಿದಂತೆ ಕೆಲ ಉಡುಗೊರೆಗಳನ್ನು ಆಯೋಜಕರು ನೀಡಿದ್ದಾರೆ. ಬಳಿಕ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನಡೆದಿದೆ. ಇದು ಸಾಮೂಹಿಕ ವಿವಾಹವಾಗಿರುವ ಕಾರಣ ಇಲ್ಲಿ ಆಡಂಬರಕ್ಕೆ ಅವಕಾಶವಿಲ್ಲ. ಇನ್ನು ಏಕಕಾಲಕ್ಕೆ ಶುಭ ಮುಹೂರ್ತದಲ್ಲಿ ಮಂತ್ರಘೋಷಗಳು ಮೊಳಗಿದೆ. ಇದೇ ವೇಳೆ ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಥಳೀಯ ಮುಖಂಡರು, ಸಮುದಾಯದ ಗಣ್ಯರು ಸೇರಿದಂತೆ ಹಲವರು ಈ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಮದುವೆ ಸಂಪ್ರದಾಯ ಮುಗಿದ ಬಳಿಕ ಬಂದಿರುವ 200ಕ್ಕೂ ಹೆಚ್ಚು ಅತಿಥಿಗಳು, ನವ ಜೋಡಿಗಳ ಆಪ್ತರು, ಕುಟುಂಬಸ್ಥರಿಗೆ ಊಟದ ವ್ಯವವಸ್ಥೆ ಮಾಡಲಾಗಿತ್ತು. ಇತ್ತ ನವ ಜೋಡಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಊಟ ಮುಗಿಸಿದ್ದಾರೆ. ಬಳಿಕ ಧನ್ಯತಾ ಭಾವ, ಸಂಭ್ರಮದೊಂದಿಗೆ ಮನಗೆ ತೆರಳಿದ್ದಾರೆ. ಮನೆಗೆ ತೆರಳಿದ ಬೆನ್ನಲ್ಲೇ ಮೊದಲ ರಾತ್ರಿ ತಯಾರಿಗಳು ಆರಂಭಗೊಂಡಿದೆ. ಸಾಮೂಹಿಕ ವಿವಾಹವಾದ ಕಾರಣ, ಎಲ್ಲಾ ನವ ಜೋಡಿಗಳ ಮನೆಯಲ್ಲಿ ಸಣ್ಣ ಮಟ್ಟದ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಇತ್ತ ನವ ಜೋಡಿಗಳು ಮೊದಲ ರಾತ್ರಿಯ ಸಂಭ್ರಮ, ಖುಷಿಯಲಲಿ ತೇಲಾಡುತ್ತಿದ್ದರು.

ಮಧ್ಯಾಹ್ನ ಊಟ ಮಾಡಿದ್ದ 200 ಅತಿಥಿಗಳ ಪೈಕಿ ಬಹುತೇಕರಿಗೆ ವಾಂತಿ ಅತಿಸಾರ ಶುರುವಾಗಿದೆ. ಒಬ್ಬರ ಹಿಂದೊಬ್ಬರು ಆಸ್ಪತ್ರೆ ದಾಖಲಾಗಿದ್ದಾರೆ. ಉದಯಪುರದಲ್ಲಿನ ಸ್ಥಳೀಯ ಆಸ್ಪತ್ರೆಗಳಲ್ಲಿ ಸಾಮೂಹಿಕ ವಿವಾಹದಲ್ಲಿ ಊಟ ಮಾಡಿದರವರೇ ತುಂಬಿಕೊಂಡಿದ್ದಾರೆ. ಆಹಾರದಲ್ಲಿನ ಸಮಸ್ಯೆಯಿಂದ ಸಮಸ್ಯೆಯಾಗಿದೆ ಅನ್ನೋದು ಖಚಿತವಾಗಿದೆ. ಇತ್ತ ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಾಹಿತಿ ಪಡೆದಿದ್ದಾರೆ. ಬಳಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಕರ ಬಳಿ ಆಹಾರದ ಮೆನು ತರಿಸಿಕೊಂಡಿದ್ದಾರೆ. ಈ ಪೈಕಿ ಪಾಯಸ ಹಾಗೂ ಸ್ವೀಟ್‌ನಲ್ಲಿ ವಿಷವಿರುವುದು ಪತ್ತೆಯಾಗಿದೆ. 

ಆಪ್ತರು, ಕುಟುಂಬಸ್ಥರು ಆಸ್ಪತ್ರೆ ದಾಖಲಾಗುತ್ತಿದ್ದ ಕಾರಣ ಬಹುತೇಕ ನವ ಜೋಡಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆಸ್ಪತ್ರೆ, ಮನೆ, ಪೊಲೀಸ್ ಠಾಣೆ ಅಲೆದಾಡುವಂತಾಗಿದೆ. ಹೀಗಾಗಿ ತಡರಾತ್ರಿ ವರೆಗೆ ಆಪ್ತರಿಗೆ ಚಿಕಿತ್ಸೆ ನೀಡುವುದು ಸೇರಿದಂತೆ ಹಲವು ಹೊಣೆಗಾರಿಕೆಯಲ್ಲಿ ಮೊದಲ ರಾತ್ರಿಯೇ ಇಲ್ಲದಾಗಿದೆ. ಈ ಪೈಕಿ ಕೆಲ ಅತಿಥಿಗಳು ಒಂದೆರೆಡು ದಿನ ಆಸ್ಪತ್ರೆಯಲ್ಲಿ ದಾಖಲಾಗ ಬೇಕಾದ ಅನಿವಾರ್ಯತೆಯೂ ಎದುರಾಗಿದೆ.
ಮದುವೆಯಲ್ಲಿ ಐಟಂ ಹಾಡಿಗೆ ಅಳಿಯನಾಗುವವನ ಡಾನ್ಸ್‌ ನೋಡಿ ಮದುವೆಯನ್ನೇ ನಿಲ್ಲಿಸಿದ ಮಾವ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು