
ಅಮೆರಿಕಾದ ಒಂದು ಪತ್ರಿಕೆ ಒಂದು ವಿಚಿತ್ರ ವಿದ್ಯಮಾನವನ್ನು ತೆರೆದಿಟ್ಟಿದೆ. ಕೊರೋನಾದಿಂದ ಲಾಕ್‌ಡೌನ್ ಆಗಿ ಮನೆಯಲ್ಲೇ ಸೇರಿಕೊಂಡಿರುವವರು ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಹೊಟ್ಟೆ ಕೆಡುತ್ತಿದೆ. ದಿನಕ್ಕೆ ಆರೇಳು ಬಾರಿ ಟಾಯ್ಲೆಟ್ಟಿಗೆ ಹೋಗಬೇಕಾಗುತ್ತದೆ. ಇದೊಂದು ಹೊಸ ಕಾಯಿಲೆ.
ಈ ರೋಗಕ್ಕೆ ಕಾರಣವೇನು ಅಂತ ಪತ್ತೆ ಮಾಡುತ್ತಾ ಹೋದಾಗ ಕಾರಣ ಸಿಕ್ಕಿತು. ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ಉಳಿದವರಿಗೆ ತಮ್ಮ ಹೆಂಡತಿಯ ಅಥವಾ ಗಂಡನ ಕಣ್ಣುತಪ್ಪಿಸಿ ತನ್ನ ಗೆಳೆಯ-ಗೆಳತಿಯ ಜೊತೆ ಮಾತಾಡಲು ಆಗುತ್ತಿರಲಿಲ್ಲ. ಮಾತಾಡದೇ ಇರಲೂ ಸಾಧ್ಯವಾಗುತ್ತಿರಲಿಲ್ಲ. ಸಂಬಂಧ ಬಿಟ್ಟುಹೋಗುತ್ತದೆ ಎಂಬ ಭಯವಿತ್ತು. ಹೀಗಾಗಿ ಅವರು ಆಗಾಗ ಟಾಯ್ಲೆಟ್ಟಿಗೆ ಹೋಗಿ ಅಲ್ಲಿ ಆಡಿಯೋ ಮ್ಯೂಟ್ ಮಾಡಿ ವಿಡಿಯೋ ಕಾಲ್ ಮಾಡಿ ಪರಸ್ಪರರ ಮುಖ ನೋಡಿ ತಮ್ಮ ಪ್ರೇಮವನ್ನು ಮರುಸ್ಥಾಪನೆ ಮಾಡಿಕೊಳ್ಳುತ್ತಿದ್ದರು.
ಲಾಕ್‌ಡೌನ್‌ನಿಂದಾಗಿ ದೂರದಲ್ಲಿರುವ ಸಂಗಾತಿಯನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್!
ಟಾಯ್ಲೆಟ್ಟಿಗೆ ಮೊಬೈಲ್ ಒಯ್ಯುವಂತಿಲ್ಲ ಅಂತ ಕ್ಯಾಲಿೆರ್ನಿಯಾದ ಮಹಿಳೆ ತನ್ನ ಗಂಡನಿಗೆ ತಾಕೀತು ಮಾಡಿದ ನಂತರ ಆತನ ಹೊಟ್ಟೆಯ ಆರೋಗ್ಯ ಸರಿಹೋಯಿತು ಎಂದು ಆಕೆ ತಮಾಷೆಯಾಗಿ ಬರೆದುಕೊಂಡಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.