ರಕ್ಷಾ ಬಂಧನ ಅಂದ್ರೆ ಅಣ್ಣ, ತಂಗಿಗೆ ಉಡುಗೊರೆ ನೀಡುವ ದಿನ. ಆದ್ರಿಲ್ಲ ಸ್ವಲ್ಪ ಬದಲಾಗಿದೆ. ಅಣ್ಣನಿಗೆ ತಂಗಿ ಮರೆಯಲಾಗದ ಉಡುಗೊರೆ ನೀಡಿದ್ದಾಳೆ. ಇದನ್ನು ಕೇಳಿದ ಜನರು ಭೇಷ್ ಎಂದಿದ್ದಾರೆ.
ರಕ್ಷಾ ಬಂಧನದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದೆ. ಅಣ್ಣ – ತಂಗಿಯರ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಈ ದಿನವೇ ರಕ್ಷಾ ಬಂಧನ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ, ಅವರ ಆಯಸ್ಸು, ಆರೋಗ್ಯ ವೃದ್ಧಿಗೆ ಪ್ರಾರ್ಥನೆ ಮಾಡ್ತಿದ್ದಾರೆ. ಅದೇ ವೇಳೆ ರಾಖಿ ಕಟ್ಟಿಕೊಂಡ ಸಹೋದರರು ಸಹೋದರಿಯರ ರಕ್ಷಣೆ ಮಾಡುವ ಭರವಸೆ ನೀಡುತ್ತಿದ್ದಾರೆ. ಸಹೋದರಿಯರಿಗೆ, ಅಣ್ಣ - ತಮ್ಮಂದಿರು ಉಡುಗೊರೆ ನೀಡ್ತಿದ್ದಾರೆ. ಸಹೋದರರಿಗೆ ಇಷ್ಟವಾಗುವ ರಾಖಿಗಳನ್ನು ಖರೀದಿಸುವ ಕೆಲಸವೂ ಒಂದು ಕಡೆ ನಡೆದಿದೆ. ಸಹೋದರ – ಸಹೋದರಿ ಸಂಬಂಧದಲ್ಲಿ ಯಾರು ರಕ್ಷಣೆ ಮಾಡ್ತಾರೆ, ಯಾರು ಪ್ರೀತಿ ಮಾಡ್ತಾರೆ ಎನ್ನುವುದು ಮಹತ್ವ ಪಡೆಯೋದಿಲ್ಲ. ಇಬ್ಬರೂ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತಾರೆ.
ಈ ರಕ್ಷಾಬಂಧನದ (Rakshabandhan) ದಿನ ಒಂದು ಗಮನ ಸೆಳೆಯುವ ಸುದ್ದಿಯೊಂದು ಹೊರ ಬಿದ್ದಿದೆ. ಇಲ್ಲಿ ಅಣ್ಣ, ತಂಗಿ ರಕ್ಷಣೆ ಮಾಡುವ ಬದಲು ತಂಗಿ ಅಣ್ಣನ ರಕ್ಷಣೆಗೆ ಇಳಿದಿದ್ದಾಳೆ. ಅಣ್ಣ (Brother) ನ ಪ್ರಾಣ ಉಳಿಸುವ ಮಹತ್ವದ ಕೆಲಸವನ್ನು ಮಾಡಿದ್ದಾಳೆ. ಈ ಮೂಲಕ ಎಲ್ಲರ ಕಣ್ಣಲ್ಲಿ ಮಹಾನ್ ವ್ಯಕ್ತಿಯಾಗಿದ್ದಾಳೆ. ಅಣ್ಣನಿಗೆ ದೇವತೆಯಂತೆ ಕಾಣಿಸಿಕೊಂಡಿದ್ದಾಳೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದನ್ನು ನಾವು ಹೇಳ್ತೇವೆ.
ಹೆಂಡ್ತಿ ಜೊತೆ ಖುಷಿ ಖುಷಿಯಾಗಿರಲು ಈ ರೂಲ್ಸ್ ಫಾಲೋ ಮಾಡಿ
ರಕ್ಷಾ ಬಂಧನದ ದಿನ ಮನಮುಟ್ಟಿದ ಘಟನೆ : ಮಾಧ್ಯಮಗಳ ವರದಿ ಪ್ರಕಾರ 35 ವರ್ಷದ ಹರೇಂದ್ರ ಎಂಬಾತ ಅಡ್ವಾನ್ಸ್ ಕಿಡ್ನಿ ವೈಫಲ್ಯ (Kidney Failure) ಸಮಸ್ಯೆಯಿಂದ ಬಳಲುತ್ತಿದ್ದ. 2022ರ ಜನವರಿಯಲ್ಲಿ ಹರೇಂದ್ರ ಅವರಿಗೆ ಈ ಕಾಯಿಲೆಯ ಬಗ್ಗೆ ತಿಳಿಯಿತು. ವೈದ್ಯರು ಹರೇಂದ್ರರಿಗೆ ಚಿಕಿತ್ಸೆ ನೀಡಿದ್ದರು. ಆದ್ರೆ ಹರೇಂದ್ರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸಲಿಲ್ಲ.
ಪರಿಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ ಹರೇಂದ್ರ ಡಿಸೆಂಬರ್ 2022 ರಿಂದ ನಿರಂತರವಾಗಿ ಡಯಾಲಿಸಿಸ್ ಗೆ ಒಳಗಾಗಬೇಕಾಯಿತು. ಆದ್ರೆ ಡಯಾಲಿಸಿಸ್ ಗೆ ಒಳಗಾದ್ರೂ ಹರೇಂದ್ರ ಸ್ಥಿತಿ ಸುಧಾರಿಸಲಿಲ್ಲ. ಅವರ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ ಕಿಡ್ನಿ ಬದಲಾವಣೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದರು. ಕಿಡ್ನಿ ದಾನಿಗಳ ಹುಡುಕಾಟ ಆಗ ಶುರುವಾಗಿತ್ತು. ಕುಟುಂಬಸ್ಥರು ಕಿಡ್ನಿ ಹುಡುಕಾಟಕ್ಕೆ ಸಾಕಷ್ಟು ಪ್ರಯತ್ನ ನಡೆಸಿದ್ದರು.
ಪ್ರತಿ ದಿನ ರಾತ್ರಿ ಕೇಸರಿ ಟೀ ಕುಡಿದ್ರೆ ಸೆಕ್ಸ್ ಲೈಫ್ ಸೂಪರ್
ಸಹೋದರಿ ಕೈಗೊಂಡಿದ್ರು ಮಹತ್ವದ ನಿರ್ಧಾರ : ಹರೇಂದ್ರ ಅವರು ಪ್ರಿಯಾಂಕ ಹೆಸರಿನ ತಂಗಿಯನ್ನು ಹೊಂದಿದ್ದಾರೆ. ಅಣ್ಣನ ಸ್ಥಿತಿ ನೋಡಿ ಪ್ರಿಯಾಂಕ ಮನ ಕರಗಿದೆ. ಅದೆಷ್ಟೆ ಪ್ರಯತ್ನಿಸಿದ್ರೂ ಕುಟುಂಬಕ್ಕೆ ಕಿಡ್ನಿ ದಾನಿ ಸಿಗಲಿಲ್ಲ. ಈ ಮಧ್ಯೆ ಹರೇಂದ್ರ ಸ್ಥಿತಿ ಮತ್ತಷ್ಟು ಕ್ಷಿಣಿಸುತ್ತಿತ್ತು. ಹರೇಂದ್ರ ಜೀವ ಉಳಿಸಲು ತಕ್ಷಣ ಒಂದು ಕಿಡ್ನಿಯ ಅಗತ್ಯವಿತ್ತು. ಇದಾದ ನಂತರ ಹರೇಂದ್ರನ ತಂಗಿ 23 ವರ್ಷದ ಪ್ರಿಯಾಂಕಾ ತನ್ನ ಸಹೋದರನ ಜೀವ ಉಳಿಸಲು ಮುಂದಾದಳು. ತನ್ನ ಒಂದು ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿದಳು. ಮಾಧ್ಯಮ ವರದಿಗಳ ಪ್ರಕಾರ, ಪ್ರಿಯಾಂಕಾ ನಿರ್ಧಾರದ ನಂತರ, ಆಗಸ್ಟ್ 10 ರಂದು, ಆಕೆಯ ಕಿಡ್ನಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಆಕೆಯ ಸಹೋದರ ಹರೇಂದ್ರಗೆ ಕಸಿ ಮಾಡಲಾಯಿತು.
ಸಹೋದರಿ ಪ್ರಿಯಾಂಕ ಕಿಡ್ನಿಯನ್ನು ಪಡೆದ ನಂತರ ಹರೇಂದ್ರ ಅವರ ಆರೋಗ್ಯ (Health) ಸುಧಾರಿಸಿದೆ. ಹರೇಂದ್ರ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಅಣ್ಣನ ಆರೋಗ್ಯದಲ್ಲಿ ಆಗ್ತಿರುವ ಬದಲಾವಣೆ ಪ್ರಿಯಾಂಕ ಕಣ್ಣಲ್ಲಿ ನೀರು ತರಿಸಿದ್ರೆ ರಕ್ಷಾ ಬಂಧನದಂದು (Raksha Bandhan) ಸಹೋದರ ತನ್ನ ಸಹೋದರಿಗೆ ಉಡುಗೊರೆ (Gift) ನೀಡುತ್ತಾನೆ, ಆದರೆ ಇಲ್ಲಿ ನನ್ನ ಸಹೋದರಿ ಇದಕ್ಕೆ ವಿರುದ್ಧವಾಗಿ ನನಗೆ ಹೊಸ ಜೀವನವನ್ನು (New Life) ಉಡುಗೊರೆಯಾಗಿ ನೀಡಿದ್ದಾಳೆ ಎಂದು ಹರೇಂದ್ರ ಹೇಳುತ್ತಾರೆ.