ಗೊಂಬೆಯಿಂದ ಮಕ್ಕಳನ್ನು ಬೇರ್ಪಡಿಸೋದು ಕಷ್ಟ. ಬೊಂಬೆಗಳನ್ನು ಅತಿಯಾಗಿ ಪ್ರೀತಿಸುವ ಮಕ್ಕಳು ಅದು ದೂರವಾದ್ರೆ ಅಳ್ತಾರೆ. ಕಳೆದುಕೊಂಡ ನೋವಿನಲ್ಲಿದ್ದ ಬಾಲಕಿಯೊಬ್ಬಳಿಗೆ ಕೊನೆಗೂ ಆಕೆಯ ಪ್ರಾಣದಂತಿದ್ದ ಬೊಂಬೆ ಅಚ್ಚರಿ ರೀತಿಯಲ್ಲಿ ಸಿಕ್ಕಿದೆ.
ಹೆಣ್ಣು ಮಕ್ಕಳಿಗೆ ಗೊಂಬೆ ಮೇಲೆ ಅಪಾರ ಪ್ರೀತಿ ಇರುತ್ತೆ. ಆ ಗೊಂಬೆಗಳೇ ಮಕ್ಕಳ ಸ್ನೇಹಿತರು, ಮಕ್ಕಳು, ವಿದ್ಯಾರ್ಥಿಗಳು ಎಲ್ಲ ಪಾತ್ರವನ್ನು ನಿಭಾಯಿಸಬೇಕಾಗುತ್ತದೆ. ಮಕ್ಕಳ ಕೈನಲ್ಲಿ ಸದಾ ಒಂದು ಸುಂದರ ಬೊಂಬೆ ಇರೋದನ್ನು ನೀವು ನೋಡಿರಬಹುದು. ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಆ ಬೊಂಬೆ ಹಿಡಿದೇ ಓಡಾಡುವ ಮಕ್ಕಳಿದ್ದಾರೆ. ಅವರಿಷ್ಟದ ಗೊಂಬೆ ಹಾಳಾದ್ರೆ ಅಥವಾ ಕಳೆದು ಹೋದ್ರೆ ಅವರಿಗಾಗುವ ನೋವು ಹೇಳತೀರದು. ಮತ್ತೆ ಅದೇ ಬೊಂಬೆ ಬೇಕೆಂದು ಹಠ ಮಾಡುವ ಮಕ್ಕಳಿದ್ದಾರೆ. ಮನೆಯಲ್ಲೋ ಅಥವಾ ಪರಿಚಿತ ಪ್ರದೇಶದಲ್ಲೋ ಗೊಂಬೆ ಬಿಟ್ಟು ಬಂದಿದ್ರೆ ಅದನ್ನು ಮರಳಿ ಪಡೆಯಬಹುದು. ಆದ್ರೆ ಸಾರ್ವಜನಿಕ ಪ್ರದೇಶದಲ್ಲಿ, ವಿಮಾನ, ವಿಮಾನ ನಿಲ್ದಾಣದಲ್ಲಿ ಗೊಂಬೆ ಕಳೆದ್ರೆ ಸಿಗೋದು ಕಷ್ಟ. ಈ ಹುಡುಗಿ ಅದೃಷ್ಟ ಚೆನ್ನಾಗಿತ್ತು. ಕಳೆದುಕೊಂಡಿದ್ದ ಗೊಂಬೆ ಮತ್ತೆ ಸಿಕ್ಕಿದೆ. ಬಾಲಕಿಗೆ ಗೊಂಬೆ ನೀಡುವ ಕೆಲಸವನ್ನು ಪೈಲೆಟ್ ಮಾಡಿದ್ದಾರೆ.
ಘಟನೆ ನಡೆದಿರೋದು ಅಮೆರಿಕಾ (America) ದಲ್ಲಿ. ವಿಮಾನದಲ್ಲಿ ಗೊಂಬೆ (Doll) ಕಳೆದುಕೊಂಡ 9 ವರ್ಷದ ಬಾಲಕಿ ಹೆಸರು ವ್ಯಾಲಂಟಿನಾ. ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಜೇಮ್ಸ್ ಡ್ಯಾನೆನ್ ಅವರು ವ್ಯಾಲೆಂಟಿನಾ ಗೊಂಬೆ ಕಾಣೆಯಾಗಿದೆ ಎಂದು ವಿಷ್ಯವನ್ನ ಫೇಸ್‌ಬುಕ್‌ನಿಂದ ತಿಳಿದುಕೊಂಡರು. ಅದರ ನಂತರ ಅವರು ಟೋಕಿಯೊ (Tokyo) ಹನೆಡಾ ವಿಮಾನ ನಿಲ್ದಾಣದ ಟರ್ಕಿಶ್ ಏರ್ಲೈನ್ಸ್ ಅನ್ನು ಸಂಪರ್ಕಿಸಿದರು. ಅಲ್ಲಿ ವ್ಯಾಲೆಂಟಿನಾ ಗೊಂಬೆ ಪತ್ತೆಯಾಯ್ತು. ಆ ಗೊಂಬೆಯನ್ನು ತೆಗೆದುಕೊಂಡ ಜೇಮ್ಸ್ ಡ್ಯಾನೆನ್, ಮೆಚ್ಚುವ ಕೆಲಸ ಮಾಡಿದ್ದಾರೆ. ಗೊಂಬೆಯನ್ನು ವ್ಯಾಲೆಂಟಿನಾಗೆ ನೀಡಿ, ಆಕೆ ಮುಖದಲ್ಲಿ ನಗು ಮೂಡಿಸಿದ್ದಾರೆ.
ಪ್ರಜ್ಞಾನಂದನ ತಾಯಿಗೆ ಚೆಸ್ ಗೊತ್ತಿಲ್ಲ, ಆದ್ರೆ ತೊವ್ವೆ ಮಾಡೋದು ಗೊತ್ತಿದೆ!
ಪೈಲಟ್ ಜೇಮ್ಸ್ ಡ್ಯಾನೆನ್ ಮನೆ ವ್ಯಾಲಂಟಿನಾ ಮನೆ ಬಳಿಯೆ ಇದೆ. ವ್ಯಾಲೆಂಟಿನಾ ಮನೆಗೆ ಹೋದ ಜೇಮ್ಸ್ ಡ್ಯಾನೆನ್, ಗೊಂಬೆ ಜೊತೆ ಜಪಾನೀಸ್ ಟ್ರೋಟ್ ಮತ್ತು ಮ್ಯಾಪನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೊಂಬೆ ವಾಪಸ್ ಸಿಗುತ್ತಿದ್ದಂತೆ ಖುಷಿಯಿಂದ ವ್ಯಾಲಂಟಿನಾ ಕಿರುಚಿಕೊಂಡ್ರೆ ಕುಟುಂಬಸ್ಥರು ಜೇಮ್ಸ್ ಡ್ಯಾನೆನ್ ಗೆ ಧನ್ಯವಾದ ಹೇಳಿದ್ದಾರೆ.
ವ್ಯಾಲಂಟಿನಾಗೆ ಗೊಂಬೆ ನೀಡಲು, ಜೇಮ್ಸ್ ಡ್ಯಾನೆನ್ ಟೋಕಿಯೊದಿಂದ ಟೆಕ್ಸಾಸ್‌ಗೆ ಪ್ರಯಾಣ ಬೆಳೆಸಿದ್ದರು. ವ್ಯಾಲಂಟಿನಾ ಗೊಂಬೆಯನ್ನು ವಿಮಾನದಲ್ಲಿಯೇ ಬಿಟ್ಟಿದ್ದಳು. ಮೂರು ವಾರಗಳ ನಂತ್ರ ವ್ಯಾಲಂಟಿನಾಗೆ ಗೊಂಬೆ ವಾಪಸ್ ಸಿಕ್ಕಿದೆ. ಇದು ನನ್ನ ಸ್ವಭಾವ, ನಾನು ಜನರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ. ಬೇರೆಯವರಿಗೆ ಒಳ್ಳೆಯದು ಮಾಡಿದ್ರೆ ನನಗೆ ಖುಷಿಯಾಗುತ್ತದೆ ಎಂದು ಪೈಲೆಟ್ ಜೇಮ್ಸ್ ಹೇಳಿದ್ದಾರೆ.
ಮಕ್ಕಳು ಶಾಲೆಗೆ ಹೋಗ್ಲಿಲ್ಲವೆಂದ್ರೆ ಪಾಲಕರಿಗೆ ಜೈಲು!
ವಿಮಾನದಲ್ಲಿ ಕಳೆದುಕೊಂಡ ವಸ್ತುಗಳು ಎಲ್ಲಿಗೆ ಹೋಗುತ್ವೆ ಗೊತ್ತಾ? : ಇತ್ತೀಚಿನ ದಿನಗಳಲ್ಲಿ ವಿಮಾನ ಹಾರಾಟ ಸಾಮಾನ್ಯ ಎನ್ನುವಂತಾಗಿದೆ. ನಾವು ಅನೇಕ ಬಾರಿ ವಿಮಾನದಲ್ಲಿ ಹಾರಾಟ ನಡೆಸುತ್ತಿರುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಯಾವುದೋ ವಸ್ತು ವಿಮಾನದಲ್ಲಿ ಕಳೆದು ಹೋದ್ರೆ ಅಥವಾ ಅದನ್ನು ಮರೆತು ನಾವು ವಿಮಾನದಿಂದ ಇಳಿದ್ರೆ, ಮೂರು ತಿಂಗಳ ಒಳಗೆ ಅದನ್ನು ನಾವು ಪಡೆಯಬಹುದು. ವಿಮಾನ ಕಂಪನಿಗಳಿಗೆ ವಸ್ತುಗಳನ್ನು ವಾಪಸ್ ಮಾಡಲು ಮೂರು ತಿಂಗಳ ಅವಕಾಶವಿರುತ್ತದೆ. ಒಂದ್ವೇಳೆ ವಸ್ತು ಕಂಪನಿಗೆ ಸಿಕ್ಕಿಲ್ಲವೆಂದ್ರೆ ಅದನ್ನು ಕಳೆದಹೋಗಿದೆ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದು ಕಡೆ ವಸ್ತುವಿದ್ದು, ಅದ್ರ ಮಾಲಿಕನ ಪತ್ತೆಯಾಗಿಲ್ಲವೆಂದ್ರೆ ಭಾರತದಲ್ಲಿ ಆ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ಭಾರತೀಯ ಏರ್‌ಪೋರ್ಟ್ ಅಥಾರಿಟಿ ಹರಾಜನ್ನು ಏರ್ಪಡಿಸುತ್ತದೆ. ಈ ಹರಾಜುಗಳು ಸಾರ್ವಜನಿಕರಿಗೂ ಮುಕ್ತವಾಗಿವೆ. ಹರಾಜಿನ ಬಗ್ಗೆ ಮಾಹಿತಿಯನ್ನು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಸರಕುಗಳ ಪ್ರದರ್ಶನದ ನಂತರ ಹರಾಜುಗಳನ್ನು ಖಾಸಗಿಯಾಗಿ ನಡೆಸಲಾಗುತ್ತದೆ. ಬೇರೆ ಬೇರೆ ದೇಶದಲ್ಲಿ ಇದಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ನಿಯಮಗಳಿವೆ.