ಪ್ರಜ್ಞಾನಂದನ ತಾಯಿಗೆ ಚೆಸ್ ಗೊತ್ತಿಲ್ಲ, ಆದ್ರೆ ತೊವ್ವೆ ಮಾಡೋದು ಗೊತ್ತಿದೆ!

By Suvarna News  |  First Published Aug 29, 2023, 12:13 PM IST

ವಿಶ್ವದ ಗಮನ ಸೆಳೆದ ಪ್ರಜ್ಞಾನಂದ ಜೊತೆಗೆ ಆತನ ತಾಯಿಯೂ ಫೇಮಸ್ ಆಗಿದ್ದಾರೆ. ಪ್ರಜ್ಞಾನಂದನ ಸಾಧನೆಗೆ ಅವನ ಪರಿಶ್ರಮದ ಜೊತೆಗೆ ಅಮ್ಮನ ಕೈ ರುಚಿ ಕೂಡ ಕಾರಣ.


ಟೋಬಿ ಸಿನಿಮಾದ ಮೂಲಕ ಸುದ್ದಿಯಲ್ಲಿರುವ ರಾಜ್ ಬಿ ಶೆಟ್ಟಿ ಸಂದರ್ಶವೊಂದರಲ್ಲಿ ಹೇಳ್ತಾ ಇದ್ದರು, ಒಬ್ಬ ಸಾಮಾನ್ಯ ಮುಗ್ಧತೆಗೆ ಒಂದು ಕ್ಯೂಟ್‌ನೆಸ್‌ ಇರುತ್ತದೆ ಅಂತ. ಅದನ್ನು ಕೆಲವರು ಟೋಬಿ ಸಿನಿಮಾದಲ್ಲಿ ನೋಡಿದರೆ ಸಾಕಷ್ಟು ಜನ ಪ್ರಜ್ಞಾನಂದನ ಅಮ್ಮ ನಾಗಲಕ್ಷ್ಮಿಯಲ್ಲಿ ನೋಡಿದರು. ಇಡೀ ಜಗತ್ತಿಗೆ ಮಹಾನ್‌ ಪ್ರತಿಭೆಯಾಗಿ ಪ್ರಜ್ಞಾನಂದ ಕಂಡ ಹಾಗೆ ಮರೆಯಲ್ಲಿ ಮಗನ ಬೆಳವಣಿಗೆ ನೋಡಿ ಕಣ್ತುಂಬಿಕೊಂಡ ಆ ಮುಗ್ಧ ಅಮ್ಮನೂ ಗಮನಸೆಳೆಯುತ್ತಾರೆ. ಇನ್ನೊಂದು ವಿಶೇಷ ಅಂದರೆ ಆ ಅಮ್ಮ ನಮ್ಮೆಲ್ಲರ ಅಮ್ಮನ ಹಾಗೆ ಪ್ರೀತಿ, ಅಕ್ಕರೆ, ಮುಗ್ಧತೆಯಲ್ಲಿ ಇರುವುದು. ಮಗ ಪ್ರಜ್ಞಾನಂದ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಪ್ರತಿಭಾವಂತ ಚೆಸ್ ಆಟಗಾರ. ಆದರೆ ಆತನ ತಾಯಿ ನಾಗಲಕ್ಷ್ಮಿಗೆ ಚೆಸ್ ಆಟದ ಒಂದು ಸಣ್ಣ ಮೂವ್ ಸಹ ಅರ್ಥವಾಗುವುದಿಲ್ಲ. ಆದರೆ ಮಗನ ಮುಖ ನೋಡಿದ ತಕ್ಷಣ ಆಟದಲ್ಲಿ ಅವನ ಸ್ಥಾನವೇನು ಎನ್ನುವುದು ಆಕೆಯ ಗ್ರಹಿಕೆಗೆ ಬರುತ್ತದೆ.

ನಾಗಲಕ್ಷ್ಮಿಯ ಜೀವನ ಪೂರ್ತಿ ಪ್ರಜ್ಞಾನಂದ ಮತ್ತು ಅವನ ಅಕ್ಕ ವೈಶಾಲಿಯ ಚೆಸ್ ಜೀವನದ ಸುತ್ತಮುತ್ತ ಕಳೆದು ಹೋಗಿದೆ. ಮಕ್ಕಳ ಜೊತೆಗೆ ಈ ತಾಯಿಯೂ ಊರೂರು ಸುತ್ತುತ್ತಾಳೆ. ಯಾವ ದೇಶಕ್ಕೆ ಯಾವ ಊರಿಗೇ ಹೋಗಲಿ, ಅವಳು ಮೊದಲು ತಾನು ತಂದ ಇಂಡಕ್ಷನ್ ಸ್ಟವ್ಅನ್ನು ರೆಡಿ ಮಾಡ್ತಾಳೆ. ಆಮೇಲೆ ಬ್ಯಾಗ್‌ನಿಂದ ಕುಕ್ಕರ್ ಹೊರತೆಗೆಯುತ್ತಾಳೆ. ಇವೆಲ್ಲ ಸಿದ್ಧವಾದ ಮೇಲೆ ಅಕ್ಕಿ, ಬೇಳೆ ಚೀಲದಿಂದ ಹೊರಬರುತ್ತದೆ. ಮಗ ಚೆಸ್‌ನ ಮೂವ್‌ಮೆಂಟ್‌ನಲ್ಲಿ ಜಗತ್ತನ್ನೇ ಮರೆಯುತ್ತಿರುವಾಗ ಈ ತಾಯಿ ಅವನಿಗೋಸ್ಕರ ಮಾಡುವ ಅಡುಗೆಯಲ್ಲಿ ಸಂಪೂರ್ಣ ತಲ್ಲೀನಳಾಗಿರ್ತಾಳೆ.

Tap to resize

Latest Videos

undefined

ವಧು 25 ವರ್ಷದೊಳಗಿದ್ದರೆ ಮದುವೆಯಾಗುವ ಜೋಡಿಗೆ 11 ಸಾವಿರ ರೂ, ಹೊಸ ಯೋಜನೆ ಜಾರಿ!

ಆಕೆಗೆ ಗೊತ್ತು, ಎಂಥಾ ಟೆನ್ಶನ್ ಇದ್ದರೂ ಅಮ್ಮ ಹಾಕುವ ಊಟ ಅದನ್ನು ನಿಯಂತ್ರಿಸಬಲ್ಲದು, ಮಗನನ್ನು ಸಮಚಿತ್ತದಿಂದ ಇರುವ ಹಾಗೆ ಮಾಡಬಲ್ಲದು ಅಂತ. ಪ್ರಜ್ಞಾನಂದ ಸ್ಪರ್ಧೆಗೆ ಮುಂಚೆ ತಿನ್ನುವುದು ಅತ್ಯಂತ ಸಾತ್ವಿಕ ಆಹಾರ. ಅನ್ನ ಮತ್ತು ತೊವ್ವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಆಟವಿದ್ದರೂ ಈ ತಾಯಿ ಅವನಿಂದೆ ಹೊರಟು ಬಿಡುತ್ತಾರೆ. ಮಗನ ಬೇಕು ಬೇಡಗಳು ಆತ ಹೇಳುವ ಮುನ್ನವೇ ಆಕೆಗೆ ತಿಳಿದು ಬಿಡುತ್ತವೆ.

ಅಮ್ಮನನ್ನು ನಾವು ಹೇಗೆ ಬೇಕಾದರೂ ವರ್ಣಿಸಬಹುದು. ಆದರೆ ಆ ತಾಯಿಯ ಡೆಡಿಕೇಶನ್‌ ನಮ್ಮ ಎಷ್ಟು ಜನ ತಂದೆ ತಾಯಿಯರಿಗೆ ಮಕ್ಕಳನ್ನು ಪೋಷಿಸುವುದರಲ್ಲಿದೆ. ಮಕ್ಕಳನ್ನು ಓದು ಅಂತ ಜೀವ ಹಿಂಡುವ ಅಪ್ಪ, ಅಮ್ಮ, ಆ ಮಗು ಓದಲು ಬೇಕಾಗುವ ಪೂರಕ ವಾತಾವರಣ ನಿರ್ಮಿಸುವಲ್ಲಿ ಯಾಕೆ ಸೋಲ್ತಾರೆ? ಬಹುಶಃ ಅದಕ್ಕೆ ಕೆರಿಯರ್ ಸೆಂಟರ್ಡ್ ಆಗಿರುವ ಈ ಕಾಲದ ತಂದೆ, ತಾಯಿಯೂ ಕಾರಣ ಇರಬಹುದೇನೋ. ತಿನ್ನುವುದು ಜಸ್ಟ್ ಒಂದು ಕ್ರಿಯೆ ಅಷ್ಟೇ ಆಗಿರುವ ಕಾಲದಲ್ಲಿ ಮಕ್ಕಳು ತಲೆಯಲ್ಲಿ ಟೆನ್ಶನ್ ಮಾತ್ರ ಅಲ್ಲ, ಹೊಟ್ಟೆಯಲ್ಲಿ ಅಸಿಡಿಟಿಯನ್ನೂ ತುಂಬಿಸಿಕೊಂಡು ಹೋಗಿ ಎಕ್ಸಾಂ ಹಾಲ್‌ನಲ್ಲಿ (exam hall)  ಏನೋ ಒಂದು ವಾಂತಿ ಮಾಡಿ ಬರ್ತಾರೆ. ರಿಸಲ್ಟ್ ಬರುವ ಟೈಮಲ್ಲಿ ಅಪ್ಪ, ಅನ್ನ ಕ್ರಿಯೇಟ್ ಮಾಡೋ ಒತ್ತಡಕ್ಕೆ ತಲೆಯೊಳಗೂ ಆಸಿಡಿಟಿ ಆದ್ರೆ ಆಶ್ಚರ್ಯ ಇಲ್ಲ.

ಬಾಲ್ಯದ ಘಟನೆಗಳಿಂದಲೇ ಮೂಡಿತೇ ಕೀಳರಿಮೆ? ಹೇಗೆ ಗುರುತಿಸಿ, ನಿವಾರಿಸಿಕೊಳ್ಳೋದು?

ಮಕ್ಕಳಿಗೆ ಊಟ ಅನ್ನುವುದು ಜಸ್ಟ್ ಒಂದು ಫುಡ್ ಅಷ್ಟೇ ಅಲ್ಲ. ಅದು ಅವರಿಗೆ ಸಮಾಧಾನ ನೀಡುವ ಅಂಶ. ಅಪ್ಪ ಅಥವಾ ಅಮ್ಮ ತಮ್ಮ ಅಕ್ಕರೆಯನ್ನು, ಪ್ರೀತಿಯನ್ನು ಮಗಳಿಗೆ ಕೈಯ್ಯಾರೆ ಅಡುಗೆ ಮಾಡಿ, ಒಂದು ತುತ್ತು ತಿನ್ನಿಸುವುದರ ಮೂಲಕ ತೋರಿಸಬಹುದು. ಈ ಮೂಲಕ ಮಗಳೇ, ನಿನ್ನ ಸಪೋರ್ಟ್‌ಗೆ (support) ನಾನೂ ಇದ್ದೀನಿ, ಯಾವ ಟೆನ್ಶನ್ನೂ ಇಲ್ಲದೇ ಎಕ್ಸಾಂ (exam)  ಬರಿ ಅಂತ ಹೇಳ್ಬಹುದು. ನಾನು ಸೋಷಿಯಲ್ ಮೀಡಿಯಾದಲ್ಲಿ (social media) ಬಿದ್ದು ಒದ್ದಾಡುವ ಟೈಮಲ್ಲಿ ಒಂದಿಷ್ಟನ್ನು ಮಗಳಿಗಾಗಿ ಮೀಸಲಿಟ್ಟರೆ ಸಾಕು, ಆ ಮಗುವಿನ ಬದುಕಿನ ದಾರಿಯನ್ನೇ ಬೆಳಗಬಹುದು!'

click me!