ಮದುವೆ ಎನ್ನೋದು ಒಂದು ಸುಂದರವಾದ ಸಂಬಂಧ. ದಾಂಪತ್ಯ ಚೆನ್ನಾಗಿರಬೇಕಾದರೆ ಲೈಂಗಿಕ ಜೀವನವೂ ಚೆನ್ನಾಗಿರಬೇಕು. ಆದ್ರೆ ಕೆಲವೊಮ್ಮೆ ಮದ್ವೆಯಾಗಿ ಎಷ್ಟ್ ವರ್ಷ ಕಳೆದರೂ ಲೈಂಗಿಕ ಜೀವನದಲ್ಲಿ ಅತೃಪ್ತಿ ಕಾಡುತ್ತಿರುತ್ತದೆ ಅದಕ್ಕೇನು ಕಾರಣ ?
ಭಾವನಾತ್ಮಕ ಸಮಸ್ಯೆಗಳಿಂದ ಹಿಡಿದು ದೈಹಿಕ ಅಂಶಗಳವರೆಗೆ ವ್ಯಕ್ತಿ ಲೈಂಗಿಕ ಜೀವನದಲ್ಲಿ ಸಂತೋಷವಾಗದೇ ಇರಲು ಹಲವು ಕಾರಣಗಳಿರಬಹುದು. ಬಯಸಿದ ಖುಷಿ ಸಿಗದಿದ್ದಾಗ ಅತೃಪ್ತಿಯ ಅನುಭವವಾಗುತ್ತದೆ. ಅದು ಹಾಗೆ ತೋರದಿದ್ದರೂ, ಸಾರ್ಥಕ ಲೈಂಗಿಕ ಜೀವನವು ಪ್ರತಿಯೊಬ್ಬರ ವ್ಯಾಪ್ತಿಯಲ್ಲಿದೆ. ನೀವು ಸಂಬಂಧದಲ್ಲಿರಲಿ ಅಥವಾ ಒಂಟಿಯಾಗಿರಲಿ, ನಿಮ್ಮ ಲೈಂಗಿಕ ಜೀವನವನ್ನು ಹೆಚ್ಚು ಆನಂದದಾಯಕವಾಗಿಸುವ ಮಾರ್ಗಗಳಿವೆ. ನಿಮ್ಮ ಲೈಂಗಿಕ ಜೀವನದಲ್ಲಿ ನೀವು ಅತೃಪ್ತರಾಗಿದ್ದರೆ, ಬದಲಾವಣೆ ಮಾಡಲು ಇದು ಸರಿಯಾದ ಸಮಯ. ಅದಕ್ಕಿಂತಲೂ ಮೊದಲು ನಿಮ್ಮ ಲೈಂಗಿಕ ಜೀವನವು ಖುಷಿಯಾಗಿ ಇರದಿರಲು ಕಾರಣವೇನು ತಿಳ್ಕೊಳ್ಳಿ.
ಲೈಂಗಿಕ ಜೀವನ ಅತೃಪ್ತಿಕರವಾಗಿರಲು ಕಾರಣಗಳು
1. ಸ್ವಯಂ ಅನ್ವೇಷಣೆ: ನಿಮ್ಮನ್ನು ಅನ್ವೇಷಿಸಲು ನೀವು ಸಮಯವನ್ನು ತೆಗೆದುಕೊಳ್ಳದಿದ್ದರೆ, ನೀವು ಪರಾಕಾಷ್ಠೆಯನ್ನು ತಲುಪಲು ಕಷ್ಟಪಡಬಹುದು ಅಥವಾ ಲೈಂಗಿಕ ಸಮಯದಲ್ಲಿ ನಿಮ್ಮ ಸ್ವಂತ ಆಸೆಗಳನ್ನು ಸಂಪೂರ್ಣವಾಗಿ ಪೂರೈಸಬಹುದು. ಇದನ್ನು ಎದುರಿಸಲು, ಸ್ವಯಂ ಅನ್ವೇಷಣೆ ತಂತ್ರಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ. ಲೈಂಗಿಕತೆಯಲ್ಲಿ (Sex) ನೀವು ವಿಭಿನ್ನ ಸ್ಪರ್ಶ, ಸ್ಥಾನಗಳು, ಕಲ್ಪನೆಗಳು ಇತ್ಯಾದಿಗಳೊಂದಿಗೆ ಪ್ರಯೋಗಿಸಬಹುದು.
ಐಷಾರಾಮಿ ಜೀವನಕ್ಕೆ ಬಾಸ್ ಜೊತೆ ಮಲಗ್ತೇನೆ, ಅದಕ್ಕೆಲ್ಲ ಬೇಜಾರಿಲ್ವಂತೆ ಇವ್ಳಿಗೆ!
2. ಜೀವನದ ಇತರ ಕ್ಷೇತ್ರಗಳಲ್ಲಿ ಅಸಂತೋಷ: ನಿಮ್ಮ ಜೀವನದ ಇತರ ಕ್ಷೇತ್ರಗಳಲ್ಲಿ ನೀವು ಅತೃಪ್ತರಾಗಿದ್ದರೆ ಉತ್ತಮ ಲೈಂಗಿಕ ಜೀವನವನ್ನು ಹೊಂದುವುದು ಕಷ್ಟ. ಕೆಲಸದಲ್ಲಿನ ಒತ್ತಡ (Pressure), ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡುವುದು ಅಥವಾ ಪರಸ್ಪರ ಸಂಘರ್ಷಗಳೊಂದಿಗೆ ವ್ಯವಹರಿಸುವುದು ಮುಂತಾದ ಅಂಶಗಳು ಲೈಂಗಿಕ ಅತೃಪ್ತಿಗೆ ಕಾರಣವಾಗಬಹುದು.
3. ಗೌಪ್ಯತೆಯ ಕೊರತೆ: ನೀವು ರೂಮ್‌ಮೇಟ್‌ಗಳು, ಚಿಕ್ಕ ಮಕ್ಕಳು ಅಥವಾ ಇತರ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರೆ, ನಿಮ್ಮ ಸಂಗಾತಿ (Partner)ಯೊಂದಿಗೆ ಅನ್ಯೋನ್ಯವಾಗಿರಲು ಸಮಯ ಮತ್ತು ಸ್ಥಳವನ್ನು ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ. ಹೆಚ್ಚು ಸಮಯ ಜೊತೆಯಲ್ಲೇ ಕಳೆಯದೇ ಇರುವುದರಿಂದ ಇಬ್ಬರ ನಡುವೆಯೂ ಒಂದು ಅಂತರವಿರುವ ಅನುಭವವಾಗುತ್ತದೆ. ಇದು ಲೈಂಗಿಕ ಜೀವನದಲ್ಲಿಯೂ ಡಿಸ್ಟೆನ್ಸ್ ಉಂಟು ಮಾಡುತ್ತದೆ. ಇಂಥಾ ಸಮಸ್ಯೆಯಿದ್ದಾಗ ಔಟಿಂಗ್, ವಾರಾಂತ್ಯದ ವಿಹಾರಗಳನ್ನು ನಿಗದಿಪಡಿಸಲು ಪ್ರಯತ್ನಿಸಬಹುದು. ಅಲ್ಲಿ ನೀವು ಪರಸ್ಪರ ಖಾಸಗಿ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ.
4. ದೇಹದ ಕುರಿತಾದ ಮನೋಭಾವ: ತೂಕದಲ್ಲಿನ ಬದಲಾವಣೆಗಳು, ಹಾರ್ಮೋನುಗಳ ಏರಿಳಿತಗಳು, ವಯಸ್ಸಾದ ಅಥವಾ ದೀರ್ಘಕಾಲದ ಕಾಯಿಲೆಗಳು (Disease) ನಿಮ್ಮ ದೈಹಿಕವಾಗಿ ನಿಮ್ಮ ಬಗ್ಗೆ ಹೇಗೆ ಭಾವಿಸುತ್ತೀರಿ ಎಂಬುದರ ಮೇಲೆ ಪರಿಣಾಮ ಬೀರಬಹುದು, ಇದು ಲೈಂಗಿಕ ಸಮಯದಲ್ಲಿ ನೀವು ಎಷ್ಟು ಆತ್ಮವಿಶ್ವಾಸ (Confidence) ಮತ್ತು ಆರಾಮದಾಯಕವಾಗಿರುತ್ತೀರಿ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹದ ಬಗ್ಗೆ ಈ ಅವಮಾನದ ಭಾವನೆಗಳು ಲೈಂಗಿಕತೆಯನ್ನು ಸಂಪೂರ್ಣವಾಗಿ ಆನಂದಿಸುವುದನ್ನು ತಡೆಯುತ್ತದೆ. ಹೀಗಾಗಿ ನಿಮ್ಮ ದೇಹವನ್ನು ಯಾವಾಗಲೂ ಸುಂದರವಾಗಿ ಇಟ್ಟುಕೊಳ್ಳುವುನ್ನು ಮರೆಯದಿರಿ. ಮದ್ವೆಯಾಗಿದ್ಯಲ್ಲ ಇನ್ನೇನ್ ಸಮಸ್ಯೆ ಅಂತ ಅಧಿಕ ತೂಕ, ಬೊಜ್ಜು ಸಮಸ್ಯೆಯನ್ನು ಬೆಳೆಸಿಕೊಳ್ಳಬೇಡಿ.
ಗಂಡ ಎಷ್ಟು ಕ್ಲೋಸಾಗಿದ್ರೂ ಹೆಂಡ್ತಿ ಲೈಂಗಿಕ ಜೀವನದ ಈ ವಿಷ್ಯ ಹೇಳೋಲ್ಲ
5. ಲೈಂಗಿಕತೆಯ ಹಿಂದಿನ ನಕಾರಾತ್ಮಕ ಅನುಭವಗಳು: ಅತ್ಯಾಚಾರ ಯತ್ನ, ಆಘಾತ ಹೀಗೆ ಈ ಹಿಂದೆ ಯಾವುದೇ ಶಾಕಿಂಗ್ ಘಟನೆ ನಡೆದಿದ್ದರೆ ಇದು ಲೈಂಗಿಕತೆಯ ಮೇಲೆ ನಕಾರಾತ್ಮಕವಾಗಿ (Negative) ಪರಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ನೋವಿನ ನೆನಪುಗಳು ಅಥವಾ ಪ್ರಚೋದಕಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಮುಖ್ಯವಾಗಿದೆ, ಆ ಅನುಭವಗಳಿಂದ ಗುಣಮುಖವಾಗಲು ಮತ್ತು ಲೈಂಗಿಕತೆಯನ್ನು ಹೇಗೆ ಆನಂದಿಸಬೇಕು ಎಂಬುದನ್ನು ಕಲಿಯುವುದು ಮುಖ್ಯವಾಗಿದೆ.
6. ಲೈಂಗಿಕ ಜೀವನವನ್ನು ಸುಧಾರಿಸಲು ಸಲಹೆ: ಎಲ್ಲರೂ ಯಶಸ್ವೀ ಲೈಂಗಿಕ ಜೀವನವನ್ನು ನಡೆಸಬಹುದು. ಆದ್ರೆ ಇದಕ್ಕೆ ಸ್ಪಲ್ಪ ತಾಳ್ಮೆ ಹಾಗೂ ಶ್ರಮದ ಅಗತ್ಯವಿದೆ. ಒಮ್ಮೆ ನೀವು ಮೂಲ ಕಾರಣವನ್ನು ಗುರುತಿಸಿದರೆ, ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಸಂತೋಷವು (Happiness) ಒಂದು ಆಯ್ಕೆಯಾಗಿದೆ. ಆದ್ದರಿಂದ, ಆರೋಗ್ಯಕರ ಮತ್ತು ಸಂತೋಷದ ಲೈಂಗಿಕ ಜೀವನವನ್ನು ಆನಂದಿಸಲು ನೀವು ಯಾವಾಗಲೂ ಆಯ್ಕೆ ಮಾಡಬಹುದು. ನಿಮ್ಮ ಮನಸ್ಸಿನ ಸ್ಥಿತಿಯು ನಿಮ್ಮ ಲೈಂಗಿಕತೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮನಸ್ಥಿತಿಯನ್ನು ಯಾವಾಗಲೂ ಕೂಲ್ ಆಗಿ, ಖುಷಿಯಾಗಿಟ್ಟು ಕೊಳ್ಳುವುದು ಮುಖ್ಯ.