ಯುದ್ಧಕ್ಕೆ ಹೋಗೋ ಸೈನಿಕರನ್ನು ಯಾಕೆ ಮದುವೆ ಆಗ್ತಿದ್ದಾರೆ ಹುಡುಗಿಯರು? ಬ್ಲಾಕ್ ವಿಡೋ ಡೇಂಜರ್ ಗೇಮ್ !

Published : Aug 06, 2026, 02:51 PM IST
Black Widow

ಸಾರಾಂಶ

Black Widow : ಯುದ್ಧಕ್ಕೆ ಹೋದ ಮಗ ವಾಪಸ್ ಸುರಕ್ಷಿತವಾಗಿ ವಾಪಸ್ ಬರ್ಲಿ ಅಂತ ಪಾಲಕರು, ಸಂಬಂಧಿಕರು ಪ್ರಾರ್ಥಿಸ್ತಾರೆ. ಮಕ್ಕಳನ್ನು ಯುದ್ಧಕ್ಕೆ ಕಳಿಸೋಕೆ ಭಯಪಡ್ತಾರೆ. ಆದ್ರೆ ಇಲ್ಲಿ ಯುದ್ಧಕ್ಕೆ ಹೊರಟು ನಿಂತ ಸೈನಿಕರನ್ನೇ ಹುಡುಗಿಯರು ಮದುವೆ ಆಗ್ತಿದ್ದಾರೆ. ಯಾಕೆ ಗೊತ್ತಾ?

ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಪ್ರಾಣ ತೆತ್ತಿದ್ದಾರೆ. ಸೈನಿಕನ ಗುಂಡಿಗೆ ಗಟ್ಟಿಯಿದ್ರೂ ಪಾಲಕರು, ಪತ್ನಿ – ಮಕ್ಕಳಲ್ಲಿ ಭಯ ಕಾಡುತ್ತೆ. ಪತಿ ಸುರಕ್ಷಿತವಾಗಿ ವಾಪಸ್ ಬರ್ಲಿ ಅಂತ ಪತ್ನಿ ಪ್ರಾರ್ಥನೆ ಮಾಡ್ತಾಳೆ. ಆದ್ರೆ ರಷ್ಯಾದಲ್ಲಿ ಹುಡುಗಿಯರ ವರ್ತನೆ ವಿಚಿತ್ರವಾಗಿದೆ. ಅಲ್ಲಿ ಯುದ್ಧಕ್ಕೆ ಹೊರಟು ನಿಂತ ಸೈನಿಕರನ್ನು ಮದುವೆ ಆಗೋದಲ್ದೆ ಅವರು ಸುರಕ್ಷಿತವಾಗಿ ವಾಪಸ್ ಬದ್ರೆ ಇರ್ಲಿ ಅಂತ ಆಶಿಸೋರೇ ಹೆಚ್ಚು.

ಹೆಚ್ಚಾಗ್ತಿದೆ ಬ್ಲಾಕ್ ವಿಡೋ ಸಂಖ್ಯೆ

ಇತ್ತೀಚಿನ ದಿನಗಳಲ್ಲಿ ರಷ್ಯಾದಲ್ಲಿ ಉಕ್ರೇನ್ ಯುದ್ಧಕ್ಕೆ ಹೋಗುವ ಸೈನಿಕರನ್ನು ಹುಡುಗಿಯರು ಮದುವೆ ಆಗ್ತಿರುವ ಪ್ರಕರಣ ಹೆಚ್ಚಾಗಿದೆ. ಇನ್ನೇನು ಯುದ್ಧಕ್ಕೆ ಹೊರಡ್ತಿದ್ದಾರೆ ಎನ್ನುವಾಗ ಸೈನಿಕರನ್ನು ಮದುವೆ ಆಗ್ತಾರೆ. ಒಂದೋ ಎರಡೋ ದಿನದ ಹಿಂದೆ ಮದುವೆಯಾದವರಿದ್ದಾರೆ. ಯುದ್ಧಕ್ಕೆ ತೆರಳಿದ ಸೈನಿಕ ವಾಪಸ್ ಬರದಿದ್ದಾಗ ಅವರ ಪತ್ನಿಯನ್ನು ಬ್ಲಾಕ್ ವಿಡೋ ಅಂತ ರಷ್ಯಾದಲ್ಲಿ ಕರೆಯಲಾಗುತ್ತೆ.

ಪರಿಹಾರದ ಮೇಲೆ ಕಣ್ಣು

ಸೈನಿಕರಿಗೆ ಸಂಬಂಧಿಸಿದಂತೆ ರಷ್ಯಾ ಸೇನೆಯಲ್ಲಿ ಕೆಲ ನಿಯಮಗಳಿವೆ. ಉಕ್ರೇನ್ ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಸುಮಾರು 60 ಲಕ್ಷದವರೆಗೆ ಪರಿಹಾರ ನೀಡಲಾಗುತ್ತದೆ. ಈ ಬ್ಲಾಕ್ ವಿಡೋಗಳಿಂದಾಗಿ ಪರಿಹಾರ ನಿಜವಾಗ್ಲೂ ಸೇರಬೇಕಾದವರಿಗೆ ಸೇರ್ತಿಲ್ಲ. ಸೈನಿಕರ ಮಕ್ಕಳು, ಪತ್ನಿ , ಪಾಲಕರ ಬದಲು ಎರಡು ದಿನಗಳ ಹಿಂದೆ ಮದುವೆಯಾದ ಹುಡುಗಿಗೆ ಸಿಗ್ತಿದೆ.

ಮಾರಿಯಾ ತಂದೆ ಉಕ್ರೇನ್ ಯುದ್ಧದಲ್ಲಿ ಮಡಿದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಆದ್ರೆ ಮಾರಿಯಾಗೆ ಸಿಗ್ಬೇಕಾಗಿದ್ದ ಪರಿಹಾರ ಸಿಗಲಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಮಾರಿಯಾ ತಂದೆ ಯುದ್ಧಕ್ಕೆ ತೆರಳುವ 2 ದಿನ ಮೊದಲು ತಮಗಿಂತ 22 ವರ್ಷ ಚಿಕ್ಕ ಹುಡುಗಿಯನ್ನು ಮದುವೆ ಆಗಿದ್ದರು ಎಂಬುದು ಗೊತ್ತಾಗಿದೆ. ಇದು ಬರೀ ಮಾರಿಯಾ ಒಬ್ಬರ ಕಥೆಯಲ್ಲಿ. ನೊಂದ ಕುಟುಂಬಗಳ ಸಂಖ್ಯೆ ಸಾಕಷ್ಟಿದೆ.

ಹಿಂದಿನ ವರ್ಷ ಯುದ್ಧದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಾಲ್ಕೈದು ಮಂದಿಯನ್ನು ನರ್ಸ್ ಮದುವೆ ಆಗಿದ್ದಳು. ಸೈನಿಕರ ಮರಣದ ನಂತ್ರ ಪರಿಹಾರವನ್ನು ತಾನು ಪಡೆದಿದ್ದಳು. ಇದು ಬಹಿರಂಗಗೊಂಡ್ಮೇಲೆ ಆಕೆಯನ್ನು ರಷ್ಯಾದ ಮಿಲಿಟರಿ ಆಸ್ಪತ್ರೆಯಿಂದ ವಜಾ ಮಾಡಲಾಗಿತ್ತು. ರಷ್ಯಾದ ಭದ್ರತಾ ಪಡೆಗಳ ಸದಸ್ಯರು ಇದ್ರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಯದ್ಧಕ್ಕೆ ತೆರಳುವ ಸೈನಿಕರ ಮನವೊಲಿಸಿ , ಅಧಿಕಾರಿಗಳೇ ಮದುವೆ ಮಾಡಿಸಿ ಹಣ ದೋಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Amruthadhaare serial ಸಮಾಧಿಯಿಂದ ನಾಪತ್ತೆಯಾಗಿದ್ದ ಜೈದೇವ ಕೊನೆಗೂ ಪ್ರತ್ಯಕ್ಷ! ನಟ ರಾಣವ್​ ಫೋಟೋಶೂಟ್​
ಅಂಕೋಲಾದ ಅಜ್ಜಿ ಅಂಗಡಿಗೆ ಪ್ರತೀದಿನ ಬಂದು ಐಸ್‌ಕ್ರೀಂ ತಿನ್ನುವ ಹಸು, ಹಣದ ಬದಲು ಪಪ್ಪಿ ಕೊಟ್ಟು ಮುದ್ದಿಸುವ ದನ!