
ಕಷ್ಟಕಾಲದಲ್ಲಿ ಜತೆಗಿರುವವರೇ ನಿಜವಾದ ಸ್ನೇಹಿತರು ಎನ್ನುವ ಮಾತನ್ನು ಕೇಳಿದ್ದೇವೆ, ಅನುಭವಕ್ಕೂ ಬಂದಿರುತ್ತದೆ. ಜೀವನದ ಸಂಕಷ್ಟದ ಸಮಯದಲ್ಲಿ ನಿಜಕ್ಕೂ ಸ್ನೇಹದ ಅಗತ್ಯವಿರುತ್ತದೆ. ವಿವಿಧ ಸೌಕರ್ಯ, ಸಹಾಯ ನೀಡುವುದಕ್ಕಲ್ಲ, ಭಾವನಾತ್ಮಕ ಬೆಂಬಲಕ್ಕೂ ಸ್ನೇಹ ಬೇಕು. ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇಂಥದ್ದೊಂದು ಅಗತ್ಯವಿರುತ್ತದೆ ಎನ್ನುವುದನ್ನು ಎರಡು ಆನೆಗಳು ಪುಷ್ಟೀಕರಿಸುತ್ತವೆ. ಕೆಲವು ಸಮಯದ ಹಿಂದೆ ಅಪಾಯದ ಸನ್ನಿವೇಶದಲ್ಲಿ ಸಿಲುಕಿದ್ದ ಆನೆಗಳನ್ನು ರಕ್ಷಿಸಲಾಗಿತ್ತು. ಒಂದು ವಾರದ ಅಂತರದಲ್ಲಿ ಎರಡು ಆನೆಗಳನ್ನು ವೈಲ್ಡ್ ಲೈಫ್ ಎಸ್ ಒಎಸ್ ರಕ್ಷಣಾ ತಂಡ ಶಿಬಿರಕ್ಕೆ ಕರೆತಂದಿತ್ತು. ಪರಿ ಮತ್ತು ಲಕ್ಷ್ಮೀ ಎನ್ನುವ ಎರಡು ಆನೆಗಳು ಶಿಬಿರಕ್ಕೆ ಬರುವ ಸಮಯದಲ್ಲಿ ಬಹಳ ಕೆಟ್ಟ ಅವಸ್ಥೆಯಲ್ಲಿದ್ದವು. ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಇವೆರಡೂ ಈಗ ತುಂಬ ಸ್ನೇಹಿತರಾಗಿಬಿಟ್ಟಿವೆ. ದೇಹದಲ್ಲಿ ಚೈತನ್ಯ ಕಡಿಮೆಯಿದ್ದರೂ ಪರಸ್ಪರ ಸಾಂಗತ್ಯದಲ್ಲಿ ಖುಷಿಯಾಗಿದೆ. ಇದನ್ನು ತೋರಿಸುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ಎಲ್ಲರ ಹೃದಯಗಳನ್ನು ಗೆದ್ದಿದೆ.
ಆನೆ (Elephant) ಅತ್ಯಂತ ಬುದ್ಧಿಜೀವಿ. ಅಪಾರ ನೆನಪಿನ (Memory) ಶಕ್ತಿ ಹೊಂದಿರುವ ಆನೆ ಎಷ್ಟೋ ವಿಚಾರದಲ್ಲಿ ಮಾನವನಿಗಿಂತ (Human) ಅದ್ಭುತ ಜೀವಿ. ವೈಲ್ಡ್ ಲೈಫ್ ಎಸ್ ಒಎಸ್ (Wildlife SOS) ಶೇರ್ ಮಾಡಿರುವ ಈ ವೀಡಿಯೋ ಪರಿ ಮತ್ತು ಲಕ್ಷ್ಮೀ ಆನೆಗಳು ಪರಸ್ಪರರ ಸಾಂಗತ್ಯದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಎರಡೂ ಆನೆಗಳನ್ನು ಶಿಬಿರಕ್ಕೆ (Camp) ಕರೆತಂದ ಸಮಯದಲ್ಲಿ ಅವುಗಳ ಆರೋಗ್ಯ ಸರಿಯಾಗಿರಲಿಲ್ಲ.
ವಿದ್ಯಾರ್ಥಿಯನ್ನು ಶೂನಿಂದ ಥಳಿಸಿದ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್: ವಿಡಿಯೋ ವೈರಲ್
ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದವು. ಪರಿ ಆನೆಯ ಕಾಲಿಗೆ ತೀವ್ರ ಏಟಾಗಿತ್ತು. ದೀರ್ಘಕಾಲದಿಂದ ಚೈನ್ ಬಿಗಿದ ಸ್ಥಿತಿಯಲ್ಲಿದ್ದುದರಿಂದ ಆಳವಾದ ಗಾಯ (Deep Injury) ವಾಗಿತ್ತು, ಖಾಯಂ ಅಂಗವೈಕಲ್ಯಕ್ಕೆ ತುತ್ತಾಗುವ ಅಪಾಯದಲ್ಲಿತ್ತು. ಹೀಗಾಗಿ, ಪರಿ ಆನೆಗೆ ತಕ್ಷಣ ಚಿಕಿತ್ಸೆಯನ್ನು ಸಹ ಆರಂಭಿಸಲಾಗಿತ್ತು. ಪೌಷ್ಟಿಕ ಆಹಾರ, ಆಂಟಿಬಯಾಟಿಕ್ಸ್, ಪೂರಕ ಆಹಾರಗಳನ್ನು (Food) ನೀಡಲಾಗಿತ್ತು. ಇದಾಗಿ ಒಂದೇ ವಾರದ ಬಳಿಕ ಲಕ್ಷ್ಮೀ ಎನ್ನುವ ಆನೆಯೂ ಈ ಶಿಬಿರಕ್ಕೆ ಬಂತು.
ಪರಿ-ಲಕ್ಷ್ಮೀ ಸ್ನೇಹ
ಲಕ್ಷ್ಮೀ ಆನೆ ಕೂಡ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಕಾಲುಗಳಿಗೆ ಗಾಜಿನ (Glass) ತುಂಡುಗಳು ಚುಚ್ಚಿಕೊಂಡಿದ್ದವು. ಇವೆರಡಕ್ಕೂ ಚಿಕಿತ್ಸೆ (Treatment) ನೀಡುವ ಸಮಯದಲ್ಲಿ ಒಟ್ಟಿಗೆ ಇರಿಸಲಾಗಿತ್ತು. ಕೆಲವೇ ದಿನಗಳಲ್ಲಿ ಈ ಆನೆಗಳ ನಡುವೆ ಎಂತಹ ಬಾಂಧವ್ಯ (Relation) ಬೆಳೆಯಿತು ಎಂದರೆ ಎಲ್ಲರೂ ಅಚ್ಚರಿ ಪಡುವಂತಾಯಿತು. ಸ್ನೇಹದಿಂದಾಗಿ (Friendship) ಆನೆಗಳು ಈಗ ಖುಷಿಯಾಗಿವೆ. ಪರಸ್ಪರ ತಮ್ಮದೇ ರೀತಿಯಲ್ಲಿ ಸಂವಹನ ನಡೆಸಿಕೊಳ್ಳುತ್ತ, ಸೊಂಡಿಲನ್ನು ಮೇಲಕ್ಕೆತ್ತಿ ಮತ್ತೊಂದನ್ನು ಸ್ಪರ್ಶಿಸುತ್ತ ಹಿತವಾಗಿ ನಡೆದುಕೊಳ್ಳುತ್ತಿವೆ. ಆನೆಗಳ ಈ ಸ್ನೇಹವನ್ನು ತೋರಿಸುವ ವೀಡಿಯೋ ಈಗ ವೈರಲ್ (Viral) ಆಗಿದೆ.
ಊಸರವಳ್ಳಿ ಬಣ್ಣ ಬದಲಾಯಿಸೋದು ನೋಡಿರ್ತೀರಿ.., ಆದ್ರೆ ಮರಿ ಹಾಕೋದು ನೋಡಿದ್ದೀರಾ?
ಸ್ನೇಹದಲ್ಲಿ ಖುಷಿ
ಆನೆಗಳ ವೀಡಿಯೋ ಸ್ವಲ್ಪ ದೀರ್ಘವಾಗಿದ್ದು, ಇವುಗಳ ಆರಂಭಿಕ ಹಂತವನ್ನೂ, ಈಗಿನ ಸ್ಥಿತಿಯನ್ನೂ ಚೆನ್ನಾಗಿ ತೋರಿಸಲಾಗಿದೆ.
“ವಾರಗಳ ಅಂತರದಲ್ಲಿ ರಕ್ಷಿಸಲ್ಪಟ್ಟ ಆನೆಗಳ ಸ್ಥಿತಿ ಗಂಭೀರವಾಗಿತ್ತು. ಈಗ ಇವುಗಳ ನಡುವೆ ಸ್ನೇಹ ಏರ್ಪಟ್ಟಿದೆ. ಎಲ್ಲಿಂದಲೋ ದೂರದಿಂದ ಬಂದಿದ್ದರೂ ಜತೆಯಾಗಿ ಖುಷಿಯಾಗಿವೆ’ ಎನ್ನುವ ಕ್ಯಾಪ್ಷನ್ ಅನ್ನು ವೀಡಿಯೋಕ್ಕೆ ನೀಡಲಾಗಿದೆ. ಈಗಾಗಲೇ ಈ ವೀಡಿಯೋ 5 ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ. ಸಿಕ್ಕಾಪಟ್ಟೆ ರಿಯಾಕ್ಷನ್ನುಗಳೂ ಬಂದಿವೆ. ದುರವಸ್ಥೆಗೆ ಒಳಗಾಗಿ, ಈಗ ಚೇತರಿಸಿಕೊಂಡು, ಪರಸ್ಪರರ ಸ್ನೇಹದಲ್ಲಿ ಅರಳುತ್ತಿರುವ ಮುಗ್ಧ ಆನೆಗಳ ನಡವಳಿಕೆಗೆ ಪ್ರಾಣಿಪ್ರಿಯರು ಹನಿಗಣ್ಣಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.