Asianet Suvarna News Asianet Suvarna News

ಊಸರವಳ್ಳಿ ಬಣ್ಣ ಬದಲಾಯಿಸೋದು ನೋಡಿರ್ತೀರಿ.., ಆದ್ರೆ ಮರಿ ಹಾಕೋದು ನೋಡಿದ್ದೀರಾ?

ನೈಸರ್ಗಿಕ ವಿಚಿತ್ರಗಳಲ್ಲಿ ಒಂದಾಗಿರುವ ಊಸರವಳ್ಳಿ ಮರು ಹಾಕುವುದು ಹಾಗೂ ಮರಿ ಹುಟ್ಟಿದಾಕ್ಷಣ ನಡೆಯುವ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ ಮರಿ ಹಾಕುವ ವಿಡಿಯೋ..

chameleon changing color and hatching Video gone viral sat
Author
First Published Jan 27, 2024, 1:12 PM IST

ಬೆಂಗಳೂರು (ಜ.27): ನೈಸರ್ಗಿಕ ಶಿಶುವಾದ ನಾವೆಲ್ಲರೂ ನಿಸರ್ಗದ ಹೊರತಾಗಿ ಜೀವನ ಮಾಡಲು ಸಾಧ್ಯವೇ ಇಲ್ಲ. ನಾವೆಷ್ಟೇ ಯಾಂತ್ರೀಕೃತ ಜೀವನ ಮಾಡುತ್ತಿದ್ದರೂ ನಿಸರ್ಗದ ಕೆಲವು ವಿಚಿತ್ರಗಳನ್ನು ನೋಡಿದಾಗ ನಾವು ಆಶ್ಚರ್ಯಕ್ಕೆ ಒಳಗಾಗುತ್ತೇವೆ. ಅದರಲ್ಲಿಯೂ ಊಸರವಳ್ಳಿ (ಗೋಸುಂಬೆ) ತಾನಿದ್ದ ಪ್ರದೇಶಕ್ಕೆ ತಕ್ಕಂತೆಯೇ ಬಣ್ಣವನ್ನು ಬದಲಿಸುತ್ತದೆ ಎಂದು ನಾವು ಕೇಳಿದ್ದೇವೆ. ಅದನ್ನು ವಿಡಿಯೋ ಅಥವಾ ನೈಜವಾಗಿಯೋ ನೋಡಿರಬಹುದು. ಆದರೆ, ಇಲ್ಲಿ ಊಸರವಳ್ಳಿ ಮರಿ ಹಾಕುವುದನ್ನು ಸೆರೆ ಹಿಡಿಯಲಾಗಿದೆ.

ನಾವು ಊಸರವಳ್ಳಿ ಎಂದಾಕ್ಷಣ ಮಾತನ್ನು ಕೇಳಿದ್ದರೂ ಅದನ್ನು ನೋಡಿರುವವರ ಸಂಖ್ಯೆ ತೀರಾ ವಿರಳವೆಂದೇ ಹೇಳಬಹುದು. ಇನ್ನು ಬೆಂಗಳೂರಿನಲ್ಲಿ ವಾಸವಿರುವ ಶೇ.90 ಜನರು ಊಸರವಳ್ಳಿಯನ್ನು ನೈಜವಾಗಿ ನೋಡಿಯೇ ಇಲ್ಲವೆಂದು ಹೇಳುತ್ತಾರೆ. ಆದರೆ, ಚಿತ್ರಗಳಲ್ಲಿ, ವಿಡಿಯೋಗಳಲ್ಲಿ ನೋಡಿರುತ್ತಾರೆ. ಅದರಲ್ಲಿಯೂ ಬಹುಪಾಲು ಜನರು ಊಸರವಳ್ಳಿ ಎಂಬ ಮಾತನ್ನು ಹೇಳುವುದನ್ನು ಕೇಳಿಯೇ ಇರುತ್ತಾರೆ. ಕಾರಣ ಇದು ನಮ್ಮ ಆಡುಭಾಷೆಯಲ್ಲಿ ಬಳಸುವ ಮಾತಾಗಿದೆ. ಇನ್ನು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿಯೂ ಈ ಪದವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ

ನಮ್ಮ ಜೊತೆಗಿರುವ ಜನರು ತಮ್ಮ ಪರಿಸ್ಥಿತಿಗೆ ಅನುಕೂಲವಾಗುವಂತೆ ಯಾವುದೇ ಒಂದು ಘಟನೆಯನ್ನು ಅಥವಾ ಮಾತನ್ನು ಒಬ್ಬೊಬ್ಬರ ಮುಂದೆ ಒಂದೊಂದು ರೀತಿಯಾಗಿ ತಿರುಚಿ ಹೇಳುವುದರ ಮೂಲಕ ಕ್ಷಣ ಕ್ಷಣಕ್ಕೂ ತಮ್ಮ ಮಾತನ್ನು ಬದಲಾಯಿಸುತ್ತಾರೆ. ಈ ರೀತಿ ಮಾತನಾಡುವ ಹಾಗೂ ವರ್ತಿಸುವವರನ್ನು ಸಾಮಾನ್ಯವಾಗಿ 'ಏನ್ ಜನಾ.. ರೀ ಇವರು.. ಒಳ್ಳೆ ಊಸರವಳ್ಳಿ (Chameleon) ಬಣ್ಣ ಬದಲಿಸಿದಂತೆ ಕ್ಷಣಕ್ಕೊಮ್ಮೆ ಮಾತನ್ನ ಬದಲಾಯಿಸುತ್ತಾರೆ’ ಅಂತ ಹೇಳುತ್ತೇವೆ. ಇಲ್ಲಿ ಊಸರವಳ್ಳಿ ಬಣ್ಣಕ್ಕೆ ವ್ಯಕ್ತಿಯ ಮಾತು ಹಾಗೂ ವರ್ತನೆಯನ್ನು ಹೋಲಿಕೆ ಮಾಡಲಾಗುತ್ತದೆ.

ಊಸರವಳ್ಳಿ ಮರಿ ಹಾಕೋ ವಿಡಿಯೋ ವೈರಲ್: ಮರದ ಮೇಲೆ ವಾಸ ಮಾಡುವ ಊಸರವಳ್ಳಿ ಬಹುತೇಕ ಸರೀಸೃಪಗಳಂತೆ ಮೊಟ್ಟೆಯನ್ನಿಟ್ಟು ಮರಿ ಮಾಡಿಸದೇ ನೇರವಾಗಿ ಮರಿಯನ್ನು ಹಾಕುತ್ತದೆ. ಇನ್ನು ಮರಿ ಹೊರ ಬರುವಾಗ ನಿಧಾನವಾಗಿ ಮರದ ಟೊಂಗೆಯನ್ನು ಹಿಡಿದು ಸಾಗುವ ಊಸರವಳ್ಳಿ ತನ್ನ ಮರಿ ಸೀದಾ ಮರದ ಟೊಂಗೆ ಅಥವಾ ಎಲೆಯ ಮೇಲೆ ಬೀಳುವಂತೆ ನೋಡಿಕೊಳ್ಳುತ್ತದೆ. ಹೊಟ್ಟೆಯಿಮದ ಹೊರಬಂದ ಮರಿ ತೀರಾ ಚಿಕ್ಕದಿದ್ದರೂ ಹುಟ್ಟಿದ ಕೂಡಲೇ ಅದು ಕಣ್ಣು ತೆರೆದು ನಡೆಯಲು ಆರಂಭಿಸುತ್ತದೆ. ಎಲೆಗಳನ್ನು ಹಾಗೂ ಕಡ್ಡಿಯನ್ನು ಹಿಡಿದು ಸಾಗುತ್ತದೆ. ಒಂದು ವೇಳೆ ಮರಿ ಬಿಗಿಯಾಗಿ ಹಿಡುದುಕೊಳ್ಳದಿದ್ದರೆ ಬಿದ್ದು ಸತ್ತು ಹೋಗಲೂಬಹುದು. ಆದರೆ, ನೂರಕ್ಕೆ ನೂರು ಮರಿಗಳು ಹುಟ್ಟಿದ ಕೂಡಲೇ ತಾನು ಬೀಳದಂತೆ ನಡೆಯುವುದನ್ನು ರೂಢಿಸಿಕೊಳ್ಳುತ್ತವೆ.

ಊಸರವಳ್ಳಿಗೆ ಆಹಾರವೇನೆ, ಬೇಟೆ ಆಡುವುದು ಹೇಗೆ?
ಇನ್ನು ಊಸರವಳ್ಳಿ ಸಾಮಾನ್ಯವಾಗಿ ಮರ ಗಿಡಗಳ ಮೇಲೆ ವಾಸ ಮಾಡುತ್ತದೆ. ಅದು ಆಹಾರವಾಗಿ ಸಣ್ಣ ಹುಳ ಮತ್ತು ಕೀಟಗಳನ್ನು ತಿನ್ನುತ್ತದೆ. ಅದರಲ್ಲಿ ಅತ್ಯಂತ್ಯ ಉದ್ದವಾಗಿರುವ ನಾಲಿಗೆಯನ್ನು ಹೊಂದಿರುವ ಊಸರವಳ್ಳಿ ದೂರದಲ್ಲಿರುವ ಕೀಟವನ್ನು ತನ್ನ ನಾಲಿಗೆಯನ್ನು ಚಾಚಿ ಅದರ ಮೇಲಿರುವ ಅಂಟು ದ್ರವದ ಜೊಲ್ಲಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ನಂತರ, ನಾಲಿಗೆ ಒಳಗೆ ಎಳೆದುಕೊಳ್ಳುವಾಗ ಕೀಟವನ್ನೂ ಎಳೆದು ಬಾಯಿಯೊಳಗೆ ಹಾಕಿಕೊಂಡು ಚಪ್ಪರಿಸಿ ತಿನ್ನುತ್ತದೆ.

ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಆಶಾ ಚೀತಾ!

ಬಣ್ಣ ಬದಲಾಯಿಸಲು ಕಾರಣವೇನು?
ಸಾಮಾನ್ಯವಾಗಿ ಊಸರವಳ್ಳಿಗಳು ಬಣ್ಣವನ್ನು ಬದಲಾಯಿಸುತ್ತವೆ. ಈ ಸರೀಸೃಪದ ಈ ವಿಶಿಷ್ಟ ಸ್ವಭಾವದ ಹಿಂದಿನ ಕಾರಣದ ಬಗ್ಗೆ ನಮ್ಮಲ್ಲಿ ಅನೇಕರು ಆಶ್ಚರ್ಯಚಕಿತರಾಗಿರಬಹುದು. ಊಸರವಳ್ಳಿಗಳು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುವ ಹಿಂದಿನ ಕಾರಣವು ಸಾಕಷ್ಟು ಆಸಕ್ತಿದಾಯಕವಾಗಿದೆ. ಪರಭಕ್ಷಕಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ಇದೊಂದು ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.

Follow Us:
Download App:
  • android
  • ios