Parenting Tips : ಮಕ್ಕಳಿಗೆ ಖುಷಿಯಾಗ್ಬೇಕೆಂದ್ರೆ ಹೀಗೆ ಮಾಡಿ ಬರ್ತ್ ಡೇ ಪಾರ್ಟಿ

By Suvarna News  |  First Published Dec 26, 2022, 1:15 PM IST

ಹುಟ್ಟುಹಬ್ಬ ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಮಕ್ಕಳು ತಮ್ಮೆಲ್ಲ ಸ್ನೇಹಿತರನ್ನು ಕರೆದು ಬರ್ತ್ ಡೇ ಆಚರಿಸಿಕೊಳ್ಳಲು ಇಷ್ಟಪಡ್ತಾರೆ. ಪಾಲಕರು ಅವರ ಮನಸ್ಸಿಗೆ ನೋವಾಗದಂತೆ ಪಾರ್ಟಿ ಅರೆಂಜ್ ಮಾಡ್ಬೇಕು ಎಂದಾಗ ಕೆಲ ಟಿಪ್ಸ್ ತಿಳಿದಿರಬೇಕು.
 


ಮಕ್ಕಳಿಗೆ ವರ್ಷ ತುಂಬುತ್ತಿದ್ದಂತೆ ಅವರ ಹುಟ್ಟುಹಬ್ಬವನ್ನು ಪಾಲಕರು ಸಂಭ್ರಮದಿಂದ ಆಚರಿಸುತ್ತಾರೆ. ಒಂದು ವರ್ಷದ ಮಗುವಿನ ಬರ್ತ್ ಡೇ ಪಾರ್ಟಿ ಗ್ರ್ಯಾಂಡ್ ಆಗಿರುತ್ತದೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಕೆಲ ಪಾಲಕರು ಪ್ರತಿ ವರ್ಷ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸ್ತಾರೆ. ಮತ್ತೆ ಕೆಲವರು ಸರಳವಾಗಿ ಆಚರಿಸ್ತಾರೆ. ಆದ್ರೆ ಪ್ರತಿ ವರ್ಷ ಒಂದೇ ರೀತಿ ಹುಟ್ಟುಹಬ್ಬ ಆಚರಿಸಿದ್ರೆ ಮಕ್ಕಳಿಗೆ ಬೇಸರವಾಗುತ್ತದೆ. ಪ್ರತಿ ವರ್ಷ ಭಿನ್ನತೆಯನ್ನು ಮಕ್ಕಳು ಬಯಸ್ತಾರೆ. ಮಕ್ಕಳ ಬರ್ತ್ ಡೇ ಪಾರ್ಟಿ ಸಂದರ್ಭದಲ್ಲಿ ಪಾಲಕರು ಪ್ರತಿಯೊಂದು ಸಣ್ಣ ವಿಷ್ಯಕ್ಕೂ ಗಮನ ನೀಡಬೇಕು. ಇದರಿಂದ ಮಕ್ಕಳು ಪೂರ್ಣವಾಗಿ ಆನಂದ ಪಡೆಯುವುದಲ್ಲದೆ ಒತ್ತಡ ಮುಕ್ತವಾಗಿ ಇರುತ್ತಾರೆ. ನಿಮ್ಮ ಮಕ್ಕಳ ಹುಟ್ಟುಹಬ್ಬದ ಸಂತೋಷಕೂಟವನ್ನು ಈವರೆಗೆ ಒಂದೇ ರೀತಿ  ಆಚರಿಸುತ್ತಿದ್ದು, ಹೊಸತನ ಬೇಕು ಎಂದಾದ್ರೆ ನಾವು ಹೇಳುವ ಕೆಲ ಟಿಪ್ಸ್ ಪಾಲನೆ ಮಾಡಿ. 

ಮಕ್ಕಳ (Children) ಹುಟ್ಟುಹಬ್ಬ ಹೀಗಿರಲಿ : 
ವಾರಾಂತ್ಯದ ಪಾರ್ಟಿ (Party )ಗೆ ನೀವು ಪ್ಲಾನ್ ಮಾಡಿ :
ನಿಮ್ಮ ಮಕ್ಕಳ ಪಾರ್ಟಿ ವಾರದ ದಿನಗಳಲ್ಲಿ ಬಂದ್ರೂ ನೀವ ವಾರಾಂತ್ಯದಲ್ಲಿ ಪಾರ್ಟಿಗೆ ಪ್ಲಾನ್ ಮಾಡಿ. ಯಾಕೆಂದ್ರೆ ನಿಮ್ಮ ಮಕ್ಕಳು ಮಾತ್ರವಲ್ಲ ಅವರ ಸ್ನೇಹಿತರು ಕೂಡ ಸ್ಕೂಲ್ ಮಾತ್ರವಲ್ಲದೆ ಅನೇಕ ಕ್ಲಾಸ್ ಗಳಿಗೆ ಹೋಗ್ತಿರುತ್ತಾರೆ. ಹುಟ್ಟುಹಬ್ಬ (Birthday) ದ ಪಾರ್ಟಿಗೆ ಬರುವ ಕಾರಣ ಅವರಿಗೆ ಕ್ಲಾಸ್ ಅಟೆಂಡ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಕ್ಲಾಸ್ ಒತ್ತಡ ಅವರಿಗಿರುತ್ತದೆ. ಆದ್ರೆ ಎಲ್ಲ ಮಕ್ಕಳಿಗೆ ಭಾನುವಾರ ಬಿಡುವಿರುತ್ತದೆ. ಹಾಗಾಗಿ ನೀವು ಭಾನುವಾರ ಪಾರ್ಟಿಗೆ ಸಿದ್ಧತೆ ಮಾಡಿ. ಭಾನುವಾರ ಮಧ್ಯಾಹ್ನ ಅಥವಾ ಸಂಜೆ ನೀವು ಪಾರ್ಟಿ ಮಾಡಬಹುದು. 

Tap to resize

Latest Videos

ಮೊದಲೇ ಪ್ಲಾನ್ ಮಾಡಿ : ಮೊದಲು ಪಾರ್ಟಿಗೆ ಎಷ್ಟು ಮಕ್ಕಳು ಬರುತ್ತಾರೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಮಕ್ಕಳು ಎಷ್ಟು ಸಮಯ ಪಾರ್ಟಿಯಲ್ಲಿ ಇರಬಹುದು ಎಂಬುದನ್ನು ನೀವು ಗಮನಿಸಿ.  ಮಕ್ಕಳು ಏನು ತಿನ್ನಲು ಮತ್ತು ಆಟವಾಡಲು ಬಯಸುತ್ತಾರೆ ಎಂಬುದನ್ನು ಆಲೋಚನೆ ಮಾಡಿ. ಮಕ್ಕಳ ವಯಸ್ಸಿಗೆ ತಕ್ಕಂತೆ ಅವರ ಆಸಕ್ತಿ ಹಾಗೂ ಆಟ ಬದಲಾಗುತ್ತದೆ. ಹಾಗಾಗಿ ನಿಮ್ಮ ಮಕ್ಕಳ ಸ್ನೇಹಿತರು ಆಸಕ್ತಿಯಂತೆ ನೀವು ಪ್ಲಾನ್ ಮಾಡಬೇಕು. 

COLLEAGUES ಜೊತೆ ಗುಟ್ ಗುಟ್ಟಾಗಿ ಡೇಟಿಂಗ್ ಮಾಡೋ ರಾಶಿಗಳಿವು!

ಪಾರ್ಟಿಯಲ್ಲಿರಲಿ ಥೀಮ್ (Theme Party) : ಪಾರ್ಟಿಯ ಪ್ರಮುಖ ವಿಷಯವೆಂದರೆ ಥೀಮ್. ಥೀಮ್ ಬಗ್ಗೆ ತ್ವರಿತವಾಗಿ ನಿರ್ಧರಿಸಬೇಡಿ. ಮಕ್ಕಳಿಗೆ ಯಾವುದು ಅತ್ಯುತ್ತಮ ಥೀಮ್ ಆಗಿರುತ್ತದೆ ಮತ್ತು ಮಕ್ಕಳು ಅದನ್ನು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೆನಪಿನಲ್ಲಿಟ್ಟುಕೊಂ ಡು ಥೀಮ್ ನಿರ್ಧರಿಸಿ. ಇದಕ್ಕಾಗಿ ನೀವು ಮಕ್ಕಳ ನೆಚ್ಚಿನ ಕಾರ್ಟೂನ್, ಸಿನಿಮಾ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಸೃಜನಶೀಲ ವಿಷಯಗಳ ಬಗ್ಗೆಯೂ ನೀವು ಯೋಚಿಸಬಹುದು. ಇದಕ್ಕಾಗಿ ನೀವು  ಮಕ್ಕಳೊಂದಿಗೆ ಮಾತನಾಡಬಹುದು. ಮಕ್ಕಳ ಸ್ನೇಹಿತರ ಅಥವಾ ನಿಮ್ಮ ಸ್ನೇಹಿತರ ಸಹಾಯಪಡೆದು ನೀವು ಥೀಮ ಸಿದ್ಧಪಡಿಸಿ.

ಪಾರ್ಟಿಯಲ್ಲಿರಲಿ ಇಂಥ ತಿಂಡಿ : ಆಹಾರವು ರುಚಿಕರ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಮಕ್ಕಳು ಪೇಸ್ಟ್ರಿಗಳು, ಚಾಕೊಲೇಟ್‌ಗಳು, ಜ್ಯೂಸ್‌, ಪಾಸ್ತಾ ಅಥವಾ ಎಣ್ಣೆಯಲ್ಲಿ ಅದ್ದಿದ ಸಮೋಸಾ, ಕಚೋರಿ, ಸ್ಯಾಂಡ್‌ವಿಚ್‌ ಇತ್ಯಾದಿಗಳನ್ನು ಇಷ್ಟಪಡುತ್ತಾರೆ. ಆದ್ರೆ ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ. ನೀವು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಾದ ಆಹಾರವನ್ನು ಪಾರ್ಟಿಯಲ್ಲಿ ನೀಡಬೇಕು. ನಿಮ್ಮ ತಿಂಡಿ ಬೋರಿಂಗ್ ಆಗಿರದಂತೆ ನೋಡಿಕೊಳ್ಳಿ. ಕೇಕ್ ಗೆ ಹಣ್ಣುಗಳನ್ನು ಸೇರಿಸುವುದು ಅಥವಾ ತರಕಾರಿ ಫಿಜ್ಜಾವನ್ನು ನೀವು ಸಿದ್ಧಪಡಿಸಬಹುದು. 

ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಇವರಿಂದ ಮಾತ್ರ ಸಾಧ್ಯ!

ಫೋಟೋ ಬಗ್ಗೆ ಗಮನವಿರಲಿ : ಮೊಬೈಲ್ ಕ್ಯಾಮರಾ (Mobile Camera) ಬಳಸಿ ಜನರು ಫೋಟೋ ಕ್ಲಿಕ್ಕಿಸುತ್ತಾರೆ. ಹಾಗೆಯೇ ಸೆಲ್ಫಿಗೆ ಹೆಚ್ಚು ಮಹತ್ವ ನೀಡ್ತಾರೆ. ಇವೆಲ್ಲದರ ಮಧ್ಯೆಯೇ ನೀವು ಫೋಟೋಗ್ರಾಫರ್ ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ಕ್ಯಾಮೆರಾ ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಮನೆಯಲ್ಲಿ ಸಣ್ಣ ಹುಟ್ಟುಹಬ್ಬದ ಪಾರ್ಟಿ ಇದ್ದರೂ ನೀವು ಫೋಟೋಗ್ರಾಫರ್ ಕರೆಯುವ ಅಗತ್ಯವಿಲ್ಲ. ನೀವು ಕ್ಯಾಮರಾವನ್ನು ಹೊಂದಿದ್ದರೆ ಅಥವಾ ಕುಟುಂಬಸ್ಥರ ಬಳಿ ಇದ್ದರೆ ಅದನ್ನು ಬಳಸಬಹುದು.  

ರಿಟರ್ನ್ ಉಡುಗೊರೆ (Return Gift) : ಪಾರ್ಟಿಗೆ ಬರುವ ಪ್ರತಿಯೊಬ್ಬ ಮಕ್ಕಳಿಗೂ ರಿಟರ್ನ್ ಉಡುಗೊರೆಯ ಮೇಲೆ ವಿಶೇಷ ಆಸಕ್ತಿ ಇರುತ್ತದೆ. ನೀವು ಮಕ್ಕಳಿಗೆ ಇಷ್ಟವಾಗುವ ರಿಟರ್ನ್ ಗಿಫ್ಟ್ ಆಯ್ಕೆ ಮಾಡಿ. ಆಸಕ್ತಿ ಮತ್ತು ವಯಸ್ಸನ್ನು ಗಮನದಲ್ಲಿಟ್ಟುಕೊಂಡು ರಿಟರ್ನ್ ಗಿಫ್ಟ್ ಖರೀದಿಸಬೇಕು. ಪಿಗ್ಗಿ ಬ್ಯಾಂಕ್ ಹೊರತುಪಡಿಸಿ ಆಸಕ್ತಿದಾಯಕ ಕರಕುಶಲ ವಸ್ತುಗಳನ್ನು ಖರೀದಿ ಮಾಡಿ. 
 

click me!