ವಯಸ್ಸಾದ ವೃದ್ಧರೊಬ್ಬರು ತಮ್ಮ ಪತ್ನಿಯ ತಲೆಗೂದಲನ್ನು ಶ್ರದ್ಧೆಯಿಂದ, ಕಾಳಜಿಯಿಂದ ಬಾಚುತ್ತಿರುವ ವೀಡಿಯೋವೊಂದು ಅಂತರ್ಜಾಲದಲ್ಲಿ ಈಗ ವೈರಲ್ ಆಗಿದೆ. ಹಲವು ಭಾವನಾತ್ಮಕವಾಗಿ ಇದಕ್ಕೆ ಸ್ಪಂದಿಸಿದ್ದಾರೆ.
ವಯಸ್ಸಾದ ವೃದ್ಧ ದಂಪತಿ ಪರಸ್ಪರ ಅತ್ಯಂತ ಆತ್ಮೀಯವಾಗಿ ವರ್ತಿಸುವುದು ಕಂಡುಬರುತ್ತದೆ. ಪರಸ್ಪರ ಸಹಾಯ ಮಾಡಿಕೊಳ್ಳುವುದು, ಅವರ ಕೆಲಸಗಳನ್ನು ಇವರು ಮಾಡುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಪುರುಷರು ಮನೆಯ ಬಹಳಷ್ಟು ಕಾರ್ಯಗಳಲ್ಲಿ ಪತ್ನಿಗೆ ಸಹಾಯ ನೀಡಿದರೆ, ಮಹಿಳೆಯರು ಸಹ ಪುರುಷರಿಗೆ ಅನೇಕ ರೀತಿಯಲ್ಲಿ ಆರೈಕೆ ಮಾಡುತ್ತಿರುತ್ತಾರೆ. ವೃದ್ಧ ದಂಪತಿಯ ನಡುವೆ ಪ್ರೀತಿ ಎನ್ನುವುದು ದಿನದಿಂದ ದಿನಕ್ಕೆ ಹೊಸ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತಿರುತ್ತದೆ. ಜೀವನದಲ್ಲಿ ಮಾಗುತ್ತ ಸಾಗುವ ದಂಪತಿಯ ನಡುವೆ ಪ್ರೀತಿಯೊಂದು ಅಮೂಲ್ಯ ಸೆಲೆಯಾಗಿ ಹರಿಯುತ್ತಿರುತ್ತದೆ. ಹೀಗಾಗಿಯೇ, ಅವರ ನಡುವೆ ಅಪರೂಪದ ಸಾಮರಸ್ಯ ನಿರ್ಮಾಣವಾಗುತ್ತದೆ. ಅಲ್ಲದೆ, ಅಂಥ ಜೋಡಿಯಲ್ಲಿ ಯಾರಾದರೂ ಒಬ್ಬರು ಮೃತರಾದರೆ, ಮತ್ತೊಬ್ಬರು ಸಹ ಬಹುಬೇಗ ನಿಧನರಾಗುವ ನಿದರ್ಶನಗಳೂ ಇವೆ. ಏಕೆಂದರೆ, ಅವರ ನಡುವೆ ಅಂಥದ್ದೊಂದು ಸುಮಧುರ, ಪರಸ್ಪರ ಅವಲಂಬನೆಯ ಬಾಂಧವ್ಯ ನಿರ್ಮಾಣವಾಗಿರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತಹ ವೀಡಿಯೋವೊಂದು ಇನ್ ಸ್ಟಾಗ್ರಾಮ್ ನಲ್ಲಿ ಇದೀಗ ವೈರಲ್ ಆಗಿದೆ. ಇದರಲ್ಲಿ ವಯಸ್ಸಾದ ದಂಪತಿಯ ನಡುವಿನ ಆತ್ಮೀಯತೆ ಅತ್ಯಂತ ಸ್ಪಷ್ಟವಾಗಿ ಬಹಿರಂಗಗೊಂಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ವೃದ್ಧರ ಕಾಳಜಿ (Care)
ಅಭಯ್ ಗಿರಿ21 ಎನ್ನುವ ಖಾತೆಯಿಂದ (Account) ಶೇರ್ (Share) ಆಗಿರುವ ಈ ವೀಡಿಯೋದಲ್ಲಿ ವೃದ್ಧ ಪತಿಯೊಬ್ಬರು (Husband) ತಮ್ಮ ಪತ್ನಿಯ (Wife) ಕೂದಲನ್ನು (Hair) ನೀಟಾಗಿ ಬಾಚುತ್ತಿರುವುದು (Brush) ಕಂಡುಬರುತ್ತದೆ.
Viral Video: ಅಮೆರಿಕ ಸೇನೆಯ ಸೈನಿಕರಿಗೆ 'ಜೈ ಶ್ರೀರಾಮ್' ಘೋಷಣೆ ಹೇಳಿಕೊಟ್ಟ ಭಾರತದ ಸೈನಿಕರು!
ವೃದ್ಧರು ತಲ್ಲೀನವಾಗಿ ಈ ಕಾರ್ಯದಲ್ಲಿ ನಿರತರಾಗಿದ್ದು, ಮಹಿಳೆ ಆಚೀಚೆ ನೋಡಿದಾಗ ಆಕೆಯ ತಲೆಯನ್ನು ಮೃದುವಾಗಿ ಸರಿಸುತ್ತಾರೆ, ತನ್ನತ್ತ ತಿರುಗಿಸುತ್ತಾರೆ. ಬಹಳ ಬಡತನದಿಂದ (Poor) ಕೂಡಿರುವ ದಂಪತಿಯಾಗಿದ್ದಾರೆ ಎನ್ನುವುದು ಸಹ ಮೇಲ್ನೋಟಕ್ಕೇ ತಿಳಿದು ಬರುತ್ತದೆ. ಆದರೆ, ಆತ ಪತ್ನಿಯ ಕೂದಲನ್ನು ಬಹಳ ಕಾಳಜಿಯಿಂದ, ಶ್ರದ್ಧೆಯಿಂದ ಬಾಚುತ್ತಿರುವುದು ಗೊತ್ತಾಗುತ್ತದೆ. ಕೆಲವೇ ಕ್ಷಣಗಳ ಈ ವೀಡಿಯೋ ವೃದ್ಧ ದಂಪತಿಯ ನಡುವಿನ ಸಾಮರಸ್ಯವನ್ನು (Compatibility) ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಜತೆಗೆ, ದಂಪತಿಯ ನಡುವೆ ಇರುವ ಪ್ರಾಮಾಣಿಕ ಕಾಳಜಿ, ಪ್ರೀತಿ (Love) ಇಲ್ಲಿ ವ್ಯಕ್ತವಾಗುತ್ತಿದೆ.
ಭಾವನಾತ್ಮಕ (Emotional) ಅಲೆ
ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾವನಾತ್ಮಕ ಅಲೆ ಎಬ್ಬಿಸಿದೆ. ಹಲವರು ಇದನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಲತಾ ಮಂಗೇಶ್ಕರ್ ಮತ್ತು ಮುಖೇಶ್ ಹಾಡಿರುವ “ಕಿಸೀ ರಾಹ್ ಮೈ, ಕಿಸೀ ಮೋಡ್ ಪರ್’ ಎನ್ನುವ ಹಾಡೂ ಹಿನ್ನೆಲೆಯಾಗಿ ಹಾಕಿರುವುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಪೊಸ್ಟ್ ಮಾಡಿದ ಕೆಲವೇ ಸಮಯದಲ್ಲಿ 4 ಲಕ್ಷದಷ್ಟು ಲೈಕ್ಸ್ ಬಂದಿದ್ದರೆ, ನೂರಾರು ಜನ ಶೇರ್ ಮತ್ತು ಕಾಮೆಂಟ್ ಮಾಡಿದ್ದಾರೆ.
ಭಾರತೀಯ ಸ್ಟ್ರೀಟ್ ಫುಡ್ ಗೇಲಿ ಮಾಡಿದ ಆಫ್ರಿಕನ್! ವೈರಲ್ ಆಯ್ತು ವೀಡಿಯೋ
ಕಾಮೆಂಟ್ (Comments) ಮಹಾಪೂರ
ಒಬ್ಬರು, “ಇದನ್ನೇ ಅಲ್ಲವೇ ನಾವೆಲ್ಲರೂ ಬಯಸುವುದು?’ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ನೈಜವಾದ (True) ಪ್ರೀತಿಯನ್ನು ತೋರಿಸುತ್ತಿದೆ ಎಂದಿದ್ದಾರೆ. ಒಬ್ಬರು, “ಈ ವೀಡಿಯೋ ನಾನು ಅಳುವಂತೆ ಮಾಡಿದೆ. ಸೋ ಬ್ಯೂಟಿಫುಲ್’ ಎಂದು ಹೇಳಿಕೊಂಡಿದ್ದಾರೆ. ಇದೊಂದು ಅಪೂರ್ವ ದೃಶ್ಯ ಎಂದು ಹಲವರು ಹೇಳಿದ್ದಾರೆ. ನಿಜವಾದ ಪ್ರೀತಿಯ ಸೌಂದರ್ಯವನ್ನು ಎತ್ತಿ ತೋರಿಸುವಂತಿರುವ ಈ ವೀಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.