ಗರ್ಲ್‌ಫ್ರೆಂಡ್ ಕೇಳಿದ್ದನ್ನೆಲ್ಲ ಕೊಟ್ಟು 5 ಕೋಟಿ ಕಳ್ಕೊಂಡ.. ಕೊನೆಗೆ ಗೊತ್ತಾಯ್ತು ಭಯಾನಕ ಸತ್ಯ!

By Suvarna News  |  First Published Jan 5, 2024, 2:24 PM IST

ಪ್ರೀತಿಯಲ್ಲಿ ಪ್ರಾಮಾಣಿಕತೆ, ನಂಬಿಕೆ ಇರಬೇಕು ನಿಜ. ಆದ್ರೆ ಕುರುಡು ನಂಬಿಕೆ ಒಳ್ಳೆಯದಲ್ಲ. ಇದ್ರಿಂದ ಮೋಸ ಹೋಗವ ಸಾಧ್ಯತೆ ಹೆಚ್ಚಿರುತ್ತದೆ. ಈ ವ್ಯಕ್ತಿ ಕೂಡ ಕಣ್ಮುಚ್ಚಿ ಹುಡುಗಿ ನಂಬಿ ಹಳ್ಳಕ್ಕೆ ಬಿದ್ದಿದ್ದಾನೆ.
 


ನಿಜವಾದ ಪ್ರೀತಿಯಲ್ಲಿ ಬಿದ್ದವರು ತಮ್ಮ ಪ್ರೀತಿಗಾಗಿ ಪ್ರಾಣ ಬಿಡಲೂ ಸಿದ್ಧವಿರ್ತಾರೆ. ಈಗಿನ ದಿನಗಳಲ್ಲಿ ಈ ನಿಜವಾದ ಪ್ರೀತಿಯನ್ನು ಟಾರ್ಚ್ ಹಿಡಿದು ಹುಡುಕುವ ಸ್ಥಿತಿ ಇದೆ. ಶ್ರೀಮಂತಿಕೆ ನೋಡಿ, ಪ್ರಸಿದ್ಧಿ ನೋಡಿ ಹತ್ತಿರ ಬರುವವರ ಸಂಖ್ಯೆ ಹೆಚ್ಚಿದೆ. ಕೆಲವರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರೀತಿಯ ನಾಟಕವಾಡಿ ಮೋಸ ಮಾಡ್ತಾರೆ. ಇತ್ತ ಪ್ರೇಮಿಯೇ ನನ್ನ ಜೀವ ಎಂದು ನಂಬಿ, ಸರ್ವಸ್ವವನ್ನೂ ಅವರಿಗೆ ತ್ಯಾಗ ಮಾಡುವವರಿಗೆ ತಾವು ಮೋಸ ಹೋಗ್ತಿದ್ದೇವೆ ಎಂಬ ಅರಿವೇ ಇರೋದಿಲ್ಲ. ಅಕ್ಕಪಕ್ಕದವರು, ಹಿತೈಶಿಗಳು ಪ್ರೀತಿಸುವ ಹುಡುಗ ಅಥವಾ ಹುಡುಗಿ ಸರಿ ಇಲ್ಲ ಎಂದು ಬುದ್ಧಿವಾದ ಹೇಳಿದ್ರೂ ಅದನ್ನು ಇವರು ನಂಬೋದಿಲ್ಲ. ಸ್ವತಃ ತಮ್ಮ ಅನುಭವಕ್ಕೆ ಬಂದಾಗ ಮಾತ್ರ ಭೂಮಿ ಕುಸಿದಂತಾಗುತ್ತದೆ. ತಾವು ಪ್ರೀತಿಸಿದ್ದವರು ತಮಗೆ ಮೋಸ ಮಾಡಿದ್ರು, ನಮ್ಮ ಕೈ ಖಾಲಿ ಮಾಡಿ ಬೀದಿಗೆ ತಂದ್ರೂ ಎಂಬ ಸತ್ಯಗೊತ್ತಾದ ಮೇಲೂ ಅವರನ್ನು ಕ್ಷಮಿಸಲು ಮುಂದಾಗುವ ಕೆಲವರಿದ್ದಾರೆ. ಅವರಲ್ಲಿ ಈ ಹುಡುಗ ಸೇರಿದ್ದಾನೆ. ಪ್ರೇಮಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಹುಡುಗನಿಗೆ ಕೊನೆಗೊಂದು ಕಟು ಸತ್ಯಗೊತ್ತಾಗಿದೆ. ಆದ್ರೂ ಆಕೆಯನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಿದ್ದಾನೆ. 

ಪ್ರೀತಿ (Love) ಯ ಸ್ಕ್ಯಾಮ್ ಗೆ ಬಲಿಯಾದ ಹುಡುಗ : ಆತನ ಹೆಸರು ವಾಂಗ್ ಯುವಾನ್. ಗೆಳತಿಯ ಹೆಸರು ಜಾಂಗ್ ಲಿ. ವಾಂಗ್, ಜಾಂಗ್ ಲಿಯನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದ. ಆಕೆಗೆ ಮಾತ್ರವಲ್ಲ ಆಕೆಯ ಸಂಸಾರಕ್ಕೂ ಹಣ ನೀಡುತ್ತಿದ್ದ. ಆಕೆಯ ಸಹೋದರನ ಶಿಕ್ಷಣ (Education) ಕ್ಕೆ ಈತ ಆರ್ಥಿಕ ಸಹಾಯ ಮಾಡಿದ್ದ. ಜಾಂಗ್ ಲಿ ಹಾಗೂ ಆಕೆ ಕುಟುಂಬದ ಖರ್ಚು ನಿಭಾಯಿಸಲು ವಾಂಗ್ ಸಾಲ ಮಾಡಿಕೊಂಡಿದ್ದ. ಆತ ಒಂದೆರಡು ಲಕ್ಷವಲ್ಲ ಬರೋಬ್ಬರಿ ಎರಡು ಕೋಟಿ ಹಣವನ್ನು ಜಾಂಗ್ ಲಿಗಾಗಿ ಖರ್ಚು ಮಾಡಿದ್ದ. 

Tap to resize

Latest Videos

ಹುಡುಗೀರು ಹಿಂಗೆಲ್ಲಾ ಮಾತನಾಡಿದರೆ ಯಾರಿಗೂ ಇಷ್ಟವಾಗೋಲ್ಲ!

ಜಾಂಗ್ ಲಿ ತನ್ನನ್ನು ಪ್ರೀತಿ ಮಾಡ್ತಿದ್ದಾಳೆ ಎನ್ನುವ ಭಾವನೆಯಲ್ಲೇ ಆಕೆಗಾಗಿ ಹಣ ಖರ್ಚು ಮಾಡಿದ್ದ ವಾಂಗ್. ಆದ್ರೆ ಕಳೆದ ವರ್ಷ ಆಗಸ್ಟ್‌ನಲ್ಲಿ ವಾಂಗ್‌ನ ಬಾಸ್‌ಗೆ ಅವನು ಸಾಲದಲ್ಲಿದ್ದಾನೆ ಎಂಬುದು ತಿಳಿದುಬಂದಿತ್ತು. ವಾಂಗ್ ಗೆ ಸಾಲ ಮಾಡುವ ಅನಿವಾರ್ಯತೆ ಏನಿದೆ ಎಂಬ ಪ್ರಶ್ನೆ ಬಾಸ್ ಗೆ ಹುಟ್ಟಿಕೊಂಡಿತ್ತು. ಈ ಬಗ್ಗೆ ವಾಂಗ್ ಗೆ ಪ್ರಶ್ನೆ ಕೇಳಿದ್ದಾನೆ. ಆದ್ರೆ ವಾಂಗ್ ಯಾವುದೇ ಉತ್ತರ ನೀಡಿಲ್ಲ. ವಾಂಗ್, ಕಚೇರಿಯಲ್ಲೂ ಅನೇಕರ ಬಳಿ ಸಾಲ ಮಾಡಿದ್ದನಂತೆ.

ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಪ್ರಕರಣ : ವಾಂಗ್, ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಕಾರಣ ಬಾಸ್ ಪೊಲೀಸ್ ಬಳಿ ಹೋಗಿದ್ದಾನೆ. ಕಚೇರಿಯಲ್ಲಿ ವಾಂಗ್ ಊಟ ಹಾಗೂ ವಾಸಕ್ಕೆ ಹಣ ನೀಡಲಾಗುತ್ತದೆ. ಆದ್ರೂ ಆತ ಇಷ್ಟೊಂದು ಸಾಲ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ ಎಂದು ಬಾಸ್ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಮಾಡಿದಾಗ ಜಾಂಗ್ ಲಿ ಸತ್ಯ ಗೊತ್ತಾಗಿದೆ.
ಈಗಾಗಲೇ ಮದುವೆಯಾಗಿದ್ದ ಜಾಂಗ್ ಲಿ : ಜಾಂಗ್ ಲಿ, ವಾಂಗ್ ಗೆ ಮೋಸ ಮಾಡಿದ್ದಾಳೆ. ಪ್ರೀತಿಯ ನಾಟಕವಾಡಿ ಹಣ ವಸೂಲಿ ಮಾಡಿದ್ದಾಳೆ. ಆಕೆಗೆ ಈಗಾಗಲೇ ಮದುವೆ ಆಗಿದ್ದು ಒಂದು ಮಗುವಿದೆ. ಜಾಂಗ್ ಲಿ ಹಾಗೂ ಆಕೆ ಗಂಡನಿಗೆ ಕೆಲಸವಿರಲಿಲ್ಲ. ಹಾಗಾಗಿ ವಾಂಗ್ ನಿಂದ ಹಣ ವಸೂಲಿ ಮಾಡಿದ್ದಲ್ಲದೆ ಪತಿಗೆ ವಾಂಗ್ ತನ್ನ ಸ್ನೇಹಿತ ಎಂದಿದ್ದಾಳೆ.

ಕಷ್ಟದ ಸಮಯದಲ್ಲಿ ಚಾಣಕ್ಯನ ಈ ಮಾತು ನೆನಪಿಟ್ರೆ ಸಮಸ್ಯೇನೆ ಇರೋದಿಲ್ಲ

ಜಾಂಗ್ ಲಿ ಮೋಸ ಬಹಿರಂಗವಾಗ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆದ್ರೆ ವಾಂಗ್ ಆಕೆ ಮೇಲೆ ಕನಿಕರ ತೋರಿದ್ದಾನೆ. ಅವಳು ಇಷ್ಟೊಂದು ಮೋಸ ಮಾಡಿದ್ರೂ ಯಾವುದೇ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. 
 

click me!