ತಾನಿದ್ದ ಸ್ಥಳಕ್ಕೆ ಹಠಾತ್ತಾಗಿ ಚಿರತೆ ಪ್ರವೇಶಿಸಿದಾಗ ಬಾಗಿಲಿಂದ ಹೊರಹೋಗಿದ್ದಲ್ಲದೆ, ಬಾಗಿಲನ್ನು ಮುಚ್ಚಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ನೆರವಾದ ಮಹಾರಾಷ್ಟ್ರದ ಬಾಲಕ ಮೋಹಿತ್ ವರ್ತನೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವನ ಸಮಯಸ್ಫೂರ್ತಿಯ ವರ್ತನೆ ಎಲ್ಲರಿಗೆ ಪ್ರೇರಣೆಯೂ ಆಗಿದೆ. 

ಮಕ್ಕಳು ಮನೆಯಲ್ಲಿ ಒಬ್ಬರೇ ಇರುವಾಗ ಬಾಗಿಲು ಹಾಕಿಕೊಂಡಿರಬೇಕು, ಅಪರಿಚಿತರು ಬಾಗಿಲು ತಟ್ಟಿದರೆ ತೆರೆಯಬಾರದು, ಶಾಲೆಯ ಬಳಿ ಅಥವಾ ಬೇರೆ ಎಲ್ಲಾದರೂ ಪರಿಚಯವಿಲ್ಲದವರು ಏನೇ ನೀಡಿದರೂ ತೆಗೆದುಕೊಳ್ಳಬಾರದು... ಒಂದೊಮ್ಮೆ ಮನೆಯಿಂದ ಹೊರಗೆ ಒಬ್ಬರೇ ಇರುವ ಸಮಯ ಬಂದರೆ ಯಾವ ರೀತಿ ಇರಬೇಕು, ಯಾರ ಸಹಾಯ ಪಡೆದುಕೊಳ್ಳಬೇಕು ಇತ್ಯಾದಿ ಎಚ್ಚರಿಕೆಗಳನ್ನು ಮಕ್ಕಳಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಪ್ರತಿ ಮನೆಯಲ್ಲೂ ತಂದೆ-ತಾಯಿಯರು ಈ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಲು ಯತ್ನಿಸುತ್ತಾರೆ. ಆದರೆ, ಮನೆಯೊಳಗೆ ಅಥವಾ ನಾವಿರುವ ಸ್ಥಳಕ್ಕೆ ಕಾಡುಪ್ರಾಣಿಗಳು ಬಂದರೆ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಹುಲಿ, ಸಿಂಹ, ಚಿರತೆಯಂತಹ ಭಯ ಮೂಡಿಸುವ ಪ್ರಾಣಿಗಳ ಆಗಮನವಾದರೆ ಹೇಗಿರಬೇಕು ಎನ್ನುವುದನ್ನು ಸಾಮಾನ್ಯವಾಗಿ ಯಾರೂ ತಿಳಿಸುವುದಿಲ್ಲ. ಚಿರತೆಯಂತಹ ಪ್ರಾಣಿಗಳು ಊರಿನಲ್ಲಿ ಓಡಾಡುತ್ತಿದ್ದರೆ ಮಾತ್ರ ಈ ಕುರಿತು ಎಚ್ಚರಿಕೆ ನೀಡಿರಬಹುದಷ್ಟೆ. ಸಾಮಾನ್ಯವಾಗಿ ಇಂತಹ ಮುನ್ನೆಚ್ಚರಿಕೆ ನೀಡಿರುವುದಿಲ್ಲ. ಹೀಗಾಗಿ, ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ಅರಿಯದೇ ಮಕ್ಕಳು ಗೊಂದಲಕ್ಕೀಡಾಗಬಹುದು. ಆದರೆ, ಅಂಥ ಮಹಾರಾಷ್ಟ್ರದಲ್ಲೊಬ್ಬ ಬಾಲಕ ಸಮಯಸ್ಫೂರ್ತಿಯಿಂದ ವರ್ತಿಸಿರುವುದು ಈಗ ಬಹಿರಂಗವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. 

ಮಹಾರಾಷ್ಟ್ರದ (Maharashtra) ಮಾಲೇಗಾಂವ್ ನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. 12 ವರ್ಷದ ಬಾಲಕ (Boy) ಮೋಹಿತ್ ಆಹಿರೆ ಎಂಬಾತ ತನ್ನ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿದ್ದ. ಅದೊಂದು ವಿವಾಹದ (Wedding) ಹಾಲ್. ಪಕ್ಕದಲ್ಲಿ ಸಣ್ಣದೊಂದು ಆಫೀಸ್ (Office) ಇದೆ. ಆ ರೂಮಿನಲ್ಲಿ ಕುಳಿತು ಮೋಹಿತ್ ಮೊಬೈಲ್ (Mobile) ವೀಕ್ಷಣೆಯಲ್ಲಿ ಮಗ್ನನಾಗಿದ್ದ. ಆ ಸಮಯದಲ್ಲಿ ಅಲ್ಲೊಂದು ಚಿರತೆ (Leopard) ಪ್ರವೇಶಿಸುತ್ತದೆ. 

ಲಂಗ ದಾವಣಿಯಲ್ಲಿ ಮಿರಮಿರ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ: ಈ ಬದಲಾವಣೆಗೆ ಟಾಲಿವುಡ್‌ ಕಾರಣವೆಂದ ಫ್ಯಾನ್ಸ್‌!

ಧೈರ್ಯದ ಮೋಹಿತ್
ಸಾಮಾನ್ಯ ಮಕ್ಕಳು (Children) ಚಿರತೆಯನ್ನು ಕಂಡು ಭಯಪಡುತ್ತಾರೆ ಅಥವಾ ಕೂಗಬಹುದು. ಎಷ್ಟೋ ಮಕ್ಕಳು ಮೊಬೈಲ್ ನಿಂದ ತಲೆಯೆತ್ತಿ ನೋಡುವುದು ಸಹ ಅನುಮಾನ. ಅದರಲ್ಲೇ ಮುಳುಗಿರುತ್ತಾರೆ. ಅಂಥದ್ದರಲ್ಲಿ ಮೋಹಿತ್ ಮೊಬೈಲ್ ನೋಡುತ್ತಿದ್ದರೂ ಕಚೇರಿಯ ಒಳಗೆ ಬಂದ ಚಿರತೆಯನ್ನು ನೋಡುತ್ತಾನೆ. ಅದು ನೇರವಾಗಿ ಎದುರಿರುವ ಸಣ್ಣ ಕ್ಯಾಬಿನ್ (Cabin) ಪ್ರವೇಶಿಸುತ್ತದೆ. ಆಗ ಆತ ತಕ್ಷಣಕ್ಕೆ ಬಾಗಿಲಿಂದ ಹೊರ ಓಡಿ ಬಾಗಿಲನ್ನು ಹಾಕುತ್ತಾನೆ. ಆತನ ಸಮಯಸ್ಫೂರ್ತಿಯ (Timely) ನಡವಳಿಕೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಪ್ರೇರಣೆಯಾಗುವಂತಿದೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ (Viral) ಆಗಿದೆ. 

ಬಾಗಿಲು ಮುಚ್ಚಿದ
ಬಾಲಕನ ಅತಿ ಸಮೀಪದಲ್ಲಿ ಚಿರತೆ ಸಾಗುತ್ತದೆ. ಬಹುಶಃ ಚಿರತೆ ಬಾಲಕನನ್ನು ಗಮನಿಸಿದಂತಿಲ್ಲ. ಅದು ಸೀದಾ ಕ್ಯಾಬಿನ್ ಪ್ರವೇಶಿಸುತ್ತದೆ. ಈ ಸನ್ನಿವೇಶದ ಬಗ್ಗೆ ಮೋಹಿತ್ ಸುದ್ದಿವಾಹಿನಿಗಳೊಂದಿಗೆ ಹಂಚಿಕೊಂಡಿದ್ದಾನೆ. “ಚಿರತೆ ನನಗೆ ಅತಿ ಸಮೀಪದಲ್ಲಿತ್ತು. ನನಗೆ ಭಯ (Fear)ವಾಯಿತು. ಅದು ನನ್ನ ಎದುರಿಗಿದ್ದ ಕ್ಯಾಬಿನ್ ಪ್ರವೇಶಿಸಿದ ಕೂಡಲೇ ಜಿಗಿದು ಅಲ್ಲಿಂದ ಓಡಿದೆ. ಹಿಂದೆಯೇ, ಬಾಗಿಲನ್ನು (Door) ಮುಚ್ಚಿದೆ’ ಎಂದು ತಿಳಿಸಿದ್ದಾನೆ. 

ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೌದಿಯ ಮೊದಲ ಪುರುಷ ರೋಬೋಟ್! ವಿಡಿಯೋ ವೈರಲ್

ವೆಡ್ಡಿಂಗ್ ಹಾಲ್ ನ ಮಾಲೀಕರಾಗಿರುವ ಅನಿಲ್ ಪವಾರ್ ಹೇಳುವಂತೆ, ಅದು ಬುಕಿಂಗ್ ಕಚೇರಿ. ಅಲ್ಲಿ ಜಾಗ ಅತಿ ಸಣ್ಣದಾಗಿದೆ. ಮೋಹಿತ್ ಬಾಗಿಲ ಬಳಿಯೇ ಇರುವ ಸೋಫಾದಲ್ಲಿ ಕುಳಿತಿದ್ದ. ಚಿರತೆ ಪ್ರವೇಶಿಸುವ ಹಂತದಲ್ಲಿ ಅತ್ಯಂತ ಸಮೀಪದಲ್ಲಿತ್ತು. ಆದರೆ, ಅದು ಮುಂದೆ ಸಾಗಿದಾಗ ಈತ ಚುರುಕಾಗಿ ಹೊರಗೆ ಸಾಗಿ ಬಾಗಿಲನ್ನು ಬಂದ್ ಮಾಡಿದ’ ಎಂದು ತಿಳಿಸಿದ್ದಾರೆ. 

Scroll to load tweet…

5 ವರ್ಷದ ಗಂಡು ಚಿರತೆ
ಹೊರಗೆ ಹೋದ ಮೋಹಿತ್ ತಕ್ಷಣ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದ್ದಾನೆ. ಬಳಿಕ, ಕೆಲವೇ ಸಮಯದಲ್ಲಿ ನಾಸಿಕ್ ನಿಂದ ಸಿಬ್ಬಂದಿ ಕರೆಸಿ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಇದು 5 ವರ್ಷದ ಗಂಡು ಚಿರತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಹಿಂದೆಯೂ ಚಿರತೆ ಕಂಡುಬಂದಿತ್ತು ಎನ್ನಲಾಗಿದೆ. ಅರಣ್ಯ (Forest) ಸಿಬ್ಬಂದಿ ಮತ್ತು ಪೊಲೀಸ್ ಅದನ್ನು ಹುಡುಕಿದ್ದರು. ಮೋಹಿತ್ ಅದನ್ನು ಕೋಣೆಯೊಳಗೆ (Room) ಕೂಡಿಹಾಕುವಲ್ಲಿ ಯಶಸ್ವಿಯಾಗಿದ್ದುದು ಅನುಕೂಲವಾಯಿತು.