ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಆದರೆ ಇದನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಎಷ್ಟೋ ಸಾರಿ ಗಂಡ-ಹೆಂಡತಿ (Husband Wife)ಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ (Fight)ವಾಗುತ್ತದೆ. ಪತಿ-ಪತ್ನಿಯ ಹೆಚ್ಚಾಗಿ ಮಧ್ಯೆ ಜಗಳಕ್ಕೆ ಕಾರಣವಾಗೋದೇನು ?
ಗಂಡ-ಹೆಂಡತಿ (Husband-Wife) ಮಧ್ಯೆ ಪ್ರೀತಿಯಿರುವ ಹಾಗೆಯೇ ಜಗಳ (Fight) ಸಹ ಸಾಮಾನ್ಯವಾಗಿರುತ್ತದೆ. ದಂಪತಿ ತಮ್ಮ ತಮ್ಮಲ್ಲೇ ಯಾವುದೋ ವಿಚಾರದಲ್ಲಿ ಜಗಳವಾಡುವುದು, ಮನಸ್ತಾಪ ಮಾಡಿಕೊಳ್ಳುವುದು ಇವೆಲ್ಲವೂ ಸಂಬಂಧದ (Relationship) ಒಂದು ಭಾಗ. ಆದರೆ ಆಗಾಗ ಸಂಬಂಧದಲ್ಲಿನ ಜಗಳಗಳು ದೊಡ್ಡ ವಿವಾದಕ್ಕೆ ಕಾರಣವಾಗುತ್ತವೆ. ಸಂಬಂಧದಲ್ಲಿ ಯಾವುದೇ ರೀತಿಯ ಸಮಸ್ಯೆ ಸಂಭವಿಸುವ ಮೊದಲು ಅದನ್ನು ನಿಲ್ಲಿಸಬಹುದು. ಇದಕ್ಕಾಗಿ ದಂಪತಿಗಳ ನಡುವಿನ ಜಗಳಕ್ಕೆ (Fight) ಕಾರಣವೇನು ಎಂಬುದನ್ನು ನೀವು ತಿಳಿದುಕೊಳ್ಳುವುದು ಮುಖ್ಯ. ದಂಪತಿಗಳು ಯಾವುದರ ಮೇಲೆ ಜಗಳವಾಡುತ್ತಾರೆ? ದಂಪತಿಗಳ ನಡುವಿನ ಜಗಳಕ್ಕೆ ಮೂಲ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮನೆಕೆಲಸದ ವಿಷಯದಲ್ಲಿ ಜಗಳ
ಪತಿ-ಪತ್ನಿಯರಿಬ್ಬರೂ ಉದ್ಯೋಗದಲ್ಲಿದ್ದರೆ ಮನೆಗೆಲಸದ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆಯುವುದು ಸಾಮಾನ್ಯ. ಕಛೇರಿಯ ಕೆಲಸದ ನಂತರ ಇಬ್ಬರಿಗೂ ವಿಶ್ರಾಂತಿ ಬೇಕು. ಹೀಗಾಗಿ ಹೆಂಡತಿ ಕೆಲಸ ಮಾಡಲಿ ಎಂದು ಗಂಡ, ಆತನೆ ಕೆಲಸ ಮಾಡಲಿ ನಾನ್ಯಾಕೆ ಮಾಡಬೇಕು ಎಂದು ಹೆಂಡತಿ ಅಂದುಕೊಳ್ಳುತ್ತಾಳೆ. ಈ ಚರ್ಚೆಯೇ ಹಲವು ಬಾರಿ ಚರ್ಚೆಗೆ ಕಾರಣವಾಗುತ್ತದೆ. ಅಡುಗೆ ಮಾಡುವುದು ನಿನ್ನ ಕರ್ತವ್ಯವೆಂದು ಗಂಡ ದೂಷಿಸಿದರೆ ಇಬ್ಬರ ನಡುವಿನ ಜಗಳ ತಾರಕಕ್ಕೆರುತ್ತದೆ.
ಒಂಭತ್ತು ಹೆಂಡ್ತಿಯರ ಜೊತೆ ಸುಖೀ ಸಂಸಾರ, ಆಕೆಗೆ ಮಾತ್ರ ಅವನೊಬ್ಬನೇ ಬೇಕಂತೆ..!
ಆಹಾರದ ವಿಚಾರಕ್ಕಾಗಿ ಜಗಳ
ಇದು ಹೆಚ್ಚಿನ ಮನೆಗಳಲ್ಲಿ ಜಗಳಕ್ಕೆ ಕಾರಣವಾಗುವ ಪ್ರಮುಖ ವಿಷಯವಾಗಿರಬಹುದು. ಅಡುಗೆ ಚೆನ್ನಾಗಿಲ್ಲ ಎಂದು ಸಹ ಹೇಳದೆ ಗಂಡ ಸುಮ್ಮನೆ ಮೊಬೈಲ್ ನೋಡುತ್ತಾ ಊಟ ಮಾಡುವುದು ಹೆಂಡತಿಯನ್ನು ಕೆರಳಿಸುತ್ತದೆ. ಗಂಡ ಕಡಿಮೆ ತಿಂದರೂ ನಾನ್ಯಾಕೆ ಇಷ್ಟೊಂದು ಅಡುಗೆ ಮಾಡ್ಬೇಕಿತ್ತು. ಹೊರಗಡೆ ತಿಂದಿದ್ದೆ ಎಂದು ಮೊದಲೇ ಹೇಳಬಹುದಿತ್ತಲ್ಲ ಎಂದು ಹೆಂಡ್ತಿ ರಾಮಾಯಾಣ ಶುರು ಮಾಡುತ್ತಾಳೆ. ಹೆಂಡತಿಯರದ್ದು ಈ ವರಸೆಯಾದರೆ ಉಪ್ಪೇ ಹಾಕಿಲ್ವಾ, ಖಾರ ಕಡಿಮೆಯಾಗಿದೆ. ಹುಳಿ ಸೇರಿಸಿಯೇ ಇಲ್ವಾ ಅನ್ನೋದು ಗಂಡಂದಿರ ಚರ್ಚೆ. ಇದು ಸಹಜವಾಗಿಯೇ ಕಷ್ಟಪಟ್ಟು ಅಡುಗೆ ಮಾಡಿಕೊಟ್ಟ ಹೆಂಡತಿಯನ್ನು ರೊಚ್ಚಿಗೆಬ್ಬಿಸುತ್ತದೆ. ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ.
ಖರ್ಚಿನ ವಿಚಾರಕ್ಕೆ ಜಗಳ
ಮನೆ ಖರ್ಚಿನ ವಿಚಾರದಲ್ಲೂ ದಂಪತಿ ನಡುವೆ ಜಗಳವಾಗುತ್ತದೆ. ಗಂಡ-ಹೆಂಡತಿ ಇಬ್ಬರ ಮಧ್ಯೆ ಒಬ್ಬರಾದರೂ ಅತಿಯಾಗಿ ಖರ್ಚು ಮಾಡುವವರು ಇರುತ್ತಾರೆ. ಹೀಗಾಗಿ ಸಂಗಾತಿಯ ದುಂದುವೆಚ್ಚದ ವಿಚಾರದಲ್ಲಿ ಇಬ್ಬರಲ್ಲೂ ವಾಗ್ವಾದ ನಡೆಯುವುದು ಸಾಮಾನ್ಯ. ಕೆಲವೊಮ್ಮೆ ದಂಪತಿಗಳು ಬಜೆಟ್, ಶಾಪಿಂಗ್ ಇತ್ಯಾದಿಗಳ ಬಗ್ಗೆ ವಾದಿಸುತ್ತಾರೆ. ಅನಗತ್ಯ ಖರ್ಚು ಮಾಡಿದ್ಯಾಕೆ ಎಂದು ಜಗಳ ನಡೆಯುತ್ತದೆ.
ಹೆಂಡ್ತಿ ನನ್ಗಿಂತ ಹೆಚ್ಚು ನನ್ನ ಸ್ನೇಹಿತರ ಜೊತೇನೆ ಮಾತನಾಡ್ತಾಳೆ..ಏನ್ಮಾಡ್ಲಿ ?
ಟಿವಿ ನೋಡಲು ಜಗಳ
ಹೆಂಗಸರು ಸೀರಿಯಲ್, ಸಿನಿಮಾ ಪ್ರಿಯರು. ಗಂಡಂದಿರು ನ್ಯೂಸ್, ಸ್ಪೋರ್ಟ್ಸ್ ಚಾನೆಲ್ ಬಿಟ್ಟು ಬೇರೆ ಹಾಕುವುದಿಲ್ಲ. ಇದು ಇಬ್ಬರ ನಡುವೆ ಅಸಮಾಧಾನ ಮೂಡಿಸಲು ಕಾರಣವಾಗುತ್ತದೆ. ಮಹಿಳೆಯರು ಟಿವಿ ಧಾರಾವಾಹಿ ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ, ಆದರೆ ಪುರುಷರು ಸುದ್ದಿ ಅಥವಾ ಪಂದ್ಯಗಳನ್ನು ವೀಕ್ಷಿಸಲು ಆಸಕ್ತಿ ಹೊಂದಿರುತ್ತಾರೆ. ವಿಭಿನ್ನ ಆದ್ಯತೆಗಳ ಕಾರಣ, ಅವುಗಳ ನಡುವೆ ವಾದಗಳು ಹೆಚ್ಚಾಗಿ ನಡೆಯುತ್ತದೆ.
ಅತಿಯಾದ ಮೊಬೈಲ್ ಬಳಕೆ
ಪ್ರಸ್ತುತ, ದಂಪತಿಗಳು ಮನೆಯಲ್ಲಿರಲಿ ಅಥವಾ ಕೆಲಸದಲ್ಲಿರಲಿ, ಎರಡೂ ಸಂದರ್ಭಗಳಲ್ಲಿ ಅವರು ತುಂಬಾ ಕಾರ್ಯನಿರತರಾಗಿರುತ್ತಾರೆ ಮನೆಗೆ ಬಂದಾಗಲೂ ಜನರು ತಮ್ಮ ಸಮಯವನ್ನು ಫೋನ್, ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್‌ನಲ್ಲಿ ಕಳೆಯುತ್ತಾರೆ. ಕುಟುಂಬ ಮತ್ತು ಸ್ನೇಹಿತರಿಗಾಗಿ ಅವನಿಗೆ ಸಮಯವಿರಲಿಲ್ಲ. ಈ ಕಾರಣಕ್ಕಾಗಿ ದಂಪತಿಗಳ ನಡುವೆ ವಾಗ್ವಾದವೂ ನಡೆಯುತ್ತದೆ.
ಮನೆಯಲ್ಲೂ ಕೆಲಸದ ಮಾತುಕತೆ
ಕೆಲವರಂತು ಆಫೀಸಿನಲ್ಲಿ ಮಾತ್ರವಲ್ಲ ಮನೆಗೆ ಬಂದ ಮೇಲೂ ಕೆಲಸ ಮಾಡುತ್ತಿರುತ್ತಾರೆ. ಕೆಲಸದ ವಿಚಾರವಾಗಿ ಲ್ಯಾಪ್‌ಟಾಪ್‌ನಲ್ಲಿ ಮೀಟಿಂಗ್, ಪೋನಿನಲ್ಲಿ ಚರ್ಚೆ ನಡೆಸುತ್ತಿರುತ್ತಾರೆ. ಇದರಿಂದ ಗಂಡನಿಗೆ ಅಥವಾ ಹೆಂಡತಿಗೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ಪತಿ-ಪತ್ನಿ ಮಧ್ಯೆ ಹಲವು ಬಾರಿ ಮನಸ್ತಾಪ ಮೂಡುತ್ತದೆ.