ಅಯ್ಯೋ ರಾಮ..ಕನ್ಯಾದಾನ ಶಾಸ್ತ್ರ ಮಾಡ್ದೆ ಮದುವೆಯಾದ್ಲು ಹುಡುಗಿ !

Published : Dec 09, 2022, 04:22 PM ISTUpdated : Dec 09, 2022, 04:24 PM IST
ಅಯ್ಯೋ ರಾಮ..ಕನ್ಯಾದಾನ ಶಾಸ್ತ್ರ ಮಾಡ್ದೆ ಮದುವೆಯಾದ್ಲು ಹುಡುಗಿ !

ಸಾರಾಂಶ

ಹಿಂದೂ ಧರ್ಮದಲ್ಲಿ ಮದುವೆಗೆ ಮಹತ್ವವಾದ ಸ್ಥಾನವಿದೆ. ಹಲವು ವಿಧಿ-ವಿಧಾನಗಳ ಮೂಲಕ ಮದುವೆ ಶಾಸ್ತ್ರ ಪೂರ್ಣಗೊಳ್ಳುತ್ತದೆ. ಮದುವೆ ಶಾಸ್ತ್ರದಲ್ಲಿ ಮುಖ್ಯವಾದುದು ಕನ್ಯಾದಾನ. ಆದರೆ ಇಲ್ಲೊಬ್ಬಾಕೆ ಕನ್ಯಾದಾನವಿಲ್ಲದೇನೇ ಮದ್ವೆಯಾಗಿದ್ದಾಳೆ. ಅರೆ, ಇದೇನ್ ವಿಚಿತ್ರ ಅಂತೀರಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹಿಂದೂ ಧರ್ಮದಲ್ಲಿ ವಿವಾಹದ (Marriage) ಸಮಯದಲ್ಲಿ ಅನೇಕ ಶಾಸ್ತ್ರಗಳನ್ನು ಅನುಸರಿಸಲಾತ್ತದೆ. ಈ ಎಲ್ಲಾ ಶಾಸ್ತ್ರಗಳಿಗೆ ಅದರದ್ದೇ ಆದ ಮಹತ್ವವಿದೆ. ಸಪ್ತಪದಿ, ತಾಳಿ ಕಟ್ಟುವುದು, ಘಟ್‌ಬಂಧನ್‌ ಎಲ್ಲವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.  ಮದುವೆಯಲ್ಲಿ ವರ (Groom) ಕಾಶಿ ಯಾತ್ರೆಗೆ ತೆರಳುವ ಸಮಯದಲ್ಲಿ ವಧುವಿನ (Bride) ಸೋದರಮಾವ, ವರನು ಕಾಶೀಯಾತ್ರೆಗೆ ಹೋಗದಂತೆ ತಡೆದು ವಧುವನ್ನು ವಿವಾಹವಾಗುವಂತೆ ಕೋರುವುದು. ಅದಕ್ಕೆ ವರನು ವಿವಾಹವಾಗುವುದಾಗಿ ಒಪ್ಪಿಗೆ ಸೂಚಿಸುವುದು. ಆನಂತರದಲ್ಲಿ ಮದುವೆ ಶಾಸ್ತ್ರಗಳು ಮುಂದುವರೆಯುತ್ತವೆ. ಹಾಗೆ ಮಾಡುವ  ಶಾಸ್ತ್ರಗಳಲ್ಲಿ ಕನ್ಯಾದಾನವೂ (Kanyadaana) ಸಹ ಒಂದಾಗಿದೆ. ಕನ್ಯಾದಾನವಿಲ್ಲದೆ ಮದುವೆಯನ್ನು ಅಪೂರ್ಣವೆಂದೇ ಪರಿಗಣಿಸಲಾಗುತ್ತದೆ. 

ಕನ್ಯಾದಾನ ಮಾಡದೆ ಮದುವೇನೂ ಮುಗೀತು
ಕನ್ಯಾದಾನದ ಆಚರಣೆಯು ವಧುವಿನ ತಂದೆ ತನ್ನ ಮಗಳ ಜವಾಬ್ದಾರಿಯನ್ನು ವರನಿಗೆ ನೀಡುವುದನ್ನು ಒಳಗೊಂಡಿರುತ್ತದೆ. ಈ ಶಾಸ್ತ್ರವಿಲ್ಲದ ಮದುವೆಯನ್ನು ಪರಿಪೂರ್ಣವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಇಲ್ಲೊಂದೆಡೆ ಹುಡುಗಿ ಯಾವುದೇ ರೀತಿಯ ಕನ್ಯಾದಾನದ ವಿಧಾನವಿಲ್ಲದೆ ಮದುವೆಯಾಗಿದ್ದಾಳೆ. 'ನನ್ನ ಮದುವೆಯಲ್ಲಿ ಯಾವುದೇ ಕನ್ಯಾದಾನ ಮಾಡಿರಲಿಲ್ಲ. ಹುಡುಗಿಯನ್ನು ಒಂದು ಮನೆತನದಿಂದ ಇನ್ನೊಂದಕ್ಕೆ ವರ್ಗಾಯಿಸಲಿಲ್ಲ. ನನ್ನ ತಾಯಿ ಮತ್ತು ತಂದೆ ಎಲ್ಲಾ ಇದನ್ನು ಮಾಡಲು ನಿರಾಕರಿಸಿದರು' ಎಂದು Twitter ಬಳಕೆದಾರರಾದ @keepsitrustic ಬರೆದಿದ್ದಾರೆ.

ಮಂಟಪ ರೆಡಿಯಾಗಿತ್ತು, ವರ ಕೂತಿದ್ದ, ವಧು ಮಾತ್ರ ಔಟ್‌ಫಿಟ್ ತರೋದನ್ನೇ ಮರೆತಿದ್ಲು !

ವೈರಲ್ ಆದ ಟ್ವೀಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮದುವೆಯಲ್ಲಿ ನೀವು ಉಳಿದ ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತೀರಾ ಎಂದು ಕೇಳಿದಾಗ ವಧು, 'ಇಲ್ಲ. ಕೇವಲ ಸಿಂಧೂರ್ ಮತ್ತು ಸಪ್ತಪದಿ ಮಾಡಿದೆ. ಪಂಡಿತ್ ಜೀ ಮಂತ್ರಗಳನ್ನು ಹೇಳಿದರು' ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು 'ನನ್ನ ಸಹೋದರಿ ಮತ್ತು ನಾನು ಸಹ ಕನ್ಯಾದಾನವನ್ನು ಮಾಡಲಿಲ್ಲ. ಇದರಿಂದ ಸಂಬಂಧಿಕರು ಬಹಳಷ್ಟು ಸಿಟ್ಟಾದರು' ಎಂದು ತಿಳಿಸಿದ್ದಾರೆ. ಮತ್ತೊಬ್ಬರು 'ಅವರ ಮದುವೆ ಅವರ ಇಷ್ಟ; ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಇನ್ನೊಬ್ಬ ವ್ಯಕ್ತಿ 'ನೀವೇನೇ ಮಾಡಿದರೂ ಜನರು ಯಾವುದಾದರೂ ರೀತಿಯಲ್ಲಿ ಟೀಕಿಸುತ್ತಾರೆ. ಹೀಗಾಗಿ ನಿಮ್ಮ ಖುಷಿಗಾಗಿ ಬದುಕಿ' ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ನಾವೆಷ್ಟೇ ಆಧುನಿಕತೆಯನ್ನು ಅಳವಡಿಸಿಕೊಂಡರೂ ನಮ್ಮ ಸಂಪ್ರದಾಯವನ್ನು ಬಿಟ್ಟು ಕೊಡಬಾರದು ಎಂದು ಕೇಳಿದ್ದಾರೆ.

ಪ್ರಿಯತಮೆ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರೂ ಕೈ ಬಿಡದೆ ಸಪ್ತಪದಿ ತುಳಿದ ವರ

ಕನ್ಯಾದಾನ ವಿಧಾನ ಹೀಗಿದೆ (Procedure) :
ಬ್ರಾಹ್ಮ ವಿವಾಹದ ಅನುಸಾರವಾಗಿ ಒಂದು ಕಂಚಿನ ಪಾತ್ರೆಯ ಮೇಲೆ ವಧುವಿನ ಬಲಗೈ ಇಡಲಾಗುತ್ತದೆ ಅದರ ಮೇಲೆ ವರನ ಬಲಗೈ ಮತ್ತು ನಂತರ ಅವರಿಬ್ಬರ ಕೈ ಮೇಲೆ ವಧುವಿನ ತಂದೆಯು ತನ್ನ ಬಲಗೈ ಇಟ್ಟುಕೊಳ್ಳುತ್ತಾನೆ, ಅದರ ಮೇಲೆ ಮೊದಲೇ ಅಭಿಮಂತ್ರಿಸಿ ಬಿಟ್ಟ ಕಲಶದ ನೀರನ್ನು ಆತನ ಧರ್ಮಪತ್ನಿ ಧಾರೆಯಾಗಿ ಕೈಮೇಲೆ ಬಿಡುತ್ತಾಳೆ . ಆ ಕಲಶದ ನೀರು ಅವರೆಲ್ಲರ ಕೈಗೆ ತಾಗಿ ಕಂಚಿನ ಪಾತ್ರೆಗೆ ಬೀಳುತ್ತದೆ. ಇದಕ್ಕೆ ಕನ್ಯಾದಾನ ಅಥವಾ ಧಾರೆ ಎರೆಯುವುದು ಎಂದು ಹೇಳುತ್ತಾರೆ. ಈ ವಿಧಿಯ ಅನುಸಾರ ವಧುವಿನ ಪಿತನು, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಮಾರ್ಗದಲ್ಲಿ ಸಹಧರ್ಮಿಣಿಯಾಗಿ ಮಗಳನ್ನು ಜವಾಬ್ದಾರಿಯುತವಾಗಿ ನಡೆಸಿಕೊಳ್ಳುವಂತೆ ಕೋರಿ ವರನಿಗೆ ಒಪ್ಪಿಸುವ ಸಂಪ್ರದಾಯ ಇದಾಗಿದೆ.

ಈ ಸಂಪ್ರದಾಯ (Ritual) ಆರಂಭವಾಗಿದ್ದು ಹೀಗೆ : 
ಶಾಸ್ತ್ರಗಳ ಅನುಸಾರ ಕನ್ಯಾದಾನ ಪರಂಪರೆಯನ್ನು ಪ್ರಜಾಪತಿ ದಕ್ಷ (Daksha) ಆರಂಭಿಸಿದರೆಂದು ಹೇಳಲಾಗುತ್ತದೆ. ತನ್ನ 27 ಕನ್ಯೆಯರನ್ನು ಚಂದ್ರ (Moon) ದೇವನಿಗೆ ವಿವಾಹ ಮಾಡಿಕೊಡುವ ಸಂದರ್ಭದಲ್ಲಿ ಕನ್ಯಾದಾನ ವಿಧಿಯ ಆರಂಭವಾಯಿತು ಎಂದು  ಹೇಳಲಾಗುತ್ತದೆ. ಅದೇ 27  ಕನ್ಯೆಯರೇ ಇಪ್ಪತ್ತೇಳು ನಕ್ಷತ್ರಗಳೆಂದು (Stars) ಹೇಳಲಾಗುತ್ತದೆ. ಅಂದಿನಿಂದ ಕನ್ಯಾದಾನ ಪರಂಪರೆ ಆರಂಭವಾಯಿತು ಎಂದು ಶಾಸ್ತ್ರ ಹೇಳುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!