ಸಂಬಂಧಗಳನ್ನು ಚೆನ್ನಾಗಿಟ್ಟುಕೊಳ್ಳಲು ನಮ್ಮ ನಮ್ಮ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಅದ್ಯಾವುದೇ ಸಂಬಂಧವಾಗಿರಲಿ ಕೆಲವು ವಿಷಯಗಳಿಗೆ ಗಮನ ನೀಡಬೇಕಾಗುತ್ತದೆ. ಹಾಗೆಯೇ ಕೆಲವು ಗುಟ್ಟುಗಳನ್ನೂ ಮೆಂಟೇನ್ ಮಾಡಬೇಕಾಗುತ್ತದೆ. ಸಂಗಾತಿಗಳ ನಡುವೆಯೂ ಕೆಲವೊಂದಿಷ್ಟು ಗುಟ್ಟುಗಳು ಇರುವುದು ಸಹಜ.
ಗರ್ಲ್ ಫ್ರೆಂಡ್ (Girl Friend) ಆಗಲೀ, ಬಾಯ್ ಫ್ರೆಂಡ್ (Boy Friend) ಆಗಲೀ ಇಬ್ಬರೂ ಕೆಲವು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರೀತಿಪಾತ್ರರಿಗೆ ಎಲ್ಲವನ್ನೂ ಹೇಳಿಕೊಳ್ಳುವ ಭರದಲ್ಲಿ ಆಡುವ ಕೆಲವು ಮಾತುಗಳು ಕಾಲಕ್ರಮೇಣ ಮನಸ್ತಾಪಕ್ಕೂ ಕಾರಣವಾಗಬಲ್ಲವು. ಹೀಗಾಗಿ, ಸಂಗಾತಿಗೆ (Partner) ಯಾವುದನ್ನು ಹೇಳಬೇಕು, ಯಾವುದನ್ನು ಹಂಚಿಕೊಳ್ಳಬಾರದು ಎನ್ನುವ ವಿಚಾರದ ಕುರಿತು ಎಚ್ಚರ ವಹಿಸಬೇಕು. ಕೆಲವು ಸಂಗತಿಗಳನ್ನು ಹಂಚಿಕೊಂಡರೆ ಆಗುವ ಸಮಸ್ಯೆಗಳನ್ನು ಅರಿತುಕೊಂಡರೆ ಯಾವುದನ್ನೆಲ್ಲ ಅವರಲ್ಲಿ ಹೇಳಿಕೊಳ್ಳಬಾರದು ಎನ್ನುವುದರ ಬಗ್ಗೆ ಐಡಿಯಾ ಬರಬಹುದು.
ಸಂಗಾತಿಯಿಂದ ಈ ವಿಚಾರಗಳನ್ನು ಗುಟ್ಟಾಗಿ ಇಡಬೇಕು ಎನ್ನುವುದು ಇದರ ಅರ್ಥವಲ್ಲ. ಬದಲಿಗೆ, ನೀವು ಇಂತಹ ತಪ್ಪುಗಳು (Mistake) ಆಗದಂತೆ ಎಚ್ಚರಿಕೆ ವಹಿಸಬೇಕು. ಸಂಬಂಧ ಚೆನ್ನಾಗಿರಬೇಕು ಎಂದಾದರೆ ಇವುಗಳನ್ನು ಹಂಚಿಕೊಳ್ಳುವ ಗೋಜಿಗೆ ಹೋಗಬಾರದು.
• ಎಕ್ಸ್ (Ex) ಕುರಿತಾದ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಮಾತು
ನೀವು ಹಿಂದೊಂದು ಸಂಬಂಧ ಹೊಂದಿದ್ದರೆ ಅವರ ಬಗ್ಗೆ ಸಹಜವಾಗಿ ಕೆಲವು ಮಾತುಗಳನ್ನು ಸಂಗಾತಿಯೊಂದಿಗೆ ಆಡಿರುತ್ತೀರಿ. ಅವರ ಬಗ್ಗೆ ಹೇಳಿರುತ್ತೀರಿ. ಆದರೆ, ನೀವು ಈಗ ನಿಮ್ಮ ಹಾಲಿ ಸಂಗಾತಿಯೊಂದಿಗೆ ಇರುವಾಗ ಕೆಲವು ಸನ್ನಿವೇಶಗಳಲ್ಲಿ ಅವರ ನೆನಪು ಪದೇ ಪದೆ ಆಗುತ್ತಿದ್ದರೂ ಅದರ ಬಗ್ಗೆ ಸುಮ್ಮನಿದ್ದುಬಿಡಿ. ಹಳೆಯ ನೆನಪುಗಳನ್ನು (Old Memories) ಸಹಜವಾಗಿ ಸ್ವೀಕರಿಸಬೇಕು. “ಅವರು ಹೀಗೆ ಮಾಡುತ್ತಿದ್ದರು, ಹಾಗೆ ಹೇಳುತ್ತಿದ್ದರು, ವರ್ತಿಸುತ್ತಿದ್ದರುʼ ಎನ್ನುವ ಹೋಲಿಕೆಯೂ ಮನದಲ್ಲಿ ಮೂಡುತ್ತದೆ. ಅಂತಹ ಚಿಕ್ಕಪುಟ್ಟ ವಿಚಾರಗಳನ್ನು ಇವರ ಬಳಿ ಹೇಳುವ ಅಗತ್ಯವಿರುವುದಿಲ್ಲ.
ನಿಂಬೆ ಬೆಲೆ ಏರಿಕೆಯಾಯ್ತು ಅಂತ ತಲೆ ಕೆಡಿಸ್ಕೋಬೇಡಿ, ಪರ್ಯಾಯವಾಗಿ ಅಡುಗೆಯಲ್ಲಿ ಇದನ್ನು ಬಳಸಿ
• ಅವರೆದುರು ಇನ್ನೊಬ್ಬರನ್ನು ಹೊಗಳುವುದು (Appreciation)
ಪ್ರತಿಯೊಬ್ಬರೂ ತಮ್ಮ ಸಂಗಾತಿ ತಮ್ಮನ್ನು ಹೊಗಳಲಿ, ಮೆಚ್ಚಿಕೊಳ್ಳಲಿ ಎಂದು ಬಯಸುತ್ತಿರುತ್ತಾರೆ. ಆದರೆ, ಸಂಗಾತಿ ಪದೇ ಪದೆ ಇನ್ನೊಬ್ಬರನ್ನು ಹೊಳಗುತ್ತಿದ್ದರೆ ಅವರಲ್ಲಿ ಅಸಮಾಧಾನ ಮೂಡುತ್ತದೆ. ಅದರಲ್ಲೂ ಹುಡುಗಿಯರಿಗೆ ಈ ಸ್ವಭಾವ ಸ್ವಲ್ಪ ಹೆಚ್ಚು. ಕೆಲವು ಹುಡುಗರೂ ಕಡಿಮೆ ಇರುವುದಿಲ್ಲ. ಹುಡುಗಿಯರಲ್ಲಿ ಭಾವನಾತ್ಮಕವಾಗಿ ಅಸುರಕ್ಷತೆಯ ಭಾವನೆ ಇರುತ್ತದೆ. ಅವರೆದುರು ಪದೇ ಪದೆ ಇತರರನ್ನು ಹೊಗಳುತ್ತಿದ್ದರೆ ಈ ಭಾವನೆ ಹೆಚ್ಚಾಗುತ್ತದೆ.
• ಪದೇ ಪದೆ ಬ್ಯಾಂಕ್ ಬ್ಯಾಲೆನ್ಸ್ (Bank Balance) ಬಗ್ಗೆ ಹೇಳುವುದು
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸಮೃದ್ಧವಾಗಿರಬಹುದು, ಚೆನ್ನಾಗಿಯೇ ಇರಬಹುದು. ಇದನ್ನು ಸಂಗಾತಿಗೆ ತೋರ್ಪಡಿಸುವ ಆಸೆಯೂ ನಿಮಗಿದ್ದಿರಬಹುದು. ಆದರೆ, ಇದರ ಬಗ್ಗೆ ಪದೇ ಪದೆ ಹೇಳುತ್ತಿರಬಾರದು. ಇಂದಿನ ಬಹಳಷ್ಟು ಶಿಕ್ಷಿತ ಹುಡುಗಿಯರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಬಯಸುತ್ತಾರೆ. ಇನ್ನೊಬ್ಬರನ್ನು ಅವಲಂಬಿಸಲು ಬಯಸುವುದಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ಕುರಿತು ಹೇಳುತ್ತಿದ್ದರೆ ಅವರಿಗೆ ಇರಿಟೇಟ್ ಆಗಬಲ್ಲದು.
Peeing Mistakes: ಮಹಿಳೆಯರು ಮಾಡೋ ಈ ತಪ್ಪು ತರುತ್ತೆ ಮೂತ್ರನಾಳದ ಸೋಂಕು!
• ಸಂಗಾತಿಯ ಡ್ರೆಸ್ (Dress) ಕುರಿತು ಕಾಮೆಂಟ್ (Comment) ಮಾಡುವುದು
ಕೆಲವು ಹುಡುಗರಿಗೆ ತಮ್ಮ ಸಂಗಾತಿಯ ಡ್ರೆಸ್ ಬಗ್ಗೆ ಟಾಂಟ್ ಮಾಡುವುದು, ಕಮೆಂಟ್ ಮಾಡುವ ಚಾಳಿ ಇರುತ್ತದೆ. ಅವರು ಧರಿಸುವ ಡ್ರೆಸ್ ನ ಬಣ್ಣ, ಡಿಸೈನ್ ಕುರಿತು ಏನಾದರೊಂದು ಹೇಳುತ್ತಲೇ ಇರುತ್ತಾರೆ. ಎಲ್ಲೋ ಒಮ್ಮೊಮ್ಮೆ ಪ್ರೀತಿಯಿಂದ ಸಲಹೆ ನೀಡಿದರೆ ಸಾಕು. ಆದರೆ, ಪದೇ ಪದೆ ಅವರ ಆಯ್ಕೆಯನ್ನು ಪ್ರಶ್ನಿಸುತ್ತಿದ್ದರೆ ಅವರಿಗೆ ಕೆಟ್ಟದೆನಿಸುತ್ತದೆ.
• ಇನ್ನೊಬ್ಬರೊಂದಿಗೆ ಹೋಲಿಕೆ (Compare) ಮಾಡುವುದು
ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದು ಚಿಕ್ಕ ಮಕ್ಕಳಿಗೇ ಇಷ್ಟವಾಗುವುದಿಲ್ಲ. ಅಂದ ಮೇಲೆ ಸಂಗಾತಿಗೆ ಇಷ್ಟವಾಗಲು ಸಾಧ್ಯವೇ? ಹೀಗಾಗಿ, ನಿಮ್ಮ ಸಂಗಾತಿಯನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಪ್ರತಿಯೊಬ್ಬರಿಗೂ ಅದರದ್ದೇ ಆದ ಐಡೆಂಟಿಟಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ.