
ಸಂಗಾತಿ (Partner) ಸದಾ ಜೊತೆಗಿರಬೇಕೆಂದು ಎಲ್ಲರೂ ಬಯಸ್ತಾರೆ. ಅವರ ಜೊತೆ ಅಮೂಲ್ಯ ಸಮಯ (Time) ಕಳೆಯಲು ಬಯಸ್ತಾರೆ. ಆದ್ರೆ ಇಂದಿನ ಯುಗದಲ್ಲಿ ಮೊಬೈಲ್ (Mobile) ಫೋನ್ (Phone)ಗಳು ಇದನ್ನು ತುಂಬಾ ಸುಲಭಗೊಳಿಸಿವೆ. ಕಾಲೇಜಿನಲ್ಲಿದ್ದರೂ,ಕೆಲಸ (Work) ಮಾಡುತ್ತಿದ್ದರೂ, ಬೇರೆ ನಗರದಲ್ಲಿ ವಾಸವಾಗಿದ್ದರೂ ನೀವು ಸದಾ ಸಂಪರ್ಕದಲ್ಲಿರಬಹುದು. ಸಂಗಾತಿ ಯಾವಾಗ ಏನು ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬಹುದು. ಅವರಿಗೆ ಕಾಲಕಾಲಕ್ಕೆ ಕರೆ (Call ) ಅಥವಾ ಸಂದೇಶ (Message ) ಕಳುಹಿಸಬಹುದು.
ಇತ್ತೀಚಿನ ದಿನಗಳಲ್ಲಿ ಕರೆ ಮಾಡುವುದು ಮತ್ತು ಸಂದೇಶ ಕಳುಹಿಸುವುದು ಸಾಮಾನ್ಯವಾಗಿದೆ. ಕರೆ ಹಾಗೂ ಸಂದೇಶಗಳು ಇಬ್ಬರನ್ನು ಹತ್ತಿರಕ್ಕೆ ತರುತ್ತವೆ. ಆದ್ರೆ ಅದೇ ಸಂದೇಶಗಳು ಸಂಗಾತಿಯನ್ನು ದೂರ ಕೂಡ ಮಾಡುತ್ತದೆ. ನಿಮಗೆ ತಿಳಿಯದೆ ಮಾಡಿದ ಕೆಲವು ಸಂದೇಶಗಳು ನಿಮ್ಮ ಸಂಬಂಧವನ್ನು ಹಾಳುಮಾಡಬಹುದು. ನಿಮ್ಮ ಸಂಗಾತಿಗೆ ತಪ್ಪಾಗಿಯೂ ಕೆಲವು ಸಂದೇಶಗಳನ್ನು ಕಳುಹಿಸಬೇಡಿ. ಇಂದು ಸಂಗಾತಿಗೆ ಯಾವ ಸಂದೇಶ ಕಳುಹಿಸಬಾರದು ಎಂಬುದನ್ನು ನಾವು ಹೇಳ್ತೇವೆ.
ಪದೇ ಪದೇ ಮೆಸೇಜ್ : ಗೆಳತಿ ಅಥವಾ ಗೆಳೆಯನಿಗೆ ಸಂದೇಶ ಕಳುಹಿಸುವಾಗ, ನಿಮಗೆ ಅವರು ಏನು ಮಾಡ್ತಿದ್ದಾರೆ ಎಂಬುದು ಗೊತ್ತಿರುವುದಿಲ್ಲ. ಅವರ ಮನಸ್ಥಿತಿ ಹೇಗಿದೆ? ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆಯೇ? ಅಥವಾ ಈಗ ಸಂದೇಶ ಕಳುಹಿಸಲು ಯೋಗ್ಯವಾಗಿದೆಯೇ ಎಂಬೆಲ್ಲ ಪ್ರಶ್ನೆಗೆ ಉತ್ತರ ಗೊತ್ತಿರುವುದಿಲ್ಲ. ಸಂಗಾತಿಗೆ ನಾವು ಸಂದೇಶ ಕಳುಹಿಸುತ್ತೇವೆ. ಅವರು ಅದಕ್ಕೆ ಉತ್ತರ ನೀಡದೆ ಹೋದಾಗ ಪದೇ ಪದೇ ಸಂದೇಶ ಕಳುಹಿಸುತ್ತೇವೆ ಅಥವಾ ಕರೆ ಮಾಡ್ತೇವೆ. ಈ ರೀತಿಯ ಸಂದೇಶವು ಸಂಗಾತಿಯನ್ನು ಕೆರಳಿಸಬಹುದು. ಅವರ ಕೆಲಸಕ್ಕೆ ತೊಂದರೆ ನೀಡಬಹುದು. ಇದ್ರಿಂದ ಅವರಿಗೆ ನಿಮ್ಮ ಮೇಲೆ ಕೋಪದ ಜೊತೆ ಕಿರಿಕಿರಿಯಾಗುತ್ತದೆ. ಹಾಗಾಗಿ ಪದೇ ಪದೇ ಸಂದೇಶ ಅಥವಾ ಕರೆ ಮಾಡ್ಬೇಡಿ.
ದೂರದಲ್ಲಿರುವ ಸಂಗಾತಿಯ ಮನವೊಲಿಸಲು ಹೀಗೆ ಮಾಡಿ
ಪದೇ ಪದೇ ಪ್ರಶ್ನೆ (Question) ಕೇಳುವುದು : ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ಪೇಸ್ ಅವಶ್ಯಕತೆಯಿರುತ್ತದೆ. ಕೇವಲ ಸಂಗಾತಿ ಮಾತ್ರವಲ್ಲ ಅದ್ರ ಹೊರಗೂ ಜೀವನವಿರುತ್ತದೆ. ಅದನ್ನು ಅವರು ನಿಭಾಯಿಸಬೇಕಾಗುತ್ತದೆ. ಅದ್ರ ಬಗ್ಗೆ ಅವರಿಗೆ ಪದೇ ಪದೇ ಪ್ರಶ್ನೆ ಕೇಳುವುದು ತಪ್ಪು. ಅವರು ಏಕೆ ಅಲ್ಲಿಗೆ ಹೋಗಿದ್ದಾರೆ? ಯಾರ ಜೊತೆಗಿದ್ದಾರೆ ಎಂಬೆಲ್ಲ ಪ್ರಶ್ನೆಗಳನ್ನು ಪದೇ ಪದೇ ಸಂದೇಶದ ಮೂಲಕ ಕಳುಹಿಸುತ್ತಿರಬಾರದು.
ಮೆಸೇಜ್ ನಲ್ಲಿ ದೀರ್ಘ ಚರ್ಚೆ : ಮೆಸ್ಸೇಜ್ ದಂಪತಿ ನಡುವಿನ ಪ್ರೀತಿ (Love) ಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಸಂದೇಶದ ಮೂಲಕ ನಿಮ್ಮ ಭಾವನೆಗಳನ್ನು ನೀವು ಅವರಿಗೆ ಹೇಳಬಹುದು. ಮುಂದೆ ಇರುವಾಗ ಅವರಿಗೆ ಹೇಳಲು ಸಾಧ್ಯವಾಗದಿರುವುದನ್ನು ಸಂದೇಶದ ಮೂಲಕ ಹೇಳಬಹುದು. ಆದರೆ ಅನೇಕ ದಂಪತಿ ಸಂದೇಶಗಳ ಮೂಲಕ ಸುದೀರ್ಘ ಚರ್ಚೆಗಳನ್ನು ಮಾಡುತ್ತಾರೆ. ಸಂದೇಶದ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ಮುಖಾಮುಖಿಯಾಗಿ ಸಮಸ್ಯೆ ಬಗೆಹರಿಸಬೇಕು. ಸಂದೇಶದ ಮೂಲಕ ಇದನ್ನು ಮಾಡಲು ಸಾಧ್ಯವಿಲ್ಲ.
ಹನಿಮೂನ್‌ನಲ್ಲಾದ ಆ ಘಟನೆಯ ನಂತ್ರ ಮದುವೆ ಬೇಡ್ವಾಗಿತ್ತು ಎಂದ ಪತ್ನಿ..!
ಸಂದೇಶಕ್ಕೆ ಉತ್ತರಿಸುವ ವಿಧಾನ : ಸಂಗಾತಿ ಮಾಡುವ ಸಂದೇಶಕ್ಕೆ ನಿಮ್ಮಿಂದ ಕೇವಲ ಹ್ಮ್, ಸರಿ, ಯಸ್ ಎಂಬ ಉತ್ತರ ಬರುತ್ತದೆ. ಈ ರೀತಿಯ ಪ್ರತ್ಯುತ್ತರವು ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ನಿಮಗೆ ಆಸಕ್ತಿಯಿಲ್ಲ ಎಂದು ಭಾವಿಸುವಂತೆ ಮಾಡುತ್ತದೆ. ಇದರಿಂದ ಅವರಿಗೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಬರಬಹುದು. ಹಾಗೆಯೇ ವಿಷಯಕ್ಕೆ ವಿರುದ್ಧವಾದ ಉತ್ತರವನ್ನು ನೀಡಿದರೆ ಇದು ಕೂಡ ನಿಮ್ಮಿಬ್ಬರ ಮಧ್ಯೆ ಸಂಬಂಧ ಹಾಳು ಮಾಡ್ಬಹುದು. ಹಾಗಾಗಿ ಸಂದೇಶ ಕಳುಹಿಸುವ ವಿಧಾನ ತಿಳಿದಿರಬೇಕು. ಸಂಗಾತಿಯಿಂದ ಬರುವ ಸಂದೇಶಕ್ಕೆ ಸರಿಯಾಗಿ ಉತ್ತರ ನೀಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.