ದಂಪತಿಗಳೇಕೆ ಪ್ರೇಮಿಗಳಂತಿರಬಾರ್ದು? ನಿಮಗೆ ಮದುವೆಯಾಗಿದ್ರೆ,ಯಾವಾಗಲಾದ್ರೂ ಈ ರೀತಿ ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಂಡಿದ್ದೀರಾ? ಸಂಸಾರದ ಜಂಜಾಟದಲ್ಲಿ ಪ್ರೀತಿ ತೋರ್ಪಡಿಸಲು ಮರೆತರೆ ಸಂಬಂಧದಲ್ಲಿ ಖಾಲಿತನ ಕಾಡೋದಿಲ್ಲವೆ?
ಲವ್ ಮ್ಯಾರೇಜ್ ಇರಲಿ ಅಥವಾ ಅರೇಂಜ್ಡ್ ಮ್ಯಾರೇಜ್, ಮದುವೆಯಾಗಿ 3-4 ವರ್ಷಗಳು ಕಳೆಯುವ ಹೊತ್ತಿಗೆ ಸಂಬಂಧದಲ್ಲಿ ಏನೋ ಖಾಲಿತನದ ಭಾವನೆ ಒಮ್ಮೆಯಾದ್ರೂ ಅನುಭವಕ್ಕೆ ಬಂದಿರುತ್ತೆ. ಗಂಡನಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ ಎಂಬ ಅನುಮಾನವೂ, ಹೆಂಡ್ತಿ ನನ್ನ ಬಗ್ಗೆ ಮುಂಚಿನಷ್ಟು ಕಾಳಜಿ ತೋರುತ್ತಿಲ್ಲ ಎಂಬ ಕಂಪ್ಲೆಂಟೋ...ಹೀಗೆ ಏನೋ ಒಂದು ಅಸಮಾಧಾನ ಎದ್ದೇಳೋದು ಸಹಜ. ಇಂಥ ಅಸಮಾಧಾನಕ್ಕೆ ಎಷ್ಟೋ ಬಾರಿ ಇಂಥದ್ದೇ ಕಾರಣ ಹುಡುಕಲು ಆಗೋದಿಲ್ಲ. ಬರ್ತ್ ಡೇ ದಿನ ಗಂಡ ಗಿಫ್ಟ್ ನೀಡಿಲ್ಲ,ವಾಟ್ಸ್ಆಪ್‍ನಲ್ಲಿ ಸ್ಟೇಟಸ್ ಹಾಕೊಂಡಿಲ್ಲ ಎಂಬುದು ಕೂಡ ಹೆಂಡ್ತಿ ಮನಸ್ಸಿನ ಮೂಲೆಯಲ್ಲಿ ಸಣ್ಣ ಅಸಮಾಧಾನದ ಕಿಡಿ ಹೊತ್ತಿಸಬಹುದು. ಅದೇರೀತಿ ಹೆಂಡ್ತಿ ಇತ್ತೀಚೆಗೆ ಆಫೀಸ್‍ನಿಂದ ಬಂದ ತಕ್ಷಣ ಮೊದಲಿನಂತೆ ನಗು ನಗುತ್ತ ಮಾತಾಡಿಸಲ್ಲ,ನನ್ನ ಜೊತೆ ಮೊದಲಿನಂತೆ ಟೈಮ್ ಸ್ಪೆಂಡ್ ಮಾಡಲ್ಲ ಎಂಬ ಬೇಸರ ಗಂಡನನ್ನು ಕಾಡಬಹುದು. ಇಂಥ ಅನೇಕ ಕೊರತೆಗಳು ಸಂಬಂಧದಲ್ಲಿ ಆಗಾಗ ಗೋಚರಿಸುತ್ತವೆ.ಮಕ್ಕಳಾದ ಮೇಲಂತೂ ಈ ಕೊರತೆ, ಕೊರಗುಗಳ ಪಟ್ಟಿ ಬೆಳೆಯುತ್ತ ಹೋಗುತ್ತೆ. ಸಣ್ಣ ಸ್ಪರ್ಶ, ಒಬ್ಬರು ಮತ್ತೊಬ್ಬರ ಕಿವಿಯಲ್ಲಿ ಆಗಾಗ ಉಸುರುವ ‘ಐ ಲವ್ ಯೂ’ ಎಂಬ ಮೂರೇ ಮೂರು ಪದಗಳು ಸಂಬಂಧವನ್ನು ತಾಜಾಗೊಳಿಸುವ ಜೊತೆಗೆ ಸದೃಢಗೊಳಿಸಬಲ್ಲವು. ಅಯ್ಯೋ, ಇದೆಲ್ಲ ಏಕೆ? ಪ್ರೀತಿ ಮನಸ್ಸಿನಲ್ಲಿದ್ದರೆ ಸಾಕು ಎಂದು ಭಾವಿಸಿದ್ರೆ ಆ ಪ್ರೀತಿ ಪರಸ್ಪರ ಇಬ್ಬರಿಗೂ ಕಾಣಿಸದೆ ದಾಂಪತ್ಯದಲ್ಲಿ ಅಸಮಾಧಾನ ಮೂಡಿಸಬಹುದು. ಕೆಲವು ಮಾತುಗಳು, ವರ್ತನೆಗಳು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಿಸುವ, ತಾಜಾತನ ನೀಡುವ ಕೆಲಸ ಮಾಡಬಲ್ಲವು.
ಪುರಾಣ ಕಾಲದಲ್ಲೂ ಕನ್ಯತ್ವ ಸರ್ಜರಿ ಇತ್ತಾ? ಈ ಕತೆ ಓದಿದ್ರೆ ಗೊತ್ತಾಗುತ್ತೆ!
ಅಪ್ಪುಗೆಯೆಂಬ ಭದ್ರತೆ
ಪ್ರೀತಿ ತೋರ್ಪಡಿಸುವ ವಿಧಾನಗಳಲ್ಲಿ ಅಪ್ಪುಗೆಯೂ ಒಂದು. ಒಂದೇ ಒಂದು ಅಪ್ಪುಗೆ ಪತಿ-ಪತ್ನಿಯರ ನಡುವಿನ ವೈಮನಸ್ಸನ್ನು ದೂರ ಮಾಡಬಲ್ಲದು. ಮನಸ್ಸಿಗೆ ಬೇಸರವಾಗಿರುವಾಗ, ದುಃಖದಲ್ಲಿರುವಾಗ ಸಂಗಾತಿಯ ಅಪ್ಪುಗೆ ನೋವು ಕಡಿಮೆ ಮಾಡುವ ಜೊತೆ ಮನಸ್ಸಿಗೆ ಸಮಾಧಾನ ನೀಡಬಲ್ಲದು. ಅಪ್ಪುಗೆಯಲ್ಲಿ ಮಾತಿನಲ್ಲಿ ಹೇಳಲಾಗದ ಅನೇಕ ಭಾವನೆಗಳು ಸೇರಿರುತ್ತವೆ. ಸಾವಿರ ಪದಗಳನ್ನು ಒಂದೇ ಒಂದು ಅಪ್ಪುಗೆ ಮೂಲಕ ಸಂಗಾತಿಗೆ ಮನದಟ್ಟು ಮಾಡಿಸಲು ಸಾಧ್ಯವಿದೆ. ಪ್ರೀತಿ, ಆಸರೆ, ಭದ್ರತೆ, ಮಮತೆ, ಸುರಕ್ಷತೆ ಮುಂತಾದ ಹಲವು ಭಾವನೆಗಳನ್ನು ಅಪ್ಪುಗೆ ಒಳಗೊಂಡಿದೆ.
ಐ ಲವ್ ಯೂ ಎಂಬ ಮನಸ್ಸಿನ ಮಾತು
ಪ್ರೀತಿಸುತ್ತಿರುವಾಗ ಅಥವಾ ಮದುವೆಯಾದ ಪ್ರಾರಂಭದಲ್ಲಿ ‘ಐ ಲವ್ ಯೂ’ ಎಂಬ ಪದಗಳು ಇಬ್ಬರ ನಡುವೆ ನಿರಂತರವಾಗಿ ಎಕ್ಸ್ಚೇಂಜ್ ಆಗುತ್ತಿರುತ್ತವೆ. ಆದ್ರೆ ಸಂಬಂಧ ಹಳೆಯದಾಗುತ್ತಿದ್ದಂತೆ ಈ ಪ್ರೀತಿ ನಿವೇದನೆಯೂ ತಗ್ಗುತ್ತ ಬರುತ್ತೆ. ಪರಿಣಾಮ ಯಾವುದೋ ಒಂದು ಹಂತದಲ್ಲಿ ಈ ಪ್ರೀತಿ ನಿವೇದನೆಯನ್ನು ಇಬ್ಬರಲ್ಲಿ ಒಬ್ಬರಾದ್ರೂ ಖಂಡಿತಾ ನಿರೀಕ್ಷಿಸುತ್ತಾರೆ. ಪ್ರತಿದಿನ ಅಲ್ಲದಿದ್ರೂ ವಿಶೇಷ ಸಂದರ್ಭಗಳಲ್ಲಾದ್ರೂ ಐ ಲವ್ ಯೂ ಅನ್ನುವ ಮೂಲಕ ಮನಸ್ಸಿನಲ್ಲಡಗಿರುವ ಪ್ರೀತಿಯನ್ನು ತೋರ್ಪಡಿಸಲು ಇಬ್ಬರೂ ಪ್ರಯತ್ನಿಸಿದ್ರೆ ಸಂಬಂಧ ಸದೃಢವಾಗುತ್ತೆ, ಪ್ರೀತಿಗೆ ಹೊಸ ರಂಗು ತುಂಬುತ್ತೆ.
ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು
ಮತ್ತೇರಿಸುವ ಮುತ್ತು
ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಮುತ್ತು ಕೂಡ ಒಂದು. ಮುತ್ತಿನಲ್ಲಿ ಅನೇಕ ವಿಧಗಳಿವೆ. ಸಂದರ್ಭ, ನೀವು ದೇಹದ ಯಾವ ಭಾಗಕ್ಕೆ ಮುತ್ತಿಟ್ಟಿದ್ದೀರಿ ಎಂಬ ಆಧಾರದಲ್ಲಿ ಮುತ್ತಿನ ಹಿಂದಿರುವ ಭಾವನೆಗಳು ವ್ಯಕ್ತವಾಗುತ್ತವೆ. ದಂಪತಿಗಳ ನಡುವೆ ಸೆಕ್ಸ್ ಸಮಯಕ್ಕಷ್ಟೇ ಕಿಸ್ ಸೀಮಿತವಾದ್ರೆ ಸಾಲದು, ಆಗಾಗ ಇಬ್ಬರ ನಡುವಿನ ಪ್ರೀತಿ, ಬಾಂಧವ್ಯವನ್ನು ನೆನಪಿಸಲು, ಹೆಚ್ಚಿಸಲು ಕಿಸ್‍ಗಳ ವಿನಿಮಯವಾಗೋದು ಅಗತ್ಯ.
ಪ್ರೀತಿ ಹೆಚ್ಚಿಸುವ ಸಪ್ರ್ರೈಸ್ ಗಿಫ್ಟ್
ಮಕ್ಕಳಿಂದ ಹಿಡಿದು ಮುದುಕರ ತನಕ ಗಿಫ್ಟ್ ಅಂದ್ರೆ ಎಲ್ಲರಿಗೂ ಇಷ್ಟನೇ. ಹೀಗಿರುವಾಗ ಸಂಗಾತಿಗೆ ಆಗಾಗ ಗಿಫ್ಟ್ ನೀಡದಿದ್ರೆ ಹೇಗೆ? ಬರ್ತ್‍ಡೇ, ಮದುವೆ ವಾರ್ಷಿಕೋತ್ಸವ, ಹಬ್ಬ..ಹೀಗೆ ವಿಶೇಷ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ನೀಡುವ ಸಪ್ರ್ರೈಸ್ ಗಿಫ್ಟ್ಗಳು ದಾಂಪತ್ಯದ ಸವಿಯನ್ನು ಹೆಚ್ಚಿಸುತ್ತವೆ.
ದೇಹ ಸಖ್ಯಕ್ಕಿಂತ ಸಂಬಂಧ ಕಾಪಾಡಲು ಇದು ಮುಖ್ಯ
ಮೆಚ್ಚುಗೆ ಮಾತು
ದಾಂಪತ್ಯದಲ್ಲಿ ಪತಿಯ ಸಾಧನೆಗೆ ಪತ್ನಿ, ಪತ್ನಿಯ ಸಾಧನೆಗೆ ಪತಿ ಬೆನ್ನೆಲುಬಾಗಿದ್ರೆ ಸಂಬಂಧದಲ್ಲಿ ಬಿರುಕು ಕಾಣಿಸೋದಿಲ್ಲ. ಒಬ್ಬರ ಒಳ್ಳೆಯ ಗುಣ, ಸಾಧನೆಗಳ ಬಗ್ಗೆ ಇನ್ನೊಬ್ಬರು ಮೆಚ್ಚುಗೆಯ ಮಾತನಾಡೋದು ಅಗತ್ಯ. ಇದ್ರಿಂದ ಇಬ್ಬರ ನಡುವೆ ಗೌರವ, ಅಭಿಮಾನವೂ ಬೆಳೆಯುತ್ತೆ. ಅಲ್ಲದೆ, ಇನ್ನಷ್ಟು ಸಾಧನೆಗೆ ಪ್ರೇರಣೆ ಸಿಗುತ್ತೆ.