ಗಂಡಸ್ರಿಗೆ ಹೆಣ್ಣಿನ ದೇಹದ ಬಗ್ಗೆ ಸಾಕಷ್ಟು ಕುತೂಹಲ ಇರುತ್ತೆ ಅಂತ ಗೊತ್ತು. ಆದರೆ ಪೀರಿಯೆಡ್ಸ್ ನಂಥಾ ವಿಚಾರಗಳ ಬಗ್ಗೆ ಅವರ ಬಳಿ ಕೇಳಿದ್ರೆ ಏನಂದ್ರು ಗೊತ್ತಾ..?
ಬಯಾಲಜಿ ಸಬ್ಜೆಕ್ಟ್ ನಮ್ ಪ್ರೈಮರಿ ಸ್ಕೂಲಿಂದ್ಲೇ ಶುರುವಾಗುತ್ತೆ, ಹೌದಲ್ವಾ. ಗಂಡಿನ ದೇಹ ಯಾವೆಲ್ಲ ರೀತಿ ಮಾರ್ಪಾಡಾಗುತ್ತಾ ಹೋಗುತ್ತೆ, ಹೆಣ್ಣಿನ ದೇಹದಲ್ಲಿ ದೊಡ್ಡೋಳಾಗ್ತಾ ಹೋದ ಹಾಗೆ ಏನೆಲ್ಲ ಚೇಂಜಸ್ ಆಗುತ್ತೆ ಅನ್ನೋದನ್ನೂ ಚಿಕ್ಕ ಕ್ಲಾಸ್ ಗಳಲ್ಲಿಯೇ ವಿವರಿಸಿರುತ್ತಾರೆ.
ಆದರೆ ನಮ್ಮಲ್ಲಿ ಹೆಚ್ಚಿನ ಟೀಚರ್ಸ್ ಗೆ ಇಂಥಾ ವಿಚಾರಗಳನ್ನೆಲ್ಲ ಮಕ್ಕಳಿಗೆ ಹೇಗಪ್ಪಾ ಹೇಳೋದು ಅಂತ ಕಸಿವಿಸಿ. ಅವರು ಆ ಎರಡು ಪಾಠಗಳನ್ನು ‘ಎಕ್ಸಾಂಗೆ ಕೊಶ್ಚನ್ಸ್ ಬರಲ್ಲ, ಬಿಟ್ಹಾಕಿ’ ಅಂತ ಹಾರಿಸಿಕೊಂಡು ಹೋಗ್ತಾರೆ. ಎಕ್ಸಾಂಗೆ ಬರಲ್ಲ ಅಂದಮೇಲೆ ಯಾಕೆ ಓದ್ಬೇಕು ಅಂತ ಮಕ್ಕಳೂ ಆ ಬಗ್ಗೆ ಆಸಕ್ತಿ ಇದ್ದರೂ ಬೇರೆ ಆಕರ್ಷಣೆಗಳು ಹೆಚ್ಚಿರೋ ಕಾರಣ ಬಿಟ್ಹಾಕಿ ಮುಂದೆ ಹೋಗ್ತಾರೆ.
undefined
#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ? ...
ಹೖಸ್ಕೂಲ್ ಗೆ ಹೋದಾಗ ಈ ದೖಹಿಕ ಬದಲಾವಣೆ ಜೊತೆಗೆ ಸಂತಾನೋತ್ಪತ್ತಿ ಬಗೆಗೂ ಪಾಠಗಳು! ಅಲ್ಲಿ ಟೀಚರ್ಸ್ ಗೆ ಇನ್ನಷ್ಟು ಗೊಂದಲ, ಮುಜುಗರ. ಈಗ ಬೆಳೀತಿರೋ ಟೀನ್ ಹುಡುಗ್ರಿಗೆ ಇದನ್ನೆಲ್ಲ ಹೇಗ್ ಹೇಳೋದು, ಅವ್ರದನ್ನು ಏನೇನೋ ಅರ್ಥ ಮಾಡ್ಕೊಂಡು ಮತ್ತೇನೋ ಪ್ರಯೋಗ ಮಾಡಕ್ಕೆ ಹೊರಟ್ರೆ ಅಂತೆಲ್ಲ ಭಯ. ಸೋ ಇಲ್ಲೂ, ‘ಆ ಪಾಠಗಳನ್ನು ಓದ್ಕೋಬೇಕು ಅಂತಿಲ್ಲ. ಎಕ್ಸಾಂನಲ್ಲಿ ಚಾಯ್ಸ್ ಇರುತ್ತೆ, ಇನ್ನೊಂದು ಪ್ರಶ್ನೆಗೆ ಉತ್ರ ಬರಿದ್ರೆ ಆಯ್ತು’ ಅಂದುಬಿಡುತ್ತಾರೆ.
ಅರೆಬರೆ ತಿಳ್ಕೊಂಡು ಕಾಲೇಜ್ ಗೆ ಬರೋ ಹುಡುಗ್ರು ಆಮೇಲೆ ಇದನ್ನೆಲ್ಲ ಓದಲ್ಲ. ಅಲ್ಲೂ ಚಾಯ್ಸ್ ಇರೋದನ್ನೇ ಆರಿಸಿಕೊಳ್ತಾರೆ. ಅಲ್ಲಿಗೆ ಪಠ್ಯದಲ್ಲಿ ಇಂಥಾ ವಿಚಾರಗಳನ್ನು ಹಾಕಿದ್ರೂ ವರ್ಕೌಟ್ ಆಗಲ್ಲ. ಈಗ ಕಾಲ ಚೇಂಜ್ ಆಗಿದೆ. ಹತ್ತನೇ ವರ್ಷದ ಹುಡುಗ ಹುಡುಗೀರು ಒಂದ್ಸಲ ಪೋರ್ನ್ ನೋಡಿರ್ತಾರೆ ಅಂತ ಸಮೀಕ್ಷೆಗಳು ಹೇಳುತ್ತವೆ. ಅಂದ್ರೆ ಸಿಕ್ಕಾಪಟ್ಟೆ ಫಾರ್ವರ್ಡ್ ಈ ಜನರೇಶನ್. ಹತ್ತನೇ ವಯಸ್ಸಲ್ಲೇ ನೀಲಿ ಚಿತ್ರ ನೋಡಿರ್ತಾರೆ ಅಂದರೆ ಅವ್ರಿಗೆ ಎಲ್ಲವೂ ಗೊತ್ತಾಗಿರುತ್ತೆ. ಸೆಕ್ಸ್ ವಿಚಾರವೂ ಗೊತ್ತಾದ್ಮೇಲೆ ಇನ್ನೇನು ಉಳಿದಿರುತ್ತೆ ಅಂದ್ಕೊಂಡಿರ್ತೀವಿ, ಆದ್ರೆ ನಮ್ಮ ಈ ಪರ್ಸೆಪ್ಶನ್ ಕಂಪ್ಲೀಟ್ ರಾಂಗ್ ಅನ್ನುತ್ತೆ ಇತ್ತೀಚಿನ ಸಮೀಕ್ಷೆಯೊಂದು. ಅದರಲ್ಲಿ ಒಂದಿಷ್ಟು ಜನ ಆಧುನಿಕ ಕಾಲದ ಎಲ್ಲವನ್ನೂ ಬಲ್ಲ ಹುಡುಗರು, ಗಂಡಸ್ರಿಗೆ ಪೀರಿಯೆಡ್ಸ್ ಅಂದರೇನು ಅಂತ ಪ್ರಶ್ನೆ ಹಾಕ್ತಾರೆ. ಅದಕ್ಕೆ ಬಂದ ಉತ್ರ ಕೇಳಿದ್ರೆ ನಿಮ್ಗೂ ಶಾಕ್ ಆಗುತ್ತೆ.
ಉತ್ತರ 1
ಏ.. ನಾನ್ ಆ ಥರದ ಹುಡುಗ ಅಲ್ಲ. ನಮ್ಮನೇಲಿ ತುಂಬಾ ಸಂಸ್ಕಾರ ಕೊಟ್ಟಿದ್ದಾರೆ. ಇಂಥದ್ದೆಲ್ಲ ನನ್ ಹತ್ರ ಕೇಳ್ಬೇಡಿ.
.. ಈ ವ್ಯಕ್ತಿಗೆ 24 ವರ್ಷ. ಐಟಿ ಕಂಪೆನಿಯಲ್ಲಿ ಉದ್ಯೋಗಿ. ಈ ಪ್ರಶ್ನೆ ಕೇಳಿದ ಕೂಡಲೇ ಮುಖ ಕೆಂಪಗಾಗಿ ಹೀಗೆಲ್ಲ ಹೇಳ್ಬಿಟ್ರು.
ಉತ್ತರ 2
ಹುಡುಗಿಯರಿಗೆ ಪ್ರತೀ ತಿಂಗಳೂ ಬ್ಲೀಡ್ ಆಗುತ್ತೆ. ಅವ್ರು ಸೆಕ್ಸ್ ಮಾಡಿದ್ರೆ ಪ್ರೆಗ್ನೆಂಟ್ ಆಗ್ತಾರೆ.
- ಈ ವ್ಯಕ್ತಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವಯಸ್ಸು 28 ವರ್ಷ. ಬ್ಯಾಂಕ್ ನಲ್ಲಿ ಉದ್ಯೋಗಿ.
#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ ...
-ಉತ್ತರ 3
ಮಗು ಮಾಡ್ಕೊಳ್ಳದ್ದಕ್ಕೆ ದೇವ್ರು ಕೊಟ್ಟ ಪನಿಶ್‌ಮೆಂಟ್!
ಇಂಥದ್ದೊಂದು ಹಿಲೇರಿಯಸ್ ಉತ್ತರ ಕೊಟ್ಟ ಗಂಡಸು ಮೂವತ್ತೆರಡು ವಯಸ್ಸಿನವರು. ಅವಿವಾಹಿತ. ಮದುವೆ ಆಗೋದಕ್ಕೆ ಹುಡುಗಿ ಹುಡುಕ್ತಿದ್ದಾರೆ.
ಉತ್ತರ 4
ಪೀರಿಯೆಡ್ಸ್ ಅಂದ್ರೆ ಹೆಣ್ಮಕ್ಕಳಿಗೆ ತಿಂಗ್ಳಾ ತಿಂಗ್ಳಾ ಆಗುತ್ತಲ್ಲಾ ಅದು, ಎಗ್ ಅಂದ್ರೆ ಅಂಡಾಣು ಫಲಿತ ಆಗದಿದ್ರೆ ಹೀಗಾಗೋದು.
ಈ ಉತ್ತರ ನೀಡಿರೋದು ನಲವತ್ತು ವರ್ಷದ ವ್ಯಕ್ತಿ. ವಿವಾಹಿತ. ಸದ್ಯ ಪತ್ನಿಯಿಂದ ಬೇರೆ ಇದ್ದಾರೆ. ಕೋವಿಡ್ ನಂತರ ನಿರುದ್ಯೋಗಿಯೂ ಆಗಿದ್ದಾರೆ.
#Feelfree: ದಣಿದ ಬಂದ ದಂಪತಿಗೆ ಸೆಕ್ಸ್‌ನಲ್ಲಿ ಎಲ್ಲಿರುತ್ತೆ ಆಸಕ್ತಿ? ...
ಉತ್ತರ 5
ಪೀರಿಯೆಡ್ಸ್ ಆಗಿದೆ ಅಂದ್ರೆ ಅವಳು ಪ್ರೆಗ್ನೆಂಟ್ ಅಲ್ಲ ಅಂತ ಅಷ್ಟೇ!
ಗಂಡಸರು ಹೀಗೂ ಯೋಚ್ನೆ ಮಾಡಬಹುದು ಅನ್ನೋದನ್ನು ತೋರಿಸಿಕೊಟ್ಟ ಈ ವ್ಯಕ್ತಿಗೆ ೩೧ ವರ್ಷ. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಖಾಸಗಿ ಕಂಪೆನಿ ಉದ್ಯೋಗಿ