ಮಕ್ಕಳ ಜೊತೆ ಮಾತನಾಡುವಾಗ ಪದ ಬಳಕೆ ಬಗ್ಗೆ ಎಚ್ಚರಿಕೆಯಿರಲಿ

By Suvarna News  |  First Published Sep 29, 2022, 5:25 PM IST

ಮಕ್ಕಳ ಪಾಲನೆ ಸುಲಭವಲ್ಲ. ಮಕ್ಕಳನ್ನು ತುಂಬ ಪ್ರೀತಿಯಿಂದ ಹಾಗೂ ತಾಳ್ಮೆಯಿಂದ ಸಂಭಾಳಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಬಯ್ಯದೆ, ತಾಳ್ಮೆಯಿಂದ ಅದನ್ನು ತಿದ್ದಿ ಸರಿಪಡಿಸುತ್ತಾ ಹೋಗಬೇಕು. ಅದರಲ್ಲೂ ಮಕ್ಕಳ ಜೊತೆ ಮಾತನಾಡುವಾಗ ಪದ ಬಳಕೆ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಆ ಬಗ್ಗೆ ಇಲ್ಲಿದೆ ಕೆಲ ಮಾಹಿತಿ.


ಮಕ್ಕಳ ಜೊತೆ ಮಾತನಾಡುವಾಗ ಯಾವಾಗಲೂ ತುಂಬಾ ಜಾಗರೂಕರಾಗಿರಬೇಕು. ಯಾಕೆಂದರೆ ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಪೋಷಕರ ಯಾವ ಮಾತನ್ನು ಅವರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸ್ತಾರೆ. ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಲು ಅವರ ಬಳಿ ಜೋರು ದನಿಯಲ್ಲಿ ಮಾತನಾಡುತ್ತಾರೆ, ಗದರಿಸುತ್ತಾರೆ. ಎಲ್ಲರ ಮುಂದೆ ಮಕ್ಕಳು ತಲೆ ಎತ್ತಿ ನಡೆಯಬೇಕೆಂದು ಪಾಲಕರು ಇಚ್ಛೆ ಹೊಂದಿರುತ್ತಾರೆ. ಇದೇ ವೇಳೆ ಮಕ್ಕಳನ್ನು ತಿಳಿದೋ ಅಥವಾ ತಿಳಿಯದೆಯೋ ಅವಮಾನಿಸುತ್ತಾರೆ. ಇದು ಮಗುವಿನ ಆತ್ಮವಿಶ್ವಾಸದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಕ್ಕಳ ಆತ್ಮವಿಶ್ವಾಸ ಕುಗ್ಗಿದ್ರೆ ಅವರು ಜೀವನದಲ್ಲಿ ಮುನ್ನಡೆಯುವುದು ಕಷ್ಟವಾಗುತ್ತದೆ. 

ಮಕ್ಕಳು (Children) ಸರಿದಾರಿಯಲ್ಲಿ ಸಾಗಬೇಕೆಂದು ಪಾಲಕರು ಅವರನ್ನು ಬೈಯ್ಯುತ್ತಾರೆ. ಆದ್ರೆ ಪಾಲಕರ ಮಾತು ಮಕ್ಕಳಿಗೆ ಮುಜುಗರವನ್ನುಂಟು ಮಾಡುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ. ಮಕ್ಕಳು ಪಾಲಕರ (Parents) ಮುಂದೆ ತಲೆತಗ್ಗಿಸುತ್ತಾರೆ. ಪಾಲಕರು ಮಕ್ಕಳಿಗೆ ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ (Care) ವಹಿಸಬೇಕು. ಏಕೆಂದರೆ ಅವರ ಸಣ್ಣ ಮಾತುಗಳು ಸಹ ಮಗುವಿಗೆ ನೋವುಂಟು ಮಾಡುತ್ತದೆ. ಮಗುವಿನ ಆತ್ಮವಿಶ್ವಾಸ (Confidence) ಇದ್ರಿಂದ ಕುಸಿಯುತ್ತದೆ. ಮಕ್ಕಳಿಗೆ ನಾಚಿಕೆಯುಂಟು ಮಾಡುವ ಮಾತುಗಳ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು.

Tap to resize

Latest Videos

Parenting Tips: ಹದಿಹರೆಯದಲ್ಲಿ ಮಕ್ಕಳು ತಪ್ಪು ಮಾಡ್ಬಾರ್ದು ಅಂದ್ರೆ ಪೋಷಕರು ಹೀಗಿರ್ಬೇಕು

ತಪ್ಪು ಮಾಡಿ ಕಲಿಯುವುದು ಸಹಜ: ಮಕ್ಕಳು ತಪ್ಪು (Mistake) ಮಾಡಿದಾಗ ವಿಪರೀತ ಬೈಯುವುದು, ಹಿಗ್ಗಾಮುಗ್ಗಾ ಹೊಡೆಯುವುದು ಮಾಡಬೇಡಿ. ಸಣ್ಣ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಯಾಕೆಂದರೆ ಅವರಿಗೆ ಸರಿ ತಪ್ಪುಗಳ ಅರಿವಿರುವುದಿಲ್ಲ. ಆದರೆ ಕಾಲ ಕ್ರಮೇಣ ಅವರು ತಮ್ಮ ತಪ್ಪುಗಳನ್ನು ತಿದ್ದಿ ಸರಿ ಮಾಡಿಕೊಳ್ಳುತ್ತಾರೆ. ನಾವೆಲ್ಲರೂ ಮತ್ತೆ ಮತ್ತೆ ತಪ್ಪುಗಳನ್ನು ಮಾಡುವ ಮೂಲಕ ಮತ್ತು ಪ್ರಯತ್ನಿಸುವ ಮೂಲಕ ಕಲಿಯುತ್ತೇವೆ, ಆದ್ದರಿಂದ ನಮ್ಮ ಮಗು ಸಾರ್ವಕಾಲಿಕ ಪರಿಪೂರ್ಣವಾಗಿರಬೇಕು ಎಂದು ನಾವು ಏಕೆ ನಿರೀಕ್ಷಿಸುತ್ತೇವೆ. ಮಗುವು ತಪ್ಪುಗಳನ್ನು ಮಾಡುವ ಮೂಲಕ ಕಲಿಯಲಿ ಮತ್ತು ಅವನನ್ನು ನಿರುತ್ಸಾಹಗೊಳಿಸಬೇಡಿ.

ಸಹಾನುಭೂತಿಯ ಕೊರತೆ: ಅವಮಾನವನ್ನು ಅನುಭವಿಸುವ ಮಕ್ಕಳು ಸಾಮಾನ್ಯವಾಗಿ ಕೆಟ್ಟ ನಡವಳಿಕೆಯನ್ನು (Behaviour) ಹೊಂದಿರುತ್ತಾರೆ. ತಾವು ಕಷ್ಟಗಳನ್ನು ಅನುಭವಿಸುತ್ತಿರುವಾಗ ಮಕ್ಕಳು ಇತರರ ಬಗ್ಗೆ ಸಹಾನುಭೂತಿ ಹೊಂದಿರುವುದಿಲ್ಲ. ಈ ಮಕ್ಕಳೂ ಸ್ವಾರ್ಥಿಗಳು ಆಗಿರುತ್ತಾರೆ. ಹೀಗಾಗಿ ಚಿಕ್ಕಂದಿನಲ್ಲೇ ಮಕ್ಕಳ ಈ ಸ್ವಭಾವವನ್ನು ಬದಲಾಯಿಸುವುದು ಮುಖ್ಯ. 

Parenting Tips: ಒಡಹುಟ್ಟಿದವರ ಜೊತೆ ಜಗಳವಾಗ್ತಿದ್ದರೆ ಪಾಲಕರು ಈ ತಪ್ಪು ಮಾಡ್ಬೇಡಿ

ಮರೆಮಾಚುವ ಅಭ್ಯಾಸಗಳು: ಮಗುವು ತನ್ನ ಕ್ರಿಯೆಗೆ ಟೀಕೆಗಳನ್ನು ಎದುರಿಸಬೇಕಾಗಬಹುದು ಎಂದು ಭಾವಿಸಿದಾಗ, ಅವನು ತನ್ನ ಅಭ್ಯಾಸ (Habit)ಗಳನ್ನು ಮರೆಮಾಡಲು ಪ್ರಾರಂಭಿಸುತ್ತಾನೆ ಮತ್ತು ಇದು ಪೋಷಕರು ಮತ್ತು ಮಗುವಿನ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳಿಗೆ ಸತ್ಯವನ್ನು ಮರೆಮಾಚದಿರಲು ಕಲಿಸಿ. ನಿಮ್ಮಲ್ಲಿ ಮಕ್ಕಳು ಹೆದರದೇ ಯಾವುದೇ ವಿಷಯವನ್ನು ಮಾತನಾಡುವವಷ್ಟು ಆತ್ಮೀಯತೆ ನೀಡಿ. ಇದರಿಂದ ಮಕ್ಕಳು ಹಿಂಜರಿಯದೆ ಎಲ್ಲಾ ವಿಚಾರವನ್ನು ಮಾತನಾಡುತ್ತಾರೆ. 

ಮಕ್ಕಳ ಜೊತೆ ಮಾತನಾಡುವ ರೀತಿ ಸರಿಯಾಗಿರಲಿ: ಮಕ್ಕಳನ್ನು ಅವಮಾನಿಸದಂತೆ ಮತ್ತು ಅವರ ಆತ್ಮವಿಶ್ವಾಸವನ್ನು ನೋಯಿಸದಂತೆ ರಕ್ಷಿಸಲು, ನೀವು ಸರಿಯಾಗಿಲ್ಲದ ಪದಗಳನ್ನು ಬಳಸುವುದನ್ನು ತಪ್ಪಿಸಬೇಕು. ಮಗುವನ್ನು ಉತ್ತೇಜಿಸುವ ಮತ್ತು ಪ್ರೇರೇಪಿಸುವ ಪದಗಳನ್ನು ಆರಿಸಿ. ಈ ಎಲ್ಲಾ ರೀತಿ ನೋಡಿಕೊಂಡರೆ ಮಕ್ಕಳ ವ್ಯಕ್ತಿತ್ವ (Personality) ಉತ್ತಮವಾಗಿ ರೂಪುಗೊಳ್ಳುತ್ತದೆ.

click me!