
ಮಕ್ಕಳು ಏನ್ ಮಾಡ್ತಾರೆ, ಮಕ್ಕಳು ಹೇಗಿದ್ದಾರೆ, ಎಲ್ಲರ ಮುಂದೆ ಮಕ್ಕಳು ಹೇಗೆ ವರ್ತಿಸ್ತಾರೆ ಇವೆಲ್ಲ ಪಾಲಕರನ್ನು ಅವಲಂಭಿಸಿದೆ. ಯಾಕೆಂದ್ರೆ ಮಕ್ಕಳಿಗೆ ಮನೆಯೇ ಮೊದಲ ಶಾಲೆಯಾಗಿರುತ್ತದೆ. ಪಾಲಕರು ಏನೂ ಮಾಡ್ತಾರೋ ಅದನ್ನು ಮಕ್ಕಳು ಫಾಲೋ ಮಾಡಲು ಶುರು ಮಾಡ್ತಾರೆ. ಮಕ್ಕಳನ್ನು ಬೆಳೆಸೋದು ಸುಲಭದ ಕೆಲಸವಲ್ಲ. ಅನೇಕ ಸವಾಲುಗಳು ಇದ್ರಲ್ಲಿರುತ್ತವೆ. ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಎಲ್ಲ ಪಾಲಕರು ಬಯಸ್ತಾರೆ. ಆದ್ರೆ ಅನೇಕ ಬಾರಿ ಪಾಲಕರೇ ಮಕ್ಕಳ ಭವಿಷ್ಯ ಹಾಳು ಮಾಡಿರ್ತಾರೆ. ಮಕ್ಕಳು ದುಷ್ಟರಾಗಲು, ಕೆಟ್ಟ ದಾರಿ ಹಿಡಿಯಲು, ಅಪರಾಧ ಮಾಡಲು ಪಾಲಕರು ಕಾರಣವಾಗ್ತಾರೆ. ಹಾಗಾಗಿ ಪಾಲಕರು ಮಕ್ಕಳ ಮುಂದೆ ಕೆಲ ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬಾರದು. ಇಂದು ನಾವು ಮಕ್ಕಳ ಮುಂದೆ ಪಾಲಕರು ಏನು ಮಾಡ್ಬಾರದು ಎಂಬುದನ್ನು ಹೇಳ್ತೇವೆ.
ಮಕ್ಕಳ (Children) ಮುಂದೆ ಜಗಳವಾಡ್ಬೇಡಿ : ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಸಾಮಾನ್ಯ. ಇಬ್ಬರು ಒಂದೇ ರೀತಿಯ ಸ್ವಭಾವ (Nature ) ಹೊಂದಿರೋದಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಅನೇಕ ವಿಷ್ಯಕ್ಕೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ. ಸಮಸ್ಯೆ ಸ್ವಲ್ಪ ಜಟಿಲವಾದಾಗ ದಂಪತಿ ಮಧ್ಯೆ ಜಗಳ (Fight) ವಾಗುತ್ತದೆ. ಜಗಳವಾಡೋದು ತಪ್ಪೇನಲ್ಲ. ಆದ್ರೆ ಮಕ್ಕಳ ಮುಂದೆ ಕಿತ್ತಾಡೋದು ಸಂಪೂರ್ಣ ತಪ್ಪು. ನೀವು ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಜಗಳವಾಡಲು ಹೋಗ್ಬೇಡಿ. ಇದು ಮಗುವಿನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ.
ಭೇದ ಭಾವ ಮಾತನ್ನು ಮಕ್ಕಳ ಮುಂದೆ ಆಡಬೇಡಿ : ಯಾವುದೇ ವ್ಯಕ್ತಿಯ ಬಣ್ಣ, ಬಟ್ಟೆ, ಸ್ವಭಾವದ ಬಗ್ಗೆ ನೀವು ಮಕ್ಕಳ ಮುಂದೆ ಕಮೆಂಟ್ ಮಾಡ್ಬೇಡಿ. ಹಾಗೆಯೇ ಜಾತಿ ಬಗ್ಗೆಯೂ ಮಕ್ಕಳ ಮುಂದೆ ಚರ್ಚಿಸಲು ಹೋಗ್ಬೇಡಿ. ಜಾತಿ ಬಿಟ್ಟು ಎಲ್ಲರ ಜೊತೆ ಪ್ರೀತಿಯಿಂದ ಹೇಗೆ ಜೀವನ ಮಾಡಬೇಕು ಎಂಬುದನ್ನು ಮಕ್ಕಳಿಗೆ ಹೇಳಬೇಕೇ ಹೊರತು, ಮೇಲು, ಕೀಳಿನ ಭಾವನೆಯನ್ನು ಮಕ್ಕಳಲ್ಲಿ ಹುಟ್ಟಿಹಾಕಬಾರದು.
ಭಯಾನಕ ಅಥವಾ ಅಪರಾಧದ ವಿಡಿಯೋ : ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಮಕ್ಕಳು ಯಾವ ವಿಷ್ಯವನ್ನು ಹೇಗೆ ತೆಗೆದುಕೊಳ್ತಾರೆ ಎನ್ನುವುದು ತಿಳಿದಿರೋದಿಲ್ಲ. ಮಕ್ಕಳ ಮುಂದೆ ಭಯ ಹುಟ್ಟಿಸುವ ಅಥವಾ ಅಪರಾಧದ ವಿಡಿಯೋಗಳನ್ನು ನೋಡಿದ್ರೆ ಅವರ ಮನಸ್ಸಿನ ಮೇಲೆ ಇದು ಅಚ್ಚಳಿಯದೆ ಉಳಿಯಬಹುದು. ಭವಿಷ್ಯದಲ್ಲಿ ಇದ್ರಿಂದ ಅವರು ತೊಂದರೆ ಎದುರಿಸಬಹುದು. ಅನೇಕ ಬಾರಿ ಅಪರಾಧದ ವಿಡಿಯೋಗಳು ಮಕ್ಕಳನ್ನು ಅಪರಾಧ ಮಾಡುವಂತೆ ಪ್ರೇರೇಪಿಸುತ್ತವೆ.
ಮಕ್ಕಳ ಮುಂದೆ ಮದ್ಯಪಾನ ಹಾಗೂ ಧೂಮಪಾನ ಬೇಡ : ಧೂಮಪಾನ ಮಾಡುವವರಿಗಿಂತ ಧೂಮಪಾನಿಗಳ ಜೊತೆಯಲ್ಲಿರುವವರ ಆರೋಗ್ಯ ಬೇಗ ಹಾಳಾಗುತ್ತದೆ. ಇದು ನಿಮಗೆ ನೆನಪಿರಲಿ. ಹಾಗೆಯೇ ಮಕ್ಕಳ ಮುಂದೆ ನೀವು ಮದ್ಯಪಾನ ಹಾಗೂ ಧೂಮಪಾನ ಮಾಡಿದಾಗ ಮಕ್ಕಳಿಗೆ ಇದು ತಪ್ಪು ಎನ್ನಿಸುವುದಿಲ್ಲ. ಪಾಲಕರೇ ಧೂಮಪಾನ ಹಾಗೂ ಮದ್ಯಪಾನ ಮಾಡುವುದ್ರಿಂದ ಇದು ಸರಿ ಎಂದು ಭಾವಿಸುವ ಮಕ್ಕಳು ತಾವೂ ಈ ಚಟಕ್ಕೆ ಬೀಳುತ್ತಾರೆ. ಹಾಗೆಯೇ ಮದ್ಯಪಾನ ಮಾಡಿ ಮೈ ಮರೆಯುವ ಪಾಲಕರ ಬಗ್ಗೆ ಅವರ ಭಾವನೆ ಬದಲಾಗುವ ಸಾಧ್ಯತೆಯೂ ಇದೆ.
Parenting Tips : ಮನೆಯಲ್ಲಿ ಮಕ್ಕಳಷ್ಟೆ ಇದ್ರೆ ಪಾಲಕರು ಏನ್ಮಾಡ್ಬೇಕು ಗೊತ್ತಾ?
ಮಕ್ಕಳ ಮುಂದೆ ಸುಳ್ಳು ಹೇಳ್ಬೇಡಿ : ಮೊದಲೇ ಹೇಳಿದಂತೆ ಪಾಲಕರು ಮಕ್ಕಳಿಗೆ ಮೊದಲ ಶಿಕ್ಷಕರು. ನೀವು ಮಕ್ಕಳ ಮುಂದೆಯೇ ಸುಳ್ಳು ಹೇಳಿದ್ರೆ ಮಕ್ಕಳು ಅದನ್ನು ಕಲಿಯುತ್ತಾರೆ. ಹಾಗೆ ನಿಮ್ಮ ಮುಂದೆ ಸುಳ್ಳು ಹೇಳಲು ಶುರು ಮಾಡ್ತಾರೆ.
ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲವಾ? ಜೋರಾಗಿ ಓದಲು ಕಲಿತು ನೋಡಿ
ಗೆಜೆಟ್ ಬಳಕೆಯಲ್ಲಿ ಮುಳುಗಿ ಹೋಗ್ಬೇಡಿ : ಅರೆ ಕ್ಷಣ ಮೊಬೈಲ್ ಇಲ್ಲವೆಂದ್ರೆ ಜೀವ ಹೋಯ್ತು ಎನ್ನುವವರಿದ್ದಾರೆ. ಇಡೀ ದಿನ ಮಕ್ಕಳ ಮುಂದೆ ಸಾಮಾಜಿಕ ಜಾಲತಾಣ ನೋಡ್ತಾ, ಲ್ಯಾಪ್ ಟಾಪ್ ಬಳಸ್ತಾ ಕುಳಿತಿದ್ದರೆ ಮಕ್ಕಳು ಕೂಡ ಅದನ್ನು ಬಳಸಲು ಹಿಂಜರಿಯುವುದಿಲ್ಲ. ಹಾಗಾಗಿ ಮಕ್ಕಳು ಮನೆಯಲ್ಲಿರುವ ಸಮಯದಲ್ಲಿ ಆದಷ್ಟು ಗೆಜೆಟ್ ನಿಂದ ದೂರವಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.